
ಎರಡು ಸಿಕ್ಸರ್, ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನ
130ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ಮೊದಲ ಓವರ್‌ನಲ್ಲೇ ನಾಯಕ ಬಾಬರ್ ಅಜಮ್ ವಿಕೆಟ್ ಕಳೆದುಕೊಂಡ ಕೆಟ್ಟ ಆರಂಭ ಪಡೆಯಿತಾದ್ರೂ, 10 ಓವರ್ ಮುಕ್ತಾಯಕ್ಕೆ ಸೂಕ್ತ ಹಂತಕ್ಕೆ ತಲುಪಿತ್ತು. ಮೂರು ವಿಕೆಟ್ ನಷ್ಟಕ್ಕೆ 83ರನ್ ಕಲೆಹಾಕಿದ್ದ ಪಾಕಿಸ್ತಾನ ನಾಟಕೀಯ ಕುಸಿತ ಕಾಣುವ ಮೂಲಕ ಸೋಲಿನ ಬಲೆಗೆ ಬಿದ್ದಿತು. ಆದ್ರೆ ಅಂತಿಮ ಓವರ್‌ನಲ್ಲಿ ಬೌಲರ್ ನಸೀಮ್ ಶಾ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಪಾಕ್‌ಗೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಪಾಕಿಸ್ತಾನ ಏಷ್ಯಾ ಕಪ್ ಫೈನಲ್ ತಲುಪಿತು.
ಆದ್ರೆ ಇದಕ್ಕೂ ಮುನ್ನ ನಸೀಮ್ ಶಾ ಅಬ್ಬರಕ್ಕೆ ಹಾಗೂ ಗೆಲುವಿನ ಬಳಿಕ ಅಗ್ರೆಸ್ಸಿವ್ ಸಂಭ್ರಮಕ್ಕೆ ಪ್ರಮುಖ ಕಾರಣವಿತ್ತು. ಪಾಕ್ ಬೌಲರ್ ಆಸಿಫ್ ಅಲಿ 16 ರನ್‌ಗಳಿಸಿ ಫರೀದ್ ಅಹ್ಮದ್‌ಗೆ ವಿಕೆಟ್ ಒಪ್ಪಿಸಿದ ವೇಳೆಯಲ್ಲಿ ಬೌಲರ್‌ಗೂ ಮತ್ತು ಬ್ಯಾಟರ್‌ಗೂ ದೊಡ್ಡ ಮಟ್ಟಿನ ವಾಗ್ವಾದಕ್ಕೆ ಕಾರಣವಾಯಿತು.
ಏಷ್ಯಾ ಕಪ್‌ನಲ್ಲಿ ಭಾರತದ ಸೋಲಿಗೆ ರೋಹಿತ್ ತಲೆಕೆಡಿಸಿಕೊಂಡಿಲ್ಲ: ಸೋತರೂ ಅನೇಕ ಪಾಠಗಳನ್ನ ಕಲಿತಿದೆ ಟೀಂ ಇಂಡಿಯಾ
ಅಫ್ಘಾನಿಸ್ತಾನದ ಬೌಲರ್‌ಗೆ ಪಂಚ್ ಮಾಡಿದ ಆಸಿಫ್ ಅಲಿ
ಪಾಕಿಸ್ತಾನದ ಆಟಗಾರ ಆಸಿಫ್ ಅಲಿ ತನಗೆ ಸೆಂಡ್ ಆಫ್ ನೀಡಲು ಬಂದಿದ್ದ ಎದುರಾಳಿ ಬೌಲರ್‌ಗೆ ಇನ್ನೇನು ಬ್ಯಾಟ್‌ನಿಂದ ಬಾರಿಸಿಯೇ ಬಿಟ್ಟರು ಎನ್ನುವಷ್ಟರ ಮಟ್ಟಿಗೆ ಇಬ್ಬರ ನಡುವೆ ತಿಕ್ಕಾಟ ನಡೆಯಿತು. ಆಸಿಫ್ ಅಲಿ ತೋರಿದ ವರ್ತನೆಯು ಪಾಕ್‌ನ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಬ್ಯಾಟ್ ಬೀಸಿದ್ದ ಘಟನೆಯನ್ನ ನೆನಪಿಸಿತು. ಆದ್ರೆ ಅಫ್ಘಾನ್ ಆಟಗಾರರ ಮಧ್ಯ ಪ್ರವೇಶದಿಂದಾಗಿ ಇಬ್ಬರ ನಡುವಿನ ಜಗಳ ಮತ್ತೊಂದು ಹಂತಕ್ಕೆ ತಲುಪುವುದು ತಪ್ಪಿತು.
ತನಗೆ ಸೆಂಡ್ ಆಫ್ ನೀಡಲು ಬಂದಿದ್ದ ಬೌಲರ್ ಅನ್ನು ಕಂಡು ಆಸಿಫ್ ಅಲಿಗೆ ಕೆರಳಿದ್ದು, ಫರೀದ್‌ಗೆ ಗುದ್ದಲು ಪ್ರಯತ್ನಿಸಿದರು ಮತ್ತು ಫರೀದ್‌ಗೆ ಬ್ಯಾಟ್‌ನಿಂದ ಹೊಡೆಯುವುದಾಗಿ ಬೆದರಿಕೆ ಹಾಕಿದರು, ಜಾವೇದ್ ಮಿಯಾಂದಾದ್ ಅವರು ಟೆಸ್ಟ್ ಪಂದ್ಯದ ಸಮಯದಲ್ಲಿ ಡೆನ್ನಿಸ್ ಲಿಲ್ಲಿಯನ್ನು ಬ್ಯಾಟ್‌ನಿಂದ ಹೊಡೆಯಲು ಯತ್ನಿಸಿದ್ರು. ಆ ಹಳೆಯ ಘಟನೆಯು ಕಣ್ಣ ಮುಂದೆ ಬಂದಿದ್ದಲ್ಲದೆ. ಅಂಪೈರ್‌ಗಳು, ಅಫ್ಘಾನ್ ಆಟಗಾರರು ಮತ್ತು ಪಾಕಿಸ್ತಾನಿ ಬ್ಯಾಟರ್ ಎಂಟ್ರಿಯಿಂದ ಇಬ್ಬರು ದೂರ ಸರಿದರು.
ಆದ್ರೆ ಈ ಇಬ್ಬರು ಆಟಗಾರರ ವರ್ತನೆಯು ಐಸಿಸಿ ನಿಯಮಗಳನ್ನ ಮೀರಿದ್ದು, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಯಾವ ರೀತಿಯ ದಂಡ ವಿಧಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.
ಏಷ್ಯಾಕಪ್ 2022: ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಭಾರಿ ಬದಲಾವಣೆ

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಪಾಕಿಸ್ತಾನ ಪ್ಲೇಯಿಂಗ್ 11: ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಹಾರಿಸ್ ರೌಫ್, ಮೊಹಮ್ಮದ್ ಹಸ್ನೇನ್, ನಸೀಮ್ ಶಾ
ಅಫ್ಘಾನಿಸ್ತಾನ ಪ್ಲೇಯಿಂಗ್ 11: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಂ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ


Click it and Unblock the Notifications












