For Quick Alerts
ALLOW NOTIFICATIONS  
For Daily Alerts
 

Asia Cup 2022: ಭಾರತದ ಈ ಸ್ಟಾರ್ ಏಷ್ಯಾ ಕಪ್‌ನಲ್ಲಿ ಹೆಚ್ಚು ರನ್ ಗಳಿಸಬಹುದು; ರಶೀದ್ ಖಾನ್

Asia Cup 2022: Indian Star Suryakumar Yadav Can Score More Runs In Asia Cup Says Rashid Khan

ಏಷ್ಯಾ ಕಪ್ 2022ರಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಹಾಂಗ್ ಕಾಂಗ್, ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನವನ್ನು ಒಳಗೊಂಡಿರುವ ಆರು ರಾಷ್ಟ್ರಗಳು ಭಾಗವಹಿಸಿವೆ. ಅಕ್ಟೋಬರ್‌ನಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2021ಗಾಗಿ ಪೂರ್ವಸಿದ್ಧತಾ ಪಂದ್ಯಾವಳಿಯಾಗಿ ಆಡುತ್ತಿವೆ.

ಈ ನಡುವೆ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ. ಏಷ್ಯಾ ಕಪ್ 2022 ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ ಮತ್ತು ಪಂದ್ಯಾವಳಿಯ ಮೊದಲ ಪಂದ್ಯವು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ಶನಿವಾರ ನಡೆಯಲಿದೆ.

ಇದೇ ವೇಳೆ ಅಫ್ಘಾನಿಸ್ತಾನದ ಸ್ಟಾರ್ ಆಲ್‌ರೌಂಡರ್ ರಶೀದ್ ಖಾನ್ ಅವರು ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಬಹುಮುಖ ಪ್ರತಿಭೆಗಾಗಿ ಶ್ಲಾಘಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಬ್ಯಾಟ್‌ನೊಂದಿಗೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ಇದು ಇತ್ತೀಚಿನ ಐಸಿಸಿ ಪುರುಷರ ಟಿ20 ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಾಣುವಂತೆ ಮಾಡಿದೆ ಮತ್ತು ಈ ಪಟ್ಟಿಯನ್ನು ಪ್ರಸ್ತುತ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮುನ್ನಡೆಸುತ್ತಿದ್ದಾರೆ.

ಆಗಸ್ಟ್ 28ರಂದು ಭಾರತ, ಪಾಕಿಸ್ತಾನ ಪಂದ್ಯ

ಆಗಸ್ಟ್ 28ರಂದು ಭಾರತ, ಪಾಕಿಸ್ತಾನ ಪಂದ್ಯ

ಭಾರತವು ಆಗಸ್ಟ್ 28ರಂದು ಏಷ್ಯಾದ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಎ ಗುಂಪಿನ ಪಂದ್ಯಗಳಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ ಮತ್ತು ಭಾರತವು ಏಷ್ಯಾ ಕಪ್ ಪಂದ್ಯಾವಳಿಯನ್ನು ಗೆಲ್ಲಬೇಕಾದರೆ 31 ವರ್ಷದ ಬ್ಯಾಟರ್ ಸೂರ್ಯಕುಮಾರ್ ಯಾದವ್ ದೊಡ್ಡ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.

ಭಾರತದ ಸೂರ್ಯಕುಮಾರ್ ಯಾದವ್ ತಮ್ಮ ಕೌಶಲ್ಯ ಮತ್ತು ಪ್ರತಿಭೆಯಿಂದ ಏಷ್ಯಾ ಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಬಹುದು ಎಂದು ಅಫ್ಘಾನಿಸ್ತಾನ ತಂಡದ ಸ್ಟಾರ್ ಆಲ್‌ರೌಂಡರ್ ರಶೀದ್ ಖಾನ್ ಭಾವಿಸಿದ್ದಾರೆ.

ಏಷ್ಯಾ ಕಪ್‌ನಲ್ಲಿ ಹೆಚ್ಚಿನ ರನ್ ಗಳಿಸುವ ಆಟಗಾರ

ಏಷ್ಯಾ ಕಪ್‌ನಲ್ಲಿ ಹೆಚ್ಚಿನ ರನ್ ಗಳಿಸುವ ಆಟಗಾರ

"ಸೂರ್ಯಕುಮಾರ್ ಯಾದವ್ ಕೆಚ್ಚೆದೆಯ ಆಟಗಾರ, ಅವರು ಐಪಿಎಲ್‌ನಲ್ಲಿ ಪ್ರದರ್ಶನ ನೀಡಿದ ರೀತಿ ಮತ್ತು ಭಾರತ ತಂಡಕ್ಕೆ ಅವರು ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ತೋರಿಸಿದ್ದಾರೆ. ಅವರು ಏಷ್ಯಾ ಕಪ್‌ನಲ್ಲಿ ಹೆಚ್ಚಿನ ರನ್ ಗಳಿಸುವ ಒಬ್ಬ ಆಟಗಾರನಾಗಿದ್ದಾರೆ. ಅವರು ಯಾವಾಗಲೂ ಸಕಾರಾತ್ಮಕ ಆಟಗಾರರಾಗಿದ್ದಾರೆ ಮತ್ತು ಅವರು ಯಾವಾಗಲೂ ಕ್ರೀಸ್‌ನಲ್ಲಿ ನಿರತರಾಗಿರುತ್ತಾರೆ," ಎಂದರು.

"ಸೂರ್ಯಕುಮಾರ್ ಯಾದವ್ ಯಾವಾಗಲೂ ತಂಡಕ್ಕಾಗಿ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾರೆ, ಐಪಿಎಲ್‌ನಲ್ಲಿ ಅವರಿಗೆ ಬೌಲಿಂಗ್ ಮಾಡುವುದು ಕಠಿಣವಾಗಿತ್ತು. ಇದು ಆರೋಗ್ಯಕರ ಸ್ಪರ್ಧೆಯಾಗಿತ್ತು, ಭಾರತಕ್ಕಾಗಿ ಅವರು ಮೈದಾನಕ್ಕೆ ಕಾಲಿಟ್ಟಾಗ ಅವರಿಗೆ ಬೌಲ್ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ," ರಶೀದ್ ಖಾನ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಪಾಕಿಸ್ತಾನಿ ಪತ್ರಕರ್ತೆ ಸವೇರಾ ಪಾಷಾಗೆ ತಿಳಿಸಿದ್ದಾರೆ.

ಸೂರ್ಯಕುಮಾರ್‌ರನ್ನು ಎಬಿಡಿಗೆ ಹೋಲಿಸಿದ ರಿಕಿ ಪಾಂಟಿಂಗ್

ಸೂರ್ಯಕುಮಾರ್‌ರನ್ನು ಎಬಿಡಿಗೆ ಹೋಲಿಸಿದ ರಿಕಿ ಪಾಂಟಿಂಗ್

ಇತ್ತೀಚೆಗೆ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಸೂರ್ಯಕುಮಾರ್ ಯಾದವ್ ಅವರನ್ನು ಎಬಿ ಡಿವಿಲಿಯರ್ಸ್ ಅವರೊಂದಿಗೆ ಹೋಲಿಸಿದ್ದರು. ದಕ್ಷಿಣ ಆಫ್ರಿಕಾದ ಶ್ರೇಷ್ಠ ಆಟಗಾರರಂತೆ ಭಾರತೀಯ ಆಟಗಾರ 360 ಡಿಗ್ರಿ ಆಟವನ್ನು ಹೊಂದಿದ್ದಾರೆ ಎಂದು ಹೇಳಿದ್ದರು.

"ಸೂರ್ಯಕುಮಾರ್ ಯಾದವ್ ಮೈದಾನದ ಸುತ್ತ 360 ಡಿಗ್ರಿಗಳಲ್ಲಿ ರನ್ ಗಳಿಸುತ್ತಾನೆ. ಎಬಿ ಡಿವಿಲಿಯರ್ಸ್ ತನ್ನ ನಿಜವಾದ ಫಾರ್ಮ್‌ನಲ್ಲಿದ್ದಾಗ ಮಾಡಿದಂತೆಯೇ ಸ್ವಲ್ಪಮಟ್ಟಿಗೆ ಅನುಕರಿಸುತ್ತಾನೆ," ಎಂದು ಆಸ್ಟ್ರೀಲಿಯ ಮಾಜಿ ನಾಯಕ ರಿಕಿ ಪಾಂಟಿಂಗ್ ಐಸಿಸಿ ರಿವ್ಯೂನಲ್ಲಿ ತಿಳಿಸಿದ್ದರು.

ಏಷ್ಯಾ ಕಪ್‌ಗಾಗಿ ಭಾರತದ ಪೂರ್ಣ ತಂಡ

ಏಷ್ಯಾ ಕಪ್‌ಗಾಗಿ ಭಾರತದ ಪೂರ್ಣ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ಬೈ ಆಟಗಾರರು: ದೀಪಕ್ ಚಹಾರ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್.

Story first published: Saturday, August 27, 2022, 14:21 [IST]
Other articles published on Aug 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+