ಪಾಕಿಸ್ತಾನ ಚಾಂಪಿಯನ್ ತಂಡವಲ್ಲ ಎಂದ ಉಪನಾಯಕ ಶದಾಬ್ ಖಾನ್
ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಪಾಕಿಸ್ತಾನ ತಂಡ ಫೈನಲ್ ಪ್ರವೇಶಿಸಿದೆ. ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಅಂತಿಮ ಓವರ್ ನಲ್ಲಿ ರೋಚಕ ಜಯ ಸಾಧಿಸಿದ ಪಾಕಿಸ್ತಾನ ಫೈನಲ್‌ಗೆ ಅರ್ಹತೆ ಪಡೆಯಿತು. ಪಂದ್ಯದ ನಂತರ ಮಾತನಾಡಿದ ಪಾಕಿಸ್ತಾನ ತಂಡದ ಉಪನಾಯಕ ಹಲವು ವಿಚಾರಗಳ ಬಗ್ಗೆ ಮಾತನಾಡಿದರು.
ಪಾಕಿಸ್ತಾನ ಗೆಲುವಿನ ನಂತರ ಅಚ್ಚರಿಯ ಹೇಳಿಕೆ ನೀಡಿರುವ ಶದಾಬ್ ಖಾನ್ ಪಾಕಿಸ್ತಾನ ಚಾಂಪಿಯನ್ ತಂಡವಲ್ಲ ಎಂದು ಹೇಳಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಗಾಗಿ ನಾವಿನ್ನೂ ಸುಧಾರಣೆಯಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಪಂದ್ಯ ಮುಗಿದ ನಂತರ ಮಾತನಾಡಿದ ಅವರು, "ಪಾಕಿಸ್ತಾನ ಉತ್ತಮ ತಂಡ ಆದರೆ ಚಾಂಪಿಯನ್ ತಂಡವಲ್ಲ, ನಾವಿನ್ನೂ ಒತ್ತಡವನ್ನು ನಿಭಾಯಿಸುವುದನ್ನು ಕಲಿಯಬೇಕಿದೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಇನ್ನೂ ಹಲವು ಕೆಲಸವಿದೆ" ಎಂದು ಹೇಳಿದ್ದಾರೆ.
ಒತ್ತಡದ ಸಂದರ್ಭದಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡುವುದನ್ನು ಕಲಿಯಬೇಕಿದೆ ಎಂದು ಹೇಳಿರುವ ಶದಾಬ್ ಖಾನ್, ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ತಾನು ಕೆಟ್ಟ ಹೊಡೆತಕ್ಕೆ ಪ್ರಯತ್ನಿಸಿ ಔಟಾದೆ ಎಂದು ಒಪ್ಪಿಕೊಂಡಿದ್ದಾರೆ. ನಾನೇ ಪಂದ್ಯವನ್ನು ಮುಗಿಸಬೇಕಾಗಿತ್ತು, ಆದರೆ ಕೆಟ್ಟ ಹೊಡೆತಕ್ಕೆ ಪ್ರಯತ್ನಿಸಿದ್ದರಿಂದ ಔಟಾಗಬೇಕಾಯಿತು. ಮುಖ್ಯವಾದ ಪಂದ್ಯಗಳಲ್ಲಿ ಒತ್ತಡಕ್ಕೆ ಒಳಗಾಗದೆ ಆಡುವುದನ್ನು ಇನ್ನೂ ಕಲಿಯಬೇಕಿದೆ ಎಂದು ಹೇಳಿದರು.

ವಿಶ್ವಕಪ್‌ಗೂ ಮುನ್ನ ಸುಧಾರಿಸಬೇಕಿದೆ
ಒತ್ತಡದ ಸಂದರ್ಭದಲ್ಲಿ ನಾವಿನ್ನೂ ಉತ್ತಮ ಪ್ರದರ್ಶನ ನೀಡಬೇಕು ಎಂದು ಹೇಳಿದ ಶದಾಬ್ ಖಾನ್ ಸುಧಾರಣೆಯಾಗಬೇಕು ಎಂದು ಹೇಳಿದರು. "ಒತ್ತಡದ ಸಂದರ್ಭಗಳಲ್ಲಿ ಉತ್ತಮ ತಂಡವು ಈ ರೀತಿಯ ಕುಸಿತವನ್ನು ಅನುಭವಿಸಬಾರದು ಎಂದು ನಾನು ಭಾವಿಸುತ್ತೇನೆ, ವಿಶೇಷವಾಗಿ ನಾನು ಕೆಟ್ಟ ಹೊಡೆತಕ್ಕೆ ಮುಂದಾದೆ. ನಾನು ಚೆನ್ನಾಗಿ ಸೆಟ್ ಆಗಿದ್ದೆ, ಪಂದ್ಯವನ್ನು ನಾನೇ ಮುಗಿಸಬೇಕಾಗಿತ್ತು" ಎಂದು ಲೆಗ್ ಸ್ಪಿನ್ನರ್ ರಶೀದ್ ಖಾನ್‌ಗೆ ಔಟಾದ ನಂತರ ಅವರು ಹೇಳಿದ್ದಾರೆ.
ಏಷ್ಯಾಕಪ್ ಪಂದ್ಯಾವಳಿ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪೂರ್ವಭಾವಿಯಾಗಿದೆ ಮತ್ತು ಶಾದಾಬ್ ತನ್ನ ಪಾಕಿಸ್ತಾನ ತಂಡಕ್ಕೆ ಇನ್ನೂ ಕೆಲಸವಿದೆ ಎಂದು ಹೇಳಿದರು.
ಅಫ್ಘಾನಿಸ್ತಾನದ ಬೌಲರ್‌ಗೆ ಬ್ಯಾಟ್‌ನಿಂದ ಹೊಡೆಯಲು ಯತ್ನಿಸಿದ ಆಸಿಫ್ ಅಲಿ

ನಾವು ಚಾಂಪಿಯನ್ ತಂಡವಲ್ಲ
ಪಾಕಿಸ್ತಾನ ಉತ್ತಮ ತಂಡ ಆದರೆ ಚಾಂಪಿಯನ್ ತಂಡವಲ್ಲ, ಭಾನುವಾರ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಒತ್ತಡವನ್ನು ನಿಭಾಯಿಸಿದರೆ ಮಾತ್ರ ಗೆಲ್ಲಲು ಸಾಧ್ಯವಿದೆ ಎಂದು ಶದಾಬ್ ಖಾನ್ ಹೇಳಿದ್ದಾರೆ.
"ಏಷ್ಯಾಕಪ್ 2022ರ ಆರಂಭದಲ್ಲಿ ನಾನು ಹೇಳಿದಂತೆ, ನಾವು ಉತ್ತಮ ತಂಡ ಆದರೆ ಚಾಂಪಿಯನ್ ತಂಡವಲ್ಲ, ಚಾಂಪಿಯನ್ ತಂಡವಾಗುವುದು ನಮ್ಮ ಗುರಿಯಾಗಿದೆ. ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಮತ್ತು ನಮ್ಮ ತಪ್ಪುಗಳನ್ನು ಪುನರಾವರ್ತಿಸದಿರಲು ಪ್ರಯತ್ನಿಸುತ್ತೇವೆ." ಎಂದು ಹೇಳಿದ್ದಾರೆ.

ಬೌಲರ್‌ಗಳಿಗೆ ಬ್ಯಾಟಿಂಗ್ ಮಾಡಲು ಉತ್ತೇಜನ
ಪಾಕಿಸ್ತಾನ ಟೀಂ ಮ್ಯಾನೇಜ್‌ಮೆಂಟ್ ತಂಡದ ಬೌಲರ್‌ಗಳಿಗೆ ಸ್ವಲ್ಪಮಟ್ಟಿಗೆ ಬ್ಯಾಟಿಂಗ್ ಮಾಡಲು ಉತ್ತೇಜಿಸಿದೆ ಏಕೆಂದರೆ ಆಟದಲ್ಲಿ ಯಾವ ಪರಿಸ್ಥಿತಿ ಬರುತ್ತದೆ ಎಂದು ನಿಮಗೆ ತಿಳಿದಿಲ್ಲ. ನಮ್ಮ ಬೌಲರ್‌ಗಳು ಸಹ ಬ್ಯಾಟ್‌ನೊಂದಿಗೆ ಪಂದ್ಯಗಳನ್ನು ಮುಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಶದಾಬ್ ಖಾನ್ ಹೇಳಿದರು.
4 ಓವರ್ ಬೌಲ್ ಮಾಡಿ 27 ರನ್ ನೀಡಿ 1 ವಿಕೆಟ್ ಪಡೆದ ಶಾದಾಬ್ ಖಾನ್, ಬ್ಯಾಟಿಂಗ್‌ನಲ್ಲಿ 26 ಎಸೆತಗಳಲ್ಲಿ 1 ಬೌಂಡರಿ, ಮೂರು ಸಿಕ್ಸರ್ ಸಹಿತ 36 ರನ್ ಗಳಿಸಿದರು. ತಮ್ಮ ಪ್ರದರ್ಶನಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಬ್ಯಾಟಿಂಗ್ ಅಭ್ಯಾಸ ಮಾಡುತ್ತೇನೆ ಎಂದ ನಸೀಮ್ ಶಾ
ಎರಡು ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿದ ನಸೀಮ್ ಶಾ ಮಾತನಾಡಿ, "ನಾನು ಬ್ಯಾಟಿಂಗ್‌ಗೆ ಬಂದಾಗ, ನಾನು ಸಿಕ್ಸರ್‌ಗಳನ್ನು ಬಾರಿಸಬಲ್ಲೆ ಎಂಬ ನಂಬಿಕೆ ನನಗಿತ್ತು. ನಾಣು ಬ್ಯಾಟಿಂಗ್ ಅಭ್ಯಾಸ ಮಾಡಿದ್ದೇನೆ. ಯಾರ್ಕರ್ ಎಸೆಯುತ್ತಾರೆ ಎನ್ನುವ ನಿರೀಕ್ಷೆ ಇತ್ತು, ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿದ್ದೆ. ಉತ್ತಮ ಹೊಡೆತಗಳನ್ನು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದೆ" ಎಂದು ಹೇಳಿದ್ದಾರೆ.
ಶುಕ್ರವಾರ ಶ್ರೀಲಂಕಾ-ಪಾಕಿಸ್ತಾನ ನಡುವೆ ಸೂಪರ್ 4 ಹಂತದ ಪಂದ್ಯ ನಡೆಯಲಿದ್ದು. ಭಾನುವಾರ ಮತ್ತೆ ಎರಡೂ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications