ಏಷ್ಯಾ ಕಪ್ 2022: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದ ಮೊಹಮ್ಮದ್ ರಿಜ್ವಾನ್

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು (ಸೆಪ್ಟೆಂಬರ್ 11) ಭಾನುವಾರ ನಡೆಯುತ್ತಿರುವ 2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 5 ರನ್‌ಗಳ ರೋಚಕ ಗೆಲುವನ್ನು ಸಾಧಿಸಿ, ನೂತನ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಏಷ್ಯಾ ಕಪ್ 2022ರ ಫೈನಲ್ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡದ ವಿರುದ್ಧ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ 23 ರನ್‌ಗಳ ಜಯ ದಾಖಲಿಸಿ, 6ನೇ ಬಾರಿ ಏಷ್ಯಾ ಕಪ್ ಚಾಂಪಿಯನ್ ಪಟ್ಟ ಅಂಲಂಕರಿಸಿತು.
ಪಾಕಿಸ್ತಾನ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಏಷ್ಯಾ ಕಪ್ 2022ರಲ್ಲಿ ತನ್ನ ಅಭಿಯಾನವನ್ನು ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಮುಗಿಸಿದರು.
ಭಾನುವಾರ, ಸೆಪ್ಟೆಂಬರ್ 11ರಂದು ಶ್ರೀಲಂಕಾ ವಿರುದ್ಧದ ಫೈನಲ್‌ಗೆ ಮೊದಲು, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆದ ಬಹು-ರಾಷ್ಟ್ರಗಳ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ಅವರ 276 ರನ್‌ಗಳ ಮೊತ್ತಕ್ಕಿಂತ ಮೊಹಮ್ಮದ್ ರಿಜ್ವಾನ್ 50 ರನ್‌ಗಳ ಹಿನ್ನಡೆಯನ್ನು ಹೊಂದಿದ್ದರು.

ವಿರಾಟ್ ಕೊಹ್ಲಿ 276 ರನ್ ಗಳಿಸಿದ್ದಾರೆ
ಮೆನ್ ಇನ್ ಗ್ರೀನ್(ಪಾಕಿಸ್ತಾನ) ಚಾಂಪಿಯನ್‌ಶಿಪ್ ಗೆಲ್ಲಲು 171 ರನ್ ಬೆನ್ನಟ್ಟುತ್ತಿರುವಾಗ, ಮೊಹಮ್ಮದ್ ರಿಜ್ವಾನ್ 47 ಎಸೆತಗಳಲ್ಲಿ ಏಷ್ಯಾ ಕಪ್‌ನಲ್ಲಿ ಮೂರನೇ ಅರ್ಧಶತಕವನ್ನು ಗಳಿಸಿದರು. ಚಮಿಕಾ ಕರುಣರತ್ನೆ ಅವರ ಬೌಲಿಂಗ್‌ನಲ್ಲಿ ಬೃಹತ್ ಸಿಕ್ಸರ್ ಸಿಡಿಸಿ, ವಿರಾಟ್ ಕೊಹ್ಲಿಯ ಮೈಲುಗಲ್ಲನ್ನು ಮೀರಿಸಿದರು.
ಈ ಹಿಂದೆ ದುಬೈನಲ್ಲಿ ನಡೆದ ಸೂಪರ್ 4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿಯ ಲೀಡಿಂಗ್ ಸ್ಕೋರರ್‌ನಿಂದ ಹಿಂದೆ ಸರಿಯುವಂತೆ ಸಿಕ್ಸರ್ ಖಚಿತಪಡಿಸಿತು. ಆದಾಗ್ಯೂ, ಪಾಕಿಸ್ತಾನ ತಂಡ ಶ್ರೀಲಂಕಾದ ಬಿಗಿ ಬೌಲಿಗ್ ದಾಳಿಗೆ ತತ್ತರಿಸಿತು. ಫೈನಲ್ ಪಂದ್ಯವನ್ನು ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಮೊಹಮ್ಮದ್ ರಿಜ್ವಾನ್ 49 ಎಸೆತಗಳಲ್ಲಿ 55 ರನ್
ಮೊಹಮ್ಮದ್ ರಿಜ್ವಾನ್ ಡೀಪ್ ಮಿಡ್-ವಿಕೆಟ್ ಪ್ರದೇಶದ ಮೇಲೆ ವನಿಂದು ಹಸರಂಗವನ್ನು ಸ್ವೀಪ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ಬೌಂಡರಿ ಗೆರೆ ದಾಟಲು ವಿಫಲವಾಗಿ, ಒತ್ತಡದಲ್ಲಿಯೂ ದನುಷ್ಕಾ ಗುಣತಿಲಕ ಯೋಗ್ಯ ಕ್ಯಾಚ್ ಪಡೆದರು.
ಮೊಹಮ್ಮದ್ ರಿಜ್ವಾನ್ 49 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಂಗ್‌ಕಾಂಗ್ ವಿರುದ್ಧ ಅಜೇಯ 78 ರನ್ ಗಳಿಸುವ ಮೂಲಕ ಅನುಭವಿ ಬ್ಯಾಟರ್ ಆರು ಪಂದ್ಯಗಳಿಂದ 56.20 ಸರಾಸರಿಯಲ್ಲಿ 281 ರನ್ ಮತ್ತು 117.57 ಸ್ಟ್ರೈಕ್ ರೇಟ್‌ನೊಂದಿಗೆ ಪಂದ್ಯಾವಳಿಯನ್ನು ಮುಗಿಸಿದರು.

ಮೊಹಮ್ಮದ್ ರಿಜ್ವಾನ್ ಅವರ ಅರ್ಧಶತಕ ವ್ಯರ್ಥ
ಭಾನುವಾರದಂದು ಮೊಹಮ್ಮದ್ ರಿಜ್ವಾನ್ ಅವರ ಅರ್ಧಶತಕ ವ್ಯರ್ಥವಾಯಿತು ಮತ್ತು ಶ್ರೀಲಂಕಾ ತಂಡ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಸೋಲಿಸಿತು. ರೋಹಿತ್ ಶರ್ಮಾ ನಾಯಕತ್ವದ ಭಾರತದ ವಿರುದ್ಧ ಐದು ವಿಕೆಟ್‌ಗಳ ಜಯದೊಂದಿಗೆ ಪಾಕಿಸ್ತಾನವು ತಮ್ಮ ಸೂಪರ್ 4 ಅಭಿಯಾನವನ್ನು ಪ್ರಾರಂಭಿಸಿತು, ನಂತರ ಅವರು ಅಫ್ಘಾನಿಸ್ತಾನವನ್ನು ರೋಚಕವಾಗಿ ಸೋಲಿಸಿದರು.
ಆದಾಗ್ಯೂ, ಏಷ್ಯಾ ಕಪ್‌ನ ಕೊನೆಯ ಎರಡು ಪಂದ್ಯಗಳಲ್ಲಿ ದಸುನ್ ಶನಕಾ ನಾಯಕತ್ವದ ಶ್ರೀಲಂಕಾವು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡಕ್ಕೆ ಸೋಲಿನ ರುಚಿ ತೋರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications