ಪಾಕ್ ಜತೆಗಿನ ಕ್ರಿಕೆಟ್ ಗೆ ಅನುಮತಿ ಕೋರಿ ಕೇಂದ್ರಕ್ಕೆ ಬಿಸಿಸಿಐ ಪತ್ರ?
ಮುಂಬೈ, ಮೇ 25: ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಭಾರತ - ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸಲು ಅನುಮತಿ ಕೊಡಬೇಕೆಂದು ಭಾರತೀಯ ಕ್ರಿಕೆಟ್ ಸಂಸ್ಥೆ (ಬಿಸಿಸಿಐ), ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಕೆಲ ಮೂಲಗಳು ತಿಳಿಸಿವೆ. ಆದರೆ, ಬಿಸಿಸಿಐ ಇದನ್ನು ಖಚಿತಪಡಿಸಿಲ್ಲ.
2014ರಲ್ಲಿ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವೆ ಏರ್ಪಟ್ಟಿದ್ದ ಒಪ್ಪಂದದ ಪ್ರಕಾರ, ಉಭಯ ರಾಷ್ಟ್ರಗಳಲ್ಲಿ ವರ್ಷಕ್ಕೆರಡು ಬಾರಿ ದ್ವಿಪಕ್ಷೀಯ ಸರಣಿ ನಡೆಸಬೇಕಿತ್ತು.[ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ: ಕುಂಬ್ಳೆಗೆ ಮುಜುಗರ]

ಆದರೆ, ಒಪ್ಪಂದ ಏರ್ಪಟ್ಟ ನಂತರದ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಾಜಕೀಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ, ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಬಾಂಧವ್ಯವನ್ನು ಬಿಸಿಸಿಐ ಕಡಿದುಕೊಂಡಿತು.
ಆದರೆ, ಪಿಸಿಬಿಯು ದ್ವಿಪಕ್ಷೀಯ ಸರಣಿಯನ್ನು ಆರಂಭಿಸುವಂತೆ ಪದೇ ಪದೇ ಭಾರತವನ್ನು ಒತ್ತಾಯಿಸಿದರೂ, ಒಂದರ ಹಿಂದೊಂದರಂತೆ ನಿಯೋಗಳನ್ನು ಭಾರತಕ್ಕೆ ಕರೆತಂದು ಇಲ್ಲಿನ ಬಿಸಿಸಿಐ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರೂ, ಅದು ಫಲ ಕೊಟ್ಟಿಲ್ಲ.[ರವಿಚಂದ್ರನ್ ಅಶ್ವಿನ್ ಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪ್ರದಾನ]
ಇದೀಗ, ಈ ಪ್ರಕರಣವನ್ನು ಪಿಸಿಬಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ (ಐಸಿಸಿ) ಮುಂದಿಟ್ಟಿದೆ. ಹಾಗೆ, ಪಿಸಿಬಿ ಎಷ್ಟೇ ಪ್ರಯತ್ನ ಪಟ್ಟರೂ ಆ ಬಗ್ಗೆ ಕ್ಯಾರೇ ಅನ್ನದ ಬಿಸಿಸಿಐ, ಈಗ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ ಎಂಬ ಸುದ್ದಿ ಸಹಜವಾಗಿ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications