Aus vs SL 2nd Test: ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ ಮತ್ತು 39 ರನ್‌ಗಳ ಗೆಲುವು ಸಾಧಿಸಿದ ಶ್ರೀಲಂಕಾ

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಶ್ರೀಲಂಕಾ ಇನ್ನಿಂಗ್ಸ್ ಸೇರಿದಂತೆ 39 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 554 ರನ್‌ಗಳ ಬೃಹತ್ ರನ್ ಕಲೆಹಾಕಿದ್ದ ಲಂಕಾಗೆ ಉತ್ತರವಾಗಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಕೇವಲ 154ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಎದುರಿಸಿತು.
ಶ್ರೀಲಂಕಾದ ಸ್ಪಿನ್ನರ್ ಪ್ರಬತ್ ಜಯಸೂರ್ಯ ದಾಳಿಗೆ ನಲುಗಿದ ಆಸಿಸ್ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ರು. ಚೊಚ್ಚಲ ಪಂದ್ಯದಲ್ಲಿ 12 ವಿಕೆಟ್ ಕಬಳಿಸಿದ ಜಯಸೂರ್ಯ ತಂಡದ ಹೀರೋ ಆಗಿ ಮಿಂಚಿದ್ದು, ಶ್ರೀಲಂಕಾ ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನ 1-1ರಿಂದ ಸಮಬಲಗೊಳಿಸಿದೆ.

ದ್ವಿಶತಕ ಸಿಡಿಸಿ ಅಬ್ಬರಿಸಿದ ದಿನೇಶ್ ಚಾಂಡಿಮಲ್
ಶ್ರೀಲಂಕಾ ಪರ ಅಜೇಯ ಶತಕ ಸಿಡಿಸಿ ನಾಲ್ಕನೇ ದಿನದಾಟ ಕಾಯ್ದುಕೊಂಡಿದ್ದ ದಿನೇಶ್ ಚಾಂಡಿಮಲ್ ಅದ್ಭುತ ಇನ್ನಿಂಗ್ಸ್ ಪ್ರದರ್ಶಿಸುವ ಮೂಲಕ ಶ್ರೀಲಂಕಾ ಗೆಲುವಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದರು. 326 ಎಸೆತಗಳನ್ನ ಎದುರಿಸಿ ಅಜೇಯ 206ರನ್ ಕಲೆಹಾಕಿದ ಚಾಂಡಿಮಲ್ ಇಡೀ ತಂಡದ ಬ್ಯಾಟರ್‌ಗಳ ಔಟಾದರೂ ಕೊನೆಯವರೆಗೆ ಕ್ರೀಸ್‌ನಲ್ಲಿ ಉಳಿದು ತಂಡದ ಸ್ಕೋರ್ 500ರ ಗಡಿದಾಟುವಂತೆ ಮಾಡಿದ್ರು.
ಚಾಂಡಿಮಲ್ ದ್ವಿತಶಕ ಆಟದಿಂದಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 554ರನ್‌ಗಳನ್ನ ಕಲೆಹಾಕಿದ್ದಲ್ಲದೆ, 190ರನ್‌ಗಳ ಅಮೋಘ ಮುನ್ನಡೆ ಸಾಧಿಸಿತು.
IND vs ENG: ಸೂರ್ಯಕುಮಾರ್ ಯಾದವ್ ಕುರಿತು ರೋಹಿತ್ ಶರ್ಮಾ ಮಾಡಿದ್ದ 10 ವರ್ಷದ ಟ್ವೀಟ್ ವೈರಲ್

ಲಂಕಾ ಸ್ಪಿನ್ನರ್ ಎದುರು ಪತರುಗುಟ್ಟಿದ ಆಸ್ಟ್ರೇಲಿಯಾ
ಇನ್ನು 190ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಇಷ್ಟು ಕೆಟ್ಟದಾಗಿ ಆಲೌಟ್ ಆಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಕಾಂಗರೂಗಳು ಎರಡನೇ ಇನ್ನಿಂಗ್ಸ್‌ನಲ್ಲಿ 41 ಓವರ್‌ಗಳಲ್ಲಿ ಕೇವಲ 151ರನ್‌ಗಳಿಗೆ ಸರ್ವಪತನಗೊಂಡಿತು. ಈ ಮೂಲಕ ಶ್ರೀಲಂಕಾ ತಂಡವು ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಇನ್ನಿಂಗ್ಸ್ ಸೇರಿದಂತೆ 39ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ರು.
ಅದಾಗಲೇ ಮೊದಲ ಟೆಸ್ಟ್ ಪಂದ್ಯವನ್ನ ಆಸ್ಟ್ರೇಲಿಯಾ ಗೆದ್ದಿದ್ದರ ಪರಿಣಾಮ ಆತಿಥೇಯ ಲಂಕಾ ತಂಡವು ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.
ಟೀಂ ಇಂಡಿಯಾಗೆ ಕೊಹ್ಲಿಯದ್ದಷ್ಟೇ ಚಿಂತೆ ಅಲ್ಲ, ರೋಹಿತ್ ಕೂಡ! ನಾಯಕನಾದ ಬಳಿಕ ಕಳೆಗುಂದಿದ ಬ್ಯಾಟಿಂಗ್

ಎರಡೂ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಉರುಳಿಸಿದ ಪ್ರಭಾತ್ ಜಯಸೂರ್ಯ
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಆಸ್ಟ್ರೇಲಿಯಾ ಬೆನ್ನಲುಬು ಮುರಿದರು. ಮೊದಲ ಇನ್ನಿಂಗ್ಸ್ ಆರು ವಿಕೆಟ್ ಪಡೆದಿದ್ದ ಜಯಸೂರ್ಯ ಎರಡನೇ ಇನ್ನಿಂಗ್ಸ್‌ನಲ್ಲಿ 16 ಓವರ್‌ಗಳಲ್ಲಿ 2 ಮೇಡನ್, 59ರನ್ ಸೇರಿದಂತೆ 6 ವಿಕೆಟ್ ಉರುಳಿಸಿದರು. ಈ ಮೂಲಕ ಪಂದ್ಯದಲ್ಲಿ ಒಟ್ಟಾರೆ 12 ವಿಕೆಟ್ ಪಡೆದು ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು. ಪಂದ್ಯದಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದ ದಿನೇಶ್ ಚಾಂಡಿಮಲ್‌ಗೆ ಸರಣಿ ಶ್ರೇಷ್ಟ ಪ್ರಶಸ್ತಿ ಒಲಿಯಿತು.

ಆಸಿಸ್ ಪರ ಮಾರ್ನಸ್ ಲ್ಯಾಬುಸ್ಚಾಗ್ನೆ 32ರನ್‌ಗಳಿಸಿದ್ದೇ ಹೆಚ್ಚು!
ಆಸಿಸ್ ಪರ ಯಾವೊಬ್ಬ ಬ್ಯಾಟರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಡೇವಿಡ್ ವಾರ್ನರ್ 24, ಉಸ್ಮಾನ್ ಖವಾಜ 29, ಮಾರ್ನಸ್ ಲ್ಯಾಬುಸ್ಚಾಗ್ನೆ 32, ಸ್ಟೀವನ್ ಸ್ಮಿತ್ 0, ಟ್ರಾವಿಸ್ ಹೆಡ್ 5, ಕ್ಯಾಮರೂನ್ ಗ್ರೀನ್ 23, ಅಲೆಕ್ಸ್ ಕ್ಯಾರಿ 16, ಮಿಚೆಲ್ ಸ್ಟಾರ್ಕ್ 0, ಪ್ಯಾಟ್ ಕಮಿನ್ಸ್ 16, ನೇಥನ್ ಲ್ಯಾನ್ 5, ಮಿಚೆಲ್ ಸ್ವೆಪ್ಸನ್ 0ಗೆ ಔಟಾದ್ರು.

ಉಭಯ ತಂಡಗಳ ಪ್ಲೇಯಿಂಗ್ 11
ಆಸ್ಟ್ರೇಲಿಯಾ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್
ಶ್ರೀಲಂಕಾ
ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications