For Quick Alerts
ALLOW NOTIFICATIONS  
For Daily Alerts
 

'ನಾನು ಟೀಂ ಇಂಡಿಯಾ ಕೋಚ್ ಆಗಬಾರದೆಂದು ಭಾರೀ ಪ್ರಯತ್ನ ನಡೆದಿತ್ತು'': ರವಿಶಾಸ್ತ್ರಿ

Ravi shastri

ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ, ತಮ್ಮ ಕೋಚಿಂಗ್ ಅವಧಿಯ ಕುರಿತು ಮಾತನಾಡುವಾಗ ಇಷ್ಟು ದಿನ ಎಲ್ಲೂ ಹೊರ ಮಾತನಾಡದ ವಿಚಾರವೊಂದನ್ನ ಬಾಯ್ಬಿಟ್ಟಿದ್ದಾರೆ. ತಾನು ರಾಷ್ಟ್ರೀಯ ತಂಡದ ಕೋಚ್ ಅಭ್ಯರ್ಥಿ ಎಂದು ಘೋಷಿತವಾಗಿ, ಕೋಚ್ ಹುದ್ದೆಯನ್ನು ಅಲಂಕರಿಸುವಾಗ ಸಾಕಷ್ಟು ವಿರೋಧಿಸುವವರು ಇದ್ದರು ಎಂದು ಹೇಳಿದ್ದಾರೆ.

2017 ರಲ್ಲಿ, ಭಾರತೀಯ ನಾಯಕ ವಿರಾಟ್ ಕೊಹ್ಲಿ ಅನಿಲ್ ಕುಂಬ್ಳೆಯೊಂದಿಗೆ ಜಗಳವಾಡಿದ ನಂತರ, ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದರು. ಈ ಸಮಯದಲ್ಲಿ ಶಾಸ್ತ್ರಿ ಅವರು ಎರಡು ವರ್ಷಗಳ ಕಾಲ ಟೀಂ ಇಂಡಿಯಾ ಕೋಚ್ ಆದರು. ಆದ್ರೆ ನಂತರ 2019ರಲ್ಲಿ ರವಿಶಾಸ್ತ್ರಿ ಅವರನ್ನ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಮರು ನೇಮಕ ಮಾಡಲಾಯಿತು.

ಟಿ20 ವಿಶ್ವಕಪ್ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದ ರವಿಶಾಸ್ತ್ರಿ

ಟಿ20 ವಿಶ್ವಕಪ್ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದ ರವಿಶಾಸ್ತ್ರಿ

ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ ಆತಿಥ್ಯದಲ್ಲಿ ನಡೆದ 2021 ರ T20 ವಿಶ್ವಕಪ್‌ನಿಂದ ಭಾರತವು ಲೀಗ್ ಹಂತದಲ್ಲೇ ಬೇಗನೆ ನಿರ್ಗಮಿಸಿದ ನಂತರ ಅವರ ಅಧಿಕಾರಾವಧಿಯು ಕೊನೆಗೊಂಡಿತು. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಪ್ರಯಾಣವನ್ನ ಮುಗಿಸಿತು. ಕೊಹ್ಲಿ ಕೂಡ ಟಿ20 ನಾಯಕತ್ವದಿಂದ ಕೆಳಗಿಳಿದರು. ರವಿಶಾಸ್ತ್ರಿ ಅವಧಿ ಕೂಡ ಅಂತ್ಯಗೊಂಡಿತು.

ನಾನು ಕೋಚ್ ಆಗುವುದು ಹಲವರಿಗೆ ಇಷ್ಟವಿರಲಿಲ್ಲ!

ನಾನು ಕೋಚ್ ಆಗುವುದು ಹಲವರಿಗೆ ಇಷ್ಟವಿರಲಿಲ್ಲ!

ನಾನು ಸಾಮಾನ್ಯವಾಗಿ ಜನರ ಕಡೆಗೆ ಯಾವುದೇ ಬೆರಳು ತೋರಿಸುವುದಿಲ್ಲ. ಆದ್ರೆ ನಿರ್ದಿಷ್ಟ ಜನರು ನನಗೆ ಕೆಲಸ ಸಿಗಬಾರದು ಎಂದು ಪ್ರಯತ್ನ ಪಟ್ಟಿದ್ದರು ಎಂಬುದನ್ನ ನಾನು ಹೇಳಲೇಬೇಕು ಎಂದು " ಎಂದು ಶಾಸ್ತ್ರಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ರೋಹಿತ್‌ ಶರ್ಮಾಗೆ ಸ್ಯಾಲರಿ ಎಷ್ಟು?

ಭರತ್ ಅರುಣ್ ನೇಮಕಕ್ಕೂ ವಿರೋಧವಿತ್ತಂತೆ!

ಭರತ್ ಅರುಣ್ ನೇಮಕಕ್ಕೂ ವಿರೋಧವಿತ್ತಂತೆ!

ರವಿಶಾಸ್ತ್ರಿ ತಾನು ಕೋಚ್ ಆಗುವುದಷ್ಟೇ ವಿರೋಧಿಸಿರಲಿಲ್ಲ, ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್‌ ಅವರನ್ನು ಬೌಲಿಂಗ್ ಕೋಚ್ ಆಗಿ ನೀಡಲು ಆ ಜನರು ಬಯಸಿರಲಿಲ್ಲ. ಆದ್ರೆ ಭರತ್ ಅರುಣ್ ಬೌಲಿಂಗ್ ತರಬೇತುದಾರರಾಗಿ ಮಾಡಿರುವ ಸಾಧನೆ ನೋಡಿದರೆ, ಭಾರತದಲ್ಲಿ ಹಿಂದೆಂದೂ ಈ ರೀತಿಯ ಕೋಚ್ ಅನ್ನು ಕಾಣಲು ಸಾಧ್ಯವಿಲ್ಲ ಎಂದರು.

ಅರುಣ್ ಅಡಿಯಲ್ಲಿ ಭಾರತವು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಮಾರಕ ವೇಗದ ದಾಳಿಯನ್ನು ಅಭಿವೃದ್ಧಿಪಡಿಸಿತು. ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಅವರಂತಹವರು ತವರಿನಲ್ಲಿ ಮಾತ್ರವಲ್ಲದೆ ವಿದೇಶಿ ಪಿಚ್‌ಗಳ ಪರಿಸ್ಥಿತಿಗಳಲ್ಲಿಯೂ ಭಾರತವನ್ನು ಗೆಲ್ಲಲು ಸಹಾಯ ಮಾಡಿದ್ದಾರೆ.

ಅಂಡರ್ 19 ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ: ಯಶ್ ಧುಲ್‌ಗೆ ನಾಯಕತ್ವ

 ಶಾಸ್ತ್ರಿ ಅವಧಿಯಲ್ಲಿ ಭಾರತ ಐಸಿಸಿ ಟ್ರೋಫಿ ಗೆಲ್ಲಲಿಲ್ಲ!

ಶಾಸ್ತ್ರಿ ಅವಧಿಯಲ್ಲಿ ಭಾರತ ಐಸಿಸಿ ಟ್ರೋಫಿ ಗೆಲ್ಲಲಿಲ್ಲ!

ಭಾರತೀಯ ಕ್ರಿಕೆಟ್ ಅತ್ಯಂತ ಮಂದಗತಿಯಲ್ಲಿದ್ದ ಸಮಯದಲ್ಲಿ 2014 ರಲ್ಲಿ ಶಾಸ್ತ್ರಿ ಅವರು ಭಾರತ ತಂಡದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. 2017ರಲ್ಲಿ ಅವರು ಟೀಂ ಇಂಡಿಯಾ ಕೋಚ್‌ ಆಗಿ ನಾಲ್ಕು ವರ್ಷಗಳ ಅವಧಿಯಲ್ಲಿ ಯಾವುದೇ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ, ಭಾರತ ತಂಡವನ್ನ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಏರಲು ಸಹಾಯ ಮಾಡಿದರು ಮತ್ತು ಸಾಕಷ್ಟು ದ್ವಿಪಕ್ಷೀಯ ಸರಣಿಗಳನ್ನು ಗೆದ್ದರು.

ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತದ ಸಾಧನೆಗಳು

ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತದ ಸಾಧನೆಗಳು

ರವಿಶಾಸ್ತ್ರಿ ನಾಯಕತ್ವದಲ್ಲಿ ಭಾರತ 183 ಪಂದ್ಯಗಳಲ್ಲಿ 118 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತದ ಮುಖ್ಯ ಕೋಚ್ ಆಗಿ ಶಾಸ್ತ್ರಿ ಅವರ ಕ್ಯಾಬಿನೆಟ್‌ನಲ್ಲಿ ಯಾವುದೇ ಐಸಿಸಿ ಟ್ರೋಫಿ ಇಲ್ಲದಿದ್ದರೂ, ಶಾಸ್ತ್ರಿ ಅಡಿಯಲ್ಲಿ ಟೀಮ್ ಇಂಡಿಯಾ ಜಗತ್ತಿನ ಯಾವುದೇ ಭಾಗದಲ್ಲಿ ಸ್ಥಿರವಾದ ಕ್ರಿಕೆಟ್ ಆಡುವ ತಂಡವಾಗಿಸುವಲ್ಲಿ ಯಶಸ್ವಿಯಾದರು.

ಕೋಚ್ ಆಗಿ ರವಿಶಾಸ್ತ್ರಿ ಪ್ರಮುಖ ಸಾಧನೆಗಳು

ಕೋಚ್ ಆಗಿ ರವಿಶಾಸ್ತ್ರಿ ಪ್ರಮುಖ ಸಾಧನೆಗಳು

* ಶ್ರೀಲಂಕಾವನ್ನು ಮೂರು ಫಾರ್ಮೆಟ್‌ನಲ್ಲಿ 9-0 ಅಂತರದಲ್ಲಿ ಸೋಲಿಸಿರುವುದು
* 2018ರ ಏಷ್ಯಾ ಕಪ್
* ಆಸ್ಟ್ರೇಲಿಯಾದಲ್ಲಿ 2019 ಮತ್ತು 2020ರ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲುವು
* ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ
* ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಸರಣಿ ಗೆಲುವು
* ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಗೆಲುವು
* ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕ, ಐರ್ಲೆಂಡ್, ಇಂಗ್ಲೆಂಡ್, ನ್ಯೂಜಿಲೆಂಡ್ , ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆಲುವು

Story first published: Friday, December 10, 2021, 15:05 [IST]
Other articles published on Dec 10, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+