ನ್ಯೂಜಿಲೆಂಡ್ A ಸರಣಿಗೆ ಭಾರತ ತಂಡ ಘೋಷಣೆ: ಶುಭಮನ್ ಗಿಲ್‌ಗೆ ನಾಯಕತ್ವ

ಮುಂಬರುವ ನ್ಯೂಜಿಲೆಂಡ್ ಎ ವಿರುದ್ಧದ ಸರಣಿಗೆ ಟೀಂ ಇಂಡಿಯಾ ತಂಡವನ್ನ ಘೋಷಣೆ ಮಾಡಲಾಗಿದ್ದು, 16 ಸದಸರನ್ನೊಳಗೊಂಡ ತಂಡವನ್ನ ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಘೋಷಣೆ ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ ಪ್ರವಾಸವು ಈಗಾಗಲೇ ನಿಗದಿಯಾದಂತೆ ಸೆಪ್ಟೆಂಬರ್ 1ರಂದು ಪ್ರಾರಂಭಗೊಳ್ಳಲಿದೆ.
ಭಾರತದ ಪರ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಕೆಲವು ಆಟಗಾರರು ಈ ಸ್ಕ್ವಾಡ್‌ನಲ್ಲಿದ್ದು, ಶುಭಮನ್ ಗಿಲ್, ಹನುಮ ವಿಹಾರಿ, ವಾಷಿಂಗ್ಟನ್ ಸುಂದರ್, ಕೆ.ಎಸ್ ಭರತ್, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ 2021-22ರ ರಣಜಿ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಟಗಾರರು ಸ್ಕ್ವಾಡ್‌ನಲ್ಲಿದ್ದಾರೆ.

ರಣಜಿ ಫೈನಲ್‌ನಲ್ಲಿ ಆಡಿದ ಮುಂಬೈ, ಮಧ್ಯಪ್ರದೇಶ ಆಟಗಾರರಿಗೆ ಮಣೆ
2021-22ರ ರಣಜಿ ಸೀಸನ್‌ನಲ್ಲಿ ಉತ್ತಮವಾಗಿ ಆಡಿದ್ದ ಮುಂಬೈ ಮತ್ತು ಮಧ್ಯಪ್ರದೇಶ ತಂಡದ ಆಟಗಾರರಿಗೆ ಬಿಸಿಸಿಐ ಮಣೆ ಹಾಕಿದೆ. ಕಳೆದ ರಣಜಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಮುಂಬೈ ಮತ್ತು ಮಧ್ಯಪ್ರದೇಶದ ತಂಡದ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ಚೊಚ್ಚಲ ಬಾರಿಗೆ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮುಂಬೈ ಪರ ಯಶಸ್ವಿ ಜೈಸ್ವಾಲ್, ಶಾಮ್ಸ್ ಮುಲಾನಿ ಮತ್ತು ಶಾರ್ದೂಲ್ ಠಾಕೂರ್ ಸ್ಕ್ವಾಡ್‌ನಲ್ಲಿ ಸೇರ್ಪಡೆಯಾಗಿದ್ದು, ಮಧ್ಯಪ್ರದೇಶ ಪರ ಆಡಿದ ಯಶ್ ದುಬೆ, ಶುಭನಮ್ ಶರ್ಮಾ, ಮತ್ತು ರಣಜಿ ಫೈನಲ್‌ನಲ್ಲಿ ಶತಕ ಸಿಡಿಸಿದ ರಜತ್ ಪಾಟೀದಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇಷ್ಟಲ್ಲದೆ ಜಿಂಬಾಬ್ವೆ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ಬದಲು ರೀಪ್ಲೆಸ್ ಆಗಿದ್ದ ಶಹಬಾಜ್ ಅಹಮ್ಮದ್ ಕೂಡ ನ್ಯೂಜಿಲೆಂಡ್ ಎ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಜಲಜ್ ಸಕ್ಸೆನಾ ಕೂಡ ದೇಶೀಯ ಕ್ರಿಕೆಟ್‌ನಿಂದ ಆಯ್ಕೆಯಾದ ಪ್ರತಿಭೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆತನ ಫೇವರಿಟ್ಸ್

ಸೆಪ್ಟೆಂಬರ್ 1ಕ್ಕೆ ನಾಲ್ಕು ದಿನಗಳ ಪಂದ್ಯಕ್ಕೆ ಚಾಲನೆ
ನ್ಯೂಜಿಲೆಂಡ್ ವಿರುದ್ಧದ ಎ ಸರಣಿಯು ಸೆಪ್ಟೆಂಬರ್ 1ರಂದು ಪ್ರಾರಂಭಗೊಳ್ಳಲಿದ್ದು, ನಾಲ್ಕು ದಿನಗಳ ಅಂತಿಮ ಪಂದ್ಯವು ಸೆಪ್ಟೆಂಬರ್ 15ರಂದು ನಡೆಯಲಿದ್ದು, ಪ್ರತಿ ಪಂದ್ಯಕ್ಕೆ ಮೂರು ದಿನಗಳ ಅಂತರವಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲಿಯೇ ನಡೆಯಲಿದ್ದು, ಇದಾದ ಬಳಿಕ ಲಿಸ್ಟ್ ಎ ಪಂದ್ಯಗಳು ಸೆಪ್ಟೆಂಬರ್ 22ರಿಂದ 27ರವರೆಗೆ ನಡೆಯಲಿದೆ.
2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಸೈಕಲ್‌ನಲ್ಲಿ ಭಾರತದ ಮುಂದಿನ ಟೆಸ್ಟ್ ಸರಣಿ ಬಾಂಗ್ಲಾದೇಶ ವಿರುದ್ಧ ನಡೆಯಲಿದ್ದು, ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಮುಂದಿನ ವರ್ಷ ನಡೆಯಲಿದೆ. ಭಾರತ ಎ ತಂಡದಲ್ಲಿ ಆಟಗಾರರ ಪ್ರದರ್ಶನವು ಮುಂದಿನ ಟೆಸ್ಟ್ ಸರಣಿಗಳ ಆಯ್ಕೆಗೂ ದಾರಿ ಮಾಡಿಕೊಡಲಿದೆ.
ಏಷ್ಯಾ ಕಪ್ 2022ರಿಂದ ಶಾಹೀನ್ ಅಫ್ರಿದಿ ಔಟ್; ಭಾರತ ನಿರಾಳವೆಂದ ವಕಾರ್ ಯೂನಿಸ್‌ಗೆ ತಿರುಗೇಟು

ನ್ಯೂಜಿಲೆಂಡ್ ಎ ಸರಣಿಗೆ ಭಾರತದ ಎ ತಂಡ
ಶುಭಮನ್ ಗಿಲ್ (ನಾಯಕ), ಯಶ್ ದುಬೆ, ಹನುಮ ವಿಹಾರಿ, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಜಲಜ್ ಸಕ್ಸೇನಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಶುಭಂ ಶರ್ಮಾ, ಅಕ್ಷಯ್ ವಾಡ್ಕರ್ , ಮಣಿಶಂಕರ್ ಮುರಾಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications