Asia Cup 2022 Super 4: ಅಫ್ಘಾನ್ vs ಪಾಕ್ ಟಾಸ್ ವರದಿ; ಆಡುವ 11ರ ಬಳಗ & ಲೈವ್ ಸ್ಕೋರ್

ಶಾರ್ಜಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ 2022ರ ಏಷ್ಯಾ ಕಪ್ ಸೂಪರ್-4ರ ನಿರ್ಣಾಯಕ ಹಣಾಹಣಿಯಲ್ಲಿ ಪಾಕಿಸ್ತಾನ ತಂಡವು ಅಫ್ಘಾನಿಸ್ತಾನವನ್ನು ಎದುರಿಸುತ್ತಿದೆ.
ಶಾರ್ಜಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ಮೊಹಮ್ಮದ್ ನಬಿ ನಾಯಕತ್ವದ ಅಫ್ಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್‌ಗೆ ಇಳಿಯಲಿದೆ.
ಬುಧವಾರ ದುಬೈನಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವು ಬಾಬರ್ ಅಜಂ ಮತ್ತು ತಂಡಕ್ಕೆ ಫೈನಲ್ ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ. ಏಕೆಂದರೆ ಈಗಾಗಲೇ ಭಾರತ ವಿರುದ್ಧ ತಮ್ಮ ಆರಂಭಿಕ ಪಂದ್ಯವನ್ನು ಪಾಕಿಸ್ತಾನ ಗೆದ್ದುಕೊಂಡಿದೆ.
ಅಫ್ಘಾನಿಸ್ತಾನವನ್ನು ಸೋಲಿಸಿ ಪಾಕಿಸ್ತಾನ ತಂಡ ತನ್ನ ಫೈನಲ್ ದಾರಿಯನ್ನು ಸುಗಮಗೊಳಿಸಲು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನ ಕೂಡ ಫೈನಲ್ ಹಾದಿಯನ್ನು ಜೀವಂತವಾಗಿರಿಸಿಕೊಳ್ಳಲು ಎದುರು ನೋಡುತ್ತಿದೆ. ಒಂದು ವೇಳೆ ಅಫ್ಘಾನಿಸ್ತಾನ ಸೋತರೆ ಏಷ್ಯಾ ಕಪ್‌ನಲ್ಲಿ ಅವರ ಪ್ರಯಾಣವನ್ನು ಕೊನೆಗೊಳಿಸಬೇಕಾಗುತ್ತದೆ. ಈಗಾಗಲೇ ತಮ್ಮ ಆರಂಭಿಕ ಸೂಪರ್-4 ಪಂದ್ಯವನ್ನು ಶ್ರೀಲಂಕಾ ವಿರುದ್ಧ ಸೋತಿದೆ.
ಇನ್ನು ಈಗಾಗಲೇ ಪಾಕಿಸ್ತಾನ ಮತ್ತು ಶ್ರೀಲಂಕಾದ ಗೆಲುವು ಭಾರತದ ಫೈನಲ್‌ಗೆ ತಲುಪುವ ಆಸೆಯನ್ನು ಕೊನೆಗೊಳಿಸಿವೆ. ಅಫ್ಘಾನಿಸ್ತಾನ ಇಂದು ಗೆಲ್ಲಲು ವಿಫಲವಾದರೆ ಭಾನುವಾರದ ಫೈನಲ್ ಸೇರಿದಂತೆ ಮೂರು ದಿನಗಳ ಅಂತರದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗಬಹುದು.
ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಂ ಮಾತನಾಡಿ, "ಇಬ್ಬನಿ ಅಂಶದಿಂದಾಗಿ ಮೊದಲು ಬೌಲಿಂಗ್ ಮಾಡಲು ಬಯಸುತ್ತೇವೆ. ತಂಡದಲ್ಲಿ ಎಲ್ಲರ ಮನಸ್ಥಿತಿ ತಂಪಾಗಿರುತ್ತದೆ ಮತ್ತು ಎಲ್ಲವೂ ಶಾಂತವಾಗಿದೆ ಮತ್ತು ಗೆಲುವಿನ ಆ ಆವೇಗವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಗೆಲ್ಲುವುದು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ನಾವು ಅದನ್ನೇ ಮುಂದುವರಿಸಲು ನೋಡುತ್ತಿದ್ದೇವೆ ಎಂದು ಹೇಳಿದರು. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ," ಎಂದು ಮಾಹಿತಿ ನೀಡಿದರು.
ಅಫ್ಘಾನಿಸ್ತಾನದ ನಾಯಕ ಮೊಹಮ್ಮದ್ ನಬಿ ಟಾಸ್ ಸೋತ ನಂತರ ಕೊಂಚ ನಿರಾಸೆ ಅನುಭವಿಸಿದರು. "ಇಬ್ಬನಿ ಅಂಶದಿಂದಾಗಿ ಅವರು ಮೊದಲು ಬೌಲಿಂಗ್ ಮಾಡಲು ಬಯಸಿದ್ದರು ಮತ್ತು ಸದ್ಯ ತಮ್ಮ ತಂಡದಿಂದ ಉತ್ತಮ ಸ್ಕೋರ್ ಹಾಕಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುವುದಾಗಿ," ಹೇಳಿದರು.
"ಪಾಕಿಸ್ತಾನ ಶಿಸ್ತಿನ ಬೌಲಿಂಗ್‌ನತ್ತ ಗಮನ ಹರಿಸುತ್ತಾರೆ ಎಂದ ನಬಿ, ಪಾಕಿಸ್ತಾನದ ವಿರುದ್ಧ ಇದು ಯಾವಾಗಲೂ ಕಠಿಣ ಆಟವಾಗಿದೆ ಮತ್ತು ಅವರು ತಮ್ಮ ವಿರುದ್ಧ ಉತ್ತಮ ಆಟಗಳನ್ನು ಆಡಿದ್ದಾರೆ ಎಂದು ಹೇಳಿದ್ದಾರೆ. ನಾವು ಹಿಂದಿನ ತಪ್ಪುಗಳನ್ನು ಪುನರಾವರ್ತಿಸಲು ಬಯಸುವುದಿಲ್ಲ ಮತ್ತು ಕೆಲಸಗಳನ್ನು ಉತ್ತಮವಾಗಿ ಮಾಡಲು ನೋಡುತ್ತೇವೆ ಎಂದು ಉಲ್ಲೇಖಿಸಿದ್ದಾರೆ. ನಾವು ಈ ಪಂದ್ಯದಲ್ಲಿ ಒಂದೆರಡು ಬದಲಾವಣೆಗಳನ್ನು ಹೊಂದಿರುವುದಾಗಿ ಹೇಳಿದ ಅವರು, ಸಮೀವುಲ್ಲಾ ಶಿನ್ವಾರಿ ಬದಲಿಗೆ ಅಜ್ಮತುಲ್ಲಾ ಒಮರ್ಜೈ ಆಡುವ 11ರ ಬಳಗಕ್ಕೆ ಮರಳುತ್ತಾರೆ ಮತ್ತು ನವೀನ್-ಉಲ್-ಹಕ್ ಬದಲಿಗೆ ಫರೀದ್ ಅಹ್ಮದ್ ಸ್ಥಾನ ಪಡೆದಿದ್ದಾರೆ," ಎಂದರು.
ಏಷ್ಯಾ ಕಪ್ ಸೂಪರ್-4ರ ಪಾಕಿಸ್ತಾನ ತಂಡದ ಆಡುವ 11ರ ಬಳಗ
ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಶ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ ಮತ್ತು ಮೊಹಮ್ಮದ್ ಹಸ್ನೇನ್.
ಏಷ್ಯಾ ಕಪ್ ಸೂಪರ್-4ರ ಅಫ್ಘಾನಿಸ್ತಾನ ತಂಡದ ಆಡುವ 11ರ ಬಳಗ
ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜೈ, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್, ಫಜಲ್ಹಕ್ ಫಾರೂಕಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications