ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪಂದ್ಯ ಗೆಲ್ಲಿಸಲು ಸಾಧ್ಯವಿಲ್ಲ: ವೀರೇಂದ್ರ ಸೆಹ್ವಾಗ್

ಏಷ್ಯಾ ಕಪ್ 2022 ರ ಸೂಪರ್ 4 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ವಿರುದ್ಧ ದೀಪಕ್ ಹೂಡಾರನ್ನು ಆಯ್ಕೆ ಮಾಡುವ ಟೀಂ ಇಂಡಿಯಾದ ತಂತ್ರದ ಬಗ್ಗೆ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದ ಆಯ್ಕೆಯನ್ನು ಟೀಕಿಸಿರುವ ಸೆಹ್ವಾಗ್, ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಂಗಳವಾರ (ಸೆಪ್ಟೆಂಬರ್ 6) ನಡೆದ ಸೂಪರ್ 4 ಸುತ್ತಿನಲ್ಲಿ ಸತತ ಎರಡನೇ ಸೋಲಿನ ನಂತರ ಭಾರತ ತಂಡ ಏಷ್ಯಾಕಪ್‌ ಟೂರ್ನಿಯಲ್ಲಿ ಫೈನಲ್‌ ತಲುಪುವುದು ಭಾರಿ ಕಠಿಣವಾಗಿದೆ.

ಏಷ್ಯಾ ಕಪ್: ಪಾಕ್, ಶ್ರೀಲಂಕಾ ವಿರುದ್ಧ ಸೋತ ಬಳಿಕವೂ ಭಾರತಕ್ಕಿದೆಯಾ ಫೈನಲ್‌ಗೇರುವ ಅವಕಾಶ?ಏಷ್ಯಾ ಕಪ್: ಪಾಕ್, ಶ್ರೀಲಂಕಾ ವಿರುದ್ಧ ಸೋತ ಬಳಿಕವೂ ಭಾರತಕ್ಕಿದೆಯಾ ಫೈನಲ್‌ಗೇರುವ ಅವಕಾಶ?

ಟೀಮ್ ಇಂಡಿಯಾದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆಹ್ವಾಗ್, ಟೀಂ ಇಂಡಿಯಾದ ಆಯ್ಕೆ ನೀತಿಯನ್ನು ಪ್ರಶ್ನಿಸಿದರು, ವಿಶೇಷವಾಗಿ ದೀಪಕ್ ಹೂಡಾರನ್ನು ಆಯ್ಕೆ ಮಾಡಲು ದಿನೇಶ್ ಕಾರ್ತಿಕ್‌ರನ್ನು ಕೈಬಿಡುವ ನಿರ್ಧಾರವನ್ನು ಪ್ರಶ್ನಿಸಿದರು.

ಅದರಲ್ಲೂ ಭಾರತದ ಪ್ರಮುಖ ಬೌಲರ್ ಗಳು ಗಾಯದಿಂದ ಹೊರಗುಳಿದಿದ್ದಾಗ, ಉತ್ತಮ ರನ್ ಗಳಿಸುವುದು ಮುಖ್ಯವಾಗುತ್ತದೆ. 15-20 ರನ್ ಹೆಚ್ಚಿಗೆ ರನ್ ಗಳಿಸುವುದು ಅವಶ್ಯಕವಾಗಿರುತ್ತದೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಏಷ್ಯಾಕಪ್‌ ಮುಗಿದ ನಂತರ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ ಸಾಧ್ಯತೆಏಷ್ಯಾಕಪ್‌ ಮುಗಿದ ನಂತರ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ ಸಾಧ್ಯತೆ

 ಕೊಹ್ಲಿ ಕೂಡ ಬೌಲಿಂಗ್ ಮಾಡಬಹುದು

ಕೊಹ್ಲಿ ಕೂಡ ಬೌಲಿಂಗ್ ಮಾಡಬಹುದು

ಬೌಲಿಂಗ್ ಮಾಡುತ್ತಾರೆ ಎನ್ನುವ ಕಾರಣದಿಂದ ದಿನೇಶ್ ಕಾರ್ತಿಕ್ ಬದಲಿಗೆ ದೀಪಕ್ ಹೂಡಾಗೆ ಅವಕಾಶ ನೀಡಿರಬಹುದು. ಒಂದು ಅಥವಾ ಎರಡು ಓವರ್ ಬೌಲಿಂಗ್ ಮಾಡುತ್ತಾರೆ ಎಂದು ನೀವು ಅವಕಾಶ ನೀಡುವುದಾದರೆ, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಸಹ ಬೌಲಿಂಗ್ ಮಾಡಬಹುದು.

ಆದರೆ ಟೀಂ ಇಂಡಿಯಾಗೆ ಉತ್ತಮ ಫಿನಿಶರ್ ಬೇಕು, ನಾಲ್ಕು ಎಸೆತಗಳನ್ನು ಆಡಿದರೆ ಕನಿಷ್ಠ ಎರಡು ಬೌಂಡರಿ ಗಳಿಸುವ ಆಟಗಾರ ಬೇಕು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

 ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪಂದ್ಯ ಗೆಲ್ಲಿಸಲು ಆಗಲ್ಲ

ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಪಂದ್ಯ ಗೆಲ್ಲಿಸಲು ಆಗಲ್ಲ

ದೀಪಕ್ ಹೂಡಾ ಆಯ್ಕೆ ಹಿಂದಿನ ತರ್ಕವೇ ನನಗೆ ಅರ್ಥವಾಗುತ್ತಿಲ್ಲ. ಟೀಂ ಇಂಡಿಯಾಗೆ ಫಿನಿಷರ್ ಬೇಕು ಎನ್ನುವ ಕಾರಣಕ್ಕೆ ದಿನೇಶ್ ಕಾರ್ತಿಕ್‌ರನ್ನು 37ನೇ ವಯಸ್ಸಿನಲ್ಲಿ ಆಯ್ಕೆ ಮಾಡಿದ್ದೀರಿ. ಆದರೆ ಅವರಿಗೆ ಆಡಲು ಅವಕಾಶ ನೀಡುತ್ತಿಲ್ಲ, ಇದು ಯಾವ ಅರ್ಥವನ್ನು ಕೊಡುತ್ತದೆ?, ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಆಟಗಳನ್ನು ಮುಗಿಸಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

ನಮ್ಮ ಬ್ಯಾಟರ್‌ಗಳು ನಮ್ಮ ಬೌಲರ್‌ಗಳಿಗೆ 15-20 ರನ್‌ಗಳ ಹೆಚ್ಚುವರಿ ಕುಶನ್ ನೀಡಬೇಕಾಗಿತ್ತು. ನಾವು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 190 ರನ್ ಗಳಿಸುವ ಸ್ಥಿತಿಯಲ್ಲಿದ್ದೆವು, ಆದರೆ ಕೇವಲ 170 ಗಳಿಸಿದೆವು. ಹೂಡಾ ಬದಲಿಗೆ ದಿನೇಶ್ ಕಾರ್ತಿಕ್ ಇದ್ದಿದ್ದರೆ ಭಾರತ ಇನ್ನು ಹೆಚ್ಚಿನ ರನ್ ಗಳಿಸುತ್ತಿತ್ತು ಎಂದು ಹೇಳಿದ್ದಾರೆ.

 ಎರಡೂ ಪಂದ್ಯಗಳಲ್ಲಿ ದೀಪಕ್ ಹೂಡಾ ವಿಫಲ

ಎರಡೂ ಪಂದ್ಯಗಳಲ್ಲಿ ದೀಪಕ್ ಹೂಡಾ ವಿಫಲ

7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದೀಪಕ್ ಹೂಡಾ ಪಾಕಿಸ್ತಾನದ ವಿರದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 3 ರನ್ ಗಳಿಸಿ ಔಟಾದರು.

ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಏಷ್ಯಾಕಪ್‌ನಿಂದ ಹೊರಗುಳಿದ ನಂತರ ಸ್ಥಾನ ಪಡೆದ ದೀಪಕ್ ಹೂಡಾಗೆ ಎರಡೂ ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಅವಕಾಶವನ್ನೇ ನೀಡಿಲ್ಲ. ಬೌಲಿಂಗ್ ಮಾಡಲು ಅವಕಾಶ ಕೊಡದಿದ್ದ ಮೇಲೆ, ಹೂಡಾರನ್ನು ಆಯ್ಕೆ ಮಾಡಿದ್ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

 ವಿಶ್ವಕಪ್ ಆಡಬೇಕು ಅಂತಿದ್ರೆ ಉಳಿದ ಪಂದ್ಯಗಳಿಗೆ ಆಯ್ಕೆ ಮಾಡಿ

ವಿಶ್ವಕಪ್ ಆಡಬೇಕು ಅಂತಿದ್ರೆ ಉಳಿದ ಪಂದ್ಯಗಳಿಗೆ ಆಯ್ಕೆ ಮಾಡಿ

ದಿನೇಶ್ ಕಾರ್ತಿಕ್ ವಿಶ್ವಕಪ್ ಆಡಬೇಕೆಂದು ನೀವು ಬಯಸಿದರೆ, ಉಳಿದ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಿ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಟಿ20 ವಿಶ್ವಕಪ್‌ಗಾಗಿ ತಂಡದ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸೆಹ್ವಾಗ್ ಒತ್ತಾಯಿಸಿದ್ದಾರೆ.

ಏಷ್ಯಾಕಪ್ ಮುಂದಿನ ಪಂದ್ಯದಲ್ಲಿ ದೀಪಕ್ ಹೂಡಾಗೆ ವಿರಾಮ ನೀಡಿ ಅಕ್ಸರ್ ಪಟೇಲ್ ಅಥವಾ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಿ ಎಂದು ಹೇಳಿದ್ದಾರೆ. ದಿನೇಶ್ ಕಾರ್ತಿಕ್ ವಿಶ್ವಕಪ್‌ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದರಿಂದ, ಮೂರು ವರ್ಷಗಳ ನಂತರ ಟೀಂ ಇಂಡಿಯಾಗೆ ವಾಪಸ್ ಆಗಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 7, 2022, 14:08 [IST]
Other articles published on Sep 7, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X