ಟೀಂ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾದ ರೋಹಿತ್ ಶರ್ಮಾಗೆ ಸ್ಯಾಲರಿ ಎಷ್ಟು?

ಟೀಮ್ ಇಂಡಿಯಾದ ಸೀಮಿತ ಓವರ್ಗಳ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಟಿ20 ತಂಡದ ನಾಯಕತ್ವ ಹೊಂದಿದ್ದ ಹಿಟ್ಮ್ಯಾನ್ಗೆ ಇದೀಗ ಏಕದಿನ ತಂಡದ ಸಾರಥ್ಯವನ್ನೂ ಕೂಡ ನೀಡಲಾಗಿದೆ. ಅತ್ತ ವಿರಾಟ್ ಕೊಹ್ಲಿ ಅವರು ಇನ್ಮುಂದೆ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ನಾಯಕತ್ವವನ್ನ ತಾವಾಗಿಯೇ ಬಿಟ್ಟುಕೊಡುವಂತೆ ಬಿಸಿಸಿಐ ಎರಡು ದಿನಗಳ ಅವಕಾಶ ನೀಡಿತ್ತು. ಆದ್ರೆ ವಿರಾಟ್ ಇದಕ್ಕೆ ಒಪ್ಪದ ಕಾರಣ ವಿಶ್ವದ ಕ್ರಿಕೆಟ್ ದೊಡ್ಡಣ್ಣ ಈ ಕಠಿಣ ನಿರ್ಧಾರವನ್ನ ತೆಗೆದುಕೊಂಡಿತು. ಈ ಮೂಲಕ ಕೊಹ್ಲಿ ದೀರ್ಘ ಸ್ವರೂಪದ ಫಾರ್ಮೆಟ್‌ಗೆ ಮಾತ್ರ ನಾಯಕತ್ವ ವಹಿಸಲಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್ ಪ್ರಕಟಿಸಿದ ಆಟಗಾರರ ಆಯ್ಕೆ ಸಮಿತಿಯು, ರೋಹಿತ್ ಶರ್ಮಾನೆ ಮುಂದಿನ ಟಿ20 ಮತ್ತು ಏಕದಿನ ಫಾರ್ಮೆಟ್ ನಾಯಕ ಎಂದು ಪ್ರಕಟಿಸಿತು.

ಒಂದು ದಿನದ ಬಳಿಕ ಬಾಯ್ಬಿಟ್ಟ ಗಂಗೂಲಿ
ಆದಾಗ್ಯೂ, ಒಂದು ದಿನದ ನಂತರ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಮತ್ತು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಕೊಹ್ಲಿಯೊಂದಿಗೆ ಈ ಕುರಿತು ಮಾತನಾಡಿದ್ದೆವು ಎಂದು ಬಹಿರಂಗಪಡಿಸಿದರು. ವೈಟ್-ಬಾಲ್ ಸ್ವರೂಪಗಳಲ್ಲಿ ಇಬ್ಬರು ವಿಭಿನ್ನ ನಾಯಕರನ್ನು ತಪ್ಪಿಸುವ ಯೋಚನೆಯನ್ನು ಕೊಹ್ಲಿಯೊಂದಿಗೆ ಚರ್ಚಿಸಲಾಗಿತ್ತು ಎಂದು ಗಂಗೂಲಿ ಹೇಳಿದ್ದಾರೆ.
"ಇದು ಬಿಸಿಸಿಐ ಮತ್ತು ಆಯ್ಕೆದಾರರು ಒಟ್ಟಾಗಿ ತೆಗೆದುಕೊಂಡ ಕರೆ. ವಾಸ್ತವವಾಗಿ, ಬಿಸಿಸಿಐ ಟಿ20 ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್‌ಗೆ ವಿನಂತಿಸಿತ್ತು. ಆದರೆ ಅವರು ಒಪ್ಪಲಿಲ್ಲ. ಹೀಗಾಗಿ ಆಯ್ಕೆದಾರರು ಎರಡು ವೈಟ್-ಬಾಲ್ ಫಾರ್ಮ್ಯಾಟ್‌ಗಳಿಗೆ ಇಬ್ಬರು ವಿಭಿನ್ನ ನಾಯಕರನ್ನು ಹೊಂದುವುದು ಸರಿಯಾಗಿಲ್ಲ'' ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ವಿರಾಟ್ ಟೆಸ್ಟ್ ನಾಯಕನಾಗಿ ಮುಂದುವರೆಯಲಿದ್ದಾರೆ
ಸತತ ಐದು ವರ್ಷಗಳ ಕಾಲ ಟೀಂ ಇಂಡಿಯಾವನ್ನ ನಂಬರ್ 1 ರ್ಯಾಂಕಿಂಗ್‌ನತ್ತ ಕೊಂಡೊಯ್ದಿರುವ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ನಾಯಕನಾಗಿ ಮುಂದುವರಿಯುತ್ತಾರೆ ಮತ್ತು ರೋಹಿತ್ ವೈಟ್ ಬಾಲ್ ನಾಯಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ನಿರ್ಧರಿಸಲಾಗಿದೆ. ಬಿಸಿಸಿಐ ಅಧ್ಯಕ್ಷನಾಗಿ ನಾನು ವಿರಾಟ್ ಕೊಹ್ಲಿ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರು ಸಹ ಅವರೊಂದಿಗೆ ಮಾತನಾಡಿದ್ದಾರೆ ಎಂದು ಗಂಗೂಲಿ ತಿಳಿಸಿದ್ದಾರೆ.
ICC ಟ್ರೋಫಿ ಗೆಲ್ಲದಿದ್ದಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡ: ಸಾಬಾ ಕರೀಂ

ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ನಂಬಿಕೆಯಿದೆ: ಸೌರವ್ ಗಂಗೂಲಿ
"ರೋಹಿತ್ ಶರ್ಮಾ ಅವರ ನಾಯಕತ್ವದ ಸಾಮರ್ಥ್ಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ ಮತ್ತು ವಿರಾಟ್ ಅವರು ಟೆಸ್ಟ್ ನಾಯಕರಾಗಿ ಮುಂದುವರಿಯುತ್ತಾರೆ. ಭಾರತೀಯ ಕ್ರಿಕೆಟ್ ಉತ್ತಮ ಕೈಯಲ್ಲಿದೆ ಎಂದು ನಮಗೆ ವಿಶ್ವಾಸವಿದೆ. ವೈಟ್ ಬಾಲ್ ಮಾದರಿಯಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ನೀಡಿದ ಕೊಡುಗೆಗಳಿಗಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಬಿಸಿಸಿಐ ಅಧ್ಯಕ್ಷರು ಸೇರಿಸಿದ್ದಾರೆ.
ಕೊಹ್ಲಿ ನಾಯಕತ್ವ ಕಳೆದುಕೊಳ್ಳುವುದಕ್ಕೆ ಅಸಲಿ ಕಾರಣವೇನು ಎಂಬುದನ್ನು ಕೊನೆಗೂ ಬಿಚ್ಚಿಟ್ಟ ಗಂಗೂಲಿ

ಪೂರ್ಣಾವಧಿ ನಾಯಕನಾದ ರೋಹಿತ್ ಶರ್ಮಾ ವೇತನ ಎಷ್ಟು ಹೆಚ್ಚಾಯಿತು?
ಜಿಕ್ಯೂ ವರದಿಯ ಪ್ರಕಾರ, ಬಿಸಿಸಿಐನಿಂದ ರೋಹಿತ್ ಅವರ ಸಂಬಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೊಹ್ಲಿ ಮತ್ತು ವೇಗಿ ಜಪ್ರಿತ್ ಬುಮ್ರಾ ಜೊತೆಗೆ A+ ಒಪ್ಪಂದವನ್ನು ಹೊಂದುವ ಮೂಲಕ ಅವರು ವಾರ್ಷಿಕವಾಗಿ 7 ಕೋಟಿ ರೂಪಾಯಿ ಮೊತ್ತವನ್ನು ಪಡೆಯುತ್ತಾರೆ.
ಏತನ್ಮಧ್ಯೆ, ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಅನ್ನು ಮುನ್ನಡೆಸುವಾಗ ಸಾಟಿಯಿಲ್ಲದ ದಾಖಲೆಯನ್ನು ಹೊಂದಿರುವ ರೋಹಿತ್‌ಗೆ ನಾಯಕತ್ವವು ಹೊಸದೇನಲ್ಲ, ಅವರು 2013 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ತಂಡಕ್ಕೆ ಐದು ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿರುವ ರೋಹಿತ್
ಅಂತರಾಷ್ಟ್ರೀಯ ನಾಯಕತ್ವದ ಅವರ ಸೀಮಿತ ಅನುಭವದಲ್ಲಿ, ರೋಹಿತ್ ಶರ್ಮಾ ಕೊಹ್ಲಿ ಅನುಪಸ್ಥಿತಿಯಲ್ಲಿ 2018 ರ ಏಷ್ಯಾಕಪ್ ಅನ್ನು ಗೆದ್ದುಕೊಳ್ಳುವುದು ಸೇರಿದಂತೆ ಅವರು ಇಲ್ಲಿಯವರೆಗೆ 10 ODIಗಳಲ್ಲಿ ತಂಡವನ್ನ ಮುನ್ನಡೆಸಿದ್ದು, ಎಂಟನ್ನು ಗೆದ್ದುಕೊಂಡು ಯಶಸ್ವಿಯಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ರೋಹಿತ್ 22 ಪಂದ್ಯಗಳಲ್ಲಿ 18 ಗೆಲುವುಗಳನ್ನು ಹೊಂದಿದ್ದಾರೆ, ಅದರಲ್ಲಿ ಮೂರು ಗೆಲುವು ಪೂರ್ಣ ಪ್ರಮಾಣದ ನಾಯಕನಾಗಿ ಅವರ ಮೊದಲ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications