ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ 2022: ತಂಡವನ್ನ ಘೋಷಿಸಿದ ಅಫ್ಘಾನಿಸ್ತಾನ, ಮೊಹಮ್ಮದ್‌ ನಬಿಗೆ ನಾಯಕತ್ವ ಪಟ್ಟ

Afghanistan squad

ಮುಂಬರುವ ಏಷ್ಯಾಕಪ್ ಟೂರ್ನಿಗೆ ಒಟ್ಟು 17 ಆಟಗಾರರನ್ನೊಳಗೊಂಡ ತಂಡವನ್ನ ಅಫ್ಘಾನಿಸ್ತಾನ ಕ್ರಿಕೆಟ್ ಅಸೋಸಿಯೇಷನ್ ಘೋಷಣೆ ಮಾಡಿದ್ದು, ಆಲ್‌ರೌಂಡರ್ ಮೊಹಮ್ಮದ್ ನಬಿ ತಂಡವನ್ನ ಮುನ್ನಡೆಸಲಿದ್ದಾರೆ.

ಆಗಸ್ಟ್‌ 27ರಿಂದ ಸೆಪ್ಟೆಂಬರ್ 11ರವರೆಗೆ ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್‌ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಭಾಗಿಯಾಗಲಿದ್ದು, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ಜೊತೆಗೆ ಕ್ವಾಲಿಫೈಯರ್ ತಂಡವು ಭಾಗಿಯಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿ ಯುಎಇಗೆ ಶಿಫ್ಟ್‌ ಆಗಿದೆ.

ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ.

ಅಪ್ಘಾನಿಸ್ತಾನ ತಂಡದಲ್ಲಿನ ಪ್ರಮುಖ ಬದಲಾವಣೆ

ಅಪ್ಘಾನಿಸ್ತಾನ ತಂಡದಲ್ಲಿನ ಪ್ರಮುಖ ಬದಲಾವಣೆ

ಮೊಹಮ್ಮದ್ ನಬಿ ನೇತೃತ್ವದಲ್ಲಿ ಮುನ್ನಡೆಯಲಿರುವ ಅಫ್ಘಾನಿಸ್ತಾನ ತಂಡದಲ್ಲಿ ಸಮೀವುಲ್ಲಾ ಶಿನ್ವಾರಿ ತಂಡದಲ್ಲಿ ಸೇರ್ಪಡೆಯಾಗಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿರುವ ಶರಾಫುದ್ದೀನ್ ಅಶ್ರಪ್ ಬದಲಿ ಶಿನ್ವಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಕೈಸ್ ಅಹ್ಮದ್ ಮತ್ತು ನಿಜತ್ ಮಸೂದ್ ಕೂಡ ಸೇರಿದ್ದು, ಐರ್ಲೆಂಡ್ ಸರಣಿಗಾಗಿ ಮುಜೀಬ್ ಉರ್ ರೆಹಮಾನ್ ಬದಲಿಗೆ ಎಡಗೈ ಮಣಿಕಟ್ಟಿನ ಸ್ಪಿನ್ನರ್ ನೂರ್ ಅಹ್ಮದ್ ಅವರನ್ನು ಸಹ ಸ್ಕ್ವಾಡ್‌ನಲ್ಲಿ ಸೇರಿಸಿಕೊಳ್ಳಲಾಗಿದೆ.

ಜೋಹಾನ್ಸ್‌ಬರ್ಗ್‌ ಸೂಪರ್‌ ಕಿಂಗ್ಸ್‌ ನಾಯಕನಾಗಿ ಫಾಫ್ ಡುಪ್ಲೆಸಿಸ್ ಆಯ್ಕೆ: ಕೋಚ್ ಫ್ಲೆಮಿಂಗ್

ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಭಾಗಿಯಾಗಿರುವ ಅಫ್ಘಾನಿಸ್ತಾನ

ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಭಾಗಿಯಾಗಿರುವ ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ತಂಡವು ಪ್ರಸ್ತುತ ಐರ್ಲೆಂಡ್ ಪ್ರವಾಸದಲ್ಲಿದ್ದು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಆತಿಥೇಯ ಐರ್ಲೆಂಡ್ ತಂಡವು ಗೆಲುವು ಸಾಧಿಸಿದ್ರೆ, ನಂತರದ ಎರಡು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಕಂಬ್ಯಾಕ್ ಮಾಡಿದ್ದು ಪಂದ್ಯ ಜಯಿಸಿದೆ. ಹೀಗಾಗಿ ಆಗಸ್ಟ್‌ 17ರಂದು ನಡೆಯಲಿರುವ ಐದನೇ ಟಿ20 ಪಂದ್ಯವು ನಿರ್ಣಾಯಕವಾಗಿದ್ದು, ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.

ಆದ್ರೆ ಸದ್ಯ ತಂಡಕ್ಕೆ ಚಿಂತೆಗೀಡು ಮಾಡಿರುವ ವಿಚಾರ ಅಂದ್ರೆ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಸತತ ಮೂರು ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಶ್ರೀಲಂಕಾ ವಿಶ್ವಕಪ್‌ ವಿಜೇತ ಅರ್ಜುನ್ ರಣತುಂಗ ವಿರುದ್ಧ ಮಾನನಷ್ಟ ಮೊಕದ್ದಮೆ: 2 ಬಿಲಿಯನ್ ಹಣ ನೀಡುವಂತೆ SLC ಬೇಡಿಕೆ

ಏಷ್ಯಾ ಕಪ್ 2022 ಟೂರ್ನಿಗೆ ಅಫ್ಘಾನಿಸ್ತಾನ ಸ್ಕ್ವಾಡ್

ಏಷ್ಯಾ ಕಪ್ 2022 ಟೂರ್ನಿಗೆ ಅಫ್ಘಾನಿಸ್ತಾನ ಸ್ಕ್ವಾಡ್

ಮೊಹಮ್ಮದ್ ನಬಿ (ನಾಯಕ), ನಜೀಬುಲ್ಲಾ ಝದ್ರಾನ್ (ಉಪನಾಯಕ), ಅಫ್ಸರ್ ಝಝೈ (ವಿಕೆಟ್ ಕೀಪರ್), ಅಜ್ಮತುಲ್ಲಾ ಒಮರ್ಝೈ, ಫರೀದ್ ಅಹ್ಮದ್ ಮಲಿಕ್, ಫಝಲ್ ಹಕ್ ಫಾರೂಕಿ, ಹಶ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ಮುಜಿಬ್ ಉಲ್ ರಹಮಾನ್, ಮುಜಿಬ್ ಹಕ್, ನೂರ್ ಅಹ್ಮದ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ರಶೀದ್ ಖಾನ್ ಮತ್ತು ಸಮೀವುಲ್ಲಾ ಶಿನ್ವಾರಿ.

ನಿಜತ್ ಮಸೂದ್, ಖೈಸ್ ಅಹ್ಮದ್ ಮತ್ತು ಶರಫುದ್ದೀನ್ ಅಶ್ರಫ್ ಮೂವರು ಆಟಗಾರರು ಮೀಸಲು ಆಟಗಾರರಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

Story first published: Tuesday, August 16, 2022, 18:59 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X