Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಭಾರತದ ಸ್ಕ್ವಾಡ್‌ನಲ್ಲಿ ಭುವನೇಶ್ವರ್ ಸ್ಥಾನ ಭದ್ರವಾಗಿಲ್ಲ: ಆಶಿಶ್ ನೆಹ್ರಾ

Bhuvaneshwar kumar

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸ್ಕ್ವಾಡ್‌ನಲ್ಲಿ ಪೇಸರ್ ಭುವನೇಶ್ವರ್ ಕುಮಾರ್ ಸ್ಥಾನ ಇನ್ನೂ ಭದ್ರವಾಗಿಲ್ಲ ಎಂದು ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ. ಟೀಂ ಇಂಡಿಯಾದಲ್ಲಿ ಸ್ಪರ್ಧೆ ತೀವ್ರಗೊಂಡಿದ್ದು, ಭುವಿ ಸಾಕಷ್ಟು ಪ್ರಯತ್ನ ಪಡಬೇಕಿದೆ ಎಂದು ನೆಹ್ರಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡಿದರು. ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದ ಭುವನೇಶ್ವರ್ ಕುಮಾರ್ 6.07 ಎಕಾನಮಿಯಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದರು.

ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಭುವಿಗೆ ಖಾಯಂ ಸ್ಥಾನ ಸಿಕ್ಕಿಲ್ಲ

ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಭುವಿಗೆ ಖಾಯಂ ಸ್ಥಾನ ಸಿಕ್ಕಿಲ್ಲ

ಭುವನೇಶ್ವರ್ ಕುಮಾರ್‌ ತಮ್ಮ ಕೆರಿಯರ್‌ನಲ್ಲಿ ಫಿಟ್ನೆಸ್ ಕುರಿತು ಹೆಚ್ಚು ಗಮನ ಹರಿಸಬೇಕಿದೆ ಎಂದು ಮಾಜಿ ವೇಗಿ ಆಶಿಶ್ ನೆಹ್ರಾ ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ. ಟೀಂ ಇಂಡಿಯಾ ವೈಟ್ ಬಾಲ್ ಕ್ರಿಕೆಟ್ ತಂಡದಲ್ಲಿ ಭುವನೇಶ್ವರ್ ಕುಮಾರ್ ಸ್ಥಾನ ಭದ್ರವಾಗಿಲ್ಲ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಸ್ಪರ್ಧೆ ಎದುರಿಸಲಿದ್ದಾರೆ ಎಂದು ನೆಹ್ರಾ ತಿಳಿಸಿದ್ದಾರೆ.

KL ರಾಹುಲ್‌ಗೆ ನಿರಂತರ ಇಂಜ್ಯುರಿ: T20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಗೆ ಅವರೆಷ್ಟು ಮುಖ್ಯ?

ಕಳೆದ 2 ಐಪಿಎಲ್‌ ಸೀಸನ್‌ಗಿಂತ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದಾರೆ

ಕಳೆದ 2 ಐಪಿಎಲ್‌ ಸೀಸನ್‌ಗಿಂತ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದಾರೆ

ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡುವುದಕ್ಕೂ ಮೊದಲು ಐಪಿಎಲ್ 2022ರ ಸೀಸನ್‌ನಲ್ಲಿ ತಮ್ಮ ಆತ್ಮವಿಶ್ವಾಸವನ್ನ ಮರಳಿ ಪಡೆದಿದ್ದಾರೆ. ಕಳೆದ ಎರಡು ಐಪಿಎಲ್ ಸೀಸನ್‌ಗಿಂತಲೂ ಈ ಬಾರಿ ಉತ್ತಮ ದಾಳಿ ನಡೆಸಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ವೇಗಿ ಹೇಳಿದ್ದಾರೆ.

"ಭುವನೇಶ್ವರ್ ಖಂಡಿತವಾಗಿಯೂ ಈ ಸರಣಿಯಿಂದ ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆದಿದ್ದಾರೆ. ಐಪಿಎಲ್‌ನಲ್ಲೂ ಅವರು ಕಳೆದ ಎರಡು ಋತುಗಳಿಗಿಂತ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ''

"ಇದು ಯಾವುದೇ ಆಟಗಾರನಿಗೆ ದೊಡ್ಡ ಪ್ಲಸ್ ಆಗಿದೆ. ಏಕೆಂದರೆ ನೀವು ಟಿ20 ಗಳಲ್ಲಿ ಕೇವಲ ಪ್ರಾರಂಭದಲ್ಲಿ ಮಾತ್ರ ಉತ್ತಮ ಬೌಲಿಂಗ್‌ ಮಾಡುವುದಲ್ಲ, ಆದರೆ ಅವರು ಸ್ಲೋ ಬಾಲ್, ನಕಲ್ ಬಾಲ್‌ ಮತ್ತು 130 kmph ವೇಗವನ್ನು ಹೊಂದಿದ್ದಾರೆ. ಇದು ಯಾರ್ಕರ್‌ಗಳನ್ನು ಹಾಕುವುದು ಸುಲಭವಲ್ಲ" ಎಂದು ಆಶಿಶ್ ನೆಹ್ರಾ ಪ್ರತಿಪಾದಿಸಿದ್ದಾರೆ.

ಕ್ರಿಕೆಟ್ ಜಗತ್ತಿನಲ್ಲಿ ಭಾರತ ಏನು ಹೇಳಿದರೂ ನಡೆಯುತ್ತದೆ ಎಂದ ಮಾಜಿ ಪಾಕ್ ನಾಯಕ ಶಾಹಿದ್ ಅಫ್ರಿದಿ

ಟೀಮ್ ಇಂಡಿಯಾಗೆ ಐಸಿಸಿಯಿಂದ ಖಡಕ್ ಎಚ್ಚರಿಕೆ | *Cricket | OneIndia Kannada
ಐಪಿಎಲ್ 2022ರ ಸೀಸನ್‌ನಲ್ಲಿ ಭುವಿ ಪ್ರದರ್ಶನ

ಐಪಿಎಲ್ 2022ರ ಸೀಸನ್‌ನಲ್ಲಿ ಭುವಿ ಪ್ರದರ್ಶನ

ಐಪಿಎಲ್ 2022ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಭುವನೇಶ್ವರ್ ಕುಮಾರ್ 14 ಪಂದ್ಯಗಳನ್ನಾಡಿದ್ದು ಕೇವಲ 24 ರನ್‌ಗಳ ಬಿಟ್ಟುಕೊಡುವುದರ ಜೊತೆಗೆ 12 ವಿಕೆಟ್‌ಗಳನ್ನ ಕಬಳಿಸಿದ್ರು. ಇಡೀ ಸೀಸನ್‌ನಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಭುವನೇಶ್ವರ್‌ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವ ಗುರಿ ನೆಟ್ಟಿದ್ದಾರೆ.

Story first published: Wednesday, June 22, 2022, 10:55 [IST]
Other articles published on Jun 22, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+