ಕೊಹ್ಲಿ ವಿರುದ್ಧ ಕಿಡಿಕಾರಿ, ಕುಂಬ್ಳೆಗೆ ಜೈಕಾರ ಹಾಕಿದ ಟ್ವಿಟ್ಟಿಗರು
ಬೆಂಗಳೂರು, ಜೂನ್ 21: ಸಾಮಾಜಿಕ ಜಾಲ ತಾಣಗಳಲ್ಲಿ ಟೀಂ ಇಂಡಿಯಾ ವಿರಾಟ್ ಕೊಹ್ಲಿ ವಿರುದ್ಧದ ಯುದ್ಧವನ್ನು ಮಾಜಿ ಕೋಚ್ ಅನಿಲ್ ಕುಂಬ್ಳೆ ಗೆದ್ದಿದ್ದಾರೆ. 'ಥ್ಯಾಂಕ್ಸ್' ಎಂಬ ಒಂದು ಪದ ಟ್ವೀಟ್ ಹಾಗೂ ರಾಜೀನಾಮೆ ಪತ್ರ ಓದಿದ ಬಳಿಕ ಬಹುತೇಕ ಎಲ್ಲರೂ ಕೊಹ್ಲಿ ವಿರುದ್ಧ ಕಿಡಿಕಾರುತ್ತಿದ್ದಾರೆ.
ಕುಂಬ್ಳೆ ನಿರ್ಗಮನ, ಯಾರಾಗಲಿದ್ದಾರೆ ಹೊಸ ಕೋಚ್?
ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆರನ್ನು ನಡೆಸಿಕೊಂಡ ರೀತಿಗೆ ಟ್ವೀಟ್ ಲೋಕ ಅಚ್ಚರಿ ವ್ಯಕ್ತಪಡಿಸಿದೆ. ಅನಿಲ್ ಕುಂಬ್ಳೆ ಅವರ ರಾಜೀನಾಮೆ ಸುದ್ದಿ ಸ್ಫೋಟಗೊಂಡ ಬಳಿಕ ಮಾಜಿ ಕ್ರಿಕೆಟರ್ಸ್, ಕಾಮೆಂಟೆಟರ್ಸ್ ಗಳಿಂದ ಬಂದಿರುವ ಪ್ರತಿಕ್ರಿಯೆಗಳ ಸಂಗ್ರಹ ಇಲ್ಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ನಂತರ್ ಕುಂಬ್ಳೆ ಅವರ ಅವಧಿ ಮುಕ್ತಾಯವಾಗಿತ್ತು. ಆದರೆ, ಎರಡು ವಾರಗಳ ಕಾಲ ವಿಸ್ತರಿಸಿ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಕೋಚ್ ಆಗಿ ನೇಮಿಸಲಾಗಿತ್ತು.
ಕುಂಬ್ಳೆ ರಾಜೀನಾಮೆ ಪತ್ರದಲ್ಲಿ ಅಸಲಿ ರಹಸ್ಯ ಬಹಿರಂಗ
ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿದ್ದ ಆಫರ್ ತಿರಸ್ಕರಿಸಿರುವ ಕುಂಬ್ಳೆ ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ರಾಜೀನಾಮೆ ಪತ್ರದಲ್ಲಿ ಕೊಹ್ಲಿ ಜತೆ ಹೊಂದಾಣಿಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಕುಂಬ್ಳೆ ಸಾಧನೆ
46 ವರ್ಷ ವಯಸ್ಸಿನ ಕುಂಬ್ಳೆ ಅವರು ಕಳೆದ 12 ತಿಂಗಳುಗಳಲ್ಲಿ ವೆಸ್ಟ್ ಇಂಡೀಸ್ (2-0), ನ್ಯೂಜಿಲೆಂಡ್ (3-0), ಇಂಗ್ಲೆಂಡ್ (4-0), ಬಾಂಗ್ಲಾದೇಶ (1-0), ಆಸ್ಟ್ರೇಲಿಯಾ(1-0) ವಿರುದ್ಧ ಟೆಸ್ಟ್ ಸರಣಿ ಗೆದ್ದ ತಂಡದ ಕೋಚ್ ಆಗಿದ್ದರು. 8 ಏಕದಿನ ಕ್ರಿಕೆಟ್ ಹಾಗೂ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಬಿಷನ್ ಸಿಂಗ್ ಬೇಡಿ
ಆಂತರಿಕ ಕಿತ್ತಾಟದಿಂದ ಕೊನೆಗೆ ನಷ್ಟವಾಗುವುದು ಭಾರತೀಯ ಕ್ರಿಕೆಟ್ ಗೆ ಮಾತ್ರ ಎಂದು ಬಿಷನ್ ಸಿಂಗ್ ಬೇಡಿ ಕಿಡಿ ಕಾರಿದ್ದಾರೆ.
ಆಕಾಶ್ ಛೋಪ್ರಾ
ಕೋಚ್ -ಕ್ಯಾಪ್ಟನ್ ಕದನದಲ್ಲಿ ಸೋಲುತ್ತಿರುವುದು ಕ್ರಿಕೆಟ್. ವಿರಾಟ್ -ಅನಿಲ್ ಇಬ್ಬರೂ ಇನ್ನೂ ಉತ್ತಮವಾಗಿ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿತ್ತು.
ಅಯಾಜ್ ಮೆನನ್
ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಮನಸ್ತಾಪವಿರುವ ವಿಷ್ಯ ಎಲ್ಲರಿಗೂ ತಿಳಿದಿತ್ತು. ಬಿಸಿಸಿಐ, ಸಿಒಎ, ಸಿಎಸಿ ಯಾರಿಗೂ ಇದನ್ನು ಪರಿಹರಿಸುವ ಮಾರ್ಗ ಸಿಗದೇ ಹೋಗಿದ್ದು ದುರಂತ. ಎಂದು ಕ್ರಿಕೆಟ್ ವಿಶ್ಲೇಷಕ ಅಯಾಜ್ ಮೆನನ್ ಹೇಳಿದ್ದಾರೆ.
ಹರ್ಷ ಭೋಗ್ಲೆ
ಕುಂಬ್ಳೆಯಂಥ ದಿಗ್ಗಜರನ್ನು ಆಡಳಿತ ಮಂಡಳಿ ನಡೆಸಿಕೊಂಡ ರೀತಿ ಸರಿ ಇಲ್ಲ ಎಂದ ಕಾಮೆಂಟೆಟರ್ ಹರ್ಷ ಭೋಗ್ಲೆ.
ದುಡ್ಡಿಗಾಗಿ ಆಸೆಪಟ್ಟವರಲ್ಲ
ಅನಿಲ್ ಕುಂಬ್ಳೆ ಅವರು ಕೇವಲ ದುಡ್ಡಿಗಾಗಿ ಈ ಪದವಿ ಬಯಸಿ ಬಂದವರಲ್ಲ. ಆಡಳಿತ ಮಂಡಳಿ ಸರಿಯಾಗಿ ನಡೆಸಿಕೊಳ್ಳಬೇಕಿತ್ತು ಎಂದ ಸಂಜಯ್ ಮಂಜೇಕ್ರರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications