Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

100ನೇ T20I ಪಂದ್ಯವನ್ನಾಡಿದ ಕೊಹ್ಲಿ: ರೋಹಿತ್, ರಾಹುಲ್, ಪಾಂಡ್ಯ, ಪಂತ್ ಪ್ರತಿಕ್ರಿಯೆ

Virat kohli and KL Rahul

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 100ನೇ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಲು ಸಕಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಕೊಹ್ಲಿ ಇಂದು 100ನೇ ಟಿ20 ಪಂದ್ಯವನ್ನಾಡುವ ಮೂಲಕ ಮೂರು ಫಾರ್ಮೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಹೀಗಾಗಿ ಕೊಹ್ಲಿಯ ಈ ವಿಶೇಷ ಸಾಧನೆಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಸಹ ಆಟಗಾರರಾದ ಎಬಿ ಡಿವಿಲಿಯರ್ಸ್, ಫಾಫ್ ಡುಪ್ಲೆಸಿಸ್ ಸೇರಿದಂತೆ ಅನೇಕ ಮಾಜಿ ಹಾಗೂ ಹಾಲಿ ಆಟಗಾರರು ಕೊಹ್ಲಿಗೆ ಶುಭ ಕೋರಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾ ಸಹ ಆಟಗಾರರಾದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಉಪನಾಯಕ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಐತಿಹಾಸಿಕ ಮೈಲಿಗಲ್ಲು ತಲುಪುತ್ತಿರುವ ಕೊಹ್ಲಿ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದು ಅಷ್ಟು ಸುಲಭವಾದ ಸಾಧನೆಯಲ್ಲ ಎಂದ ರೋಹಿತ್ ಶರ್ಮಾ

ಇದು ಅಷ್ಟು ಸುಲಭವಾದ ಸಾಧನೆಯಲ್ಲ ಎಂದ ರೋಹಿತ್ ಶರ್ಮಾ

ವಿರಾಟ್ ಕೊಹ್ಲಿ 100ನೇ ಟಿ20 ಪಂದ್ಯದ ಕುರಿತು ಮಾತನಾಡಿರ ರೋಹಿತ್ ಶರ್ಮಾ ಯಾವೊಬ್ಬ ಆಟಗಾರನೂ ಮೂರು ಫಾರ್ಮೆಟ್‌ನಲ್ಲಿ ದೇಶದ ಪರ ನೂರು ಪಂದ್ಯಗಳನ್ನ ಆಡುವುದು ಅಷ್ಟು ಸುಲಭವಾದ ಮಾತಲ್ಲ. ಇದು ನಿಜವಾಗಿಯೂ ಬಹುದೊಡ್ಡ ಮೈಲಿಗಲ್ಲು ಆಗಿದೆ. ಕೊಹ್ಲಿ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಆಗಿದ್ದು ಏಷ್ಯಾಕಪ್‌ನಲ್ಲಿಯೂ ಅವರ ಪ್ರದರ್ಶನ ಉತ್ತಮವಾಗಿರಲಿದೆ ಎಂದು ನಂಬುತ್ತೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಜೊತೆಗೆ ಕೊಹ್ಲಿಗೆ ಹಿಟ್‌ಮ್ಯಾನ್ ಶುಭ ಕೋರಿದ್ದಾರೆ.

ಕೊಹ್ಲಿಯ ಸಾಧನೆಗೆ ಮತ್ತೊಂದು ಗರಿ ಎಂದ ಸೂರ್ಯಕುಮಾರ್ ಯಾದವ್

ಕೊಹ್ಲಿಯ ಸಾಧನೆಗೆ ಮತ್ತೊಂದು ಗರಿ ಎಂದ ಸೂರ್ಯಕುಮಾರ್ ಯಾದವ್

ವಿರಾಟ್ ಕೊಹ್ಲಿಯ ಅನೇಕ ಸಾಧನೆಗಳ ಸಾಲಿಗೆ ಈ ನೂರು ಪಂದ್ಯಗಳ ಟಿ20 ಪಂದ್ಯದ ಮೈಲಿಗಲ್ಲು ಕೂಡ ಸೇರಿಕೊಳ್ಳಲಿದೆ ಎಂದು ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮಿಂಚಿನಂತೆ ಆಡುವ ಕೊಹ್ಲಿ ಹಾಗೆಯೇ ಮುಂದುವರಿಯಲಿ , ಯುವ ಆಟಗಾರರಿಗೆ ತಮ್ಮ ಅನುಭವವನ್ನ ಧಾರೆ ಎರೆಯಲಿ ಎಂದು ಸೂರ್ಯ ಹೇಳಿದ್ದಾನೆ.

Ind vs Pak: ಈ ವರ್ಷದ ಮೊದಲ T20I ಪಂದ್ಯವನ್ನಾಡಲಿರುವ ಕೆ.ಎಲ್ ರಾಹುಲ್!

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

ವಿರಾಟ್ ಹಲವು ವರ್ಷಗಳಿಂದ ಟೀಂ ಇಂಡಿಯಾಗೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಜೊತೆಗೆ ಯುವ ತಂಡವನ್ನ ಮುನ್ನಡೆಸುವ ಮೂಲಕ ತನ್ನ ಫಿಟ್ನೆಸ್ ಮೂಲಕ ಯುವ ಆಟಗಾರರಿಗೆ ಸ್ಫೂರ್ತಿ ತುಂಬಿದ್ದಾರೆ. ಕೊಹ್ಲಿ ತನ್ನ ಫಿಟ್ನೆಸ್ ಮೂಲಕ ಅನೇಕರಿಗೆ ರೋಲ್ ಮಾಡೆಲ್‌ ಆಗಿದ್ದು, ಈ ಸಾಧನೆ ಮಾಡುತ್ತಿರುವುದಕ್ಕೆ ಶುಭಾಶಯ ಎಂದು ಕೆ.ಎಲ್ ರಾಹುಲ್ ಶುಭಾಶಯ ತಿಳಿಸಿದ್ದಾರೆ.

IND vs PAK: ಪಂತ್, ಕಾರ್ತಿಕ್ ನಡುವಿನ ಆಯ್ಕೆ ಭಾರತಕ್ಕೆ ದೊಡ್ಡ ತಲೆನೋವು; ಚೇತೇಶ್ವರ ಪೂಜಾರ

ನನ್ನ ಪ್ರಕಾರ ಈ ಸಾಧನೆಯನ್ನ ಮತ್ಯಾವ ಕ್ರಿಕೆಟಿಗನು ಮಾಡುವುದಿಲ್ಲ: ಹಾರ್ದಿಕ್ ಪಾಂಡ್ಯ

ಮೂರು ಫಾರ್ಮೆಟ್‌ನಲ್ಲಿ ನೂರು ಪಂದ್ಯಗಳನ್ನ ಆಡುವುದನ್ನು ಮುಂದೆ ನೋಡಲು ಸಾಧ್ಯವಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಪ್ರಸ್ತುತ ಕ್ರಿಕೆಟ್ ಸಾಕಷ್ಟು ಸ್ಪರ್ಧಾತ್ಮಕವಾಗಿದ್ದು, ಸ್ಪರ್ಧೆ ಹೆಚ್ಚಾದಂತೆ ಆಟಗಾರರು ಮೂರು ಫಾರ್ಮೆಟ್‌ನಲ್ಲಿ ಆಡುವುದು ನಿಜಕ್ಕೂ ಕಷ್ಟಸಾಧ್ಯ. ಹೀಗಾಗಿ ಕೊಹ್ಲಿ ನಿಜಕ್ಕೂ ಬಹುದೊಡ್ಡ ಮೈಲಿಗಲ್ಲು ತಲುಪಿದ್ದಾರೆ ಎಂದು ಪಾಂಡ್ಯ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಪರಂಪರೆ: ರಿಷಭ್ ಪಂತ್

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಪರಂಪರೆ: ರಿಷಭ್ ಪಂತ್

ವಿರಾಟ್ ಕೊಹ್ಲಿ ಮೂರು ಫಾರ್ಮೆಟ್‌ನಲ್ಲಿ ನೂರು ಪಂದ್ಯವನ್ನಾಡಿದ್ದಾರೆ, 400, 500 ಪಂದ್ಯಗಳಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ. ಸಾಕಷ್ಟು ಪಂದ್ಯಗಳಲ್ಲಿ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಪ್ರತಿಯೊಬ್ಬ ಕ್ರಿಕೆಟಿಗನು ಸಹ ಕೊಹ್ಲಿ ಆಸು ಪಾಸಿನಲ್ಲಾದರೂ ತಲುಪಬೇಕು ಎಂದು ಬಯಸುವುದು ಸುಳ್ಳಲ್ಲ. ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಪರಂಪರೆಯಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತಾ, ಯುವ ಆಟಗಾರರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ ಎಂದು ವಿಕೆಟ್ ಕೀಪರ್ ರಿಷಬ್ ಪಂತ್ ಕೊಹ್ಲಿಯ ಮಹತ್ತರ ಸಾಧನೆಗೆ ಶುಭ ಕೋರಿದ್ದಾರೆ.

Story first published: Sunday, August 28, 2022, 20:42 [IST]
Other articles published on Aug 28, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+