ಇಂಗ್ಲೆಂಡ್ ಏಕದಿನ ವಿಶ್ವಕಪ್ ಉಳಿಸಿಕೊಳ್ಳಲು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರಾ ಬೆನ್ ಸ್ಟೋಕ್ಸ್!

ಈ ಬಾರಿಯ ಟಿ20 ವಿಶ್ವಕಪ್ ಕೂಡ ಇಂಗ್ಲೆಂಡ್ ತಂಡದ ಪಾಲಾಗುವ ಮೂಲಕ ಇದೇ ಮೊದಲ ಬಾರಿಗೆ ಟಿ20 ಹಾಗೂ ಏಕದಿನ ಕ್ರಿಕೆಟ್ ಮಾದರಿಯ ಚಾಂಪಿಯನ್ ತಂಡ ಎನಿಸಿಕೊಂಡಿದೆ ಇಂಗ್ಲೆಂಡ್. ಈವರೆಗೂ ಯಾವ ತಂಡಕ್ಕೂ ಸಾಧ್ಯವಾಗದ ಈ ಸಾಧನೆ ಮಾಡಿರುವ ಇಂಗ್ಲೆಂಡ್ ಈಗ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಗಂಭೀರವಾಗಿ ಚಿತ್ತ ನೆಟ್ಟಿದೆ. ಇದಕ್ಕೆ ಪೂರಕವಾಗಿ ಮಾತನಾಡಿರುವ ಇಂಗ್ಲೆಂಡ್ ತಂಡದ ಕೋಚ್ ಮ್ಯಾಥ್ಯೂ ಮೋಟ್ ಇಂಗ್ಲೆಂಡ್ ಏಕದಿನ ವಿಶ್ವಕಪ್ ತನ್ನಲ್ಲೇ ಉಳಿಸಿಕೊಳ್ಳಬೇಕಾದರೆ ಈ ಸ್ಟಾರ್ ಆಟಗಾರ ತನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಆಟಗಾರ ಬೆನ್ ಸ್ಟೋಕ್ಸ್ ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಗೆಲುವಿನಲ್ಲೂ ಹೀರೋ ಆಗಿ ಮಿಂಚಿದ್ದರು ಬೆನ್ ಸ್ಟೋಕ್ಸ್. ಆದರೆ ಕೆಲ ತಿಂಗಳ ಹಿಂದೆಯಷ್ಟೇ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯವನ್ನು ಘೋಷಣೆ ಮಾಡಿದ್ದು ಟಿ20 ಹಾಗೂ ಟೆಸ್ಟ್ ಮಾದರಿಯಲ್ಲಿ ಮಾತ್ರವೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದರು. ಇದೀಗ ಬೆನ್ ಸ್ಟೋಕ್ಸ್ ಅವರು ಈ ನಿವೃತ್ತಿ ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳಬೇಕು ಎಂದು ಇಂಗ್ಲೆಂಡ್ ತಂಡದ ಕೋಚ್ ಒತ್ತಾಯಿಸಿದ್ದಾರೆ.

165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡುಗನ ಐತಿಹಾಸಿಕ ಸಾಧನೆ165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡುಗನ ಐತಿಹಾಸಿಕ ಸಾಧನೆ

ಅತಿಯಾದ ಕ್ರಿಕೆಟ್‌ನ ಕಾರಣ ನೀಡಿ ಏಕದಿನಕ್ಕೆ ನಿವೃತ್ತಿ

ಅತಿಯಾದ ಕ್ರಿಕೆಟ್‌ನ ಕಾರಣ ನೀಡಿ ಏಕದಿನಕ್ಕೆ ನಿವೃತ್ತಿ

ಬೆನ್ ಸ್ಟೋಕ್ಸ್ ಕಳೆದ ಬೇಸಿಗೆ ಋತುವಿನಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಮೂರು ಮಾದರಿಯಲ್ಲಿಯೂ ಕ್ರಿಕೆಟ್ ಆಡುವುದು ಅತಿಯಾಗಿ ಒತ್ತಡವನ್ನುಂಟು ಮಾಡುತ್ತಿರುವ ಕಾರಣದಿಂದಾಗಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಬೆನ್ ಸ್ಟೋಕ್ಸ್ ತಿಳಿಸಿದ್ದರು. ಏಕದಿನ ಮಾದರಿಯಲ್ಲಿ ಶೇಕಡಾ ನೂರರಷ್ಟು ಕೊಡುಗೆ ನೀಡಲು ಸಾಧ್ಯವಾಗದಿರುವ ಕಾರಣದಿಂದಾಗಿ ಏಕದಿನ ಮಾದರಿಯಿಂದ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದರು ಬೆನ್ ಸ್ಟೋಕ್ಸ್. ಬೆನ್ ಸ್ಟೋಕ್ಸ್ ಅವರ ಈ ನಿರ್ಧಾರದ ಬಳಿಕ ಏಕದಿನ ಕ್ರಿಕೆಟ್ ಮಾದರಿಯ ಪ್ರಸ್ತುತತೆಯ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿತ್ತು ಎಂಬುದು ಗಮನಾರ್ಹ ಅಂಶ.

ಯಾವಾಗ ಬೇಕಾದರೂ ನಿವೃತ್ತಿ ವಾಪಾಸ್ ಪಡೆಯಬಹುದು

ಯಾವಾಗ ಬೇಕಾದರೂ ನಿವೃತ್ತಿ ವಾಪಾಸ್ ಪಡೆಯಬಹುದು

ಬ್ರಿಟೀಷ್ ಮಾಧ್ಯಮದ ಜೊತೆಗೆ ಮಾತನಾಡಿದ ಇಂಗ್ಲೆಂಡ್ ತಂಡದ ಕೋಚ್ ಮ್ಯಾಥ್ಯೂ ಮೊಟ್ ಬೆನ್ ಸ್ಟೋಕ್ಸ್ ಏಕದಿನ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದರು "ನಾನು ಆತ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ನಾನು ಬೆಂಬಲಿಸುತ್ತೇನೆ. ಆದರೆ ನಿವೃತ್ತಿಯ ನಿರ್ಧಾರ ನನ್ನೊಂದಿಗೆ ಹೇಳಿದಾಗ ನಿವೃತ್ತಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದೆ. ಬೇಡ ಎನಿಸಿದಾಗ ಆಡದಿದ್ದರಾಯಿತು ಎಂದಿದ್ದೆ. ಬಳಿಕ ಆತನ ನಿರ್ಧಾರ ಸ್ಪಷ್ಟವಾಗಿದ್ದಾಗ ನೀನು ಯಾವಾಗ ಬೇಕಾದರು ನಿವೃತ್ತಿ ವಾಪಾಸ್ ಪಡೆಯಬಹುದು ಎಂದು ಸಲಹೆ ನೀಡಿದ್ದೆ" ಎಂದಿದ್ದಾರೆ ಮ್ಯಾಥ್ಯೂ ಮೋಟ್.

ಮುಂದಿನ ವಿಶ್ವಕಪ್‌ಗೆ ಮುನ್ನ ಸ್ಟೋಕ್ಸ್ ನಿರ್ಧಾರ ಬದಲಾಯಿಸಲಿ!

ಮುಂದಿನ ವಿಶ್ವಕಪ್‌ಗೆ ಮುನ್ನ ಸ್ಟೋಕ್ಸ್ ನಿರ್ಧಾರ ಬದಲಾಯಿಸಲಿ!

ಮುಂದುವರಿದು ಮಾತನಾಡಿದ ಇಂಗ್ಲೆಂಡ್ ಕೋಚ್ "ಅದು ಆತನ ವೈಯಕ್ತಿಕ ನಿರ್ಧಾರ. ಈಗ ನಾವು ಏಕದಿನ ವಿಶ್ವಕಪ್‌ನ ವರ್ಷದತ್ತ ಹೆಜ್ಜೆಯಿಡುತ್ತಿದ್ದೇವೆ. ಕೆಲ ಸಮಯಗಳ ಕಾಲ ನಾವು ಹೆಚ್ಚು ಟಿ20 ಕ್ರಿಕೆಟ್ ಆಡುವುದಿಲ್ಲ. ಈ ಸಂದರ್ಭದಲ್ಲಿ ಅವರು ನಿವೃತ್ತಿ ವಾಪಾಸ್ ಪಡೆದು ಮತ್ತೆ ಏಕದಿನ ತಂಡದಲ್ಲಿ ಕಾಣಿಸಿಕೊಂಡರೆ ಶ್ರೇಷ್ಠವಾಗಿರಲಿದೆ. ಆದರೆ ಅದು ಅವರಿಗೆ ಬಿಟ್ಟ ವಿಚಾರ" ಎಂದಿದ್ದಾರೆ ಮ್ಯಾಥ್ಯೂ ಮೋಟ್. ಮುಂದಿನ ವರ್ಷದ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಲಿದ್ದು ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ವಿಶ್ವಕಪ್ ತನ್ನಲ್ಲೇ ಉಳಿಸಿಕೊಳ್ಳಲು ಸ್ವಪ್ರಯತ್ನ ನಡೆಸಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, November 15, 2022, 12:58 [IST]
Other articles published on Nov 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X