ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ
ದುಬೈ, ಸೆಪ್ಟೆಂಬರ್ 24: ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳೆಂದರೆ ಎರಡೂ ದೇಶಗಳ ಅಭಿಮಾನಿಗಳಲ್ಲಿ ಕಿಚ್ಚು ಹೊತ್ತುತ್ತದೆ.
ಈ ಬಾರಿ ಎರಡೂ ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನವನ್ನು ನಿರಾಯಾಸವಾಗಿ ಮಣಿಸಿದೆ. ಸಾಮಾನ್ಯವಾಗಿ ಈ ಪಂದ್ಯಗಳಲ್ಲಿ ವೈರತ್ವದ ಹೊಗೆಯೂ ಇರುತ್ತದೆ. ಆದರೆ, ಗೆಲುವಿನ ಸಿಂಚನ ಭಾರತೀಯರ ಈ ಕಿಚ್ಚನ್ನು ತುಸು ತಣ್ಣಗಾಗಿಸಿದೆ. ಅದರ ಜತೆಗೆ ಭಾರತೀಯರ ಹೃದಯವೂ ಪಾಕಿಸ್ತಾನದೆಡೆಗೆ ಮಿಡಿಯುತ್ತಿದೆ!
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಪಂದ್ಯದಷ್ಟೇ ಅಲ್ಲಿನ ಅಭಿಮಾನಿಯೊಬ್ಬಳ ಬಗ್ಗೆಯೂ ಮಾತನಾಡುತ್ತಿದ್ದಾರೆ. ಪಾಕಿಸ್ತಾನ ಸೋತರೂ ಆ ಅಭಿಮಾನಿ ಮಾತ್ರ ಗೆದ್ದಿದ್ದಾಳೆ.
ಟ್ವಿಟ್ಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹೀಗೆ ಎಲ್ಲಿಯೇ ನೋಡಿದರೂ ಆಕೆಯದೇ ಫೋಟೋ. ಗಂಭೀರ ಮುಖದಲ್ಲಿ ಸಣ್ಣನೆ ನಗುಸೂಸುವ ಆಕೆಯ ಚಿತ್ರಗಳಿಗೆ ಕ್ರಿಕೆಟ್ ಪ್ರಿಯರು ಫಿದಾ ಆಗಿದ್ದಾರೆ. ಆಕೆಯ ಫೋಟೊಗಳಿಗೆ ತಮಾಷೆಯ ಪೋಸ್ಟ್‌ಗಳನ್ನೂ ಹಾಕಲಾಗುತ್ತಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯದ ವೇಳೆ ಕಾಣಿಸಿಕೊಂಡಾಗಲೇ ಪಾಕಿಸ್ತಾನದ ಜೆರ್ಸಿ ತೊಟ್ಟ ಈ ಸುಂದರಿಯ ಚಿತ್ರ ವೈರಲ್ ಆಗಿತ್ತು.
ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದಲ್ಲಿಯೂ ಈಕೆ ಹಾಜರ್ ಹಾಕಿದ್ದಳು. ಆಗ ಜೆರ್ಸಿ ತೊಡದೆ ಕಪ್ಪು ಮೇಲುಡುಗೆ ಧರಿಸಿ ಬಂದಿದ್ದರಿಂದ ಯಾವ ತಂಡವನ್ನು ಬೆಂಬಲಿಸುತ್ತಿದ್ದಾಳೆ ಎಂಬುದು ಗೊತ್ತಾಗಿರಲಿಲ್ಲ.
ಭಾನುವಾರ ನಡೆದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಆಕೆ ಮತ್ತೆ ಪಾಕ್ ಜೆರ್ಸಿ ತೊಟ್ಟು ಅಭಿಮಾನಿಗಳ ಕಣ್ಣಿಗೆ ಮುದ ನೀಡಿದ್ದಾಳೆ. ಅತ್ತ ಕ್ರಿಕೆಟ್ ಅಭಿಮಾನಿಗಳು ಪ್ರತಿ ಪಂದ್ಯದಲ್ಲಿಯೂ ಸಾವಿರಾರು ಜನರ ಮಧ್ಯೆ ಆಕೆಯನ್ನು ಹುಡುಕಿ 'ಫೋಕಸ್' ಮಾಡುವ ಕ್ಯಾಮೆರಾಮ್ಯಾನ್‌ನನ್ನು ಶ್ಲಾಘಿಸುತ್ತಿದ್ದಾರೆ.
ಇಂಡಿಯಾ ಡಾಟ್ ಕಾಮ್ ವೆಬ್‌ಸೈಟ್ ವರದಿ ಮಾಡಿರುವ ಪ್ರಕಾರ ಆಕೆಯ ಹೆಸರು ನಿವ್ಯಾ ನವೋರಾ. ಪಾಕಿಸ್ತಾನದ ಸಾಮಾನ್ಯ ಕ್ರಿಕೆಟ್ ಅಭಿಮಾನಿಯಾಗಿರುವ ಆಕೆ ಈಗ ಸೆಲೆಬ್ರಿಟಿ. ಅದರಲ್ಲಿಯೂ ಭಾರತದ ಯುವ ಮನಸ್ಸುಗಳನ್ನು ಆಕೆ ಕದ್ದಿದ್ದಾಳೆ.
ಪಾಕಿಸ್ತಾನದೊಂದಿಗೆ ಪಂದ್ಯ ಆಡಿಸಿ
ಪಾಕ್ ಕ್ರಿಕೆಟ್ ಅಭಿಮಾನಿಯ ಫೋಟೊ ಹಾಕಿಕೊಂಡಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಪಾಕಿಸ್ತಾನದೊಂದಿಗೆ ಇನ್ನಷ್ಟು ಪಂದ್ಯಗಳನ್ನು ಆಡಿಸುವಂತೆ ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ. ಪಾಕಿಸ್ತಾನವನ್ನು ಇಷ್ಟಪಡದೆ ಇದ್ದರೂ ಈ ಅಭಿಮಾನಿಯ ಕಾರಣಕ್ಕೆ ಕ್ರಿಕೆಟ್ ಪಂದ್ಯ ಆಡಿಸುವಂತೆ ಕೇಳುತ್ತಿದ್ದಾರೆ.
ಪಾಕಿಸ್ತಾನಕ್ಕೆ ಹೀಗಾ ಬಾರಿಸೋದು?: ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಫ್ಯಾನ್ಸ್ ಸಂಭ್ರಮ
ಪಾಕ್ ಇನ್ನಿಂಗ್ಸ್!
ಪಾಕಿಸ್ತಾನದ ಇನ್ನಿಂಗ್ಸ್‌ನ ಅತ್ಯುತ್ತಮ ಭಾಗ ಎಂದು ನಿವ್ಯಾ ನವೋರಾಳ ಫೋಟೊ ಹಾಕಿ ಸಾಗರ್ ರಾಥೋಡ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ಬ್ಯಾಟಿಂಗ್ ಮತ್ತು ಬೌಲಿಂಗ್ ಚೆನ್ನಾಗಿಲ್ಲದೆ ಇದ್ದರೂ, ಅದರ ಅಭಿಮಾನಿಯಂತೂ ಖುಷಿ ನೀಡಿರುವುದು ಸುಳ್ಳಲ್ಲ.
ಇತಿಹಾಸ : ಧೋನಿ ರುಂಡ ಹಿಡಿದ ಬಾಂಗ್ಲಾ ಹುಲಿಗಳು ಇಲಿಗಳಾಗಿದ್ದು!
ಅತ್ಯುತ್ತಮ ಕ್ಯಾಮೆರಾ ಕೆಲಸ
ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಪಂದ್ಯಕ್ಕೆ ಪಾಕ್ ಅಭಿಮಾನಿ ಕಪ್ಪು ಉಡುಗೆ ಧರಿಸಿ ಬಂದಿದ್ದಳು. ಅಷ್ಟು ಸಾವಿರಾರು ಜನರ ನಡುವೆಯೂ ಛಾಯಾಗ್ರಾಹಕನ ಕಣ್ಣಿಗೆ ಆಕೆ ಬಿದ್ದಿದ್ದಾಳೆ. ಆಕೆಯನ್ನು ಹುಡುಕಿದ ಕ್ಯಾಮೆರಾ ಕಣ್ಣನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.
ತಮ್ಮ ಅದ್ಭುತ ಕ್ಯಾಮೆರಾ ಕೆಲಸದಿಂದ ಭಾರತದ ಬೌಲರ್‌ಗಳ ಮನಸ್ಸನ್ನು ಕೆಡಿಸಲು ಬಾಂಗ್ಲಾದೇಶದ ಅಭಿಮಾನಿ ಛಾಯಾಗ್ರಾಹಕ ಪ್ರಯತ್ನಿಸುತ್ತಿದ್ದಾನೆ ಎಂದು ಮಿ. 360 ಎಬಿಡಿ ಎಂಬ ಹೆಸರಿನ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಪಾಕ್ ತಂಡಕ್ಕಿಂತ ಸ್ಥಿರ
ಈ ಯುವತಿ ಇಡೀ ಪಾಕಿಸ್ತಾನ ಕ್ರಿಕೆಟ್ ತಂಡಕ್ಕಿಂತಲೂ ಹೆಚ್ಚು ಸ್ಥಿರತೆ ಹೊಂದಿದ್ದಾಳೆ ಎಂದು ರತ್ನಿಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಅಭಿಮಾನಿ ಕಳೆದುಕೊಂಡ ಪಾಕ್
ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತದಿಂದ ತೀವ್ರವಾಗಿ ಚಚ್ಚಿಸಿಕೊಂಡು ಸೋತ ಬಳಿಕ ತನ್ನ ಒಬ್ಬ ಅಭಿಮಾನಿಯನ್ನು ಕಳೆದುಕೊಂಡಿದೆ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications