For Quick Alerts
ALLOW NOTIFICATIONS  
For Daily Alerts
 

Ind vs Pak: ಈ ವರ್ಷದ ಮೊದಲ T20I ಪಂದ್ಯವನ್ನಾಡಲಿರುವ ಕೆ.ಎಲ್ ರಾಹುಲ್!

KL Rahul

ಏಷ್ಯಾ ಕಪ್ 2022 ಟೂರ್ನಿಯ ಭಾಗವಾಗಿ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕೆಲವೇ ಗಂಟೆಗಳಲ್ಲಿ ಪ್ರತಿಷ್ಠಿತ ಪಂದ್ಯವನ್ನು ಆಡಲಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ 7:30 ಕ್ಕೆ ಪಂದ್ಯ ಆರಂಭವಾಗಲಿದೆ.

ಟೀಂ ಇಂಡಿಯಾ ಪಾಳಯದಲ್ಲಿ ಖುಷಿ ವಿಚಾರ ಏನಂದ್ರೆ ಕೊರೊನಾ ವೈರಸ್‌ನಿಂದಾಗಿ ನಿನ್ನೆಯವರೆಗೆ ತಂಡದಿಂದ ದೂರವಿದ್ದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಲಭ್ಯರಾಗಿದ್ದಾರೆ. ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ವಿರಾಟ್ ಕೊಹ್ಲಿಗೆ 100ನೇ ಟಿ20 ಪಂದ್ಯ

ವಿರಾಟ್ ಕೊಹ್ಲಿಗೆ 100ನೇ ಟಿ20 ಪಂದ್ಯ

ವಿರಾಟ್‌ ಕೊಹ್ಲಿಗೆ ಇಂದು 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಇದರೊಂದಿಗೆ ಎಲ್ಲಾ ಮಾದರಿಗಳಲ್ಲಿ 100 ಪಂದ್ಯಗಳನ್ನು ಆಡಿದ ಏಕೈಕ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರು ಈಗಾಗಲೇ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ 100 ಪಂದ್ಯಗಳನ್ನು ಆಡಿದ್ದಾರೆ. ಇದುವರೆಗೆ ಕೊಹ್ಲಿ 99 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 3,308 ರನ್ ಗಳಿಸಿದ್ದಾರೆ. ಇದರಲ್ಲಿ 30 ಅರ್ಧ ಶತಕಗಳಿವೆ.

ಬ್ಯಾಟಿಂಗ್ ಸರಾಸರಿ 50.12. ಅವರು 137.66 ಸ್ಟ್ರೈಕ್ ರೇಟ್‌ನೊಂದಿಗೆ ಬೌಲರ್‌ಗಳ ಮೇಲೆ ದಾಳಿ ಮಾಡಿರುವ ಕೊಹ್ಲಿ, 50ಕ್ಕೂ ಹೆಚ್ಚು ಸರಾಸರಿ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ತನ್ನ ತಾಕತ್ತು ಪ್ರದರ್ಶಿಸಿದ್ದಾರೆ.

ಕೊಹ್ಲಿಯಂತೆ ಕೆ.ಎಲ್ ರಾಹುಲ್‌ಗೂ ವಿಶೇಷ ಪಂದ್ಯ

ಕೊಹ್ಲಿಯಂತೆ ಕೆ.ಎಲ್ ರಾಹುಲ್‌ಗೂ ವಿಶೇಷ ಪಂದ್ಯ

ವಿರಾಟ್ ಕೊಹ್ಲಿಯಂತೆ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರಿಗೂ ಈ ಪಂದ್ಯ ವಿಶೇಷವಾಗಿದೆ. ಅದೇನಂದ್ರೆ ಇದು ಈ ವರ್ಷದ ಅವರ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈ ವರ್ಷ ಇದುವರೆಗೆ ಒಂದೇ ಒಂದು ಟಿ20 ಅಂತರಾಷ್ಟ್ರೀಯ ಪಂದ್ಯವನ್ನ ಕೆ.ಎಲ್ ರಾಹುಲ್ ಆಡಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನ ಅಂತ್ಯದ ನಂತರ ಅವರು ಗಾಯಗೊಂಡರು.

ಕೆ.ಎಲ್ ರಾಹುಲ್‌ರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದರ ಪರಿಣಾಮವಾಗಿ ರಾಹುಲ್ ತಂಡವನ್ನ ಮುನ್ನಡೆಸಬೇಕಾಗಿತ್ತು. ಆದ್ರೆ ಸರಣಿ ಪ್ರಾರಂಭಕ್ಕೂ ಒಂದು ದಿನ ಮುಂಚೆ ರಾಹುಲ್ ತೊಡೆಸಂದು ನೋವಿನಿಂದ ಬಳಲಿದ ಪರಿಣಾಮ ಇಡೀ ಟೂರ್ನಿಯಿಂದಲೇ ಹೊರಬಿದ್ದರು. ಉನ್ನತ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದ ರಾಹುಲ್ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿ, ಜೊತೆಗೆ ಸುಮಾರು ಮೂರು ತಿಂಗಳ ಕಾಲ ವಿಶ್ರಾಂತಿ ಪಡೆದರು.

ಇದಾದ ಬಳಿಕ ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಪ್ರವಾಸಗಳಿಗೆ ಆಯ್ಕೆಯಾಗಿಲ್ಲ. ಕಳೆದ ವಾರ ಕೊನೆಗೊಂಡ ಜಿಂಬಾಬ್ವೆ ಸರಣಿಯೊಂದಿಗೆ ಅವರು ಪುನರಾಗಮನ ಮಾಡಿದರು. ಆದ್ರೆ ಇದು 50 ಓವರ್‌ಗಳ ಕ್ರಿಕೆಟ್‌ ಟೂರ್ನಿಯಾಗಿತ್ತು.

Ind vs Pak: ಭಾರತ ವಿರುದ್ಧ ಕಪ್ಪು ಬ್ಯಾಂಡ್ ಧರಿಸಿ ಆಡಲಿರುವ ಪಾಕ್ ಆಟಗಾರರು! ಕಾರಣ ಏನು?

ವರ್ಷದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನ ಎದುರಿಸಲಿದ್ದಾರೆ!

ವರ್ಷದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನ ಎದುರಿಸಲಿದ್ದಾರೆ!

ಇದೀಗ ಅವರು 2022ರ ಏಷ್ಯಾಕಪ್‌ನಲ್ಲಿ ಟಿ20 ಮಾದರಿಯ ಪಂದ್ಯಗಳನ್ನು ಆಡಲಿದ್ದಾರೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಜೊತೆಗೆ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ತೆರೆಯಲಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿನ ಕಳಪೆ ಪ್ರದರ್ಶನವೂ ಕಳವಳಕಾರಿಯಾಗಿದೆ. ಚುಟುಕು ಕ್ರಿಕೆಟ್‌ ಸ್ವರೂಪದಿಂದ ದೂರವಿರುವುದು..ವಿರಾಮದ ನಂತರ ಮೊದಲ ಪಂದ್ಯ ಪಾಕಿಸ್ತಾನದ ವಿರುದ್ಧ ಆಡುತ್ತಿರುವುದು ರಾಹುಲ್‌ಗೆ ನಿಜಕ್ಕೂ ಸವಾಲಾಗಿದೆ.

ಅಚ್ಚರಿಯಾದರೂ ನಿಜ!: 2018 ಮತ್ತು 2022ರ ಏಷ್ಯಾಕಪ್ ಟೂರ್ನಿಯ 4 ಕಾಕತಾಳೀಯ ಘಟನೆಗಳು!

8 ತಿಂಗಳಲ್ಲಿ 9 ಸರಣಿ ಮಿಸ್ ಮಾಡಿಕೊಂಡಿರುವ ಕೆ.ಎಲ್ ರಾಹುಲ್

8 ತಿಂಗಳಲ್ಲಿ 9 ಸರಣಿ ಮಿಸ್ ಮಾಡಿಕೊಂಡಿರುವ ಕೆ.ಎಲ್ ರಾಹುಲ್

ರಾಹುಲ್ ಇಂಜ್ಯುರಿಯಿಂದ ಸರಣಿ ಮಿಸ್‌ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಕಳೆದ 8 ತಿಂಗಳಲ್ಲಿ ಕೆ.ಎಲ್ ರಾಹುಲ್ 9 ಸರಣಿಯನ್ನು ಕಳೆದುಕೊಂಡಿದ್ದಾರೆ. ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಯನ್ನು ಕಳೆದುಕೊಂಡಿದ್ದಾರೆ. ಮಣಿಕಟ್ಟು ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನೂ ಕಳೆದುಕೊಂಡಿದ್ದರು. ಐಪಿಎಲ್ 15ನೇ ಸೀಸನ್‌ ಬಳಿಕ ದಕ್ಷಿಣ ಆಫ್ರಿಕಾ ಟಿ20, ಇಂಗ್ಲೆಂಡ್ ಹಾಗೂ ಐರ್ಲೆಂಡ್ ಸರಣಿಯಿಂದ ಹಿಂದೆ ಸರಿಯಬೇಕಾಯಿತು. ಜೊತೆಗೆ ವಿಂಡೀಸ್‌ನಲ್ಲಿ ಏಕದಿನ ಮತ್ತು ಟಿ20 ಸರಣಿಗೂ ಆಯ್ಕೆಯಾಗಲಿಲ್ಲ.

Story first published: Sunday, August 28, 2022, 17:27 [IST]
Other articles published on Aug 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+