Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾವನ್ನೇ ಸೋಲಿಸಿದ ಜಿಂಬಾಬ್ವೆ: ಆಫ್ರಿಕನ್ ರಾಷ್ಟ್ರಕ್ಕೆ ಐತಿಹಾಸಿಕ ಗೆಲುವು

Zimbabwe win

ಟೌನ್ಸ್‌ವಿಲ್ಲೆಯ ಟೋನಿ ಐರ್ಲೆಂಡ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಫ್ರಿಕನ್ ರಾಷ್ಟ್ರವು ಐತಿಹಾಸಿಕ ಗೆಲುವನ್ನ ಸಂಪಾದಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ಇದುವರೆಗೂ ಗೆಲುವನ್ನ ಕಾಣದ ಜಿಂಬಾಬ್ವೆ ಮೊಟ್ಟ ಮೊದಲ ಬಾರಿಗೆ ಕಾಂಗರೂ ನಾಡಲ್ಲಿ ವಿಜಯ ಪತಾಕೆ ಹಾರಿಸಿದೆ.

ಕಳೆದ ವರ್ಷವಷ್ಟೇ ಬಾಂಗ್ಲಾದೇಶ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಮೊಟ್ಟ ಮೊದಲ ಗೆಲುವು ದಾಖಲಿಸಿದ ಬಳಿಕ ಆಫ್ರಿಕಾ ರಾಷ್ಟ್ರ ಜಿಂಬಾಬ್ವೆ ಕೂಡ ಆಸ್ಟ್ರೇಲಿಯಾಲ್ಲೇ ಆತಿಥೇಯರನ್ನ ಸೋಲಿಸ ಗೆಲುವಿನ ಕೇಕೆ ಹಾಕಿದ್ದು, ಬಲಿಷ್ಠ ಕ್ರಿಕೆಟ್‌ ರಾಷ್ಟ್ರಕ್ಕೆ ಭಾರೀ ಮುಖಭಂಗವಾಗಿದೆ.

ಆಸಿಸ್ ಊಹೆಗೂ ನಿಲುಕದ ಸೋಲು

ಆಸಿಸ್ ಊಹೆಗೂ ನಿಲುಕದ ಸೋಲು

ಮೊದಲೆರಡು ಪಂದ್ಯಗಳನ್ನ ಗೆದ್ದು ಏಕದಿನ ಸರಣಿ ವಶಪಡಿಸಿಕೊಂಡಿದ್ದ ಆಸ್ಟ್ರೇಲಿಯಾ ಊಹೆಗೂ ನಿಲುಕದ ಸೋಲನ್ನ ಕಾಣುವ ಮೂಲಕ ಟೀಕೆಗೆ ಗುರಿಯಾಗಿದೆ. ಮೂರನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ದಾಳಿಗೆ ತತ್ತರಿಸಿದ ಆಸಿಸ್ ಕೇವಲ 31 ಓವರ್‌ಗಳಲ್ಲಿ 140ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕುಸಿತಕ್ಕೆ ಒಳಗಾಗಿತು.

ಜಿಂಬಾಬ್ವೆ ಪರ ಬೆಂಕಿಯಂತಹ ಬೌಲಿಂಗ್ ದಾಳಿ ನಡೆಸಿದ ಬಲಗೈ ಲೆಗ್ ಸ್ಪಿನ್ನರ್ ರಯಾನ್ ಬರ್ಲ್, ಆಸ್ಟ್ರೇಲಿಯಾದ ಬ್ಯಾಟಿಂಗ್ ಆರ್ಡರ್‌ ಅನ್ನು ಧ್ವಂಸಗೊಳಿಸಿದರು. ಓಪನರ್ ಡೇವಿಡ್‌ ವಾರ್ನರ್ 94 ರನ್‌ಗಳಿಸಿ ಶತಕ ವಂಚಿತರಾಗಿದ್ದು ಬಿಟ್ಟರೆ, ಬೇರೆ ಯಾವೊಬ್ಬ ಬ್ಯಾಟರ್ ಕೂಡ ಆಸಿಸ್ ತಂಡಕ್ಕೆ ನೆರವಾಗಲಿಲ್ಲ.

ವಾರ್ನರ್ 94, ಮ್ಯಾಕ್ಸ್‌ವೆಲ್ 19ರನ್‌ಗಳಿಸಿದ್ದು ಬಿಟ್ಟರೆ, ಬೇರೆ ಯಾವುದೇ ಆಟಗಾರನು ಎರಡಂಕಿ ಕೂಡ ಮುಟ್ಟಲಿಲ್ಲ. ಪರಿಣಾಮ 141ರನ್‌ಗಳಿಗೆ ಆಸಿಸ್ ಆಲೌಟ್ ಆಗಿದೆ. ಜಿಂಬಾಬ್ವೆ ಪರ ರಯಾನ್ ಬರ್ಲ್ 3 ಓವರ್‌ಗಳಲ್ಲಿ ಕೇವಲ 10 ರನ್‌ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಕಾಂಗರೂಗಳಿಗೆ ಶಾಕ್ ನೀಡಿದ್ರು. ಇನ್ನುಳಿದಂತೆ ಬ್ರಾಡ್ ಇವಾಸ್ 2, ಉಳಿದ ಬೌಲರ್ಸ್ ತಲಾ 1 ವಿಕೆಟ್ ಪಡೆದರು.

Asia cup 2022: ಶ್ರೀಲಂಕಾ vs ಅಫ್ಘಾನಿಸ್ತಾನ ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್‌, ಸಂಭಾವ್ಯ ಪ್ಲೇಯಿಂಗ್ 11

ತಂಡವನ್ನ ಗೆಲುವಿನ ದಡ ತಲುಪಿಸಿದ ರೆಗಿಸ್ ಚಕಬ್ವಾ

ತಂಡವನ್ನ ಗೆಲುವಿನ ದಡ ತಲುಪಿಸಿದ ರೆಗಿಸ್ ಚಕಬ್ವಾ

ಆಸ್ಟ್ರೇಲಿಯಾದ 142ರನ್‌ಗಳ ಸುಲಭ ಗುರಿಯನ್ನ ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಿತಾದ್ರೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೈ ಕೊಟ್ಟ ಪರಿಣಾಮ ಸ್ವಲ್ಪ ನಿಧಾನಗತಿಯಲ್ಲಿ ಗೆಲುವಿನ ದಡ ತಲುಪಿತು. ತಕುದ್ಜ್ವಾನಾಶೆ ಕೈತಾನೋ 19, ತಡಿವಾನಾಶೆ ಮರುಮಣಿ 35 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ನಂತರ ಬಂದ ಬ್ಯಾಟರ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿಕೊಂಡರು. ಆಸ್ಟ್ರೇಲಿಯಾ ಹೇಗಾದ್ರೂ ಮಾಡಿ ಈ ಪಂದ್ಯ ಗೆಲ್ಲಬೇಕೆಂದು ಪ್ರಯತ್ನಕ್ಕೆ ಜಿಂಬಾಬ್ವೆ ನಾಯಕ ಚಕಬ್ವಾ ಅಡ್ಡಗಾಲಿಟ್ಟರು.

ಒಂದೆಡೆ ವಿಕೆಟ್ ಉರುಳಿದ್ರೂ ಅಜೇಯರಾಗಿ ತಂಡವನ್ನ ಗೆಲುವಿನ ದಡ ತಲುಪಿಸಿದ ರೆಗಿಸ್ ಚಕಬ್ವಾ 72 ಎಸೆತಗಳಲ್ಲಿ 37 ರನ್ ಕಲೆಹಾಕಿ ತಂಡವನ್ನ ಗೆಲ್ಲಿಸಿದ್ರು. ಜಿಂಬಾಬ್ವೆ 39 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 142ರನ್ ಕಲೆಹಾಕಿ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಮೊದಲ ಗೆಲುವು ದಾಖಲಿಸಿತು.

ಅದಾಗಲೇ ಸರಣಿ ಗೆದ್ದಿದ್ದ ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನ ತುಂಬಾ ಹಗುರವಾಗಿ ಪರಿಗಣಿಸಿದ್ರ ಪರಿಣಾಮವೇ ಈ ಫಲಿತಾಂಶ ಹೊರಬಂದಿದೆ. ಜಿಂಬಾಬ್ವೆ ಸರಣಿ ಸೋತರೂ ಕೊನೆಯ ಪಂದ್ಯದಲ್ಲಿ ಕಾಂಗರೂಗಳನ್ನ ಮಣಿಸಿ ಗೆಲುವಿನ ನಗೆ ಬೀರಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ಗೆ ಭಾರೀ ಹಿನ್ನಡೆ: ತಂಡ ಘೋಷಿಸಿದ ಕೆಲವೇ ಘಂಟೆಯಲ್ಲಿ ಜಾನಿ ಬೈಸ್ಟ್ರೋವ್‌ ಔಟ್‌

Asia Cup ನಲ್ಲಿ ಪಾಕಿಸ್ತಾನದ ಮುಂದೆ ಹೀನಾಯವಾಗಿ ಸೋತ Hong Kong | *Cricket | OneIndia Kannada
ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ಆಸ್ಟ್ರೇಲಿಯಾ ತಂಡ : ಆ್ಯರೊನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯ್ನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ಬೆಂಚ್: ಸೀನ್ ಅಬಾಟ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್

ಜಿಂಬಾಬ್ವೆ ತಂಡ: ತಕುದ್ಜ್ವಾನಾಶೆ ಕೈಟಾನೊ, ತಡಿವಾನಾಶೆ ಮರುಮಣಿ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಬರ್ಲ್, ಟೋನಿ ಮುನ್ಯೊಂಗಾ, ಬ್ರಾಡ್ ಇವಾನ್ಸ್, ರಿಚರ್ಡ್ ನಾಗರವಾ, ವಿಕ್ಟರ್ ನ್ಯೌಚಿ

ಬೆಂಚ್: ಮುಜರಬಾನಿ, ಕ್ಲೈವ್ ಮದಂಡೆ, ಇನೊಸೆಂಟ್ ಕೈಯಾ, ಲ್ಯೂಕ್ ಜೊಂಗ್ವೆ

Story first published: Saturday, September 3, 2022, 14:19 [IST]
Other articles published on Sep 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+