Pakistan Sqaud For Asian Games 2023: ಏಷ್ಯನ್ ಗೇಮ್ಸ್‌ಗಾಗಿ ಪಾಕ್ ತಂಡ ಪ್ರಕಟ; ಪ್ರಮುಖ ಆಟಗಾರರಿಗೆ ಕೋಕ್
2022ರ ಏಷ್ಯನ್ ಗೇಮ್ಸ್ ಕ್ರೀಡಾಕೂಟವು 2023ರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ.
ಮುಂಬರುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 15 ಜನರ ಪಾಕಿಸ್ತಾನ ತಂಡವನ್ನು ಪ್ರಕಟಿಸಿದೆ.

ಬಾಬರ್ ಅಜಂ, ಶಾಹೀನ್ ಶಾ ಆಫ್ರಿದಿ, ಮೊಹಮ್ಮದ್ ರಿಜ್ವಾನ್ ಸೇರಿದಂತೆ ದೊಡ್ಡ ಆಟಗಾರರ ಹೆಸರುಗಳನ್ನು ಕೈಬಿಡಲಾಗಿದೆ. ಏಕೆಂದರೆ ಈ ಕ್ರಿಕೆಟಿಗರು ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವಿನಿತ್ತ ಗಮನಹರಿಸಲಿದ್ದಾರೆ.
ಈ ಬಾರಿಯ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದೆ. ಗಮನಾರ್ಹವಾಗಿ, ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸುವ ಮೊದಲೇ ಭಾರತವು ತನ್ನ ತಂಡವನ್ನು ಘೋಷಿಸಿತ್ತು. ಭಾರತ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದಾರೆ.
ಇನ್ನು ಏಷ್ಯನ್ ಗೇಮ್ಸ್‌ಗೆ ತೆರಳಲಿರುವ ಪಾಕಿಸ್ತಾನ ತಂಡದ ನಾಯಕನಾಗಿ ಆಲ್‌ರೌಂಡರ್ ಖಾಸಿಮ್ ಅಕ್ರಮ್ ಅವರನ್ನು ಪಿಸಿಬಿ ನೇಮಿಸಿದೆ. ಕ್ರಿಕೆಟ್ ಪಂದ್ಯಾವಳಿಯನ್ನು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 7ರವರೆಗೆ ಆಡಿಸಲು ನಿರ್ಧರಿಸಲಾಗಿದೆ.
ಕೇವಲ 20 ವರ್ಷದ ಖಾಸಿಮ್ ಅಕ್ರಮ್ ಪಾಕಿಸ್ತಾನದ ಪರ 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ ಮತ್ತು 40 ಟಿ20 ಪಂದ್ಯಗಳನ್ನು ಸಹ ಆಡಿದ್ದಾರೆ. ಏಷ್ಯನ್ ಗೇಮ್ಸ್ ಕೂಡ ಟಿ20 ಮಾದರಿಯಲ್ಲಿ ನಡೆಯಲಿದೆ. ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಎಂಟು ಆಟಗಾರರಿದ್ದಾರೆ.
ಅವರುಗಳೆಂದರೆ ಅಮೀರ್ ಜಮಾಲ್ (2 ಟಿ20 ಪಂದ್ಯ), ಅರ್ಷದ್ ಇಕ್ಬಾಲ್ (1 ಟಿ20 ಪಂದ್ಯ), ಆಸಿಫ್ ಅಲಿ (21 ಏಕದಿನ ಮತ್ತು 55 ಟಿ20 ಪಂದ್ಯ), ಹೈದರ್ ಅಲಿ (2 ಏಕದಿನ, 33 ಟಿ20 ಪಂದ್ಯ), ಖುಷ್ದಿಲ್ ಶಾ (10 ಏಕದಿನ ಮತ್ತು 24 ಟಿ20 ಪಂದ್ಯ), ಮೊಹಮ್ಮದ್ ಹಸ್ನೈನ್ (9 ಏಕದಿನ ಮತ್ತು 27 ಟಿ20 ಪಂದ್ಯ), ಶಹನವಾಜ್ ದಹಾನಿ (2 ಏಕದಿನ ಮತ್ತು 11 T20 ಪಂದ್ಯ) ಮತ್ತು ಉಸ್ಮಾನ್ ಖಾದಿರ್ (1 ಏಕದಿನ ಮತ್ತು 23 ಟಿ20 ಪಂದ್ಯ).
ಈ ಎಂಟು ಆಟಗಾರರು ಇತ್ತೀಚೆಗೆ ಮುಕ್ತಾಯಗೊಂಡ 2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿ ಗೆದ್ದ ಪಾಕಿಸ್ತಾನ ತಂಡದಲ್ಲಿ ಆಡಿದವರಾಗಿದ್ದಾರೆ.
ಭಾರತ ತಂಡದಂತೆಯೇ ಪಾಕಿಸ್ತಾನ ತಂಡವೂ ಅಕ್ಟೋಬರ್ 3 ಮತ್ತು 4ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ಗೆ ನೇರವಾಗಿ ಪ್ರವೇಶ ಪಡೆದಿದೆ ಎಂಬುದು ಗಮನಾರ್ಹ. ಸೆಮಿಫೈನಲ್ ಅಕ್ಟೋಬರ್ 6ರಂದು ನಡೆಯಲಿದ್ದರೆ, ಫೈನಲ್ ಪಂದ್ಯ ಅಕ್ಟೋಬರ್ 7ರಂದು ನಡೆಯಲಿದೆ.
ಅದೇ ಅಕ್ಟೋಬರ್ 7ರ ಶನಿವಾರದಂದು ಕಂಚಿನ ಪದಕಕ್ಕಾಗಿ ಪಂದ್ಯವೂ ನಡೆಯಲಿದೆ. ಕಳೆದ ಬಾರಿ 2010ರಲ್ಲಿ ಏಷ್ಯನ್ ಗೇಮ್ಸ್‌ನ ಭಾಗವಾಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಕಂಚಿನ ಪದಕ ಗೆದ್ದಿತ್ತು.
ಶಾಹಿದ್ ಅಸ್ಲಂ ಅವರನ್ನು ತಂಡದ ಮುಖ್ಯ ಕೋಚ್ ಮತ್ತು ಮ್ಯಾನೇಜರ್ ಎಂದು ನೇಮಕ ಮಾಡಲಾಗಿದ್ದು, ಉಮರ್ ರಶೀದ್ ಬೌಲಿಂಗ್ ಕೋಚ್ ಮತ್ತು ಹನೀಫ್ ಮಲಿಕ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.
2023ರ ಏಷ್ಯನ್ ಗೇಮ್ಸ್‌ಗಾಗಿ ಪಾಕಿಸ್ತಾನ ತಂಡ
ಖಾಸಿಮ್ ಅಕ್ರಮ್ (ನಾಯಕ), ಒಮೈರ್ ಬಿನ್ ಯೂಸುಫ್ (ಉಪನಾಯಕ), ಅಮೀರ್ ಜಮಾಲ್, ಅರಾಫತ್ ಮಿನ್ಹಾಸ್, ಅರ್ಷದ್ ಇಕ್ಬಾಲ್, ಆಸಿಫ್ ಅಲಿ, ಹೈದರ್ ಅಲಿ, ಖುಷ್ದಿಲ್ ಶಾ, ಮಿರ್ಜಾ ತಾಹಿರ್ ಬೇಗ್, ಮೊಹಮ್ಮದ್ ಹಸ್ನೈನ್, ಮುಹಮ್ಮದ್ ಅಖ್ಲಾಕ್ (ವಿಕೆಟ್ ಕೀಪರ್), ರೋಹೈಲ್ ನಜೀರ್, ಶಾನವಾಜ್ ದಹಾನಿ, ಸುಫಿಯಾನ್ ಮುಖೀಮ್ ಮತ್ತು ಉಸ್ಮಾನ್ ಖಾದಿರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications