
ಪಾಕಿಸ್ತಾನದ ವಿರುದ್ಧ ಭಾರತದ ಸಂಭಾವ್ಯ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ): ಭಾರತದ ನಾಯಕ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡನೇ ಅತ್ಯುತ್ತಮ ಸ್ಕೋರರ್ ಆಗಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮಾರ್ಟಿನ್ ಗುಪ್ಟಿಲ್‌ಗಿಂತ ಕೇವಲ 10 ರನ್ ಹಿಂದಿದ್ದಾರೆ. ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮುಖ್ಯವಾಗಿದ್ದು, ಕಳೆದ ಟಿ20 ವಿಶ್ವಕಪ್‌ನ ಸೋಲಿಗೆ ತಮ್ಮ ನಾಯಕತ್ವದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
ಕೆಎಲ್ ರಾಹುಲ್: ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಗಾಯದಿಂದ ಮರಳಿದ ಕೆಎಲ್ ರಾಹುಲ್, ಬ್ಯಾಟ್‌ನೊಂದಿಗೆ ಯಾವುದೇ ಪರಿಣಾಮಕಾರಿ ಪ್ರದರ್ಶನವನ್ನು ನೀಡಲು ವಿಫಲರಾದರು. ಪಾಕಿಸ್ತಾನದ ವಿರುದ್ಧ ಕೆಎಲ್ ರಾಹುಲ್ ತಮ್ಮ ಅತ್ಯುತ್ತಮ ಆಟವಾಡಲು ಪ್ರಯತ್ನಿಸಲಿದ್ದಾರೆ.

100ನೇ ಟಿ20 ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ: ಭಾರತದ ಮಾಜಿ ನಾಯಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತು ಟಿ20 ಎರಡರಲ್ಲೂ ತಮ್ಮ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡ ನಂತರ ಮೊದಲ ಬಾರಿಗೆ ಏಷ್ಯಾ ಕಪ್‌ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಆರಂಭಿಕ ಪಂದ್ಯವನ್ನು ಆಡಿದರೆ, ಅದು ಅವರ 100ನೇ ಟಿ20 ಪಂದ್ಯವಾಗುತ್ತದೆ. ಪಾಕಿಸ್ತಾನದ ವಿರುದ್ಧದ ಪ್ರಭಾವದ ಪ್ರದರ್ಶನದೊಂದಿಗೆ ಸ್ಮರಣೀಯ ಪುನರಾಗಮನವನ್ನು ನೋಡುತ್ತಿದ್ದಾರೆ.
ಸೂರ್ಯಕುಮಾರ್ ಯಾದವ್: ಮಧ್ಯಮ ಕ್ರಮಾಂಕದಲ್ಲಿ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಭಾರತದ ಶಕ್ತಿಯಾಗಿ ಉಳಿದಿದ್ದಾರೆ. ಸೂರ್ಯಕುಮಾರ್ ಯಾದವ್ 360 ಡಿಗ್ರಿ ವ್ಯಾಪ್ತಿಯ ಹೊಡೆತಗಳ ಮೂಲಕ ಪಾಕಿಸ್ತಾನದ ಬೌಲರ್‌ಗಳಿಗೆ ದೊಡ್ಡ ಬೆದರಿಕೆಯಾಗಿದ್ದಾರೆ.

ದಿನೇಶ್ ಕಾರ್ತಿಕ್ ಬದಲಿಗೆ ರಿಷಭ್ ಪಂತ್
ರಿಷಭ್ ಪಂತ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಹಿನ್ನೆಲೆಯಿಂದ ಎಡಗೈ ಬ್ಯಾಟರ್ ಮರಳಲಿದ್ದಾರೆ. ಆದರೆ ಅವರು ತಮ್ಮ ದಿನದಂದು ಯಾವುದೇ ಬೌಲಿಂಗ್ ಲೈನ್-ಅಪ್‌ಗೆ ಕಾಟ ನೀಡಬಹುದು. ಇದೇ ವೇಳೆ ತಂಡದಲ್ಲಿ ದಿನೇಶ್ ಕಾರ್ತಿಕ್ ಅವರ ಉಪಸ್ಥಿತಿಯ ಹೊರತಾಗಿಯೂ ರಿಷಭ್ ಪಂತ್ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಉಳಿಯುವ ಸಾಧ್ಯತೆಯಿದೆ. ಮೊದಲ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಬೆಂಚ್ ಕಾಯಿಸಬೇಕಾಗಬಹುದು.
ಹಾರ್ದಿಕ್ ಪಾಂಡ್ಯ: ಇತ್ತೀಚಿನ ವರ್ಷಗಳಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೆಚ್ಚು ಪ್ರಬುದ್ಧ ಮತ್ತು ಉತ್ತಮ ಆಟಗಾರನಾಗಿ ವಿಕಸನಗೊಂಡಿದ್ದಾರೆ. ಬಹುಮುಖ ಬ್ಯಾಟರ್ ಆಗುವುದರ ಜೊತೆಗೆ, ಹಾರ್ದಿಕ್ ಅವರು ಅಗತ್ಯವಿರುವಾಗ ಅವರ ಕೋಟಾದ ಓವರ್‌ಗಳನ್ನು ಬೌಲ್ ಮಾಡಲು ಸಾಕಷ್ಟು ಫಿಟ್ ಆಗಿದ್ದಾರೆ ಮತ್ತು ಇದು ಅವರನ್ನು ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದೆ.

ರವೀಂದ್ರ ಜಡೇಜಾ ಭಾರತದ ಆಡುವ 11ರ ಬಳಗ ಸೇರುವ ಸಾಧ್ಯತೆ
ರವೀಂದ್ರ ಜಡೇಜಾ: ತನ್ನ ಆಲ್‌ರೌಂಡ್ ಸಾಮರ್ಥ್ಯ ಮತ್ತು ಫಾರ್ಮ್‌ನ ಕಾರಣದಿಂದ ರವೀಂದ್ರ ಜಡೇಜಾ ಭಾರತದ ಆಡುವ 11ರ ಬಳಗ ಸೇರುವ ಸಾಧ್ಯತೆಯಿದೆ. ರವೀಂದ್ರ ಜಡೇಜಾ ತಂಡಕ್ಕೆ ಕೆಲವು ನಿರ್ಣಾಯಕ ಪ್ರಗತಿಯನ್ನು ಒದಗಿಸುವುದರ ಜೊತೆಗೆ ಸ್ಲಾಗ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟರ್ ಆಗಿ ಸೂಕ್ತವಾಗಿರಬಹುದು.
ರವಿಚಂದ್ರನ್ ಅಶ್ವಿನ್: ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವೈಟ್-ಬಾಲ್ ತಂಡದಲ್ಲಿ ತನ್ನ ಸ್ಥಾನಕ್ಕಾಗಿ ಹೋರಾಟವನ್ನು ಮುಂದುವರೆಸಿದ್ದಾರೆ ಮತ್ತು ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ ಎಂದು ಪರಿಗಣಿಸಿ ಏಷ್ಯಾ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ರವಿಚಂದ್ರನ್ ಅಶ್ವಿನ್ ಉತ್ಸುಕರಾಗಿದ್ದಾರೆ.

ಚಹಾಲ್ ಭಾರತದ ವಿಶ್ವಾಸಾರ್ಹ ವಿಕೆಟ್ ಟೇಕರ್
ಯುಜ್ವೇಂದ್ರ ಚಹಾಲ್: ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಪ್ರತಿ ಪಂದ್ಯದಲ್ಲಿ ಆತ್ಮವಿಶ್ವಾಸದಿಂದ ಬೆಳೆಯುತ್ತಲೇ ಇರುತ್ತಾರೆ ಮತ್ತು ವಿಕೆಟ್ ಕೀಳುತ್ತಲೇ ಇದ್ದಾರೆ. ಚಹಾಲ್ ಭಾರತದ ವಿಶ್ವಾಸಾರ್ಹ ವಿಕೆಟ್ ಟೇಕರ್ ಆಗಿದ್ದಾರೆ, ಅವರು ಅತ್ಯುತ್ತಮ ಬ್ಯಾಟರ್‌ಗಳನ್ನು ಸಹ ಸುಲಭವಾಗಿ ಔಟ್ ಮಾಡುತ್ತಾರೆ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಇವರ ಬೌಲಿಂಗ್ ಪ್ರದರ್ಶನ ನಿರ್ಣಾಯಕವಾಗಿದೆ.
ಭುವನೇಶ್ವರ್ ಕುಮಾರ್: ವೇಗ ಮತ್ತು ಸ್ವಿಂಗ್ ಬಲಗೈ ಬೌಲರ್ ಭುವನೇಶ್ವರ್ ಕುಮಾರ್ ಅವರ ದೊಡ್ಡ ಶಕ್ತಿಯಾಗಿದೆ. ಆದಾಗ್ಯೂ, ಹಳೆಯ ಚೆಂಡಿನೊಂದಿಗೆ ಮಿತವ್ಯಯ ರನ್‌ಗಳನ್ನು ನೀಡುವ ಸಾಮರ್ಥ್ಯ ಅವನನ್ನು ಸ್ಲಾಗ್ ಓವರ್‌ಗಳಿಗೆ ವಿಶ್ವಾಸಾರ್ಹ ಬೌಲರ್‌ನನ್ನಾಗಿ ಮಾಡುತ್ತದೆ.
ಅರ್ಷದೀಪ್ ಸಿಂಗ್: ಯುವ ಬೌಲರ್ ಅರ್ಷದೀಪ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಸಬ. ಆದರೆ ಅರ್ಷದೀಪ್ ಸಿಂಗ್ ಹೊಂದಿರುವ ಆಟದ ಬಗೆಗಿನ ಶಾಂತತೆ ಮತ್ತು ತಿಳುವಳಿಕೆ, ಎಲ್ಲವೂ ಅವನನ್ನು ಇತರ ಯುವ ವೇಗಿಗಳಿಗಿಂತ ಭಿನ್ನವಾಗಿಸುತ್ತದೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಒತ್ತಡದ ಪಂದ್ಯದಲ್ಲಿ ತನ್ನ ಸಾಮರ್ಥ್ಯವನ್ನು ಪರೀಕ್ಷಿಸಲು ಅರ್ಷದೀಪ್ ಉತ್ಸುಕನಾಗಿದ್ದಾನೆ.


Click it and Unblock the Notifications
