ಟೀಂ ಇಂಡಿಯಾಗೆ ಕೊಹ್ಲಿಯದ್ದಷ್ಟೇ ಚಿಂತೆ ಅಲ್ಲ, ರೋಹಿತ್ ಕೂಡ! ನಾಯಕನಾದ ಬಳಿಕ ಕಳೆಗುಂದಿದ ಬ್ಯಾಟಿಂಗ್

ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಪ್ರಸ್ತುತ ಭಾರತ ತಂಡದಲ್ಲಿ ಹೆಚ್ಚು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಒಂದು ಕಾಲದಲ್ಲಿ ಶತಕ ಸಿಡಿಸುವುದರಲ್ಲಿ ನಿಸ್ಸೀಮನಾಗಿದ್ದ ವಿರಾಟ್ ಕೊಹ್ಲಿ ಶತಕ ಬಾರಿಸಿ ಎರಡೂವರೆ ವರ್ಷಗಳೇ ಕಳೆದಿವೆ. ಎಲ್ಲಾ ಮೂರು ಮಾದರಿಗಳಲ್ಲಿ ಕೊಹ್ಲಿಯ ನಿರಾಶಾದಾಯಕ ಪ್ರದರ್ಶನವು T20 ವಿಶ್ವಕಪ್‌ನಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೊಹ್ಲಿ ಸ್ಕೋರ್ 1 ಮತ್ತು 11 ಆಗಿತ್ತು. ಅವರ ಇತ್ತೀಚಿನ ಎಲ್ಲಾ ಪ್ರದರ್ಶನಗಳು ನಿರಾಶಾದಾಯಕವಾಗಿದ್ದು, ಕೊಹ್ಲಿಯನ್ನು ಹೊರಗಿಡಬೇಕೆಂಬ ಕೂಗು ಬಲವಾಗಿದೆ. ಕೊಹ್ಲಿಯ ಇತ್ತೀಚಿನ ಅಂಕಿಅಂಶಗಳನ್ನು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದರೆ, ಆದ್ರೆ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಪ್ರದರ್ಶನವನ್ನು ಹಲವರು ಮರೆತುಬಿಟ್ಟಿದ್ದಾರೆ.

ನಾಯಕನಾದ ಬಳಿಕ ರೋಹಿತ್ ಶರ್ಮಾ ಫ್ಲಾಪ್ ಶೋ
ನಾಯಕನಾದ ನಂತರ ರೋಹಿತ್ ಶರ್ಮಾ ಸತತ 19 ಪಂದ್ಯಗಳನ್ನು ಗೆದ್ದಿದ್ದರು. ರೋಹಿತ್ ಟಿ20ಯಲ್ಲಿ 14 ಗೆಲುವಿನ ಓಟವನ್ನ ಹೊಂದಿದ್ದರು. ಆದ್ರೆ ಕಳೆದ ಪಂದ್ಯದಲ್ಲಿ ಸೋಲು ಮೂಲಕ ರಿಕಿ ಪಾಂಟಿಂಗ್ ಹೆಸರಲ್ಲಿನ(20) ದಾಖಲೆಯನ್ನ ಸರಿಗಟ್ಟಲು ಸಾಧ್ಯವಾಗಲಿಲ್ಲ.
ನಾಯಕತ್ವದ ವಿಚಾರ ಒಂದೆಡೆಯಾದ್ರೆ ಬ್ಯಾಟಿಂಗ್‌ನಲ್ಲಿ ಹಿಟ್‌ಮ್ಯಾನ್ ಮಿಂಚಲು ವಿಫಲರಾಗಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ 36 ಎಸೆತಗಳಲ್ಲಿ 48 ರನ್, 36 ಎಸೆತಗಳಲ್ಲಿ 55 ರನ್, 31 ಎಸೆತಗಳಲ್ಲಿ 56 ರನ್ ಮತ್ತು 19 ಎಸೆತಗಳಲ್ಲಿ 40 ರನ್ ಗಳಿಸಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಲ್ಲಿ ಹೆಚ್ಚೇನೂ ಮಾಡಲಾಗಲಿಲ್ಲ.

ರನ್‌ಗಳಿಸಲು ಎಡವುತ್ತಿರುವ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಸ್ಕೋರ್‌ಗಳು 18 ಎಸೆತಗಳಲ್ಲಿ 19, 15 ಎಸೆತಗಳಲ್ಲಿ 7ರನ್‌ಗಳಾಗಿವೆ. ತದನಂತರ ರೋಹಿತ್ 32 ಎಸೆತಗಳಲ್ಲಿ 44 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದಾದ ನಂತರ ರೋಹಿತ್ ಅವರ ಪ್ರದರ್ಶನದ ಗ್ರಾಫ್ ಕೆಳಮುಖವಾಗಿದೆ. ರೋಹಿತ್ ನಂತರದ ಸ್ಕೋರ್‌ಗಳು 2 ಎಸೆತಗಳಲ್ಲಿ 1, 9 ಎಸೆತಗಳಲ್ಲಿ 5, 14 ಎಸೆತಗಳಲ್ಲಿ 24, 20 ಎಸೆತಗಳಲ್ಲಿ 31 ಮತ್ತು 12 ಎಸೆತಗಳಲ್ಲಿ 11 ರನ್. ಪೂರ್ಣ ಸಮಯದ ನಾಯಕನಾದ ನಂತರ ರೋಹಿತ್ ಅವರ ಪ್ರದರ್ಶನದಲ್ಲಿ ಸ್ಥಿರತೆ ಸಮಸ್ಯೆಯಾಗಿದೆ.
2021ರ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗದಿದ್ದ ಈ ಐವರಿಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಖಚಿತ!

ದೊಡ್ಡ ಮೊತ್ತ ಗಳಿಸುವಲ್ಲಿ ರೋಹಿತ್ ವಿಫಲ
ರೋಹಿತ್‌ಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕೂಡ ಗಮನಾರ್ಹ. ಆರಂಭಿಕರಾಗಿ ರೋಹಿತ್ ಅವರ ಪ್ರದರ್ಶನ ಭಾರತಕ್ಕೆ ನಿರ್ಣಾಯಕವಾಗಿದೆ. ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಅನುಭವಿ ರೋಹಿತ್‌ನ ಫೈರ್‌ಪವರ್ ಭಾರತಕ್ಕೆ ಅತ್ಯಂತ ಪ್ರಮುಖವಾಗಲಿದೆ. ಆದರೆ ಅವರು ಸ್ಥಿರತೆ ಇಲ್ಲದೆ ಮುಂದುವರಿದರೆ, ಅದು ಖಂಡಿತವಾಗಿಯೂ ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ರೋಹಿತ್ ಚೆನ್ನಾಗಿ ಪ್ರಾರಂಭಿಸಿದರೂ ಅದನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂಬುದು ಮುಖ್ಯ ವಿಷಯ. 20 ಓವರ್‌ಗಳ ವರೆಗೆ ಆಡುವ ಸಾಮರ್ಥ್ಯ ರೋಹಿತ್‌ಗೆ ಇದೆ. ಆದರೆ ರೋಹಿತ್‌ಗೆ ಈಗ ಆ ಸ್ಥಿರತೆಯನ್ನು ಕಾಣಲು ಸಾಧ್ಯವಿಲ್ಲ ಎಂಬುದು ಸತ್ಯ. ಕಳೆದ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ.
IND vs ENG: ಸೂರ್ಯಕುಮಾರ್ ಯಾದವ್ ಕುರಿತು ರೋಹಿತ್ ಶರ್ಮಾ ಮಾಡಿದ್ದ 10 ವರ್ಷದ ಟ್ವೀಟ್ ವೈರಲ್

ವಿಶ್ವಕಪ್‌ಗೂ ಮುನ್ನ ದೊಡ್ಡ ಇನ್ನಿಂಗ್ಸ್‌ಗಳನ್ನ ಕಲೆಹಾಕಬೇಕಿದೆ
ಟಿ20 ವಿಶ್ವಕಪ್‌ಗೆ ಮುನ್ನ, ರೋಹಿತ್ ನಾಯಕತ್ವವು ಎಲ್ಲರಿಗೂ ಉತ್ತಮ ಆತ್ಮವಿಶ್ವಾಸವನ್ನು ನೀಡುತ್ತದೆ. ಆದರೆ ಮುಖ್ಯವಾದ ವಿಷಯವೆಂದರೆ ರೋಹಿತ್ ಬ್ಯಾಟ್‌ನೊಂದಿಗೆ ತಂಡವನ್ನ ಮುನ್ನಡೆಸುತ್ತಾರೆ. ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಅವರ ಕಳಪೆ ಫಾರ್ಮ್ ಅನ್ನು ಮೀರಿಸಲು ಭಾರತಕ್ಕೆ ರೋಹಿತ್ ಆಧಾರವಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ರೋಹಿತ್ ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಉಳಿದ ಆಟಗಾರರಿಗೆ ಮಾದರಿಯಾಗಬೇಕಿದೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯಗಳನ್ನು ಗೆದ್ದು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧ ಸರಣಿ ಆಡುತ್ತಿದೆ. 2021ರ ಟಿ20 ವಿಶ್ವಕಪ್‌ನಿಂದ ಲೀಗ್ ಹಂತದಲ್ಲೇ ಹೊರಬಿದ್ದ ಟೀಂ ಇಂಡಿಯಾ ಈ ಬಾರಿ ಕಪ್ ಗೆಲ್ಲುವ ವಿಶ್ವಾಸ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications