ICC ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ಪದೇ ಪದೇ ವಿಫಲ: MS ಧೋನಿ ಮೊರೆ ಹೋದ ಬಿಸಿಸಿಐ: ವರದಿ

ಐಸಿಸಿ ಟಿ20 ವಿಶ್ವಕಪ್ 2022ರಲ್ಲೂ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಕನಸು ನನಸಾಗಲಿಲ್ಲ. ಅನೇಕ ಬದಲಾವಣೆ ಜೊತೆಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಚಾಂಪಿಯನ್ ಆಗಬಹುದು ಎಂಬ ಕೋಟ್ಯಾಂತರ ಅಭಿಮಾನಿಗಳ ನಂಬಿಕೆ ಹುಸಿಯಾಯಿತು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಬರಿಗೈನಲ್ಲಿ ಮರಳಿತು.
ಭಾರತ ಸೋತ ರೀತಿಗೆ ಈಗಾಗಲೇ ಅನೇಕ ಹಾಲಿ ಹಾಗೂ ಮಾಜಿ ಆಟಗಾರರು ಪ್ರತಿಕ್ರಿಯೆ ನೀಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಈಗಲೇ ಕಠಿಣ ನಿರ್ಧಾರಕ್ಕೆ ಸಲಹೆಯನ್ನು ನೀಡಿದ್ದಾರೆ. ಇದ್ರ ಜೊತೆಗೆ ಮೂರು ಐಸಿಸಿ ಟ್ರೋಫಿ ಗೆದ್ದಿರುವ ಮಾಜಿ ನಾಯಕ ಎಂ.ಎಸ್ ಧೋನಿಗೆ ಮಹತ್ವದ ಪಾತ್ರ ನೀಡಲು ಬಿಸಿಸಿಐ ಯೋಜಿಸಿದೆ ಎಂದು ವರದಿಯಾಗಿದೆ.

3 ಐಸಿಸಿ ಟ್ರೋಫಿ ಗೆದ್ದಿರುವ ವಿಶ್ವದ ಏಕೈಕ ನಾಯಕ
ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಕಂಡಂತಹ ಅತ್ಯಂತ ಪ್ರಬುದ್ಧ, ಯಶಸ್ವಿ ನಾಯಕರಲ್ಲಿ ಒಬ್ಬರು. ಆತನ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡಿತು. ಈ ಮೂಲಕ ಮೂರು ಐಸಿಸಿ ಟ್ರೋಫಿ ಗೆದ್ದಂತಹ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆದ್ರೆ ಧೋನಿ ನಾಯಕತ್ವ ತ್ಯಜಿಸಿದ ಬಳಿಕ ಟೀಂ ಇಂಡಿಯಾ ಐಸಿಸಿ ಟ್ರೋಫಿಯನ್ನು ಗೆಲ್ಲುವಲ್ಲಿ ವಿಫಲಗೊಂಡಿತು. 2016, 2018, 2021ರ ಟಿ20 ವಿಶ್ವಕಪ್ ಸೇರಿದಂತೆ ಇತ್ತೀಚೆಗೆ 2022ರ ಟಿ20 ವಿಶ್ವಕಪ್‌ನಲ್ಲೂ ಮುಗ್ಗರಿಸಿತು. ಇದ್ರ ಜೊತೆಗೆ 2017ರ ಚಾಂಪಿಯನ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಮುಖಭಂಗ, 2019ರ ಏಕದಿನ ವಿಶ್ವಕಪ್ ಸೆಮೀಸ್‌ನಲ್ಲಿ ಸೋಲನ್ನು ಸಹ ಮರೆಯಲು ಸಾಧ್ಯವಿಲ್ಲ.
ಶೋಯೆಬ್ ಅಖ್ತರ್, ಮೊಹಮ್ಮದ್ ಶಮಿ ಟ್ವೀಟ್ ಫೈಟ್: ಕಚ್ಚಾಟ ಮೊದಲು ನಿಲ್ಲಿಸಿ ಎಂದ ವಾಸಿಂ ಅಕ್ರಂ!

ಭಾರತದ ಟಿ20 ಫಾರ್ಮೆಟ್‌ಗೆ ಧೋನಿ ಸಲಹೆ ಪಡೆಯಲು ಯೋಜನೆ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), 2011ರ ಐಸಿಸಿ ವಿಶ್ವಕಪ್ ಗೆಲುವಿನ ನಾಯಕ ಎಂಎಸ್ ಧೋನಿಯನ್ನು ಭಾರತದ ಟಿ20 ತಂಡದ ಸಲಹೆಗಾರನಾಗಿ ನೇಮಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲನ್ನ ಅನುಭವಿಸಿದ ಟೀಂ ಇಂಡಿಯಾ ಆಟಗಾರರೊಂದಿಗೆ ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಚರ್ಚೆ ನಡೆಸಲು ಮುಂದಾಗಿದ್ದು, ಮುಂದಿನ ವಿಶ್ವಕಪ್‌ಗೆ ಏನೆಲ್ಲಾ ಬದಲಾವಣೆ ಬಯಸಿದೆ ಎಂಬುದರ ಕುರಿತು ಅರಿವು ಮೂಡಿಸಲಿದೆ.
ಇಂಗ್ಲೆಂಡ್ ಏಕದಿನ ವಿಶ್ವಕಪ್ ಉಳಿಸಿಕೊಳ್ಳಲು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರಾ ಬೆನ್ ಸ್ಟೋಕ್ಸ್!

ಎಂ.ಎಸ್ ಧೋನಿ ಅನುಭವವನ್ನು ಬಳಸಿಕೊಳ್ಳಲು ನಡೆಯಲಿದೆ ಪ್ರಯತ್ನ
ಕ್ರಿಕೆಟ್ ಕುರಿತು ಅಪಾರ ಅನುಭವ ಹೊಂದಿರುವ ಎಂ.ಎಸ್ ಧೋನಿ, ಗೇಮ್ ಕುರಿತಾಗಿ ಆಳ ಅಗಲವನ್ನ ಚೆನ್ನಾಗಿ ಅರಿತಿದ್ದಾರೆ. 50 ಓವರ್ ಫಾರ್ಮೆಟ್ ಅಥವಾ ಚುಟುಕು ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವಿ ಆಗಿರುವ ಧೋನಿಯನ್ನು, ಮುಂಬರುವ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾದಲ್ಲಿ ನೇಮಿಸಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ.
ಯುಎಇನಲ್ಲಿ ನಡೆದ 2021ರ ಟಿ20 ವಿಶ್ವಕಪ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದಲ್ಲಿ ಮೆಂಟರ್ ಆಗಿ ಗುರುತಿಸಿಕೊಂಡಿದ್ದರು. ಆದ್ರೆ ಭಾರತ ಸೆಮಿಫೈನಲ್ ಮುಖವನ್ನೂ ನೋಡದೆ ತವರಿಗೆ ಮರಳಿತು. ನಂತರದ ದಿನಗಳಲ್ಲಿ ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದನ್ನು ಕಂಡಿದ್ದೇವೆ. ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡು ವಿಫಲವಾಗಿದ್ದು ಆಗಿದೆ.
ಆದ್ರೆ ಈ ಸೋಲನ್ನು ಮತ್ತೆ ಮುಂದುವರಿಸದಿರಲು, ಬಿಸಿಸಿಐ ಮುಂಬರುವ ವಿಶ್ವಕಪ್‌ನಲ್ಲಿ ನಿಗದಿತ ಸಮಯಕ್ಕೆ ಧೋನಿಯನ್ನು ಆಯ್ಕೆ ಮಾಡದೆ, ಅವರ ಅನುಭವವನ್ನು ಈಗಿನಿಂದಲೇ ಟೀಂ ಇಂಡಿಯಾಗೆ ಉಪಯೋಗಿಸಲು ಮುಂದಾಗಿದೆ. ಹೀಗಾಗಿ ಧೋನಿಯನ್ನ ದೀರ್ಘಾವಧಿ ಯೋಜನೆಯಲ್ಲಿ ಬಳಸಿಕೊಳ್ಳುವ ತಯಾರಿ ನಡೆಸಿದೆ.
ಮಾಜಿ ಕ್ರಿಕೆಟಿಗರು ಈಗಾಗಲೇ ಭಾರತ ತಂಡದಲ್ಲಿ ಬದಲಾವಣೆಯನ್ನು ಬಯಿಸಿದ್ದು, ಟಿ20 ಫಾರ್ಮೆಟ್‌ಗೆ ದಕ್ಷಿಣ ಆಫ್ರಿಕಾ ಲೆಜೆಂಡ್ ಎಬಿ ಡಿವಿಲಿಯರ್ಸ್‌ರನ್ನ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಆದ್ರೆ ಬಿಸಿಸಿಐ ಯಾರನ್ನು ನೇಮಿಸಲಿದೆ ಎಂಬುದರ ಕುರಿತು ಅಧಿಕೃತವಾಗಿ ತಿಳಿಸಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಸಿಸಿಐ ನಿರ್ಧಾರವೇನು ಎಂಬುದು ತಿಳಿದುಬರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications