ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ ಎನ್ನುವುದಕ್ಕೆ ಹಾಂಕಾಂಗ್ ಸರಿಯಾದ ಎದುರಾಳಿಯೇ ಅಲ್ಲ: ಗಂಭೀರ್

ಬುಧವಾರ ನಡೆದ ಏಷ್ಯಾಕಪ್‌ನಲ್ಲಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಹಾಗೂ ದಿಗ್ಗಜ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ. ದೀರ್ಘಕಾಲ ಕೆಟ್ಟ ಫಾರ್ಮ್‌ನಲ್ಲಿರುವ ಕೊಹ್ಲಿ 44 ಎಸೆತಗಳಲ್ಲಿ ಔಟಾಗದೆ 59 ರನ್ ಗಳಿಸಿದರು. ಇದರಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿವೆ.
134.09 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವಿರಾಟ್, ಆರಂಭದಲ್ಲಿ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿ, ನಂತರ ತನ್ನ ಸ್ಟ್ರೈಕ್‌ರೇಟ್ ಹೆಚ್ಚಿಸುತ್ತಾ ಹೋದರು. ಈ ಮೂಲಕ ಹಾಂಕಾಂಗ್ ವಿರುದ್ಧ ತನ್ನ ಉನ್ನತ ಫಾರ್ಮ್ ಅನ್ನು ಆಡುವ ಮೂಲಕ ಕೊಹ್ಲಿ ತನ್ನ ಪ್ರಮುಖ ಶಾಟ್‌ಗಳನ್ನ ಹೊಡೆಯುವಲ್ಲಿ ಯಶಸ್ವಿಯಾದ್ರು.
ಪಾಕಿಸ್ತಾನದ ವಿರುದ್ಧವೂ ಕೊಹ್ಲಿ ಉತ್ತಮ ಹೊಡೆತಗಳನ್ನು ಆಡಿದ್ದರು. ಹೀಗಾಗಿ ಈಗ ಕೊಹ್ಲಿ ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದಾರೆ ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. ಸತತ ಶತಕಗಳ ಮೂಲಕ ಅಮೋಘವಾಗಿದ್ದ ಕೊಹ್ಲಿ ಮತ್ತೊಮ್ಮೆ ಆ ಶ್ರೇಷ್ಠತೆಯನ್ನು ತಲುಪಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಆದರೆ ಕೊಹ್ಲಿ ಫಾರ್ಮ್‌ಗೆ ಮರಳಿದ್ದಾರೆ ಎಂಬುದನ್ನು ನೀವು ಖಚಿತಪಡಿಸಬಹುದೇ? ಎಂದು ಕೇಳಿದ ಪ್ರಶ್ನೆಗೆ ಅದನ್ನು ಈಗಲೇ ಹೇಳಲಾಗುವುದಿಲ್ಲ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

ಹಾಂಕಾಂಗ್ ವಿರುದ್ಧ ಕೊಹ್ಲಿ ಪ್ರದರ್ಶನ ಪರಿಗಣಿಸಲಾಗದು!
ಹಾಂಕಾಂಗ್ ವಿರುದ್ಧ ಕೊಹ್ಲಿ ಪ್ರದರ್ಶನದ ಆಧಾರದ ಮೇಲೆ ಕೊಹ್ಲಿಯ ಫಾರ್ಮ್ ಕಂಬ್ಯಾಕ್ ಅನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿದ್ದಾರೆ. "ವಿರಾಟ್ ಕೊಹ್ಲಿ ಅಥವಾ ಇತರ ಯಾವುದೇ ಆಟಗಾರನ ಕಂಬ್ಯಾಕ್ ಅನ್ನು ನಿರ್ಣಯಿಸಲು ಹಾಂಗ್ ಕಾಂಗ್ ಸರಿಯಾದ ಎದುರಾಳಿ ಅಲ್ಲ. ಆದರೆ ರನ್ ಗಳಿಸುವುದು ಮುಖ್ಯ. ಎದುರಾಳಿ ವಿರುದ್ಧ ಎಷ್ಟು ಹೊತ್ತು ಕ್ರೀಸ್‌ನಲ್ಲಿ ನಿಲ್ಲುತ್ತಾನೆ ಎಂಬುದೂ ಮುಖ್ಯ'' ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಹಾಂಕಾಂಗ್ ವಿರುದ್ಧದ ಪ್ರದರ್ಶನದಿಂದ ಕೊಹ್ಲಿ ತಮ್ಮ ಹಳೆಯ ಫಾರ್ಮ್ ಅನ್ನು ಮರಳಿ ಪಡೆದರೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ. ಮುಂಬರುವ ಪಂದ್ಯಗಳಲ್ಲಿ ಕೊಹ್ಲಿಯಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ದುರ್ಬಲ ಬೌಲರ್‌ಗಳ ವಿರುದ್ಧ ಹಾಂಕಾಂಗ್‌ನ ಪ್ರದರ್ಶನವನ್ನು ನಿರ್ಣಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಗಂಭೀರ್ ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ಒಂದೇ ಒಂದು ಶತಕ ಗಳಿಸಿಲ್ಲ.
Asia Cup 2022: ವಿರಾಟ್ ಕೊಹ್ಲಿ ಅಲ್ಲ, ಈತ 3ನೇ ಕ್ರಮಾಂಕದಲ್ಲಿ ಆಡಲಿ; ಗೌತಮ್ ಗಂಭೀರ್

ಹಳೆಯ ಆತ್ಮವಿಶ್ವಾಸ ಪ್ರದರ್ಶಿಸಿರುವ ವಿರಾಟ್ ಕೊಹ್ಲಿ
ಇತ್ತೀಚೆಗಷ್ಟೇ ಕ್ರಿಕೆಟ್‌ಗೆ ಮರಳಿರುವ ಕೊಹ್ಲಿ ಒಂದು ತಿಂಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದ ಬಳಿಕ ಇಷ್ಟರ ಮಟ್ಟಿಗೆ ತಮ್ಮ ಹಳೆಯ ಆತ್ಮಸ್ಥೈರ್ಯ ತೋರಿಸುತ್ತಿದ್ದಾರೆ. ಟಿ20 ವಿಶ್ವಕಪ್ ಬರುತ್ತಿರುವ ಹಿನ್ನೆಲೆಯಲ್ಲಿ ಕೊಹ್ಲಿ ಫಾರ್ಮ್‌ಗೆ ಮರಳುವುದು ಭಾರತಕ್ಕೆ ನಿರ್ಣಾಯಕವಾಗಿದೆ. ಅವರ ಪ್ರಸ್ತುತ ಪ್ರದರ್ಶನ ಭಾರತಕ್ಕೆ ಭರವಸೆ ಮೂಡಿಸಿದೆ. ಆದರೆ ಹಳೆಯ ಕೊಹ್ಲಿ ಮರಳಿದ್ದಾರೆ ಎಂದು ಖಚಿತವಾಗಿ ಹೇಳಲಾಗದಿದ್ದರೂ, ಕಳೆದೆರಡು ವರ್ಷದ ಪ್ರದರ್ಶನಗಳಿಗಿಂತ ಪ್ರಸ್ತುತ ಪ್ರದರ್ಶನವು ಉತ್ತಮವಾಗಿದೆ ಎಂದು ನಿರ್ಣಯಿಸಬಹುದು.
ಸೂರ್ಯಕುಮಾರ್ ಇನ್ನಿಂಗ್ಸ್ ನನ್ನನ್ನು ಬೆಚ್ಚಿಬೀಳಿಸಿದೆ ಎಂದ ವಿರಾಟ್ ಕೊಹ್ಲಿ: ವಿಶೇಷ ಸಂದರ್ಶನದ Video

ರಾಹುಲ್, ರೋಹಿತ್ ವೈಫಲ್ಯದ ನಡುವೆ ಕೊಹ್ಲಿ ಮಿಂಚು
ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಹಾಂಕಾಂಗ್ ವಿರುದ್ಧ ನಿರಾಸೆ ಅನುಭವಿಸಿದ ಸಂದರ್ಭದಲ್ಲಿ ಮಿಂಚಿದ ಕೊಹ್ಲಿಯನ್ನು ಗಂಭೀರ್ ಹೊಗಳಿದ್ದಾರೆ. '59 ರನ್ ಎಂದರೆ 59 ರನ್. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಿಗೆ ಅವಕಾಶವಿತ್ತು. ಆದರೆ ಕೊಹ್ಲಿ ಮಾತ್ರ ಅರ್ಧಶತಕ ಗಳಿಸಿದರು. ರೋಹಿತ್ ಮತ್ತು ರಾಹುಲ್ ಅವರಿಗೆ ಸಾಧ್ಯವಾಗಲಿಲ್ಲ.
ಕಠಿಣ ಪರಿಶ್ರಮದಿಂದ ಮಾತ್ರ ಕ್ರೀಸ್‌ನಲ್ಲಿ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯ. ಕೊಹ್ಲಿಗೆ ಈ ಇನ್ನಿಂಗ್ಸ್ ಅತ್ಯಗತ್ಯ. ಏಕೆಂದರೆ ಅವರು ವಿರಾಮದ ನಂತರ ಈ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಪಂದ್ಯದಲ್ಲಿ ಪೇಸ್ ಬೌಲರ್ ಗಳಿಗೆ ಪಿಚ್ ನಲ್ಲಿ ಹೆಚ್ಚಿನ ಬೆಂಬಲವಿತ್ತು. ಪಾಕಿಸ್ತಾನದ ಬೌಲರ್‌ಗಳೂ ಉತ್ತಮ ಪ್ರದರ್ಶನ ನೀಡಿದರು. ಆದರೆ ಹಾಂಕಾಂಗ್ ವಿರುದ್ಧ ಬೌಲರ್‌ಗಳು ದುರ್ಬಲರಾಗಿದ್ದರು. ಈಗ ಭಾರತವು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವನ್ನು ಎದುರಿಸಬೇಕಾಗಿದೆ. ಕೊಹ್ಲಿ ಇನ್ನೂ ಹೆಚ್ಚಿನ ಶ್ರೇಷ್ಠತೆಯೊಂದಿಗೆ ಆಡಲು ಸಾಧ್ಯವಾಗುತ್ತದೆ ಎಂದು ನಾವು ಆಶಿಸುತ್ತೇವೆ' ಎಂದು ಗಂಭೀರ್ ತನ್ನ ಮಾತಿಗೆ ಸೇರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications