ಆಸಿಫ್ ಅಲಿ ವರ್ತನೆ ಮೂರ್ಖತನ, ಮರ್ಯಾದೆ ಕೊಟ್ಟು ಮರ್ಯಾದೆ ತೆಗೆದುಕೊಳ್ಳಿ ಎಂದ ಅಫ್ಘನ್ ಕ್ರಿಕೆಟರ್
ಸೆಪ್ಟೆಂಬರ್ 7ರಂದು ಶಾರ್ಜಾದಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ಆಸಿಫ್ ಅಲಿ ವರ್ತನೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಆಸಿಫ್ ಅಲಿ ವರ್ತನೆಗೆ ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಗುಲ್ಬದಿನ್ ನೈಬ್ ಬೇಸರ ವ್ಯಕ್ತಪಡಿಸಿದ್ದು, ಏಷ್ಯಾಕಪ್‌ನ ಉಳಿದ ಪಂದ್ಯಗಳಿಗೆ ಅವರನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 7ರಂದು ನಡೆದ ಸೂಪರ್ 4 ಪಂದ್ಯದಲ್ಲಿ 19ನೇ ಓವರ್‌ನಲ್ಲಿ ಪಾಕಿಸ್ತಾನದ ಬ್ಯಾಟರ್ ಆಸಿಫ್ ಅಲಿ ಮತ್ತು ಅಫ್ಘಾನಿಸ್ತಾನದ ಫರೀದ್ ಅಹ್ಮದ್ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸಹನೆ ಕಳೆದುಕೊಂಡ ಆಸಿಫ್ ಅಲಿ ಫರೀದ್ ಅಹ್ಮದ್ ಮೇಲೆ ಬ್ಯಾಟ್ ಎತ್ತಿದರು, ಅಂಪೈರ್ ಮತ್ತು ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಜ್ಜನರ ಆಟ ಎನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಈ ರೀತಿಯ ವರ್ತಬೆ ಅಕ್ಷಮ್ಯ ಎಂದು ಟೀಕೆ ವ್ಯಕ್ತವಾಗಿದೆ. ಅಸಿಫ್ ಅಲಿ ವಿರುದ್ಧ ಐಸಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕ್ರೀಡಾಭಿಮಾನಿಗಳು ಒತ್ತಾಯಿಸಿದ್ದಾರೆ. ಈ ನಡುವೆ ಹಲವು ಮಾಜಿ ಕ್ರಿಕೆಟಿಗರು ಕೂಡ ಆಸಿಫ್ ಅಲಿ ವರ್ತನೆ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.

ಮೂರ್ಖತನದ ಪರಮಾವಧಿ
ಮೈದಾನದಲ್ಲಿ ಆಸಿಫ್ ಅಲಿ ವರ್ತನೆ ಮೂರ್ಖತನದ ಪರಮಾವಧಿ ಎಂದು ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಗುಲ್ಬದಿನ್ ನೈಬ್ ಟೀಕಿಸಿದ್ದಾರೆ. ಏಷ್ಯಾಕಪ್‌ನ ಉಳಿದ ಪಂದ್ಯಗಳಿಗೆ ಆಸಿಫ್ ಅಲಿ ಆಡುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಯಾವುದೇ ಬೌಲರ್ ವಿಕೆಟ್ ಪಡೆದಾಗ ಸಂಭ್ರಮಾಚರಣೆ ಮಾಡುವ ಅಧಿಕಾರವಿದೆ. ಆದರೆ ದೈಹಿಕವಾಗಿ ಹಲ್ಲೆ ಮಾಡಲು ಮುಂದಾಗುವುದು, ನಿಂದಿಸುವುದು ಸ್ವೀಕಾರಾರ್ಹವಲ್ಲ, ಎಂದು ಟ್ವೀಟ್ ಮಾಡಿದ್ದಾರೆ.
ಪಾಕ್ vs ಅಫ್ಘಾನ್: ಎಲ್ಲೆ ಮೀರಿದ ಅಭಿಮಾನಿಗಳ ವರ್ತನೆ: ರೋಚಕ ಸೆಣೆಸಾಟದ ಬಳಿಕ ಸ್ಟೇಡಿಯಂನಲ್ಲಿ ಭಾರೀ ದಾಂಧಲೆ
ಮರ್ಯಾದೆ ಕೊಟ್ಟು, ಮರ್ಯಾದೆ ತೆಗೆದುಕೊಳ್ಳಿ
ಪಾಕಿಸ್ತಾನ-ಅಫ್ಘಾನಿಸ್ತಾನ ಆಟಗಾರ ಹೆಗಲ ಮೇಲೆ ಕೈ ಹಾಕಿಕೊಂಡಿರುವ ಇನ್ನೊಂದು ಫೋಟಿ ಹಂಚಿಕೊಂಡಿರುವ ಗುಲ್ಬದಿನ್ ನೈಬ್, ಕ್ರಿಕೆಟ್ ಸಜ್ಜನರ ಆಟ ಎಂದಿದ್ದಾರೆ.
ಟ್ವೀಟ್ ಮಾಡಿರುವ ಅವರು, "ಕ್ರಿಕೆಟ್ ಸಜ್ಜನರ ಆಟ, ಮೈದಾನದಲ್ಲಿ ಭಾವನೆಗಳು, ಪ್ರೀತಿ, ಗೌರವ ಮತ್ತು ಸಹೋದರತ್ವ ಇರಬೇಕು. ಮೈದಾನದಲ್ಲಿ ಎಲ್ಲ ಎದುರಾಳಿಗಳನ್ನು ನಾವು ಗೌರವಿಸುತ್ತೇವೆ. ಗೌರವವನ್ನು ನೀಡಿ ಗೌರವ ಪಡೆದುಕೊಳ್ಳಬೇಕು, ಇದೇ ನಮಗೆ ಬೇಕಾಗಿರುವುದು" ಎಂದು ಹೇಳಿದ್ದಾರೆ.

ಮೈದಾನದಲ್ಲಿ ಹೊಡೆದಾಡಿಕೊಂಡ ಅಭಿಮಾನಿಗಳು
ಒಂದೆಡೆ ಎರಡೂ ತಂಡಗಳ ನಡುವಿನ ಆಟಗಾರರು ಮೈದಾನದಲ್ಲಿ ಕಿತ್ತಾಡಿಕೊಂಡರೆ. ಪಂದ್ಯ ಮುಗಿದ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಭಾರಿ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಪಾಕಿಸ್ತಾನ ಅಂತಿಮವಾಗಿ ಜಯ ಗಳಿಸಿತು. ಪಂದ್ಯ ಮುಗಿಯುತ್ತಿದ್ದಂತೆ ಎರಡೂ ತಂಡಗಳ ಅಭಿಮಾನಿಗಳು, ಕ್ರಿಡಾಂಗಣದಲ್ಲಿ ಮತ್ತು ಹೊರಭಾಗದಲ್ಲಿಯೂ ಹೊಡೆದಾಡಿಕೊಂಡ ವಿಡಿಯೋಗಳು ವೈರಲ್ ಆಗಿದೆ.

ಮೊದಲು ಕೆಣಕಿದ್ದು ಫರೀದ್ ಅಹ್ಮದ್ ಎಂದ ಪಾಕ್ ಅಭಿಮಾನಿಗಳು
ಆಸಿಫ್ ಅಲಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಹಲವು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಅಫ್ಘಾನಿಸ್ತಾನ ಆಟಗಾರ ಫರೀದ್ ಅಹ್ಮದ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಫರೀದ್ ಅಹ್ಮದ್ ಬೌಲಿಂಗ್‌ನಲ್ಲಿ ಆಸಿಫ್ ಅಲಿ ಔಟಾಗುತ್ತಿದ್ದಂತೆ ಮಾತಿನಲ್ಲಿ ಕೆಣಕಿದ್ದೆ ಆಸಿಫ್ ಅಲಿ ಕೋಪದಿಂದ ವರ್ತಿಸಲು ಕಾರಣ ಎಂದು ಹೇಳಿದ್ದಾರೆ.
ಏನೇ ಆದರೂ, ಸಭ್ಯರ ಆಟ ಎನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಈ ರೀತಿಯ ಘಟನೆ ಸಮರ್ಥನೀಯವಲ್ಲ, ಈ ಬಗ್ಗೆ ಐಸಿಸಿ ತನಿಖೆ ನಡೆಸಿ ತಪ್ಪಿತಸ್ಥ ಆಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications