20ನೇ ಓವರ್‌ನಲ್ಲಿ ಅರ್ಷ್‌ದೀಪ್ ಅದ್ಭುತ ಬೌಲಿಂಗ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ಪಡೆದ ಯುವ ಬೌಲರ್

ಟೀಂ ಇಂಡಿಯಾ ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಏಷ್ಯಾಕಪ್ ಆಸೆಯನ್ನ ಬಹುತೇಕ ಕೈ ಬಿಟ್ಟಿದೆ. ಪಾಕಿಸ್ತಾನ ವಿರುದ್ಧದ ಅಫ್ಘಾನಿಸ್ತಾನ ಪಂದ್ಯದ ಫಲಿತಾಂಶದ ಜೊತೆಗೆ ಬೇರೆ ತಂಡಗಳ ಫಲಿತಾಂಶಗಳನ್ನಷ್ಟೇ ಟೀಂ ಇಂಡಿಯಾ ಎದುರು ನೋಡುವಂತಾಗಿದೆ.
ಹೀಗಿರುವಾಗ ಭಾರತದ ಪರ ಸದ್ದು ಮಾಡಿದ ಕ್ರಿಕೆಟಿಗ, ಸಾಮಾಜಿಕ ಜಾಲತಾಣಗಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿರುವ ಆಟಗಾರ ಆಗಿ ಯುವ ಬೌಲರ್ ಅರ್ಷ್‌ದೀಪ್ ಗುರುತಿಸಿಕೊಂಡಿದ್ದಾರೆ. ಸತತ ಎರಡನೇ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ 7 ರನ್ ಡಿಫೆಂಡ್ ಮಾಡಿಕೊಳ್ಳಲು ಪ್ರಯತ್ನಿಸಿದ ಅರ್ಷ್‌ದೀಪ್‌ಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

6 ಎಸೆತ 7 ರನ್ ಡಿಫೆಂಡ್ ಮಾಡಿಕೊಳ್ಳಬೇಕಿತ್ತು!
ಶ್ರೀಲಂಕಾ ಗೆಲುವಿಗೆ ಕೊನೆಯ ಆರು ಎಸೆತಗಳಲ್ಲಿ ಏಳು ರನ್ ಬೇಕಿತ್ತು. ಈ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್‌ಗೆ ನೀಡಿ ಮತ್ತೊಮ್ಮೆ ಕೈ ಸುಟ್ಟುಕೊಂಡರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 19ನೇ ಓವರ್‌ನಲ್ಲಿ 19ರನ್ ನೀಡಿ ತಂಡಕ್ಕೆ ತೊಂದರೆಯಾಗಿದ್ದ ಭುವಿ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 14ರನ್ ನೀಡುವ ಮೂಲಕ ಅಂತಿಮ ಓವರ್‌ಗೆ ಉಳಿಸಿದ್ದು ಕೇವಲ ಏಳು ರನ್‌ಗಳು.
ಆರು ಎಸೆತಗಳಲ್ಲಿ ಏಳು ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳಲು ಮತ್ತೊಮ್ಮೆ ಅರ್ಷ್‌ದೀಪ್ ಸಿಂಗ್‌ಗೆ ರೋಹಿತ್ ಶರ್ಮಾ ಚೆಂಡು ನೀಡಿದರು. ಮೊದಲೆರಡು ಎಸೆತಗಳಲ್ಲಿ ಸಿಂಗಲ್ಸ್ ನೀಡಿದ ಅರ್ಷ್‌ದೀಪ್ ಸಿಂಗ್ ಮೂರನೇ ಎಸೆತದಲ್ಲಿ ಎರಡು ರನ್ ನೀಡಿದ್ರು. ಇನ್ನು ಉಳಿದ ಮೂರು ಎಸೆತಗಳಲ್ಲಿ ಲಂಕಾಗೆ ಮೂರು ರನ್ ಬೇಕಿತ್ತು. ನಾಲ್ಕನೇ ಎಸೆತದಲ್ಲಿ ಸಿಂಗಲ್ ನೀಡಿದ್ದ ಅರ್ಷ್‌ದೀಪ್ ಐದನೇ ಎಸೆತದಲ್ಲಿ ಬಹುತೇಕ ಒಂದೇ ರನ್ ನೀಡಿದ್ರು ಅನ್ನುವಷ್ಟರಲ್ಲಿ ಫೀಲ್ಡಿಂಗ್ ಎಡವಟ್ಟಿನಿಂದಾಗಿ ಲಂಕಾದ ಬ್ಯಾಟರ್‌ಗಳು ಎರಡು ರನ್ ಓಡಿದ್ರು. ಈ ಮೂಲಕ ಶ್ರೀಲಂಕಾ ಗೆಲುವಿನ ದಡ ತಲುಪಿತು.
ಆದ್ರೆ ಅಂತಿಮ ಓವರ್‌ನಲ್ಲಿ ಮತ್ತೊಮ್ಮೆ ಏಳು ರನ್ ಡಿಫೆಂಡ್ ಮಾಡಿಕೊಳ್ಳಲು ತನ್ನೆಲ್ಲಾ ಪ್ರಯತ್ನ ನಡೆಸಿದ ಅರ್ಷ್‌ದೀಪ್ ಸಿಂಗ್ ಪ್ರದರ್ಶನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಭಾರತ ಪಂದ್ಯ ಸೋತಿದ್ದರೂ ದೇಶಕ್ಕೆ ಮತ್ತೊಬ್ಬ ಡೆತ್ ಬೌಲರ್ ಸಿಕ್ಕಿದ್ದಾನೆ ಎಂದು ಹೊಗಳಿದಿದ್ದಾರೆ. ಯುವ ಬೌಲರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಏನು ಹೇಳಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು.
ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪಂದ್ಯ ಗೆಲ್ಲಿಸಲು ಸಾಧ್ಯವಿಲ್ಲ: ವೀರೇಂದ್ರ ಸೆಹ್ವಾಗ್
ಭಾರತ ಸೋತಿರಬಹುದು, ಅರ್ಷ್‌ದೀಪ್ ಮನ ಗೆದ್ದಿದ್ದಾನೆ!
ಹೌದು, ಟೀಂ ಇಂಡಿಯಾ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲನ್ನ ಕಂಡಿರಬಹುದು. ಆದ್ರೆ ಅರ್ಷ್‌ದೀಪ್ ಸಿಂಗ್ ಬೌಲಿಂಗ್ ಕುರಿತು ಮೆಚ್ಚಲೇಬೇಕಿದೆ. ಆತ ಅಂತಿಮ ಓವರ್‌ನಲ್ಲಿ ಮಾಡಿದ ಬೌಲಿಂಗ್ ನಿಜಕ್ಕೂ ಪ್ರಭಾವಶಾಲಿ ಪ್ರದರ್ಶನವಾಗಿತ್ತು. ಆದ್ರೆ ಭುವಿಯ ಹಿನ್ನಡೆ ಜೊತೆಗೆ ಭಾರತ ಫೈನಲ್‌ಗೆ ಎಂಟ್ರಿ ಕೊಡದೇ ಇರುವುದನ್ನ ಅಂದಾಜಿಸಿರಲಿಲ್ಲ ಎಂದು ನೆಟ್ಟಿರಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಜೊತೆಗೆ ಸತತ ಎರಡನೇ ಬಾರಿಗೆ ಅಂತಿಮ ಓವರ್‌ನಲ್ಲಿ ಏಳು ರನ್‌ಗಳನ್ನ ಅಂತಹ ಒತ್ತಡದ ಸಂದರ್ಭದಲ್ಲಿ ಡಿಫೆಂಡ್ ಮಾಡಿಕೊಳ್ಳಲು ಪ್ರಯತ್ನಿಸಿದ ಅರ್ಷ್‌ದೀಪ್ ನಿಜಕ್ಕೂ ಗ್ರೇಟ್ ಎಂದಿದ್ದಾರೆ.
ಏಷ್ಯಾ ಕಪ್ 2022: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಸೋಲಿಗೆ 5 ಪ್ರಮುಖ ಕಾರಣಗಳು
ಮುಂಬರುವ ಟಿ20 ವಿಶ್ವಕಪ್‌ಗೆ ಅರ್ಷ್‌ದೀಪ್ ದೊಡ್ಡ ಪಾಸಿಟಿವ್
ಯುವ ಬೌಲರ್ ಅರ್ಷ್‌ದೀಪ್ ಸಿಂಗ್ ಬೌಲಿಂಗ್ ನೋಡಿದ್ರೆ, ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆತ ಟೀಂ ಇಂಡಿಯಾದ ಬಹುದೊಡ್ಡ ಪಾಸಿಟಿವ್ ಆಗಿದ್ದಾನೆ. ಆತ ನಿಜಕ್ಕೂ ಹೀರೋ ಆಗಿದ್ದಾನೆ ಎಂದು ಕ್ರಿಕ್ ಜಾನ್ಸ್ ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾದಲ್ಲಿ ಅರ್ಷ್‌ದೀಪ್ ಭವಿಷ್ಯ ಉಜ್ವಲವಾಗಿದೆ
ಅರ್ಷ್‌ದೀಪ್‌ಗೆ ಬಹುತೇಕ ಎಲ್ಲಾ ಕ್ರೆಡಿಟ್ ನೀಡಬೇಕಿದೆ. ಸತತ ಎರಡನೇ ಪಂದ್ಯದಲ್ಲಿ ಅಂತಿಮ ಓವರ್‌ನಲ್ಲಿ ಏಳು ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳಲು ಅರ್ಷ್‌ದೀಪ್ ಪ್ರಯತ್ನಿಸಿದ್ದದಾರೆ. ಆತ ಅಷ್ಟು ದೊಡ್ಡ ಮಟ್ಟಿನ ಒತ್ತಡದಲ್ಲೂ ಆತನ ಬೆಸ್ಟ್ ಅನ್ನು ನೀಡಿದ್ದಾನೆ. ಟೀಂ ಇಂಡಿಯಾದಲ್ಲಿ ಆತನ ಭವಿಷ್ಯವು ತುಂಬಾ ಉಜ್ವಲವಾಗಿದೆ ಎಂದು ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಹೀಗೆ ಅನೇಕ ಅಭಿಮಾನಿಗಳು ಅರ್ಷ್‌ದೀಪ್ ಸಿಂಗ್ ಕುರಿತು ಮೆಚ್ಚುಗೆಯ ಸುರಿಮಳೆಗೈದಿದ್ದು, ಈ ಕೆಳಗೆ ಮತ್ತಷ್ಟು ಟ್ವೀಟ್‌ಗಳನ್ನ ಕಾಣಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications