For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ವಿರುದ್ಧ ಭಾರತ ಹಣಾಹಣಿ, ತಂಡಗಳ ಬಲಾ-ಬಲ ಹೇಗಿದೆ?

Asia cup 2018 India vs Pakistan match preview

ದುಬೈ, ಸೆಪ್ಟೆಂಬರ್ 19: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಇಂದು ಮತ್ತೊಮ್ಮೆ ಪರಸ್ಪರ ಕ್ರಿಕೆಟ್ ಮೈದಾನದಲ್ಲಿ ಜಿದ್ದಾ-ಜಿದ್ದಿಗೆ ಇಳಿಯಲಿವೆ.

ಏಷ್ಯಾಕಪ್‌ನ ಟೂರ್ನಿಯ ಗ್ರೂಪ್ ಎ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗಲಿದ್ದು. ಸ್ಥಳೀಯ ಕಾಲಮಾನದ ಅನುಸಾರ ಸಂಜೆ ಐದು ಗಂಟೆಗೆ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಪ್ರಾರಂಭವಾಗಲಿದೆ.

ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ತೀರಲು ನಖ-ಶಿಖಾಂತ ಯತ್ನಿಸಲಿದ್ದು. ಭಾರತವು ಕೆಲವು ಅತ್ಯಂತ ಪ್ರಮುಖ ನಿರ್ಣಯಗಳನ್ನು ತಂಡದ ಆಯ್ಕೆ ಬಗ್ಗೆ ತೆಗೆದುಕೊಳ್ಳಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.

ನಿನ್ನೆ ನಡೆದ ಹಾಕಾಂಗ್ ಮತ್ತು ಭಾರತ ತಂಡದ ಪಂದ್ಯದಲ್ಲಿ ವಿಶ್ವಾಸಪೂರ್ಣ ಗೆಲುವು ಸಾಧಿಸದಿರುವುದು ಭಾರತ ಆಟಗಾರರಲ್ಲಿ ಒತ್ತಡ ನಿರ್ಮಿಸಿರುವ ಸಾಧ್ಯತೆ ದಟ್ಟವಾಗಿದೆ. ಆದರೆ ಪಾಕಿಸ್ತಾನ ತಂಡವು ತಮ್ಮ ಮೊದಲ ಪಂದ್ಯವನ್ನು ಭಾರಿ ಅಂತರದಿಂದ ಗೆದ್ದು ವಿಶ್ವಾಸದಲ್ಲಿದೆ.

ಭಾರತವನ್ನು ಕಾಡಲಿರುವ ಆಟಗಾರರು ಯಾರು?

ಭಾರತವನ್ನು ಕಾಡಲಿರುವ ಆಟಗಾರರು ಯಾರು?

ಇಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಕಾಡುವ ಸಾಧ್ಯತೆ ಇರುವ ಆಟಗಾರರೆಂದರೆ ಆರಂಭಿಕ ಬ್ಯಾಟ್ಸ್‌ಮನ್‌ ಫಕ್ಹಾರ್ ಜಮಾನ್. ಅವರು ಆಡಿರುವ ಕಳೆದ ಐದು ಏಕದಿನ ಪಂದ್ಯದಲ್ಲಿ ಮೂರು ಶತಕ ಮತ್ತು ಒಂದು ಅರ್ಧ ಶತಕ ಗಳಿಸಿದ್ದಾರೆ. ಭಾರತದ ಬೌಲರ್‌ಗಳಿಗೆ ಅವರು ತಲೆ ನೋವಾಗಲಿದ್ದಾರೆ. ಬೌಲಿಂಗ್‌ನಲ್ಲಿ ವೇಗಿಗಳಾದ ಉಸ್ಮಾನ್ ಖಾನ್, ಫಾಹೆಮ್ ಹಸನ್ ಬಗ್ಗೆ ಎಚ್ಚರಿದಿಂದಿರಬೇಕಾಗಿದೆ.

ಭಾರತ ಭರವಸೆ ಇಟ್ಟಿರುವ ಆಟಗಾರರು

ಭಾರತ ಭರವಸೆ ಇಟ್ಟಿರುವ ಆಟಗಾರರು

ಭಾರತ ತಂಡವು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅನುಭವಿ ಆಟಗಾರರ ಮೇಲೆ ಹೆಚ್ಚು ಭರವಸೆ ಇಡಬೇಕಾಗಿದೆ. ಪಾಕ್ ವಿರುದ್ಧ ಧೋನಿ ಅವರ ಬ್ಯಾಟಿಂಗ್ ಸರಾಸರಿ ಉತ್ತಮವಾಗಿದೆ ಆದರೆ ಅವರಿನ್ನೂ ತಮ್ಮ ಫಾರ್ಮ್‌ ಕಂಡುಕೊಳ್ಳಬೇಕಾಗಿದೆ. ರೋಹಿತ್ ಶರ್ಮಾ ಸಹ ನಾಯಕತ್ವದ ಆಟ ಆಡಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿರುವ ಧವನ್ ರಿಂದ ಮತ್ತೊಂದು ಜವಾಬ್ದಾರಿಯುತ ಇನ್ನಿಂಗ್ಸ್‌ ನಿರೀಕ್ಷಿಸಬಹುದಾಗಿದೆ. ಅಂಬಟಿ ರಾಯ್ಡು ಸಹ ಉತ್ತಮವಾಗಿ ಆಡಿದ್ದಾರೆ. ಇವರು ಮಿಂಚದ ಹೊರತು ಭಾರತ ಗೆಲ್ಲವುದು ಕಷ್ಟಸಾಧ್ಯ.

ಏಷ್ಯಾಕಪ್: ಭಾರತ-ಪಾಕಿಸ್ತಾನ ಮುಖಾಮುಖಿಯ ಕುತೂಹಲಕಾರಿ ಅಂಶಗಳಿವು!

ಬೌಲಿಂಗ್ ಬಲ ಹೇಗಿದೆ?

ಬೌಲಿಂಗ್ ಬಲ ಹೇಗಿದೆ?

ಮೇಲ್ನೋಟಕ್ಕೆ ಭಾರತಕ್ಕಿಂತಲೂ ಪಾಕಿಸ್ತಾನದ ಬೌಲಿಂಗ್ ಬಲ ಚೆನ್ನಾಗಿದ್ದಂತೆ ತೋರುತ್ತದೆ. ಆದರೆ ಭಾರತವು ಇಂದಿನ ಪಂದ್ಯಕ್ಕೆ ತಮ್ಮ ಕೀ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಆಡಿಸುತ್ತಿದೆ. ಜೊತೆಗೆ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಉತ್ತಮ ಪ್ರದರ್ಶನ ತೋರುತ್ತಿರುವುದು ಸಮಾಧನಕರ. ಪಾಕಿಸ್ತಾನದ ಪರ ವೇಗಿಗಳಾದ ಉಸ್ಮಾನ್ ಖಾನ್, ಫಾಹೆಮ್ ಹಸನ್ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಮೊಹಮ್ಮದ್ ಅಲಿ ಕಳೆದ ಎಂಟು ಪಂದ್ಯದಲ್ಲಿ ಮೂರು ವಿಕೆಟ್ ಮಾತ್ರ ಪಡೆದಿರುವುದು ಪಾಕ್‌ಗೆ ಚಿಂತೆಯ ವಿಷಯವಾಗಿದೆ.

ತಂಡದ ಆಯ್ಕೆ ಗೊಂದಲ

ತಂಡದ ಆಯ್ಕೆ ಗೊಂದಲ

ಭಾರತ ತಂಡಕ್ಕೆ ಆಡುವ 11 ಆಟಗಾರರನ್ನು ಆಯ್ಕೆ ಮಾಡುವುದು ತಲೆನೋವಾಗಿದೆ. ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ರಲ್ಲಿ ಒಬ್ಬರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲಿದ್ದಾರೆ. ಜಸ್ಪ್ರೀತ್ ಬುಮ್ರಾ ಸಹ ಇಂದು ಆಡಲಿದ್ದು ಶಾರ್ದೂಲ್ ಠಾಕೂರ್ ಹೊರ ಹೋಗಲಿದ್ದಾರೆ. ನಿನ್ನೆ ಉತ್ತಮವಾಗಿ ಆಡಿರುವ ಅಂಬಟಿ ರಾಯ್ಡು ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ. ದಿನೇಶ್ ಕಾರ್ತಿಕ್ ಅವರು ಪಾಂಡ್ಯಾಗೆ ಸ್ಥಾನ ಬಿಟ್ಟುಕೊಡಲಿದ್ದಾರೆ. ಆದರೆ ಇನ್ನೊಬ್ಬ ಪರಿಪೂರ್ಣ ಬ್ಯಾಟ್ಸ್‌ಮನ್‌ನ ಕೊರತೆ ಕಾಡಲಿದೆ. ಹಾಗಾಗಿ ಕೆ.ಎಲ್.ರಾಹುಲ್‌ ಅವರನ್ನು ಆಡಿಸಿ ಕುಲದೀಪ್ ಯಾದವ್ ಅವರನ್ನು ಹೊರಗಿಡುತ್ತಾರೆಯೇ ನೋಡಬೇಕು.

ಪಿಚ್‌ ಗುಣ ಹೇಗಿರಲಿದೆ?

ಪಿಚ್‌ ಗುಣ ಹೇಗಿರಲಿದೆ?

ಯುಎಇಯದ್ದು ನಿಧಾನಗತಿಯ ಪಿಚ್ ಆಗಿದ್ದು, ವೇಗಿಗಳಿಗಿಂತಲೂ ಸ್ಪಿನ್ನರ್‌ಗಳು ಇದರ ಲಾಭ ತೆಗೆದುಕೊಳ್ಳಲಿದ್ದಾರೆ. ಅತಿ ಹೆಚ್ಚು ಮೊತ್ತದ ಮ್ಯಾಚು ಇದಾಗದಿದ್ದರೂ ಸಹ 280 ರನ್ ಗಳಿಸಿದರೆ ಉತ್ತಮ ಮೊತ್ತವೆನಿಸಿಕೊಳ್ಳಲಿದೆ. ಬಿಸಿಲಿನ ತಾಪಮಾನ ಅತಿಯಾಗಿದ್ದು ಆಟಗಾರರು ಬಳಲಿಕೆಯ ನಡುವೆಯೇ ಆಡಬೇಕಿದೆ. ಬಿಸಿಲಿನ ಸವಾಲನ್ನು ಎರಡೂ ತಂಡಗಳು ಎದುರಿಸಲೇ ಬೇಕಿದೆ.

ಯಾವ ತಂಡದ ಮೇಲುಗೈ ಸಾಧಿಸಲಿದೆ?

ಯಾವ ತಂಡದ ಮೇಲುಗೈ ಸಾಧಿಸಲಿದೆ?

ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲದಿಂದ ಕೂಡಿವೆ. ಎರಡೂ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮಬಲ ಹೊಂದಿವೆ. ಭಾರತ ಹಾಗೂ ಪಾಕಿಸ್ತಾನ ಎರಡಕ್ಕೂ ಮಧ್ಯಮಕ್ರಮಾಂಕದ ತಲೆನೋವಿದೆ. ಪಾಕಿಸ್ತಾನ ವೇಗಿಗಳ ಮೇಲೆ ಅವಲಂಭಿಸಿದ್ದರೆ ಭಾರತವು ಸ್ಪಿನ್ನರ್‌ಗಳನ್ನು ನೆಚ್ಚಿಕೊಂಡಿದೆ. ಭಾರತದ ಪರ ಕೊಹ್ಲಿ ಇಲ್ಲದಿರುವ ಕೊರತೆ ಕಾಣಲಿದೆ. ಒತ್ತಡವನ್ನು ತಾಳಿಕೊಂಡು ಸಂಯಮದ ಆಟ ಆಡಿದ ತಂಡ ಇಂದು ವಿಜಯಿಯಾಗಲಿದೆ.

Story first published: Wednesday, September 19, 2018, 13:47 [IST]
Other articles published on Sep 19, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+