IND vs PAK: 'ಮೊದಲು ನಿಮ್ಮ ಅಂತಿಮ 11ರ ಬಳಗ ಕಂಡುಕೊಳ್ಳಿ'; ಭಾರತ ತಂಡದ ಆಯ್ಕೆ ಪ್ರಶ್ನಿಸಿದ ಅಖ್ತರ್

ಭಾನುವಾರದಂದು ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್‌ನ ಸೂಪರ್ 4ರ ಪಂದ್ಯ ಸೋತ ನಂತರ ಭಾರತ ತಂಡವು ಮೊದಲು ಆಡುವ ಅಂತಿಮ 11ರ ಬಳಗ ಕಂಡುಕೊಳ್ಳುವಂತೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಒತ್ತಾಯಿಸಿದ್ದಾರೆ.
2022ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ಐದು ವಿಕೆಟ್‌ಗಳ ಜಯ ಸಾಧಿಸುವುದರೊಂದಿಗೆ ಸಾಂಪ್ರದಾಯಿಕ ಎದುರಾಳಿಗಳು ತಲಾ ಒಂದು ಪಂದ್ಯ ಗೆದ್ದಂತಾಗಿದೆ. ಗ್ರೂಪ್ ಹಂತದಲ್ಲಿ ಭಾರತ ಐದು ವಿಕೆಟ್‌ಗಳ ಗೆಲುವು ಸಾಧಿಸಿತ್ತು.
ಕಳೆದ ಕೆಲವು ತಿಂಗಳುಗಳಿಂದ ಭಾರತವು ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡದಲ್ಲಿ ವಿಭಿನ್ನ ಸಂಯೋಜನೆಗಳು ಮತ್ತು ಆಟಗಾರರನ್ನು ಪ್ರಯತ್ನಿಸುತ್ತಿದೆ. ಇಶಾನ್ ಕಿಶನ್, ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಆರಂಭಿಕರಾಗಿ ಬಳಸಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರನ್ನು ಮಧ್ಯಮ ಕ್ರಮಾಂಕದಲ್ಲಿ ಬಳಸಿಕೊಳ್ಳಲಾಗಿದೆ, ಬೌಲಿಂಗ್ ಲೈನ್‌ಅಪ್‌ನಲ್ಲಿಯೂ ಹೆಚ್ಚಿನ ಬದಲಾವಣೆಗಳು ಸಂಭವಿಸುತ್ತಿವೆ. ವಿಶ್ವಕಪ್‌ಗಾಗಿ ಭಾರತ ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲಿರುವ ಅಂತಿಮ ತಂಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿವೆ.

ದಿನೇಶ್ ಕಾರ್ತಿಕ್ ಅವರನ್ನು ದೀಪಕ್ ಹೂಡಾಗಾಗಿ ಕೈಬಿಡಲಾಯಿತು
ಏಷ್ಯಾ ಕಪ್‌ನ ಭಾನುವಾರದ ಪಂದ್ಯದಲ್ಲಿಯೂ ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಟಿ20 ಸೆಟಪ್‌ಗೆ ಫಿನಿಶರ್ ಆಗಿ ಕರೆತರಲಾದ ದಿನೇಶ್ ಕಾರ್ತಿಕ್ ಅವರನ್ನು ದೀಪಕ್ ಹೂಡಾಗಾಗಿ ಕೈಬಿಡಲಾಯಿತು. ಆದರೆ ರವಿ ಬಿಷ್ಣೋಯ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಅವೇಶ್ ಖಾನ್ ಮತ್ತು ಗಾಯಗೊಂಡ ರವೀಂದ್ರ ಜಡೇಜಾ ಬದಲಿಗೆ ಬಂದರು.
ಭಾನುವಾರದ ಪಂದ್ಯದ ನಂತರ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, "ಭಾರತವು ತಮ್ಮ ಅಂತಿಮ ಆಡುವ ಹನ್ನೊಂದರ ಬಳಗವನ್ನು ಕಂಡುಕೊಳ್ಳಬೇಕು ಮತ್ತು ಮುಂದೆ ಯಾವ ಆಟಗಾರರು ತಂಡದ ಭವಿಷ್ಯವನ್ನು ನಿರ್ಧರಿಸಬೇಕೆಂದು ಯೋಚಿಸಬೇಕು ಎಂದು ಹೇಳಿದರು. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಆಯ್ಕೆಯನ್ನು ಕಟುವಾಗಿ ಟೀಕಿಸಿದ ಶೋಯೆಬ್ ಅಖ್ತರ್, ಅಂತಿಮ ಹನ್ನೊಂದರ ಬಳಗದ ಬಗ್ಗೆ ಏಕೆ ಗೊಂದಲವಿದೆ ಎಂದು ನನಗೆ ಅರ್ಥವಾಗುತ್ತಿಲ್ಲ," ಎಂದು ತಿಳಿಸಿದರು.

ಏಕೆ ಇಷ್ಟೊಂದು ಗೊಂದಲವಿದೆ ಎಂದು ನನಗೆ ತಿಳಿದಿಲ್ಲ
"ಭಾರತವು ತನ್ನ ಅಂತಿಮ ಆಡುವ ಹನ್ನೊಂದರ ಬಳಗ ಯಾವುದಾಗಿರಬೇಕು ಎಂಬುದನ್ನು ನಿರ್ಧರಿಸಬೇಕು. ನಿಮ್ಮ ಭವಿಷ್ಯ ಯಾರು ಎಂದರೆ ಅದು ರಿಷಭ್ ಪಂತ್, ದಿನೇಶ್ ಕಾರ್ತಿಕ್, ದೀಪಕ್ ಹೂಡಾ ಅಥವಾ ರವಿ ಬಿಷ್ಣೋಯ್. ಮೊದಲು ನಿಮ್ಮನ್ನು ಅಂತಿಮ ಹನ್ನೊಂದರ ಬಳಗವನ್ನು ಹುಡುಕಿ. ಏಕೆಂದರೆ ಇದು ಭಾರತದಿಂದ ಗೊಂದಲಮಯ ಆಯ್ಕೆಯಾಗಿದೆ ಮತ್ತು ಏಕೆ ಇಷ್ಟೊಂದು ಗೊಂದಲವಿದೆ ಎಂದು ನನಗೆ ತಿಳಿದಿಲ್ಲ," ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟರು.
ಭಾರತವು ಸೆಪ್ಟೆಂಬರ್ 6ರಂದು ತನ್ನ ಮುಂದಿನ ಸೂಪರ್ 4ರ ಹಣಾಹಣಿಯಲ್ಲಿ ಶ್ರೀಲಂಕಾವನ್ನು ಎದುರಿಸುವಾಗ ಏಷ್ಯಾ ಕಪ್‌ನಲ್ಲಿ ಪುಟಿದೇಳುವ ಗುರಿಯನ್ನು ಹೊಂದಿದೆ.

ಏಷ್ಯಾ ಕಪ್‌ಗಾಗಿ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯುಜ್ವೇಂದ್ರ ಚಹಾಲ್, ಅರ್ಶ್‌ದೀಪ್ ಸಿಂಗ್, ದೀಪಕ್ ಹೂಡಾ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್.
ಸ್ಟ್ಯಾಂಡ್‌ಬೈ ಆಟಗಾರರು: ದೀಪಕ್ ಚಹಾರ್, ಶ್ರೇಯಸ್ ಅಯ್ಯರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications