ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia cup 2022: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ನಿಂದ ಆಡಲಿದ್ದಾರೆ ವಿರಾಟ್ ಕೊಹ್ಲಿ!

Virat kohli

ಏಷ್ಯಾಕಪ್ ಕ್ರಿಕೆಟ್ ಸರಣಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಇದೇ ಶನಿವಾರ ಆಗಸ್ಟ್ 27ಕ್ಕೆ ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಆ. 27ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಆರು ತಂಡಗಳು ಭಾಗಿಯಾಗಲಿವೆ.

ಏಷ್ಯಾಕಪ್‌ಗಾಗಿ ಈಗಾಗಲೇ ಭಾರತ ತಂಡವು ಯುಎಇ ತಲುಪಿದ್ದು, ಈಗಾಗಲೇ ತರಬೇತಿ ಆರಂಭಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳ ಜೊತೆಗೆ ದುಬೈ ತಲುಪಿದ್ದಾರೆ.

ಸತತ ವೈಫಲ್ಯದಿಂದ ಕಂಗೆಟ್ಟಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ವೆಸ್ಟ್ಇಂಡೀಸ್, ಜಿಂಬಾಬ್ವೆ ಸರಣಿಯಿಂದ ಹೊರಗುಳಿದು ವಿಶ್ರಾಂತಿ ಬಯಸಿದ್ದರು. ಇದೀಗ ಕೊಹ್ಲಿ ನೇರವಾಗಿ ಏಷ್ಯಾಕಪ್‌ನಲ್ಲಿ ಆಡಲಿದ್ದು, ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯವನ್ನಾಡಲಿದ್ದಾರೆ. ಈ ಪಂದ್ಯ ಕೊಹ್ಲಿಗೆ ಬಹಳ ವಿಶೇಷವಾಗಿದ್ದು, ವಿರಾಟ್ ವಿಶೇಷ ಬ್ಯಾಟ್ ಅನ್ನು ಬಳಸಲಿದ್ದಾರೆ ಎಂದು ವರದಿಯಾಗಿದೆ.

100ನೇ ಟಿ20 ಪಂದ್ಯವನ್ನಾಡಲಿರುವ ವಿರಾಟ್ ಕೊಹ್ಲಿ

100ನೇ ಟಿ20 ಪಂದ್ಯವನ್ನಾಡಲಿರುವ ವಿರಾಟ್ ಕೊಹ್ಲಿ

ಈ ಏಷ್ಯಾಕಪ್ ಸರಣಿಯು ಭಾರತ ತಂಡಕ್ಕೆ ಎಷ್ಟು ಮಹತ್ವದ್ದಾಗಿದೆಯೋ, ವಿರಾಟ್ ಕೊಹ್ಲಿಗೆ ಇದು ಅತ್ಯಂತ ಮಹತ್ವದ್ದಾಗಿದೆ. ಶತಕ ಸಿಡಿಸದೇ 1000 ದಿನಗಳನ್ನು ದಾಟಿರುವ ವಿರಾಟ್ ಕೊಹ್ಲಿ ಸುದೀರ್ಘ ವಿರಾಮದ ಬಳಿಕ ನೇರವಾಗಿ ಏಷ್ಯಾಕಪ್ ನಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಉತ್ತಮವಾಗಿ ಆಡಿದರೆ ಮಾತ್ರ ಕೊಹ್ಲಿಗೆ ಟಿ20 ವಿಶ್ವಕಪ್ ಸರಣಿಯಲ್ಲಿ ಅವಕಾಶ ಸಿಗಲಿದೆ.

ಇನ್ನು ಈ ಪಂದ್ಯ ಏಕೆ ವಿಶೇಷ ಅಂದ್ರೆ, ಇದು ಕೊಹ್ಲಿಗೆ 100ನೇ ಟಿ20 ಅಂತರಾಷ್ಟ್ರೀಯ ಪಂದ್ಯವಾಗಿದೆ. ಇದುವರೆಗೆ 99 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ 50.12ರ ಸರಾಸರಿಯಲ್ಲಿ 137.66ರ ಸ್ಟ್ರೈಕ್‌ರೇಟ್‌ನಲ್ಲಿ 3308 ರನ್ ಕಲೆಹಾಕಿದ್ದಾರೆ. 30 ಅರ್ಧಶತಕ ದಾಖಲಿಸಿರುವ ಕೊಹ್ಲಿ ಟಿ20ಯಲ್ಲಿ ಗರಿಷ್ಠ 94 ರನ್ ಕಲೆಹಾಕಿದ್ದಾರೆ. ಇದೀಗ ಕೊಹ್ಲಿ 100 ಟಿ20 ಪಂದ್ಯದಲ್ಲಿ ಉತ್ತಮವಾಗಿ ಆಡಿ ಫಾರ್ಮ್‌ಗೆ ಮರಳುವ ಯೋಜನೆ ಹೊಂದಿದ್ದಾರೆ.

ಬ್ಯಾಟ್ ಮೇಲೆ ಗೂಬೆ ಕೂರಿಸಲಾಗುತ್ತಿದ್ಯಾ?

ಬ್ಯಾಟ್ ಮೇಲೆ ಗೂಬೆ ಕೂರಿಸಲಾಗುತ್ತಿದ್ಯಾ?

ಈ ಕಳಪೆ ಫಾರ್ಮ್ ಗೆ ವಿರಾಟ್ ಕೊಹ್ಲಿ ಅವರ ಬ್ಯಾಟ್ ಪ್ರಮುಖ ಕಾರಣ ಎಂಬ ಆರೋಪವೂ ಬಲವಾಗಿ ಕೇಳಿ ಬರುತ್ತಿದೆ. ಡ್ರೈವ್ ಶಾಟ್‌ಗಳನ್ನು ಆಡುವಾಗ ಬ್ಯಾಟ್‌ನ ಸ್ವಭಾವವು ತನಗೆ ಹೊಂದಿಕೆಯಾಗದ ಕಾರಣ ಆತ ಆಗಾಗ್ಗೆ ಔಟಾಗುತ್ತಾನೆ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ, ಸದ್ಯಕ್ಕೆ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಎಂಆರ್‌ಎಫ್‌ ವಿಶೇಷ ಬ್ಯಾಟ್‌ ಬಿಡುಗಡೆಯಾಗಿದ್ದು, ಕೊಹ್ಲಿ ಮುಂದಿನ ಪಂದ್ಯದಲ್ಲಿ ಅದನ್ನು ಬಳಸಲಿದ್ದಾರೆ ಎನ್ನಲಾಗಿದೆ.

ಮತ್ತೆ ಮೈದಾನಕ್ಕಿಳಿದ ಸುರೇಶ್ ರೈನಾ: ಕಂಬ್ಯಾಕ್ ಮಾಡಲು ಅಭ್ಯಾಸ ಶುರು

ಏಷ್ಯಾಕಪ್‌ನಲ್ಲಿ ವಿಶೇಷ ಬ್ಯಾಟ್ ಬಳಸಲಿರುವ ಕೊಹ್ಲಿ

ಮುಂಬರುವ ಏಷ್ಯಾ ಕಪ್ ಸರಣಿಯಿಂದ ವಿರಾಟ್ ಕೊಹ್ಲಿ "ಸ್ಪೆಷಲ್ ಗೋಲ್ಡ್ ವಿಝಾರ್ಡ್ ಕ್ವಾಲಿಟಿ ಬ್ಯಾಟ್‌" ಅನ್ನು ಬಳಸಲಿದ್ದಾರೆ ಎಂದು ವರದಿಯಾಗಿದೆ. ಈ ಹೆಚ್ಚು ಬೆಲೆಬಾಳುವ ಬ್ಯಾಟ್‌ ಅನ್ನು ಇಂಗ್ಲಿಷ್ ವಿಲೋ ಮರದಿಂದ ತಯಾರಿಸಲಾಗುತ್ತದೆ. ಪ್ರಸಿದ್ಧ ಟೈರ್ ಕಂಪನಿಯಾದ ಎಂಆರ್‌ಎಫ್ ಈ ಬ್ಯಾಟ್‌ ಅನ್ನು ಪ್ರಾಯೋಜಿಸಲಿದೆ.

ಈ ಹಿಂದಿನ ಎಂಆರ್‌ಎಫ್ ಕಾನ್ಕೊರರ್ ಜೀನಿಯಸ್ ಬ್ಯಾಟ್‌ನಲ್ಲಿ ಕೊಹ್ಲಿ ನೂರಾರು ದಾಖಲೆಗಳನ್ನ ಮಾಡಿದ್ದು, ಕಳೆದ ಎರಡು ವರ್ಷದಿಂದ ವಿರಾಟ್ ಬ್ಯಾಟ್‌ ಸದ್ದು ಮಾಡೋದನ್ನ ನಿಲ್ಲಿಸಿದೆ. ಹೀಗಾಗಿ ವಿರಾಟ್ 100ನೇ ಟಿ20 ಪಂದ್ಯದಲ್ಲಿ ಬಹು ವಿಶೇಷ ಬ್ಯಾಟ್‌ನಿಂದ ಆಡಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

ಏಷ್ಯಾಕಪ್: ಈ ದಿನದೊಳಗೆ ರಾಹುಲ್ ಕೊವಿಡ್ ವರದಿ ನೆಗೆಟಿವ್ ಬರದಿದ್ದರೆ ಭಾರತಕ್ಕೆ ಲಕ್ಷ್ಮಣ್ ಕೋಚ್!

ಕೊಹ್ಲಿ ವಿಶೇಷ ವಿಝಾರ್ಡ್ ಬ್ಯಾಟ್‌ನ ಬೆಲೆ ಎಷ್ಟು?

ಕೊಹ್ಲಿ ವಿಶೇಷ ವಿಝಾರ್ಡ್ ಬ್ಯಾಟ್‌ನ ಬೆಲೆ ಎಷ್ಟು?

ವಿರಾಟ್ ಕೊಹ್ಲಿ ಬಳಸಲಿರುವ ಈ ಬ್ಯಾಟ್‌ನಿಂದ ಸುಲಭವಾಗಿ ಡ್ರೈವ್ ಶಾಟ್‌ಗಳನ್ನು ಆಡಬಹುದು ಎಂದು ಹೇಳಲಾಗುತ್ತಿದೆ. ಎಂಆರ್‌ಎಫ್‌ನ ಈ ವಿಶೇಷ ಬ್ಯಾಟ್ ಬೆಲೆ 27,399 ರೂಪಾಯಿ ಎನ್ನಲಾಗಿದೆ. ಈ ಬ್ಯಾಟ್ ನಲ್ಲಿ ವಿರಾಟ್ ಕೊಹ್ಲಿ ಮಿಂಚಿದ್ದೇ ಆದಲ್ಲಿ, ಎಂಆರ್ಎಫ್ ಪ್ರಾಯೋಜಿತಗೊಂಡಿರುವ ಇತರೆ ಆಟಗಾರರು ಕೂಡ ಈ ಬ್ಯಾಟ್ ಅನ್ನು ಬಳಸಬಹುದು.

ನವೆಂಬರ್ 2019ರಿಂದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಒಂದೇ ಒಂದು ಶತಕ ಸಿಡಿದಿಲ್ಲ. 70 ಅಂತರಾಷ್ಟ್ರೀಯ ಶತಕಗಳ ಒಡೆಯನಾದ ವಿರಾಟ್, ಆನಂತರ ಸಂಪೂರ್ಣ ಫಾರ್ಮ್ ವೈಫಲ್ಯಗೊಂಡು ಮೂರು ಫಾರ್ಮೆಟ್‌ನಲ್ಲಿ ರನ್‌ಗಳಿಸಲು ಪರದಾಡುತ್ತಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ ಒಂದು ಉತ್ತಮ ಇನ್ನಿಂಗ್ಸ್ ಕೂಡ ಹೊರಬಂದಿಲ್ಲ. ಹೀಗಾಗಿ ಈ ಏಷ್ಯಾಕಪ್‌ನಲ್ಲಿ ತನ್ನ ವಿಶೇಷ ಬ್ಯಾಟ್ ಮೂಲಕ ಕೊಹ್ಲಿ ಮಿಂಚಬಹುದು ಎಂದು ನಂಬಲಾಗಿದೆ.

Story first published: Thursday, August 25, 2022, 10:28 [IST]
Other articles published on Aug 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X