For Quick Alerts
ALLOW NOTIFICATIONS  
For Daily Alerts
 

ಜಾಕೆಟ್ ವಾಸನೆ ನೋಡಿ ಫುಲ್ ಟ್ರೋಲ್ ಆದ ರವಿಚಂದ್ರನ್ ಅಶ್ವಿನ್‌: ಕಾಲೆಳೆದ ಹರ್ಭಜನ್ ಸಿಂಗ್

Ravichandran ashwin

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೋಲ್ ಆಗಿದ್ದಾರೆ. ಇದಕ್ಕೆ ಕಾರಣ ಆತ ಜಾಕೆಟ್ ವಾಸನೆ ನೋಡುವ ವೇಳೆಯಲ್ಲಿ ವೀಡಿಯೋದಲ್ಲಿ ಸೆರೆಯಾಗಿದ್ದು, ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ವೀಡಿಯೋ ಹರಿಬಿಟ್ಟಿದ್ದು, ಮಾಜಿ ಆಟಗಾರ ಹರ್ಭಜನ್ ಸಿಂಗ್ ಸೇರಿದಂತೆ ಅನೇಕರು ಅಶ್ವಿನ್ ಕಾಲೆಳೆದಿದ್ದಾರೆ.

ಕಳೆದ ಭಾನುವಾರ ಎಂಸಿಜಿಯಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12 ಅಂತಿಮ ಕಾದಾಟದಲ್ಲಿ ಭಾರತ-ಜಿಂಬಾಬ್ವೆ ಮುಖಾಮುಖಿಯಾದವು. ನವೆಂಬರ್ 6ರಂದು ನಡೆದ ಈ ಪಂದ್ಯದಲ್ಲಿ ಟಾಸ್ ವೇಳೆಯಲ್ಲಿ ರವಿಚಂದ್ರನ್ ಅಶ್ವಿನ್‌ ಜಾಕೆಟ್ ವಾಸನೆ ನೋಡುತ್ತಿರುವುದು ಕಂಡುಬಂದಿದ್ದು, ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

ಟಾಸ್ ವೇಳೆಯಲ್ಲಿ ಸೆರೆಯಾಗಿದೆ R. ಅಶ್ವಿನ್‌ ಕೈಚಳಕ

ಟಾಸ್ ವೇಳೆಯಲ್ಲಿ ಸೆರೆಯಾಗಿದೆ R. ಅಶ್ವಿನ್‌ ಕೈಚಳಕ

ಈ ಘಟನೆ ನಡೆದಿರುವುದು ಭಾರತ-ಜಿಂಬಾಬ್ವೆ ನಡುವಿನ ಟಾಸ್‌ ಸಂದರ್ಭದಲ್ಲಿ ಆಗಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಜಿಂಬಾಬ್ವೆ ನಾಯಕ ಕ್ರೇಗ್ ಎರ್ವಿನ್ ಹಾಗೂ ಮಾಜಿ ಆಟಗಾರ ಇಯಾನ್ ಬಿಷಪ್ ಟಾಸ್‌ಗಾಗಿ ಒಂದೆಡೆ ಮೈದಾನದಲ್ಲಿ ನಿಂತಿದ್ದರು. ಇಯಾನ್ ಬಿಷಪ್ ಟಾಸ್ ಜೊತೆಗೆ ಉಭಯ ನಾಯಕರನ್ನು ಮಾತನಾಡಿಸುತ್ತಿದ್ದರು. ಈ ವೇಳೆಯಲ್ಲಿ ವೀಡಿಯೋದಲ್ಲಿ ಅಭಿಮಾನಿಯೊಬ್ಬರು ಆರ್‌. ಅಶ್ವಿನ್ ಜಾಕೆಟ್ ವಾಸನೆ ನೋಡುವುದನ್ನು ಗಮನಿಸಿದ್ದಾರೆ. ತದನಂತರದ ಅಶ್ವಿನ್‌ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕೆಲವೇ ಕ್ಷಣಗಳಲ್ಲಿ ಮೀಮ್ಸ್‌ಗಳ ಸುರಿಮಳೆಯಾಗಿದೆ.

ಅಶ್ವಿನ್ ಅಣ್ಣ ಶ್ರೇಷ್ಟತೆ ಎಂದು ಶೀರ್ಷಿಕೆ ನೀಡಿರುವ ಅಭಿಮಾನಿ

ಆರ್. ಅಶ್ವಿನ್‌ ಮೈದಾನದಲ್ಲಿ ತನ್ನ ಜಾಕೆಟ್‌ ಯಾವುದೆಂದು ಪತ್ತೆ ಹಚ್ಚಲು ಎರಡು ಜಾಕೆಟ್‌ನ ಬೆವರಿನ ವಾಸನೆಯನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಎರಡು ಜಾಕೆಟ್‌ನಲ್ಲಿ ತನ್ನ ಜಾಕೆಟ್ ಯಾವುದೆಂದು ಅರಿತ ಬಳಿಕ ಒಂದು ಜಾಕೆಟ್‌ ಅನ್ನು ಅಲ್ಲಿಯೇ ನೆಲದ ಮೇಲೆ ಹಾಕಿ ಹೋಕಿದ್ದಾರೆ.

ಈ ವೈರಲ್ ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ನೆಟ್ಟಿಗರು''ಅಶ್ವಿನ್ ಅಣ್ಣ ಶ್ರೇಷ್ಟತೆ , ನಿಮ್ಮ ಬಟ್ಟೆಯನ್ನು ಹುಡುಕಲು ಇದು ಸರಿಯಾದ ದಾರಿ'' ಎಂಬ ಶೀರ್ಷಿಕೆ ನೀಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ರೀ ಟ್ವೀಟ್ ಮಾಡಿದ್ದರ ಜೊತೆಗೆ ಮೀಮ್ಸ್‌ಗಳ ಹಬ್ಬವೇ ಆಗಿ ಹೋಗಿದೆ.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಟ್ರಾವಿಸ್ ಹೆಡ್ ಕಂಬ್ಯಾಕ್

ಆರ್‌. ಅಶ್ವಿನ್ ಕಾಲೆಳೆದ ಹರ್ಭಜನ್ ಸಿಂಗ್

ಕೇವಲ ಅಭಿಮಾನಿಗಳಷ್ಟೇ ಅಲ್ಲದೆ ಭಾರತದ ಮಾಜಿ ಸ್ಪಿನ್ನರ್ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಕೂಡ ಅಶ್ವಿನ್‌ ಕಾಲೆಳೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವುದ ಜೊತೆಗೆ 'ಅಶ್ವಿನ್ , ಏನು ವಾಸನೆ ನೋಡುತ್ತಿದ್ದೀಯಾ?' ಎಂಬ ಪ್ರಶ್ನೆಯನ್ನು ಸಹ ಕೇಳುತ್ತಾ ಸಾಕಷ್ಟು ನಗುತ್ತಿರುವ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.

ಹರ್ಭಜನ್ ಸಿಂಗ್ ಕೂಡ ಟ್ವೀಟ್ ಮಾಡಿದ್ದೇ ತಡ ಈ ವೀಡಿಯೋ ಮತ್ತಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ತರಹೇವಾರಿ ಕಾಮೆಂಟ್‌ಗಳ ಮೂಲಕ ವೀಡಿಯೋವನ್ನ ಮತ್ತಷ್ಟು ಶೇರ್ ಮಾಡಿದ್ದಾರೆ.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಮಾಡಿದ ಎಡವಟ್ಟಿಗೆ ಸೆಹ್ವಾಗ್ ಕಿಡಿ

ಜಿಂಬಾಬ್ವೆ ವಿರುದ್ಧ 3 ವಿಕೆಟ್ ಕಬಳಿಸಿದ ಆರ್. ಅಶ್ವಿನ್

ಜಿಂಬಾಬ್ವೆ ವಿರುದ್ಧ 3 ವಿಕೆಟ್ ಕಬಳಿಸಿದ ಆರ್. ಅಶ್ವಿನ್

ಜಿಂಬಾಬ್ವೆ ವಿರುದ್ಧ ಅಂತಿಮ ಸೂಪರ್‌ 12 ಪಂದ್ಯದಲ್ಲಿ ಆರ್. ಅಶ್ವಿನ್ ಉತ್ತಮ ಪ್ರದರ್ಶನ ತೋರಿದರು. ಗಮನಾರ್ಹವಾದ ಪ್ರದರ್ಶನ ನೀಡಿದ ಅಶ್ವಿನ್‌ 4 ಓವರ್‌ಗಳಲ್ಲಿ 5.5 ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ ಕೇವಲ 22 ರನ್ ನೀಡಿ 3 ವಿಕೆಟ್ ಕಬಳಿಸಿದರು.

ರವಿಚಂದ್ರನ್ ಅಶ್ವಿನ್ ಪ್ರಸ್ತುತ ವಿಶ್ವಕಪ್‌ನಲ್ಲಿ 5 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನಷ್ಟೇ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ವಿನ್ನಿಂಗ್ ರನ್‌ ಹೊಡೆಯುವ ಮೂಲಕ ಅಶ್ವಿನ್ ಟೀಂ ಇಂಡಿಯಾವನ್ನು ಗೆಲುವಿನ ಗೆರೆ ದಾಟಿಸಿದ್ದರು. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವ್ರಿಸ್ಟ್‌ ಸ್ಪಿನ್ನರ್ ಯುಜವೇಂದ್ರ ಚಹಾಲ್‌ಗಿಂತ ಅಶ್ವಿನ್ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಎಲ್ಲಾ ಪಂದ್ಯಗಳಲ್ಲೂ ಅವಕಾಶ ನೀಡಿದೆ.

Story first published: Tuesday, November 8, 2022, 14:27 [IST]
Other articles published on Nov 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+