For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಆತನ ಫೇವರಿಟ್ಸ್‌

Rohit sharma

ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಮತ್ತೊಂದು ಪ್ರಶಸ್ತಿ ಗೆಲ್ಲಲು ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ತಂಡವು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ರೋಹಿತ್ ಹಾಗೂ ಪ್ರಮುಖ ಸ್ಟಾರ್ ಆಟಗಾರರು ಜಿಂಬಾಬ್ವೆ ಸರಣಿಯಿಂದ ಹೊರಗುಳಿದಿದ್ದು, ಏಷ್ಯಾಕಪ್‌ನಲ್ಲಿ ನೇರವಾಗಿ ಆಡಲಿದ್ದಾರೆ.

2018ರ ಕೊನೆಯ ಏಷ್ಯಾಕಪ್‌ ಟೂರ್ನಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಹಿಟ್‌ಮ್ಯಾನ್, ಅದೇ ಸ್ಥಳದಲ್ಲಿ ಮತ್ತೊಮ್ಮೆ ಭಾರತದೊಂದಿಗೆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಏಷ್ಯಾಕಪ್ ಆಗಸ್ಟ್‌ 27ರಂದು ಆರಂಭವಾಗಲಿದ್ದು, 28ರಂದು ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತದ ಮೊದಲ ಪಂದ್ಯವನ್ನಾಡಲಿದೆ.

ರೋಹಿತ್ ನಾಯಕತ್ವದಲ್ಲಿ ಒಂದೇ ಒಂದು ಟಿ20 ಸರಣಿ ಸೋತಿಲ್ಲ.

ರೋಹಿತ್ ನಾಯಕತ್ವದಲ್ಲಿ ಒಂದೇ ಒಂದು ಟಿ20 ಸರಣಿ ಸೋತಿಲ್ಲ.

2021ರ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ಇದಾದ ಬಳಿಕ ಪಟ್ಟಕ್ಕೇರಿದ ಹಿಟ್‌ಮ್ಯಾನ್‌ ಕಳೆದ ನವೆಂಬರ್‌ನಲ್ಲಿ ಭಾರತ ಟಿ20 ತಂಡದ ಖಾಯಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಂದಿನಿಂದ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ರೋಹಿತ್ ನಾಯಕತ್ವದಲ್ಲಿ ಭಾರತ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ.

ರೋಹಿತ್ ಸತತ 14 ಟಿ20 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಏಷ್ಯಾಕಪ್ ಟಿ20 ಫಾರ್ಮೆಟ್‌ನಲ್ಲಿ ನಡೆಯುತ್ತಿರುವುದರಿಂದ ಟೀಂ ಇಂಡಿಯಾ ಉಳಿದೆಲ್ಲಾ ತಂಡಗಳಿಗಿಂತ ಸಾಕಷ್ಟು ಬಲಿಷ್ಠವಾಗಿ ಕಾಣುತ್ತಿದೆ. ರೋಹಿತ್ ಶರ್ಮಾರ ವೈಯಕ್ತಿಕ ದಾಖಲೆಯನ್ನ ನೀವು ಸಾಮಾನ್ಯವಾಗಿ ತಿಳಿದಿದ್ದೀರ. ಆದ್ರೆ ಅವರ ಕ್ರಿಕೆಟ್ ವೃತ್ತಿಯನ್ನು ಬಿಟ್ಟು ಕೆಲವು ವೈಯಕ್ತಿಕ ವಿಷಯಗಳ ಕುರಿತು ತಿಳಿದುಕೊಳ್ಳುವ ಸಮಯ ಇದಾಗಿದೆ. ರೋಹಿತ್‌ನ ನೆಚ್ಚಿನ ಆಹಾರ, ನೆಚ್ಚಿನ ಚಲನಚಿತ್ರಗಳು, ಫುಟ್ಬಾಲ್‌ ಇತ್ಯಾದಿಗಳ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ.

IND vs ZIM: ಭಾರತಕ್ಕೆ ಅದೃಷ್ಟದ ಆಟಗಾರನಾದ ದೀಪಕ್ ಹೂಡಾ; ವಿಶ್ವದಾಖಲೆ ನಿರ್ಮಿಸಿದ ಆಲ್‌ರೌಂಡರ್

ರೋಹಿತ್ ಶರ್ಮಾ ಫೇವರಿಟ್ ಫುಡ್ ಮತ್ತು ಸಿನಿಮಾ

ರೋಹಿತ್ ಶರ್ಮಾ ಫೇವರಿಟ್ ಫುಡ್ ಮತ್ತು ಸಿನಿಮಾ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವಾಗ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಫೆವರಿಟ್‌ ಆಟಗಾರನ ಕುರಿತು ತಿಳಿಸಿದರು. ಇಷ್ಟವಾದ ಮೂರು ಆಹಾರಗಳನ್ನು ಮೂರು ಆಯ್ಕೆಗಳನ್ನು ನೀಡಲಾಯಿತು. ತನ್ನ ನೆಚ್ಚಿನ ಹೆಸರನ್ನು ಕ್ರಮವಾಗಿ ಹೆಸರಿಸಲು ಕೇಳಿದಾಗ, ಹಿಟ್‌ಮ್ಯಾನ್ ಕೋತಿಂಬಿರ್ ವಾಡಿ, ಮಿಸಲ್ ಪಾವ್ ಮತ್ತು ಪುರನ್ ಪೋಲಿಯನ್ನು ಆರಿಸಿಕೊಂಡರು.

ಅವರ ನೆಚ್ಚಿನ ಸಿನಿಮಾಗಳ ಬಗ್ಗೆ ಕೇಳಿದಾಗ, ರೋಹಿತ್ ಶರ್ಮಾ ಅವರ ಉತ್ತರ ಅಮೀರ್ ಖಾನ್ ಅವರ ಸೂಪರ್ ಹಿಟ್ ಚಿತ್ರ ಲಗಾನ್ ಎಂದರು. ಲಗಾನ್ ಹೊರತುಪಡಿಸಿ ಹಾಕಿ ಆಧಾರಿತ ಮತ್ತೊಂದು ಸೂಪರ್ ಹಿಟ್ ಚಿತ್ರವಾದ ಚಕ್ದೇ ಇಂಡಿಯಾ ಮತ್ತು ಮಿಲ್ಕಾ ಸಿಂಗ್ ಜೀವನಾಧಾರಿತ ಭಾಗ್ ಮಿಲ್ಕಾ ಭಾಗ್ ಚಿತ್ರಗಳನ್ನು ಆಯ್ಕೆ ಮಾಡಿಕೊಂಡರು.

ಏಷ್ಯಾ ಕಪ್‌ 2022ರಿಂದ ಶಾಹೀನ್ ಅಫ್ರಿದಿ ಔಟ್; ಭಾರತ ನಿರಾಳವೆಂದ ವಕಾರ್ ಯೂನಿಸ್‌ಗೆ ತಿರುಗೇಟು

ರೋಹಿತ್ ಮತ್ತು ಫುಟ್ಬಾಲ್ ಪ್ರೀತಿ

ರೋಹಿತ್ ಮತ್ತು ಫುಟ್ಬಾಲ್ ಪ್ರೀತಿ

ರೋಹಿತ್ ಶರ್ಮಾ ಕೂಡ ಕಟ್ಟಾ ಫುಟ್ಬಾಲ್ ಅಭಿಮಾನಿ. ಮಾಜಿ ಫ್ರೆಂಚ್ ದಂತಕಥೆ ಜಿನೆದಿನ್ ಜಿಡಾನೆ ತನ್ನ ನೆಚ್ಚಿನ ಆಟಗಾರ ಎಂದು ರೋಹಿತ್ ಬಹಿರಂಗಪಡಿಸಿದ್ದಾರೆ. ಅವರು 2020 ರಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ನಡುವಿನ ಎಲ್ ಕ್ಲಾಸಿಕೊ ಪಂದ್ಯವನ್ನು ವೀಕ್ಷಿಸಿದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.

ಕೋವಿಡ್‌ಗೆ ಸ್ವಲ್ಪ ಮೊದಲು 2020 ರಲ್ಲಿ ಎಲ್ ಕ್ಲಾಸಿಕೊ ವೀಕ್ಷಿಸಲು ನಾನು ಸ್ಪೇನ್‌ಗೆ ಹೋಗಿದ್ದೆ. ಮ್ಯಾಡ್ರಿಡ್‌ನಲ್ಲಿ ರಿಯಲ್-ಬಾರ್ಸಿಲೋನಾ ಪಂದ್ಯವನ್ನೂ ನೋಡಿದ್ದೇವೆ. ಇದು ಲಾ ಲಿಗಾದ ನನ್ನ ಅತ್ಯುತ್ತಮ ನೆನಪು ಎಂದು ರೋಹಿತ್ ಬಹಿರಂಗಪಡಿಸಿದ್ದಾರೆ.

ರೋಹಿತ್ ಶರ್ಮಾ ಕೂಡ ರಿಯಲ್ ಮ್ಯಾಡ್ರಿಡ್‌ನ ಕಟ್ಟಾ ಅಭಿಮಾನಿ. ಅವರು ರಿಯಲ್‌ ಮ್ಯಾಡ್ರಿಡ್‌ನ ತವರು ಮೈದಾನ ಸ್ಯಾಂಟಿಯಾಗೊ ಬರ್ನಾಬ್ಯೂಗೆ ಇತ್ತೀಚೆಗಷ್ಟೇ ಭೇಟಿ ನೀಡಿದ್ದಾರೆ. ಜೊತೆಗೆ ತಂಡದ ಪ್ರಧಾನ ಕಚೇರಿಗೂ ಭೇಟಿ ನೀಡಿದ್ದಾರೆ. ಅಲ್ಲಿನ ಅಧಿಕಾರಿಗಳು ರೋಹಿತ್‌ಗೆ ರಾಯಲ್‌ನ ಅಧಿಕೃತ ಜೆರ್ಸಿಯನ್ನು ನೀಡಿ ಗೌರವಿಸಿದರು. ಪ್ರಸ್ತುತ, ಹಿಟ್‌ಮ್ಯಾನ್ ಭಾರತದಲ್ಲಿ ಲಾ ಲಿಗಾ (ಸ್ಪ್ಯಾನಿಷ್ ಲೀಗ್) ನ ಅಧಿಕೃತ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

Story first published: Sunday, August 21, 2022, 11:26 [IST]
Other articles published on Aug 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+