Asia Cup 2022 PAK vs AFG: ರೋಚಕ ಪಂದ್ಯ ಗೆದ್ದು ಫೈನಲ್‌ಗೇರಿದ ಪಾಕ್; ಅಧಿಕೃತವಾಗಿ ಭಾರತ ಔಟ್!

ಇಂದು (ಸೆಪ್ಟೆಂಬರ್ 7) ಶಾರ್ಜಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ 1 ವಿಕೆಟ್‌ಗಳ ರೋಚಕ ಗೆಲುವನ್ನು ಸಾಧಿಸಿದೆ.
ಇದರಿಂದಾಗಿ ಅಫ್ಘಾನಿಸ್ತಾನ ಮತ್ತು ಭಾರತ ತಂಡಗಳ ಫೈನಲ್ ಹಾದಿ ಅಧಿಕೃತವಾಗಿ ಅಂತ್ಯವಾಗಿದ್ದು, ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಫೈನಲ್ ಹಂತಕ್ಕೆ ಏರಿವೆ.
ಪಂದ್ಯದಲ್ಲಿ ಟಾಸ್ ಸೋತು ಫೀಲ್ಡಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಅಫ್ಘಾನಿಸ್ತಾನವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನದ ಆರಂಭಿಕರಾದ ಇಬ್ರಾಹಿಂ ಝದ್ರಾನ್ (35), ಹಜರತುಲ್ಲಾ ಝಜೈ (21) ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 129 ರನ್ ಕಲೆ ಹಾಕಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 130 ರನ್‌ಗಳ ಗುರಿಯನ್ನು ನೀಡಿತ್ತು.

ಪಾಕಿಸ್ತಾನ ಬ್ಯಾಟಿಂಗ್ ಇನ್ನಿಂಗ್ಸ್
ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ವಿಕೆಟ್ ಅನ್ನು ಬೇಗನೇ ಕಳೆದುಕೊಂಡಿತು. ಅದೇ ರೀತಿ ಫಖರ್ ಜಮಾನ್ ಕೂಡಾ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ನವಾಜ್ ಖುಶ್ದೀಲ್ ಹ್ಯಾರಿಸ್ ರೌಫ್ ಅಫ್ಘಾನಿಸ್ತಾನ ಬೌಲಿಂಗ್ ದಾಳಿಗೆ ನಿರುತ್ತರರಾದರು.
ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ (20), ಇಫ್ತಿಕರ್ ಅಹ್ಮದ್ (30) ಶಾದಾಬ್ ಖಾನ್ (36) ಮತ್ತು ಕೊನೆಯಲ್ಲಿ ಎರಡು ಸತತ ಸಿಕ್ಸರ್ ಸಿಡಿಸಿದ ನಸೀಮ್ ಶಾ (14) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 19.2 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 1131 ರನ್ ಕಲೆಹಾಕಿ, 1 ವಿಕೆಟ್‌ಗಳ ರೋಚಕ ಗೆಲುವನ್ನು ಕಂಡಿತು.

ಅಫ್ಘಾನಿಸ್ತಾನ ಬೌಲಿಂಗ್ ಇನ್ನಿಂಗ್ಸ್
ಇನ್ನು ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ಪರ ಫಜಲ್ಹಕ್ ಫಾರೂಕಿ 4 ಓವರ್‌ಗಳಲ್ಲಿ 31 ರನ್ ನೀಡಿ ಪ್ರಮುಖ 3 ವಿಕೆಟ್ ಗಳಿಸಿದರು. ಅದೇ ರೀತಿ ಫರೀದ್ ಅಹ್ಮದ್ ಮಲಿಕ್ 4 ಓವರ್‌ಗಳಲ್ಲಿ 31 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು ಮತ್ತು ರಶೀದ್ ಖಾನ್ 4 ಓವರ್‌ಗಳಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದರು.

ಅಫ್ಘಾನಿಸ್ತಾನ ಬ್ಯಾಟಿಂಗ್ ಇನ್ನಿಂಗ್ಸ್
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭಿಕರಾಗಿ ಹಜರತುಲ್ಲಾ ಝಜೈ ಮತ್ತು ರಹಮಾನುಲ್ಲಾ ಗುರ್ಬಾಜ್ ಕಣಕ್ಕಿಳಿದರು. ಆದರೆ ತಂಡದ ಮೊತ್ತ 36 ರನ್‌ಗಳಾಗಿದ್ದಾಗ ರಹಮಾನುಲ್ಲಾ ಗುರ್ಬಾಜ್ 17 ರನ್ ಗಳಿಸಿ ಔಟಾದರು. ಇನ್ನು ಹಜರತುಲ್ಲಾ ಝಜೈ 21 ರನ್ ಗಳಿಸಿದರು. ಇನ್ನು ಇಬ್ರಾಹಿಂ ಝದ್ರಾನ್ 35 ರನ್ ಗಳಿಸಿ ಅಫ್ಘಾನಿಸ್ತಾನ ಪರ ಗರಿಷ್ಠ ಸ್ಕೋರರ್ ಎನಿಸಿದರು.
ಇನ್ನು ನಾಯಕ ಮೊಹಮ್ಮದ್ ನಬಿ ಸೊನ್ನೆ ಔಟಾದರೆ, ಆಲ್‌ರೌಂಡರ್ ರಶೀದ್ ಖಾನ್ 18 ರನ್ ಗಳಿಸಿ ತಂಡದ ಮೊತ್ತ 120 ರನ್‌ಗಳ ಗಡಿ ದಾಟಿಸಿದರು.
ಇನ್ನು ಬೌಲಿಂಗ್‌ನಲ್ಲಿ ಪಾಕಿಸ್ತಾನ ತಂಡದ ಪರ ಹ್ಯಾರಿಸ್ ರೌಫ್ 4 ಓವರ್‌ಗಳಲ್ಲಿ 26 ರನ್ ನೀಡಿ ಪ್ರಮುಖ 2 ವಿಕೆಟ್ ಗಳಿಸಿದರು. ಇನ್ನುಳಿದಂತೆ ಶಾದಾಬ್ ಖಾನ್, ಮೊಹಮ್ಮದ್ ನವಾಜ್, ನಸೀಮ್ ಶಾ ಮತ್ತು ಮೊಹಮ್ಮದ್ ಹಸ್ನೇನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications