ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಇನ್ನಿಂಗ್ಸ್ ನನ್ನನ್ನು ಬೆಚ್ಚಿಬೀಳಿಸಿದೆ ಎಂದ ವಿರಾಟ್ ಕೊಹ್ಲಿ: ವಿಶೇಷ ಸಂದರ್ಶನದ Video

Suryakumar yadav and kohli

ಬುಧವಾರ ಹಾಂಕಾಂಗ್ ತಂಡವನ್ನು 40 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ತಂಡ ಏಷ್ಯಾಕಪ್‌ನ ಸೂಪರ್ 4 ಹಂತವನ್ನು ತಲುಪಿದೆ. 26 ಎಸೆತಗಳಲ್ಲಿ 68 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದ ಸೂರ್ಯಕುಮಾರ್ ಯಾದವ್ ಭಾರತದ ಗೆಲುವನ್ನು ಸುಲಭವಾಗಿಸಿದರು.

ವಿರಾಟ್ ಕೊಹ್ಲಿ ಜೊತೆಗೆ ಮೂರನೇ ವಿಕೆಟ್‌ಗೆ ಅದ್ಭುತ ಜೊತೆಯಾಟವಾಡಿದ ಸೂರ್ಯಕುಮಾರ್, ಮೈದಾನದ ಮೂಲೆ ಮೂಲೆಗೆ ಚೆಂಡನ್ನ ದಾಟಿಸಿದ್ರು. ಕೊಹ್ಲಿ ಜೊತೆಗೆ 98 ರನ್ ಗಳ ಜೊತೆಯಾಟವನ್ನು ಹಂಚಿಕೊಂಡರು. ಸೂರ್ಯನ ಇನ್ನಿಂಗ್ಸ್‌ ನೋಡಿ ಕೊಹ್ಲಿ ತಲೆಬಾಗಿ ನಮಸ್ಕರಿಸಿದ್ದು ಕಂಡುಬಂದಿತು.

ಟೀಂ ಇಂಡಿಯಾ ಗೆಲುವಿನ ಬಳಿಕ ಅಜೇಯ ಅರ್ಧಶತಕ ದಾಖಲಿಸಿದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಪರಸ್ಪರ ಸಂವಹನ ನಡೆಸಿರುವ ವೀಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಪೇಜ್‌ನಲ್ಲಿ ಹರಿಬಿಟ್ಟಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಸಂದರ್ಶಿಸಲು ಸಾಧ್ಯವಾಗಿರುವುದು ಗೌರವ ಎಂದು ವಿರಾಟ್ ಹೇಳಿದ್ದಾರೆ.

ಐಪಿಎಲ್‌ನಲ್ಲಷ್ಟೇ ನಿಮ್ಮ ಇಂತಹ ಅದ್ಭುತ ಇನ್ನಿಂಗ್ಸ್ ನೋಡಿದ್ದೆನು ಎಂದ ಕೊಹ್ಲಿ

ಐಪಿಎಲ್‌ನಲ್ಲಷ್ಟೇ ನಿಮ್ಮ ಇಂತಹ ಅದ್ಭುತ ಇನ್ನಿಂಗ್ಸ್ ನೋಡಿದ್ದೆನು ಎಂದ ಕೊಹ್ಲಿ

ಸೂರ್ಯಕುಮಾರ್ ಜೊತೆಗೆ ಮಾತನಾಡಿರುವ ವೀಡಿಯೋದಲ್ಲಿ ವಿರಾಟ್ ಕೊಹ್ಲಿ, ಇನ್ನೊಂದು ತುದಿಯಲ್ಲಿ ನಿಂತು ನಾನು ನಿಮ್ಮ ಬ್ಯಾಟಿಂಗ್ ಅನ್ನು ಸಂಪೂರ್ಣವಾಗಿ ಆನಂದಿಸಿದೆ ಎಂದು ಹೇಳಿದ್ದಾರೆ. ಪಿಚ್ ನೀವು ತೋರಿಸಿದಷ್ಟು ಸುಲಭವಾಗಿರದಿದ್ರೂ, ನೀವು ಬಂದು ಇಡೀ ಆಟವನ್ನು ಬದಲಾಯಿಸಿದ್ದೀರಿ ಎಂದು ಕೊಹ್ಲಿ ಹೊಗಳಿದ್ದಾರೆ.

ನೀವು ನಮ್ಮ ವಿರುದ್ಧ ಆಡಿದ ಇಂಡಿಯನ್ ಪ್ರೀಮಿಯರ್ ಲೀಗ್‌ ಪಂದ್ಯಗಳಲ್ಲಿ ನಾನು ದೂರದಿಂದ ಇಂತಹ ಇನ್ನಿಂಗ್ಸ್‌ಗಳನ್ನು ನೋಡಿದ್ದೇನೆ. ಆದರೆ ನಾನು ಅಂತಹ ಇನ್ನಿಂಗ್ಸ್ ಅನ್ನು ಇಷ್ಟು ಹತ್ತಿರದಿಂದ ನೋಡುತ್ತಿರುವುದು ಇದೇ ಮೊದಲು. ಈ ಇನ್ನಿಂಗ್ಸ್ ನನ್ನನ್ನು ಸಂಪೂರ್ಣವಾಗಿ ಬೆಚ್ಚಿಬೀಳಿಸಿದೆ ಎಂದು ವಿರಾಟ್ ಹೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಇಬ್ಬರಾದ್ರೂ ಪ್ರಮುಖ ಬೌಲರ್‌ಗಳಿದ್ದಾರೆ, ನಿಮ್ಮ ಬಳಿ ಯಾರಿದ್ದಾರೆ? ಲಂಕಾಗೆ ಮಾತಿನ ತಿರುಗೇಟು

ಕೊಹ್ಲಿ ಜೊತೆಗೆ ಬ್ಯಾಟಿಂಗ್ ಮಾಡಲು ಎಂಜಾಯ್ ಮಾಡುತ್ತೇನೆ!

ಕೊಹ್ಲಿ ಜೊತೆಗೆ ಬ್ಯಾಟಿಂಗ್ ಮಾಡಲು ಎಂಜಾಯ್ ಮಾಡುತ್ತೇನೆ!

ಈ ವೇಳೆ ಸೂರ್ಯಕುಮಾರ್ ಯಾದವ್ ಅವರು ತಮ್ಮ ರನ್ ಸ್ಕೋರಿಂಗ್ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಾ, ನಾನು ಈಗಾಗಲೇ ಮೈಂಡ್ ಸೆಟ್‌ನೊಂದಿಗೆ ಬಂದಿದ್ದೇನೆ ಮತ್ತು ರನ್ ಗಳಿಸುವ ವಿಶ್ವಾಸ ಹೊಂದಿದ್ದೇನೆ ಎಂದು ಹೇಳಿದರು. ಮೊದಲನೆಯದಾಗಿ ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡುವುದನ್ನು ಎಂಜಾಯ್ ಮಾಡಿದ್ದೇನೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ನಾವು ಡ್ರೆಸ್ಸಿಂಗ್ ರೂಂನಲ್ಲಿ ಕುಳಿತಾಗ, ನಾನು ಮತ್ತು ರಿಷಬ್ ಪಂತ್ ವಿಕೆಟ್ ಸ್ವಲ್ಪ ನಿಧಾನವಾಗಿರುವುದರಿಂದ ನಾವು ಆಟವನ್ನು ಹೇಗೆ ಮುಂದುವರಿಸಬಹುದು ಎಂದು ನಮ್ಮ ನಡುವೆ ಮಾತನಾಡಿಕೊಳ್ಳುತ್ತಿದ್ದೆವು. ನಾನು ಬ್ಯಾಟಿಂಗ್‌ಗೆ ಬಂದಾಗ, ನಾನು ಇಷ್ಟಪಡುವದನ್ನು ಮಾಡಿದೆ. ಹಾಗಾಗಿ ನನ್ನ ಯೋಜನೆ ಸರಳವಾಗಿತ್ತು. ಆ ಸಮಯದಲ್ಲಿ ನಾನು ಮೂರು-ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ಬ್ಯಾಟಿಂಗ್ ಮುಂದುವರಿಸಲು ಬಯಸಿದ್ದೆ ಎಂದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ ರೋಹಿತ್, ಕೊಹ್ಲಿ: ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌

ವಿರಾಟ್ ಒಂದು ಬದಿಯಲ್ಲಿ ಸ್ಥಿರವಾಗಿ ನಿಲ್ಲದಿದ್ರೆ, ಈ ಇನ್ನಿಂಗ್ಸ್‌ ಹೊರಬರುತ್ತಿರಲಿಲ್ಲ!

ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿಯ ಇನ್ನಿಂಗ್ಸ್‌ನ ಮಹತ್ವವನ್ನು ವಿವರಿಸುದ್ದಾರೆ. ವಿರಾಟ್ ಕೊಹ್ಲಿ ಒಂದು ತುದಿಯಲ್ಲಿ ನಿಲ್ಲದಿದ್ದರೆ, ಅದು ಅವರಿಗೆ ಅಷ್ಟು ಸುಲಭವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ನೀವು ಒಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ನಂತರ ರನ್ ಗಳಿಸುವುದು ನನಗೆ ಸುಲಭವಾಗುತ್ತದ. ಏಕೆಂದರೆ ನೀವು 30 ರಿಂದ 35 ಎಸೆತಗಳನ್ನು ಆಡುವಾಗ ಮತ್ತು ನಂತರದ 10 ಎಸೆತಗಳಲ್ಲಿ 200-250 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡುವಾಗ ನಾನು ಹಲವಾರು ಬಾರಿ ನೋಡಿದ್ದೇನೆ. ಹಾಗಾಗಿ ನಿಮ್ಮೊಂದಿಗೆ ಬ್ಯಾಟ್ ಮಾಡುವುದು ತುಂಬಾ ಚೆನ್ನಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರು ಸಿಕ್ಸರ್‌ಗಳನ್ನು ಏಕೆ ಬಾರಿಸಲಿಲ್ಲ ಎಂದು ಕೊಹ್ಲಿ ಪ್ರಶ್ನೆ

ಆರು ಸಿಕ್ಸರ್‌ಗಳನ್ನು ಏಕೆ ಬಾರಿಸಲಿಲ್ಲ ಎಂದು ಕೊಹ್ಲಿ ಪ್ರಶ್ನೆ

ಕೊನೆಗೆ ಕೊಹ್ಲಿ ಕೂಡ ಸೂರ್ಯಕುಮಾರ್ ಯಾದವ್ ಜೊತೆ ಹಾಸ್ಯ ಚಟಾಕಿ ಹಾರಿಸಿದ್ದು, ಕೊನೆಯ ಓವರ್ ನಲ್ಲಿ ಸೂರ್ಯ ಕುಮಾರ್ 4 ಸಿಕ್ಸರ್ ಬಾರಿಸಿದರೂ ಯುವರಾಜ್ ದಾಖಲೆಯನ್ನು ಏಕೆ ಮುರಿಯಲು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ..

ಸೂರ್ಯ ಯಾದವ್ ಸ್ವಲ್ಪ ನಗುತ್ತಾ'' ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ ಆದರೆ ನಾವು ಯುವಿ ಪಾ ಅವರನ್ನು ಹಿಂದಿಕ್ಕಲು ಪ್ರಯತ್ನಿಸಬಾರದು'' ಎಂದು ಹೇಳಿದರು. ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದ ಭಾರತದ ಮೊದಲ ಮತ್ತು ಏಕೈಕ ಆಟಗಾರ ಯುವರಾಜ್ ಸಿಂಗ್ ಆಗಿದ್ದಾರೆ.

Story first published: Thursday, September 1, 2022, 19:59 [IST]
Other articles published on Sep 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X