ಏಷ್ಯಾಕಪ್ 2022: ಈ 8 ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ!

ಏಷ್ಯಾಕಪ್ 2022ರ ಟೂರ್ನಿಗೆ ಆಗಸ್ಟ್ 27ರಂದು ಚಾಲನೆ ಸಿಗಲಿದ್ದು, ಐದು ಬಲಿಷ್ಠ ತಂಡಗಳ ನಡುವೆ ಒಂದು ಚಿಕ್ಕ ತಂಡವು ಪೈಪೋಟಿ ನಡೆಸಲಿದೆ. ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದಿದ್ದು, ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ.
ಭಾರತ ಮತ್ತು ಪಾಕಿಸ್ತಾನದಂತೆಯೇ ಇಬ್ಬರು ಆಟಗಾರರ ನಡುವಿನ ಘರ್ಷಣೆಗಳು ಪ್ರಸ್ತುತ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕುತ್ತಿವೆ. ಕೆಲವು ಬೌಲರ್‌ಗಳ ಎದುರು ಬ್ಯಾಟರ್ಸ್ ನಡುಕ ಒಂದೆಡೆಯದ್ರೆ, ಕೆಲವು ಬ್ಯಾಟ್ಸ್‌ಮನ್‌ಗಳನ್ನು ಕಂಡರೆ ಬೌಲರ್‌ಗಳೂ ನಡುಗುತ್ತಾರೆ.
ಆದ್ದರಿಂದ ಏಷ್ಯಾಕಪ್ ಟೂರ್ನಿಲ್ಲಿ ಅಗ್ರ 4 ಹೆಡ್ ಟು ಹೆಡ್ ಫೈಟ್ ಅನ್ನು ನೋಡಲಿದ್ದೇವೆ. ಬುಮ್ರಾ ಮತ್ತು ಶಾಹೀನ್ ಅಫ್ರಿದಿ ಗೈರುಹಾಜರಾಗಿದ್ದರೂ, ಇತರ ಆಟಗಾರರ ನಡುವಿನ ಪೈಪೋಟಿಯನ್ನು ಮುಂದೆ ನೋಡಬಹುದಾಗಿದೆ.

ರಶೀದ್ ಖಾನ್ ವರ್ಸಸ್ ಬಾಬರ್ ಅಜಮ್
ಸದ್ಯ ಬ್ಯಾಟಿಂಗ್‌ನ ಕಿಂಗ್ ಆಗಿರುವ ಬಾಬರ್ ಅಜಮ್ ಹಾಗೂ ಬೌಲಿಂಗ್‌ನಲ್ಲಿ ರಶೀದ್ ಖಾನ್ ಕಣಕ್ಕಿಳಿದರೆ ಏನಾಗಬಹುದು? ಯೋಚಿಸಲು ಒಂದು ರೀತಿಯ್ಲಿ ರೋಮಾಂಚನ. ವಿಶ್ವದ ಎಲ್ಲಾ ಬೌಲರ್‌ಗಳನ್ನು ಸುಲಭವಾಗಿ ಎದುರಿಸುವ ಬಾಬರ್, ರಶೀದ್ ಖಾನ್ ಅವರಿಂದ ಮಾತ್ರ ಸ್ವಲ್ಪ ಹೆಚ್ಚಿನ ಪೈಪೋಟಿ ಎದುರಿಸಲಿದ್ದಾರೆ. ಬಾಬರ್ ಅಜಮ್ ರಶೀದ್ ಖಾನ್ ಅವರ 48 ಎಸೆತಗಳಲ್ಲಿ 59 ರನ್ ಕಲೆಹಾಕಿದ್ದಾರೆ. ಆದ್ರೆ ಇದರಲ್ಲಿ ಬಾಬರ್ ಅಜಮ್ 5 ಬಾರಿ ಔಟಾಗಿದ್ದಾರೆ.

ವಹಿಂದು ಹಸರಂಗ ವರ್ಸಸ್ ವಿರಾಟ್ ಕೊಹ್ಲಿ
ಐಪಿಎಲ್ ಸರಣಿಯಲ್ಲಿ ಒಂದೇ ತಂಡದ ಪರ ಆಡುತ್ತಿರುವ ಕೊಹ್ಲಿ ಹಾಗೂ ಹಸರಂಗ ನಡುವಿನ ಪೈಪೋಟಿ ನಿರೀಕ್ಷೆ ಮೂಡಿಸಿದೆ. ಹಸರಂ ಪಡೆದ 116 ವಿಕೆಟ್‌ಗಳಲ್ಲಿ 86 ವಿಕೆಟ್‌ಗಳು ಬಲಗೈ ಬ್ಯಾಟ್ಸ್‌ಮನ್‌ಗಳು. ಅದೇ ರೀತಿ ಕೊಹ್ಲಿ ಲೆಗ್ ಸ್ಪಿನ್ನರ್‌ಗಳ ವಿರುದ್ಧ 62 ಸರಾಸರಿ ಹೊಂದಿದ್ದಾರೆ. ಹಸರಂಗ ಇದುವರೆಗೆ ಕೊಹ್ಲಿಗೆ ಕೇವಲ 6 ಎಸೆತಗಳನ್ನು ಎಸೆದಿದ್ದಾರೆ. ಹೀಗಾಗಿ ಈ ಪಂದ್ಯವೂ ಸಾಕಷ್ಟು ಪೈಪೋಟಿಗೆ ಕಾರಣವಾಗಲಿದೆ.
ಏಷ್ಯಾಕಪ್‌ಗೆ ಆಯ್ಕೆಯಾದ ಭಾರತದ 15 ಆಟಗಾರರ ವಯಸ್ಸು: ಯಾರು ಕಿರಿಯ, ಯಾರಿಗೆ ಹೆಚ್ಚು ವಯಸ್ಸು?

ರಾಜಪಕ್ಸೆ Vs ಶದಾಬ್ ಖಾನ್
ಅದೇ ರೀತಿ ಶ್ರೀಲಂಕಾದ ಸ್ಫೋಟಕ ಆಟಗಾರ ರಾಜಪಕ್ಸೆ ಹಾಗೂ ಪಾಕಿಸ್ತಾನದ ಸ್ಪಿನ್ನರ್ ಶದಾಬ್ ಖಾನ್ ಅವರ 29 ಎಸೆತಗಳ ವಿರುದ್ಧ 45 ರನ್ ಗಳಿಸಿದರು. ಅವರ ಬೌಲಿಂಗ್‌ನಲ್ಲಿ ಒಮ್ಮೆ ಮಾತ್ರ ಮಾತ್ರ ರಾಜಪಕ್ಸೆ ಔಟಾದರು. ಆದರೆ, ಎಚ್ಚರಿಕೆಯ ವಿಚಾರ ಅಂದ್ರೆ ರಾಜಪಕ್ಸೆ 16 ಬಾರಿ ಸ್ಪಿನ್ನರ್‌ಗಳಿಂದ ಔಟಾಗಿದ್ದಾರೆ.
Asia cup 2022: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ನಿಂದ ಆಡಲಿದ್ದಾರೆ ವಿರಾಟ್ ಕೊಹ್ಲಿ!

ಹಾರ್ದಿಕ್ Vs ಮುಷ್ಫೀಕರ್ ರಹೀಮ್
ಹಾರ್ದಿಕ್ ಪಾಂಡ್ಯ ಮತ್ತು ಬಾಂಗ್ಲಾದೇಶದ ಆಟಗಾರ ಮುಷ್ಫೀಕರ್ ರಹೀಮ್ ನಡುವಿನ ಆ ಒಂದು ಪಂದ್ಯ ಮರೆಯಲು ಸಾಧ್ಯವಿಲ್ಲ. 2016 ರ ಟಿ 20 ವಿಶ್ವಕಪ್‌ನಲ್ಲಿ 6 ಎಸೆತಗಳಲ್ಲಿ 11 ರನ್‌ಗಳ ಅಗತ್ಯವಿದ್ದಾಗ, ಹಾರ್ದಿಕ್ ಪಾಂಡ್ಯ ರಹೀಮ್‌ಗೆ ತಮ್ಮ ಬೌಲಿಂಗ್‌ನ ಮೂಲಕ ಉತ್ತರಿಸಿದರು, ಜೊತೆಗೆ ಭಾರತ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಸಾಧಿಸಿ ಸಂಭ್ರಮಿಸಿತು. ಆ ಘಟನೆಯ ನಂತರ ಈಗ ಇಬ್ಬರೂ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಹೀಗಾಗಿ ಏಷ್ಯಾಕಪ್ 2022ರ ಟೂರ್ನಿಯ ಈ ನಾಲ್ವರು ಸ್ಟಾರ್ ಜೋಡಿಯ ಮುಖಾಮುಖಿಗೆ ಎದುರು ನೋಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications