ಭಾರತದ ಎದುರಾಳಿ ಯಾರು?: ಪಾಕಿಸ್ತಾನ-ಬಾಂಗ್ಲಾದೇಶ ರೋಚಕ ಹಣಾಹಣಿ

ಅಬುದಾಬಿ, ಸೆಪ್ಟೆಂಬರ್ 26: ಏಷ್ಯಾ ಕಪ್ ಕ್ರಿಕೆಟ್ ರೋಚಕ ಘಟ್ಟಕ್ಕೆ ತಲುಪಿದೆ. ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ಎದುರಾಳಿ ಯಾರು ಎಂಬುದು ಬುಧವಾರ (ಸೆ. 26) ನಡೆಯುವ ಪಂದ್ಯದಲ್ಲಿ ನಿರ್ಧಾರವಾಗಲಿದೆ.
ಸೂಪರ್ ಫೋರ್ ಹಂತದಲ್ಲಿ ಅಫ್ಘಾನಿಸ್ತಾನ ಗೆದ್ದಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳೆರಡಕ್ಕೂ ಇದು ಒಂದು ರೀತಿ ಸೆಮಿಫೈನಲ್ ಪಂದ್ಯ. ಈ ಪಂದ್ಯದಲ್ಲಿ ಗೆದ್ದವರು ಶುಕ್ರವಾರ ಭಾರತವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಹೀಗಾಗಿ ಎರಡೂ ತಂಡಗಳು ಗೆಲುವು ಸಾಧಿಸುವ ಒತ್ತಡದಲ್ಲಿದೆ.
ಟೂರ್ನಿಯಲ್ಲಿ ಬಾಂಗ್ಲಾದೇಶ ಉತ್ತಮ ಪ್ರದರ್ಶನ ತೋರಿಸದೆ ಇದ್ದರೂ, ಪಾಕಿಸ್ತಾನ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ. ಉಭಯ ತಂಡಗಳು ಇಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಕಳೆದ ಪಂದ್ಯಗಳಲ್ಲಿ ಎರಡೂ ತಂಡಗಳು ಅಫ್ಘಾನಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದ್ದವು.

ಪಾಕಿಸ್ತಾನದ ಸಮಸ್ಯೆ
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪಾಕಿಸ್ತಾನ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ಶೋಯೆಬ್ ಮಲಿಕ್ ಮಾತ್ರ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
ಬೌಲಿಂಗ್ ವಿಭಾಗ ಶಕ್ತಿಯುತವಾಗಿದ್ದರೂ ಪ್ರಮುಖ ವೇಗಿ ಮೊಹಮದ್ ಅಮೀರ್ ಯಾವುದೇ ಕರಾಮತ್ತು ಪ್ರದರ್ಶಿಸಿಲ್ಲ. ಭಾರತದ ವಿರುದ್ಧ ಪಾಕ್ ಬೌಲರ್‌ಗಳು ಒಂದೂ ವಿಕೆಟ್ ಪಡೆದುಕೊಳ್ಳುವಲ್ಲಿ ಸಫಲವಾಗಿರಲಿಲ್ಲ. ಅವರ ಸ್ಥಾನದಲ್ಲಿ ಉಸ್ಮಾನ್ ಶಿನ್ವಾರಿ ಸ್ಥಾನ ಪಡೆದರೂ ಅಚ್ಚರಿಯಿಲ್ಲ.
ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ

ಬಾಂಗ್ಲಾಕ್ಕೂ ಸಂಕಟ
ಬಾಂಗ್ಲಾದೇಶ ಕೂಡ ಇದೇ ಸಂಕಟದಲ್ಲಿದೆ. ಹೀಗಾಗಿ ಈ ಪಂದ್ಯ ಹೆಚ್ಚು ರೋಚಕತೆ ಮೂಡಿಸುವ ನಿರೀಕ್ಷೆ ಇದೆ.
ಅಫ್ಘಾನಿಸ್ತಾನ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇಮ್ರುಲ್ ಕಾಯೆಸ್ ಅವರನ್ನು ಆಡಿಸಿದ್ದು ಬಾಂಗ್ಲಾ ತಂಡಕ್ಕೆ ನೆರವಾಗಿತ್ತು. ಇನ್ನೊಬ್ಬ ಆರಂಭಿಕ ಸೌಮ್ಯ ಸರ್ಕಾರ್‌ಗೆ ಕೂಡ ಇದುವರೆಗೂ ಅವಕಾಶ ಸಿಕ್ಕಿಲ್ಲ. ನಜ್ಮುಲ್ ಹುಸೇನ್ ಅವರ ಸ್ಥಾನದಲ್ಲಿ ಆಡುವ ಸಾಧ್ಯತೆ ಇದೆ.
ಅಫ್ಘಾನಿಸ್ತಾನವೇ ಗೆಲ್ಲಬೇಕಿತ್ತು, ಗೆದ್ದಿದೆ!: ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯ ಹೀಗಿದೆ ನೋಡಿ

ಪಾಕಿಸ್ತಾನ ಸಂಭಾವ್ಯ ತಂಡ
ಇಮಾಮ್ ಉಲ್ ಹಕ್, ಫಖರ್ ಜಮಾನ್/ಶಾನ್ ಮಸೂದ್, ಬಾಬರ್ ಅಜಂ, ಸರ್ಫರಾಜ್ ಅಹ್ಮದ್, ಶೋಯೆಬ್ ಮಲಿಕ್, ಶದಬ್ ಖಾನ್, ಮೊಹಮದ್ ನವಾಜ್, ಹಸನ್ ಅಲಿ, ಮೊಹಮದ್ ಅಮೀರ್/ಉಸ್ಮಾನ್ ಶೆನ್ವಾರಿ, ಶಹೀನ್ ಅಫ್ರಿದಿ

ಬಾಂಗ್ಲಾದೇಶ ಸಂಭಾವ್ಯ ತಂಡ
ಲಿಟನ್ ದಾಸ್, ನಜ್ಮುಲ್ ಹುಸೇನ್/ಸೌಮ್ಯ ಸರ್ಕಾರ್, ಮೊಹಮ್ಮದ್ ಮಿಥುನ್, ಮುಷ್ಫಿಕುರ್ ರಹೀಮ್, ಶಕೀಬ್ ಅಲ್ ಹಸನ್, ಇಮ್ರುಲ್ ಕಾಯೆಸ್, ಮಹ್ಮದುಲ್ಲಾ, ಮುಶ್ರಫೆ ಮೊರ್ತಾಜಾ, ಮೆಹಿದಿ ಹಸನ್, ಮುಸ್ತಫಿಜುರ್ ರಹಮಾನ್, ನಜ್ಮುಲ್ ಇಸ್ಲಾಂ

ಪಂದ್ಯದ ವಿವರ
ಸಮಯ: ಸಂಜೆ 5 ಗಂಟೆ (ಭಾರತೀಯ ಕಾಲಮಾನ)
ಸ್ಥಳ: ಶೇಖ್ ಜಾಯೆದ್ ಸ್ಟೇಡಿಯಂ, ಅಬು ದಾಬಿ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿ ಸ್ಪೋರ್ಟ್ಸ್, ಹಾಟ್ ಸ್ಟಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications