ಭಾರತ ವಿರುದ್ಧ ಪಂದ್ಯಕ್ಕೂ ಮುನ್ನ ಪಾಕ್‌ಗೆ ಆಘಾತ: ಬೌಲರ್ ಶಹನವಾಜ್ ದಹಾನಿ ತಂಡದಿಂದ ಔಟ್

ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸೆಪ್ಟೆಂಬರ್ 4 ರಂದು ನಡೆಯಲಿರುವ ಈ ಸೂಪರ್ 4 ಪಂದ್ಯಕ್ಕಾಗಿ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೂ ಮುನ್ನ ಕಳೆದ ಭಾನುವಾರ ಅಂದರೆ ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಅಲ್ಲಿ ಭಾರತ ಅದ್ಭುತವಾಗಿ ಗೆಲ್ಲುವ ಮೂಲಕ ಪಂದ್ಯಾವಳಿಯನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಯಿತು.
ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗುತ್ತಿರುವ ಭಾರತ-ಪಾಕಿಸ್ತಾನ ಮತ್ತೊಂದು ರೋಚಕ ಕಾದಾಟಕ್ಕೆ ಸಾಕ್ಷಿಯಾಗಬಹುದು. ಆದ್ರೆ ಟೀಂ ಇಂಡಿಯಾ ವಿರುದ್ಧ ಪಂದ್ಯಕ್ಕೂ ಮುನ್ನ ಪಾಕ್‌ನ ಬೌಲಿಂಗ್ ಪಡೆಯ ಒಂದು ಅಸ್ತ್ರ ಹೊರಗುಳಿಯುವಂತಾಗಿದೆ. ಹೌದು ಪ್ರಮುಖ ಬೌಲರ್ ಶಹನವಾಜ್ ದಹಾನಿ ಇಂಜ್ಯುರಿಯಾಗಿದ್ದಾರೆ.
ಪಂದ್ಯಕ್ಕೂ ಮುನ್ನ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ
ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್ ತಂಡ ಭಾರೀ ಮುಖಭಂಗ ಅನುಭವಿಸಿದೆ. ವೇಗದ ಬೌಲರ್‌ಗಳಾದ ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಮ್ ಏಷ್ಯಾಕಪ್‌ನಿಂದ ಹೊರಗುಳಿದ ನಂತರ ಪಾಕಿಸ್ತಾನದ ಮತ್ತೊಬ್ಬ ವೇಗದ ಬೌಲರ್ ಗಾಯಗೊಂಡಿದ್ದಾರೆ. ಶಂಕಿತ ಸ್ನಾಯು ಸೆಳೆತ ಸಮಸ್ಯೆಯಿಂದಾಗಿ ಪಾಕಿಸ್ತಾನದ ವೇಗದ ಬೌಲರ್ ಶಾನವಾಜ್ ಭಾರತ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ.

ಹಸನ್ ಅಲಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುವ ಸಾಧ್ಯತೆ
ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಶಹನವಾಜ್ ದಹಾನಿ ಗಾಯಗೊಂಡಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡದ ವೈದ್ಯಕೀಯ ತಂಡವು ಮುಂದಿನ 48-72 ಗಂಟೆಗಳ ಕಾಲ ಬೌಲರ್ ಆರೋಗ್ಯದ ಮೇಲೆ ಕಣ್ಣಿರಿಸಲಿದ್ದು, ನಂತರ ಅವರು ಏಷ್ಯಾ ಕಪ್‌ನ ಮುಂಬರುವ ಪಂದ್ಯಗಳಲ್ಲಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಶಹನವಾಜ್ ದಹಾನಿ ಅವರನ್ನು ಹೊರಗಿಟ್ಟ ನಂತರ, ಈಗ ಹಸನ್ ಅಲಿಯನ್ನು ಭಾರತದ ವಿರುದ್ಧ ಆಡುವ ಹನ್ನೊಂದರಲ್ಲಿ ಸೇರಿಸಬಹುದು.
ಲೆಜೆಂಡ್ಸ್ ಲೀಗ್‌ನಲ್ಲಿ ಆಡಲು ಹಿಂದೆ ಸರಿದ ದಾದಾ: ಗಂಗೂಲಿ ಆಡದಿರಲು ಕಾರಣ ಬಹಿರಂಗ

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮಿಂಚಿದ್ದ ದಹಾನಿ
ಪಾಕಿಸ್ತಾನ್ ಸೂಪರ್ ಲೀಗ್ 2021 ರಲ್ಲಿ ತನ್ನ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದ ಶಹನವಾಜ್ ದಹಾನಿ, ಆಗಸ್ಟ್ 28 ರಂದು ಭಾರತದ ವಿರುದ್ಧ ಉತ್ತಮ ಸ್ಪೆಲ್ ಮಾಡಿದ್ದರು. ದಹಾನಿ 2 ಏಕದಿನ ಪಂದ್ಯಗಳು ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 4 ವಿಕೆಟ್‌ಗಳನ್ನು ಹೊಂದಿದ್ದಾರೆ. ಆದರೆ ಪಾಕಿಸ್ತಾನ ಕ್ರಿಕೆಟ್ ತಂಡವು ಭವಿಷ್ಯದಲ್ಲಿ ಅವರು ಉತ್ತಮ ಪ್ರದರ್ಶನವನ್ನು ನೋಡಲು ಬಯಸುತ್ತಿದೆ. ಭಾರತದ ವಿರುದ್ಧ ಚೆಂಡಿನ ಹೊರತಾಗಿ, ದಹಾನಿ ಬ್ಯಾಟ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಅವರು 6 ಎಸೆತಗಳಲ್ಲಿ 2 ಸಿಕ್ಸರ್‌ಗಳ ಸಹಾಯದಿಂದ 16 ರನ್ ಗಳಿಸಿದರು.
ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾವನ್ನೇ ಸೋಲಿಸಿದ ಜಿಂಬಾಬ್ವೆ: ಆಫ್ರಿಕನ್ ರಾಷ್ಟ್ರಕ್ಕೆ ಐತಿಹಾಸಿಕ ಗೆಲುವು

ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ ಸ್ಕ್ವಾಡ್
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್. ಸ್ಟ್ಯಾಂಡ್‌ಬೈ: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್, ಹಸನ್ ಅಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications