For Quick Alerts
ALLOW NOTIFICATIONS  
For Daily Alerts
 

Asia Cup 2022: ಭಾರತ vs ಪಾಕಿಸ್ತಾನ ಫ್ಯಾಂಟಸಿ ಡ್ರೀಮ್ 11, ಸಂಭಾವ್ಯ ತಂಡ; ಪಂದ್ಯದ ವಿವರ

Asia Cup 2022: India vs Pakistan Fantasy Dream 11, Prediction Team; Match Details

ಭಾರತ ತಂಡವು ತಮ್ಮ 2022ರ ಏಷ್ಯಾ ಕಪ್ ಅಭಿಯಾನವನ್ನು ಇಂದು (ಆಗಸ್ಟ್ 28ರ ಭಾನುವಾರ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಲಿದೆ. ಭಾರತಕ್ಕೆ ಇದು 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶವಾಗಿದೆ.

ದುಬೈನಲ್ಲಿ ತೀವ್ರವಾದ ಶಾಖದ ವಾತಾವರಣದಲ್ಲಿ ಏಷ್ಯಾ ಕಪ್ 2022ರ 15ನೇ ಆವೃತ್ತಿಯಲ್ಲಿ ಪ್ರಾರಂಭವಾಗಿದ್ದು, ಎಂದಿನಂತೆ ಭಾರತ-ಪಾಕಿಸ್ತಾನ ಪಂದ್ಯವಿರುವಾಗ ವಿಶ್ವದ ಎಲ್ಲರ ಕಣ್ಣುಗಳು ಈ ಹಣಾಹಣಿ ಮೇಲೆ ನೆಟ್ಟಿವೆ.

ಭಾರತ ಮತ್ತು ಪಾಕಿಸ್ತಾನ ಎರಡೂ ತಮ್ಮ ವೇಗದ ಬೌಲಿಂಗ್ ಮುಂಚೂಣಿಯಲ್ಲಿರುವ ಜಸ್ಪ್ರೀತ್ ಬುಮ್ರಾ ಮತ್ತು ಶಾಹೀನ್ ಶಾ ಆಫ್ರಿದಿ ಇಲ್ಲದೆ ಭಾನುವಾರದ ಪಂದ್ಯವನ್ನು ಆಡಲಿವೆ. ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದರೆ, ಬಲ ಮೊಣಕಾಲಿನ ಅಸ್ಥಿರಜ್ಜು ಗಾಯದಿಂದಾಗಿ ಶಾಹೀನ್ ಅಫ್ರಿದಿ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಜಸ್ಪ್ರೀತ್ ಬುಮ್ರಾ, ಶಾಹೀನ್ ಆಫ್ರಿದಿ ಅನುಪಸ್ಥಿತಿ

ಜಸ್ಪ್ರೀತ್ ಬುಮ್ರಾ, ಶಾಹೀನ್ ಆಫ್ರಿದಿ ಅನುಪಸ್ಥಿತಿ

2021ರಲ್ಲಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ ಶಾಹೀನ್ ಅಫ್ರಿದಿ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 3-31 ಉತ್ತಮ ಪ್ರದರ್ಶನದಿಂದ 10 ವಿಕೆಟ್‌ಗಳ ಗೆಲುವಿನಲ್ಲಿ 'ಪಂದ್ಯದ ಆಟಗಾರ' ಆದ ಕಾರಣ ಪಾಕಿಸ್ತಾನ ತಂಡ ಈ ಬಾರಿ ಮಿಸ್ ಮಾಡಿಕೊಳ್ಳಲಿದೆ. ಇದೀಗ ಭಾನುವಾರದ ಏಷ್ಯಾ ಕಪ್ ಎ ಗುಂಪಿನ ಪಂದ್ಯವನ್ನು ಆಯೋಜಿಸಲು ಸಜ್ಜಾಗಿದೆ.

ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭಾರತೀಯ ಪುರುಷರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಗಳಿಗಾಗಿ ತಮ್ಮ ಸ್ಥಾನವನ್ನು ಬಲಪಡಿಸಲು ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ಅವರಿಗೆ ಅವಕಾಶಗಳನ್ನು ನೀಡಲಾಗಿದೆ.

100ನೇ ಟಿ20 ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ

100ನೇ ಟಿ20 ಪಂದ್ಯವಾಡುತ್ತಿರುವ ವಿರಾಟ್ ಕೊಹ್ಲಿ

ಇನ್ನು ಪಾಕಿಸ್ತಾನ ತಂಡ ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ಅನುಪಸ್ಥಿತಿಯಲ್ಲಿ ಫಾರ್ಮ್‌ನಲ್ಲಿ ಕುಸಿತದಿಂದಾಗಿ ಮೂಲ ಏಷ್ಯಾಕಪ್ ತಂಡದಲ್ಲಿಲ್ಲದ ಹಸನ್ ಅಲಿ ಅವರಿಗೆ ಅವಕಾಶವನ್ನು ನೀಡಲಾಗಿದೆ. ಹ್ಯಾರಿಸ್ ರೌಫ್, ಶಹನವಾಜ್ ದಹಾನಿ, ಮೊಹಮ್ಮದ್ ಹಸ್ನೈನ್ ಮತ್ತು ನಸೀಮ್ ಶಾ ಅವರೂ ತಂಡದಲ್ಲಿದ್ದಾರೆ.

ಭಾನುವಾರದ ಪಂದ್ಯವು ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ 100ನೇ ಟಿ20 ಪಂದ್ಯವಾಗಿದೆ ಮತ್ತು ಜುಲೈ 17ರಂದು ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಆಡಿದ ನಂತರ ಅವರ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ 100 ಪಂದ್ಯಗಳನ್ನು ಪೂರೈಸಿದ ಎರಡನೇ ಆಟಗಾರ (ನ್ಯೂಜಿಲೆಂಡ್‌ನ ರಾಸ್ ಟೇಲರ್ ನಂತರ) ಆಗಲಿದ್ದಾರೆ.

ಪಂದ್ಯದ ವಿವರಗಳು

ಪಂದ್ಯದ ವಿವರಗಳು

ಭಾರತ vs ಪಾಕಿಸ್ತಾನ ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ, ಆಗಸ್ಟ್ 28ರಂದು ನಡೆಯಲಿದ್ದು, ಭಾರತೀಯ ಕಾಲಮಾನ 7:30 PM ಕ್ಕೆ ಪ್ರಾರಂಭವಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇನ್ನು ಈ ಪಂದ್ಯವು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.

ಏಷ್ಯಾ ಕಪ್ 2022ರ ಭಾರತ vs ಪಾಕಿಸ್ತಾನ ಫ್ಯಾಂಸಿ ಡ್ರೀಮ್ 11

ಏಷ್ಯಾ ಕಪ್ 2022ರ ಭಾರತ vs ಪಾಕಿಸ್ತಾನ ಫ್ಯಾಂಸಿ ಡ್ರೀಮ್ 11

ವಿಕೆಟ್ ಕೀಪರ್: ಮೊಹಮ್ಮದ್ ರಿಜ್ವಾನ್, ರಿಷಭ್ ಪಂತ್

ಬ್ಯಾಟ್ಸ್‌ಮನ್: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಬಾಬರ್ ಅಜಂ, ಕೆಎಲ್ ರಾಹುಲ್

ಆಲ್‌ರೌಂಡರ್ಸ್: ಹಾರ್ದಿಕ್ ಪಾಂಡ್ಯ

ಬೌಲರ್‌ಗಳು: ಯುಜ್ವೇಂದ್ರ ಚಹಾಲ್, ನಸೀಮ್ ಶಾ, ಹ್ಯಾರಿಸ್ ರೌಫ್

ನಾಯಕ: ಬಾಬರ್ ಅಜಂ

ಉಪ ನಾಯಕ: ಹಾರ್ದಿಕ್ ಪಾಂಡ್ಯ

ಏಷ್ಯಾ ಕಪ್ 2022ರ ಭಾರತ vs ಪಾಕಿಸ್ತಾನ ಸಂಭಾವ್ಯ ಆಡುವ 11ರ ಬಳಗ

ಏಷ್ಯಾ ಕಪ್ 2022ರ ಭಾರತ vs ಪಾಕಿಸ್ತಾನ ಸಂಭಾವ್ಯ ಆಡುವ 11ರ ಬಳಗ

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್

ಪಾಕಿಸ್ತಾನ: ಫಖರ್ ಜಮಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಂ (ನಾಯಕ), ಖುಷ್ದಿಲ್ ಶಾ, ಹೈದರ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಹಾರಿಸ್ ರೌಫ್, ನಸೀಮ್ ಶಾ, ಉಸ್ಮಾನ್ ಖಾದಿರ್, ಶಾನವಾಜ್ ದಹಾನಿ

Story first published: Sunday, August 28, 2022, 11:45 [IST]
Other articles published on Aug 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+