ಭಾರತದ ವಿರುದ್ಧ 36 ವರ್ಷಗಳ ಹಿಂದೆ ಜಾವೇದ್ ಮಿಯಾಂದಾದ್ ಬಾರಿಸಿದ ಸಿಕ್ಸರ್ ನೆನಪಾಯಿತು ಎಂದ ಬಾಬರ್ ಅಜಂ
ಏಷ್ಯಾಕಪ್ ಟೂರ್ನಿಯ ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ತಂಡ ರೋಚಕ ಜಯ ಸಾಧಿಸಿದೆ. 11ನೇ ಆಟಗಾರ, ಯುವ ವೇಗದ ಬೌಲರ್ ನಸೀಮ್ ಶಾ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು.
ನಸೀಮ್ ಶಾ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕೂಡ ನಸೀಮ್ ಶಾ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಸೀಮ್ ಶಾ ಬಾರಿಸಿದ ಸಿಕ್ಸರ್ 1986ರಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಜಾವೇದ್ ಮಿಯಾಂದಾದ್ ಕೊನೆಯ ಎಸೆತದಲ್ಲಿ ಬಾರಿಸಿದ ಸಿಕ್ಸರ್ ಅನ್ನು ನೆನಪಿಸಿತು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್ ನಲ್ಲಿ ಪಾಕಿಸ್ತಾನ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಯುವ ಆಟಗಾರ ನಸೀಮ್ ಶಾ ಓವರ್ ಮೊದಲ ಎರಡು ಎಸೆತಗಳಲ್ಲೇ ಸತತವಾಸಿ ಭರ್ಜರಿ ಸಿಕ್ಸರ್ ಬಾರಿಸಿದ ನಸೀಮ್ ಶಾ ಪಾಕಿಸ್ತಾನಕ್ಕೆ ರೋಚಕ ಜಯ ತಂದುಕೊಟ್ಟರು. ಪಂದ್ಯವನ್ನು ಗೆಲ್ಲುವ ಅವಕಾಶವನ್ನು ಅಂತಿಮ ಓವರ್ ನಲ್ಲಿ ಅಫ್ಘಾನಿಸ್ತಾನ ಕೈಚೆಲ್ಲಿತು.

1986ರ ಭಾರತ-ಪಾಕಿಸ್ತಾನ ರೋಚಕ ಪಂದ್ಯ
1986ರಲ್ಲಿ ಶಾರ್ಜಾದಲ್ಲಿ ನಡೆದ ಆಸ್ಟ್ರಲ್-ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದ ಜಾವೇದ್ ಮಿಯಾಂದಾದ್ ಪಾಕಿಸ್ತಾನವನ್ನು ಗೆಲ್ಲಿಸಿದ್ದರು.
246 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಅಂತಿಮ ಬಾಲ್‌ನಲ್ಲಿ ಗೆಲುವಿಗಾಗಿ 4 ರನ್‌ಗಳ ಅಗತ್ಯವಿತ್ತು. ಚೇತನ್ ಶರ್ಮಾ ಬೌಲಿಂಗ್‌ನಲ್ಲಿ ಕೊನೆಯ ಎಸೆತವನ್ನು ಸಿಕ್ಸರ್ ಬಾರಿಸಿದ್ದ ಜಾವೇದ್ ಮಿಯಾಂದಾದ್ ಪಾಕಿಸ್ತಾನದ ಪಾಲಿಗೆ ಹೀರೋ ಆಗಿ ಮಿಂಚಿದ್ದರು.

1986ರ ಪಂದ್ಯ ನೆನೆದ ಬಾಬರ್ ಅಜಂ
ನಸೀಮ್ ಶಾ ಅಂತಿಮ ಓವರ್ ನಲ್ಲಿ ಎರಡು ಸಿಕ್ಸರ್ ಸಿಡಿಸಿದ್ದು, 1986 ರಲ್ಲಿ ಭಾರತದ ವಿರುದ್ಧ ಜಾವೇದ್ ಮಿಯಾಂದಾದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆದಿದ್ದನ್ನು ನೆನಪಿಸಿತು ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೇಳಿದ್ದಾರೆ.
ಒಂದು ವಿಕೆಟ್ ಗೆಲುವಿನ ನಂತರ ಮಾತನಾಡಿದ ಬಾಬರ್, ನಸೀಂ ಶಾ ಸಾಮರ್ಥ್ಯದಲ್ಲಿ ನನಗೆ ನಂಬಿಕೆಯಿದೆ ಮತ್ತು 36 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಮಿಯಾಂದಾದ್ ಸಾಧನೆಯನ್ನು ನೆನಪಿಸಿದೆ ಎಂದು ಹೇಳಿದರು.
Asia Cup 2022 PAK vs AFG: ರೋಚಕ ಪಂದ್ಯ ಗೆದ್ದು ಫೈನಲ್‌ಗೇರಿದ ಪಾಕ್; ಅಧಿಕೃತವಾಗಿ ಭಾರತ ಔಟ್!

ಫುಲ್ ಟೆನ್ಷನ್‌ನಲ್ಲಿದ್ದೆವು ಎಂದ ಬಾಬರ್ ಅಜಂ
ಪಂದ್ಯವ ವೇಳೆಯಲ್ಲಿ ತಂಡದ ಮನಸ್ಥಿತಿಯ ಬಗ್ಗೆ ಮಾತನಾಡಿದ ಬಾಬರ್ ಅಜಂ, "ನಿಜ ಹೇಳಬೇಕೆಂದರೆ, ಡ್ರೆಸ್ಸಿಂಗ್ ರೂಮ್ ತುಂಬಾ ಉದ್ವಿಗ್ನವಾಗಿತ್ತು. ಆಟಗಾರರು ಡ್ರೆಸ್ಸಿಂಗ್ ರೂಮ್‌ನ ಒಳಗೆ ಮತ್ತು ಹೊರಗೆ ಓಡಾಡುತ್ತಿದ್ದರು. ನಸೀಮ್ ಷಾ ಪಂದ್ಯವನ್ನು ಮುಗಿಸಿದ ರೀತಿ ಅದ್ಭುತವಾಗಿದೆ." ಎಂದು ಹೇಳಿದರು.
ಶಾರ್ಜಾ ಯಾವಾಗಲೂ ಕಡಿಮೆ ರನ್‌ಗಳ ಪಂದ್ಯಕ್ಕೆ ಸಾಕ್ಷಿಯಾಗಿದೆ. ಮುಜೀಬ್ ಮತ್ತು ರಶೀದ್ ಖಾನ್ ಅತ್ಯುತ್ತಮ ಬೌಲರ್‌ಗಳು. ನಾವು ಪಂದ್ಯವನ್ನು ಕೊನೆಯವರೆಗೂ ಆಡಲು ಬಯಸಿದ್ದೆವು, ಆದರೆ ಅಫ್ಘಾನಿಸ್ತಾನ ಉತ್ತಮವಾಗಿ ಬೌಲಿಂಗ್ ಮಾಡಿತು, ಎಂದು ಹೇಳಿದ್ದಾರೆ.

ಶ್ರೀಲಂಕಾ, ಪಾಕಿಸ್ತಾನ ಫೈನಲ್‌ಗೆ
ಪಾಖಿಸ್ತಾನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿವೆ. ಏಷ್ಯಾಕಪ್ 2022ರ ಫೈನಲ್‌ನಲ್ಲಿ ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿಯಾಗಲಿವೆ.
ಸೆಪ್ಟೆಂಬರ್ 11ರಂದು ಭಾನುವಾರ ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. 2014ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ-ಶ್ರೀಲಂಕಾ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು, ಆ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸುವ ಮೂಲಕ ಕಪ್ ಗೆದ್ದು ಸಂಭ್ರಮಿಸಿತ್ತು.
ಫೈನಲ್‌ಗೂ ಮುನ್ನ ಶುಕ್ರವಾರ, ಸೆಪ್ಟೆಂಬರ್ 9 ರಂದು ಅಂತಿಮ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ-ಪಾಕಿಸ್ತಾನ ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications