For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಟೀಂ ಇಂಡಿಯಾ ಆಟಗಾರರು ತಲುಪಲಿರುವ ಮೈಲಿಗಲ್ಲುಗಳು

Team india

ನಾಲ್ಕು ವರ್ಷಗಳ ಬಳಿಕ ನಡೆಯಲಿರುವ ಏಷ್ಯಾಕಪ್ 2022ರ ಟೂರ್ನಿಗೆ ಕ್ಷಣಗಣನೆ ಶುರುವಾಗಿದ್ದು, ಟೀಂ ಇಂಡಿಯಾ ಆಟಗಾರರು ಮೈದಾನಕ್ಕಿಳಿಯಲು ಎದುರು ನೋಡುತ್ತಿದ್ದಾರೆ. ಆಗಸ್ಟ್‌ 27ರಿಂದ ಶನಿವಾರ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿವೆ.

ಟೀಂ ಇಂಡಿಯಾ ಏಷ್ಯಾಕಪ್ ಅಭಿಯಾನವನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪ್ರಾರಂಭಿಸಲಿದೆ. ಆಗಸ್ಟ್ 28ರಂದು ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಒಂದು ವರ್ಷದ ಬಳಿಕ ಭಾರತ-ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಕಳೆದ 2021ರ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು.

ಪಾಕಿಸ್ತಾನ ವಿರುದ್ಧ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ

ಪಾಕಿಸ್ತಾನ ವಿರುದ್ಧ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ

ಏಷ್ಯಾಕಪ್‌ನಲ್ಲಿ ಇದುವರೆಗೂ 14 ಬಾರಿ ಮುಖಾಮುಖಿಯಾಗಿರುವ ಉಭಯ ತಂಡಗಳಲ್ಲಿ ಪಾಕಿಸ್ತಾನ ಐದು ಬಾರಿಯಷ್ಟೇ ಭಾರತದ ವಿರುದ್ಧ ಯಶಸ್ವಿಯಾಗಿದ್ದು, ಟೀಂ ಇಂಡಿಯಾ 8 ಬಾರಿ ಗೆದ್ದಿದೆ. ಕಳೆದ ಎರಡು ಏಷ್ಯಾಕಪ್ ಚಾಂಪಿಯನ್‌ಶಿಪ್ ಗೆದ್ದಿರುವ ಬ್ಲೂ ಬಾಯ್ಸ್‌ ಮತ್ತೊಂದು ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಪಾಕಿಸ್ತಾನ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಗೆಲುವು ಸಾಧಿಸಿತು.

Ind vs Pak: ಪಾಕಿಸ್ತಾನದ ವಿಶೇಷ ಅಭಿಮಾನಿಯನ್ನ ಭೇಟಿ ಮಾಡಿದ ವಿರಾಟ್ ಕೊಹ್ಲಿ, ವೀಡಿಯೋ ವೈರಲ್

ಸೂರ್ಯಕುಮಾರ್ ಅಬ್ಬರಿಸಿದ್ರೆ ಟಿ20ಯಲ್ಲಿ ನಂಬರ್ 1 ಪಟ್ಟ

ಸೂರ್ಯಕುಮಾರ್ ಅಬ್ಬರಿಸಿದ್ರೆ ಟಿ20ಯಲ್ಲಿ ನಂಬರ್ 1 ಪಟ್ಟ

ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಈ ಟೂರ್ನಿಯಲ್ಲಿ ಮಿಂಚಿದರೆ, ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅನ್ನು ಟಿ20 ರ್ಯಾಂಕಿನಲ್ಲಿ ಹಿಂದಿಕ್ಕಿ ನಂಬರ್ 1 ರ್ಯಾಂಕ್‌ ಅನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬಹುದು. ಸೂರ್ಯಕುಮಾರ್ ಯಾದವ್ ಹೊರತಾಗಿ, ಏಷ್ಯಾಕಪ್ ಟೂರ್ನಿಗೂ ಮುನ್ನ ಭಾರತದ ಹಲವು ಆಟಗಾರರು ಹಲವು ಮೈಲಿಗಲ್ಲುಗಳನ್ನು ತಲುಪುವ ಅವಕಾಶವಿದೆ. ಈ ಟೂರ್ನಿಯಲ್ಲಿ ಯಾವ ಆಟಗಾರರು ಯಾವ ಮೈಲಿಗಲ್ಲುಗಳನ್ನು ಸಾಧಿಸಬಹುದು ಎಂಬುದನ್ನು ಮುಂದೆ ನೋಡಬಹುದು.

ಏಷ್ಯಾ ಕಪ್‌ 2022: ಬಾಬರ್ ಅಜಂ ಹಿಂದಿಕ್ಕಿ ನಂಬರ್ 1 ಸ್ಥಾನದ ಮೇಲೆ ಸೂರ್ಯಕುಮಾರ್ ಕಣ್ಣು

ಟೀಂ ಇಂಡಿಯಾ ಆಟಗಾರರು ತಲುಪಲಿರುವ ಮೈಲಿಗಲ್ಲುಗಳು

ಟೀಂ ಇಂಡಿಯಾ ಆಟಗಾರರು ತಲುಪಲಿರುವ ಮೈಲಿಗಲ್ಲುಗಳು

117 ರನ್: ರಿಷಬ್ ಪಂತ್ ಟಿ20ಯಲ್ಲಿ 1000 ರನ್ ಪೂರೈಸಲು ಇನ್ನೂ 117 ರನ್ ಅಗತ್ಯವಿದೆ.

335 ರನ್: ಕೆ.ಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2000 ರನ್ ಪೂರೈಸಲು 335 ರನ್‌ಗಳ ಅಂತರದಲ್ಲಿದ್ದಾರೆ.

166 ರನ್: ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1000 ರನ್ ಪೂರೈಸಲು ಹಾರ್ದಿಕ್ ಪಾಂಡ್ಯ ಇನ್ನೂ 166 ರನ್‌ಗಳ ಅಂತರದಲ್ಲಿದ್ದಾರೆ.

154 ರನ್: ಎಲ್ಲಾ ಟಿ20 ಪಂದ್ಯಗಳಿಂದ 7000 ರನ್ ಪೂರೈಸಲು ದಿನೇಶ್ ಕಾರ್ತಿಕ್‌ಗೆ ಇನ್ನೂ 154 ರನ್ ಅಗತ್ಯವಿದೆ. ಅವರು ಈ ಸಾಧನೆ ಮಾಡಿದ್ರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಂಎಸ್ ಧೋನಿ, ಶಿಖರ್ ಧವನ್ ಮತ್ತು ರಾಬಿನ್ ಉತ್ತಪ್ಪ ನಂತರ ಈ ಮೈಲಿಗಲ್ಲು ತಲುಪಿದ 7 ನೇ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ.

1 ವಿಕೆಟ್: ರವೀಂದ್ರ ಜಡೇಜಾ ಏಷ್ಯಾಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲು ಕೇವಲ ಒಂದು ವಿಕೆಟ್ ಬಾಕಿ ಉಳಿದಿದೆ. ಅವರು ಪ್ರಸ್ತುತ 22 ವಿಕೆಟ್‌ಗಳೊಂದಿಗೆ ಇರ್ಫಾನ್ ಪಠಾಣ್ (22) ಜೊತೆಗೆ ಏಷ್ಯಾ ಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿದ್ದಾರೆ.

115 ರನ್: ಸೂರ್ಯಕುಮಾರ್ ಯಾದವ್‌ಗೆ ಎಲ್ಲಾ ಟಿ20ಗಳಲ್ಲಿ 5000 ರನ್ ಪೂರೈಸಲು ಇನ್ನೂ 115 ರನ್‌ಗಳ ಅಗತ್ಯವಿದೆ.

Story first published: Friday, August 26, 2022, 20:24 [IST]
Other articles published on Aug 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+