For Quick Alerts
ALLOW NOTIFICATIONS  
For Daily Alerts
 

ಪಾಕ್‌ಗೆ ಮಣ್ಣುಮುಕ್ಕಿಸಿದ ಬಾಂಗ್ಲಾ ಹುಲಿಗಳು: ಟ್ವಿಟ್ಟಿಗರಲ್ಲಿ ಸಂಭ್ರಮವೋ ಸಂಭ್ರಮ

ಅಬುದಾಬಿ, ಸೆಪ್ಟೆಂಬರ್ 27: ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತದೊಂದಿಗೆ ಟ್ರೋಫಿಯಲ್ಲಿ ಮತ್ತೆ ಕಾದಾಡುವ ಅವಕಾಶ ಬಾಂಗ್ಲಾದೇಶ ಪಾಲಾಗಿದೆ.

2016ರ ಏಷ್ಯಾಕಪ್‌ನಲ್ಲಿಯೂ ಬಾಂಗ್ಲಾದೇಶ ಭಾರತದೊಂದಿಗೆ ಫೈನಲ್‌ನಲ್ಲಿ ಮುಖಾಮುಖಿಯಾಗಿತ್ತು. ಆಗ ಈ ಟೂರ್ನಿ ಟಿ20 ಮಾದರಿಯಲ್ಲಿ ಆಯೋಜನೆಗೊಂಡಿತ್ತು.

2015ರ ಈಚೆಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಏಕದಿನದಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಈ ಎಲ್ಲ ಪಂದ್ಯಗಳಲ್ಲಿಯೂ ಬಾಂಗ್ಲಾದೇಶ ಜಯಗಳಿಸಿದೆ.

ಈ ಪಂದ್ಯ ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿತ್ತು. ಭಾರತ-ಪಾಕಿಸ್ತಾನಗಳ ನಡುವೆ ಸಾಂಪ್ರದಾಯಕ ವೈರತ್ವ ಇರುವಂತೆಯೇ ಬಾಂಗ್ಲಾ ಮತ್ತು ಪಾಕ್ ನಡುವೆಯೂ ಇದೆ. ಹೀಗಾಗಿ ಪಾಕ್ ಮತ್ತು ಬಾಂಗ್ಲಾದ ಕ್ರಿಕೆಟ್ ಪ್ರೇಮಿಗಳಂತೆಯೇ ಭಾರತದ ಕ್ರಿಕೆಟ್ ಪ್ರೇಮಿಗಳೂ ಈ ಪಂದ್ಯವನ್ನು ಅಷ್ಟೇ ಆಸಕ್ತಿಯಿಂದ ವೀಕ್ಷಿಸಿದ್ದರು.

ಬುಧವಾರದ ಪಂದ್ಯ ನೆಟ್ಟಿಗರ ಹಾಸ್ಯಪ್ರಜ್ಞೆಯನ್ನು ಕೆರಳಿಸಿದೆ. ಟ್ವಿಟ್ಟರ್‌ನಲ್ಲಿ ಕಣ್ಣಾಡಿಸಿದವರಿಗೆ ನಕ್ಕು ಹೊಟ್ಟೆ ಹುಣ್ಣಾಗಿಸುವಷ್ಟು ಜೋಕ್‌ಗಳು, ಮೀಮ್‌ಗಳು ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ಆಯ್ದ ಟ್ವೀಟ್‌ಗಳು ಇಲ್ಲಿವೆ.

ವೀರೇಂದ್ರ ಸೆಹ್ವಾಗ್

ಯಾರೂ ದುರ್ಬಲರಲ್ಲ. ಅಭಿಮಾನಿಗಳು ಬಯಸಿದ್ದಂತೆಯೇ ಆಗುವುದಿಲ್ಲ. ಅನೇಕರು ಭಾರತ ಮತ್ತು ಪಾಕಿಸ್ತಾನದ ಫೈನಲ್ ನಿರೀಕ್ಷಿಸಿದ್ದರು. ಆದರೆ, ಬಾಂಗ್ಲಾದೇಶ ಅದ್ಭುತವಾಗಿ ಆಡಿತು. ಐದು Mಗಳಾದ ಮುಷ್ಫಿಕುರ್, ಮಿಥುನ್, ಮುಸ್ತಫಿಜುರ್, ಮಹಮುದುಲ್ಲಾ ಮತ್ತು ಮೆಹಿದಿ ಆಕರ್ಷಕ ಆಟವಾಡಿದರು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ

ತಂಡವನ್ನೇ ಕಳುಹಿಸಿಲ್ಲ

ಬ್ರೇಕಿಂಗ್ : ಪಾಕಿಸ್ತಾನವು ಏಷ್ಯಾ ಕಪ್ 2018ಗೆ ಆಡಲು ತನ್ನ ಯಾವುದೇ ತಂಡವನ್ನು ಕಳುಹಿಸಿರುವುದನ್ನು ನಿರಾಕರಿಸಿದೆ ಎಂದು ಸರ್ ರವೀಂದ್ರ ಜಡೇಜಾ

ಅಫ್ಘಾನಿಸ್ತಾನವೇ ಗೆಲ್ಲಬೇಕಿತ್ತು, ಗೆದ್ದಿದೆ!: ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯ ಹೀಗಿದೆ ನೋಡಿ

ಇದೇ ಉತ್ತಮ

ಭಾರತದ ವಿರುದ್ಧ ಸತತ ಮೂರನೇ ಬಾರಿ ಸೋಲುವ ಬದಲು ಬಾಂಗ್ಲಾದೇಶದ ಎದುರೇ ಸೋಲುವುದು ಉತ್ತಮ. ಈ ಚಿತ್ರಣದ ಸಕಾರಾತ್ಮಕ ಆಯಾಮವನ್ನೂ ನಾವು ನೋಡಬೇಕು ಎಂದು ನಬೀಲ್ ಶಹಜಾದ್ ಟ್ವೀಟ್ ಮಾಡಿದ್ದಾರೆ.

ಪಾಕ್‌ಗೆ ಚಚ್ಚುತ್ತಲೇ ಇದೆ

1971ರಲ್ಲಿ ಇಮ್ರಾನ್ ಖಾನ್ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು. ಅದೇ ವರ್ಷ ನಿರಂಕುಶಾಧಿಕಾರದ ಪಾಕಿಸ್ತಾನವನ್ನು ಒದ್ದೋಡಿಸಿ ಬಾಂಗ್ಲಾದೇಶ ಸ್ವತಂತ್ರವಾಯಿತು. 2018ರಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾದರು. ಈಗಲೂ ಪಾಕಿಸ್ತಾನಕ್ಕೆ ಬಾಂಗ್ಲಾ ಬಾರಿಸುತ್ತಿದೆ. ಇಮ್ರಾನ್‌ ಅವರ 'ಹೊಸ ಪಾಕಿಸ್ತಾನ'ವು ಢಾಕಾವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅಭಿಜಿತ್ ಮಜುಂದಾರ್ ತಮಾಷೆ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ಭದ್ರತೆ!

ಪಾಕಿಸ್ತಾನದ ತಂಡವು ತಮ್ಮ ತಾಯ್ನಾಡಿಗೆ ಬಿಗಿ ಭದ್ರತೆಯೊಂದಿಗೆ ತೆರಳುತ್ತಿದೆ ಎಂದು ರಿತಿಕಾ, ಕಾರಿಗೆ ಬೀಗ ಹಾಕಿರುವ ಚಿತ್ರದೊಂದಿಗೆ ಲೇವಡಿ ಮಾಡಿದ್ದಾರೆ.

ಭೇದಭಾವವಿಲ್ಲ!

ಪಾಕಿಸ್ತಾನ ಕ್ರಿಕೆಟ್ ತಂಡವು ಹೃದಯಪೂರ್ವಕವಾಗಿ ಸಮಾನತೆಯನ್ನು ನಂಬುತ್ತದೆ ಮತ್ತು ತಂಡಗಳ ನಡುವೆ ತಾರತಮ್ಯ ಮಾಡುವುದಿಲ್ಲ. ಅದು ಬಾಂಗ್ಲಾದೇಶ, ಭಾರತ ಅಥವಾ ಅಫ್ಘಾನಿಸ್ತಾನವೇ ಆಗಿರಲಿ. ಎಲ್ಲ ತಂಡಗಳ ಎದುರೂ ಸಮಾನ ದಯನೀಯವಾಗಿ ಆಡುತ್ತದೆ ಎಂದು ಸಿಮ್ರಾನ್ ಟ್ವೀಟ್ ಮಾಡಿದ್ದಾರೆ.

ಟಿವಿಗೆ ಭದ್ರತೆ!

ಬಾಂಗ್ಲಾದೇಶದ ವಿರುದ್ಧ ಸೋಲು ಅನುಭವಿಸಿದ ಬಳಿಕ ಪಾಕಿಸ್ತಾನದಲ್ಲಿ ಟಿವಿ ಸೆಟ್‌ಗಳಿಗೆ ಭಾರಿ ಭದ್ರತೆ ಒದಗಿಸಲಾಗಿದೆ ಎಂದು ಶಿವಂ ಪಾಂಡೆ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಸೋತಾಗ ಪಾಕಿಸ್ತಾನದಲ್ಲಿ ಟಿವಿ ಸೆಟ್‌ಗಳನ್ನು ಒಡೆದು ಹಾಕಿದ್ದ ಅನೇಕ ಘಟನೆಗಳನ್ನು ನೆನಪಿಸಿಕೊಳ್ಳಬಹುದು.

ಅವಮಾನ ತಪ್ಪಿಸಿಕೊಂಡರು

ಬಾಂಗ್ಲಾದೇಶದ ವಿರುದ್ಧದ ಸೋಲಿನ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಂಡಿಲ್ಲ. ಈ ಸೋಲು ಫೈನಲ್‌ನಲ್ಲಿ ಇದುವರೆಗೂ ಎದುರಿಸದ ಅವಮಾನಕಾರಿ ಸೋಲಿನಿಂದ ಅದನ್ನು ಉಳಿಸಿದೆ ಎಂದು ಸಯ್ಯದ್ ಜುನೈದ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.

ಜಿಂಬಾಬ್ವೆ ವಿರುದ್ಧ ಆಡಿದರೆ ಹೀಗೆ

ಜಿಂಬಾಬ್ವೆ ವಿರುದ್ಧವೇ ಸರಣಿಗಳನ್ನು ಆಡುತ್ತಿದ್ದರೆ ಹೀಗಾಗುತ್ತದೆ. ಬ್ಯಾಟ್ಸ್‌ಮನ್‌ಗಳು ದುರ್ಬಲ ತಂಡದ ವಿರುದ್ಧ ಮಾತ್ರ ರನ್ ಗಳಿಸಬಲ್ಲರು. ಇನ್ನು ಬೌಲರ್‌ಗಳು, ಇದರ ಬಗ್ಗೆ ನಾನೇನೂ ಬರೆಯುವ ಅಗತ್ಯವಿಲ್ಲ. ಚಾಂಪಿಯನ್ಸ್ ಟ್ರೋಫಿಯ ಗೆಲುವು ಏಕೆ ಬಹುದೊಡ್ಡ ಫ್ಲ್ಯೂಕ್ ಎನ್ನವುದನ್ನು ಭಾರತದ ಬಳಿಕ ಬಾಂಗ್ಲಾದೇಶ ಸಾಬೀತುಪಡಿಸಿದೆ.

Story first published: Thursday, September 27, 2018, 12:46 [IST]
Other articles published on Sep 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+