ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಜಗತ್ತಿನಲ್ಲಿ ಭಾರತ ಏನು ಹೇಳಿದರೂ ನಡೆಯುತ್ತದೆ ಎಂದ ಮಾಜಿ ಪಾಕ್ ನಾಯಕ ಶಾಹಿದ್ ಅಫ್ರಿದಿ

Pakistan former skipper Shahid Afridi said Whatever India say it will happen

ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಅತ್ಯಂತ ಪರಿಣಾಮಕಾರಿ ರಾಷ್ಟ್ರ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಒಪ್ಪಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಏನು ಹೇಳಿದರೂ ನಡೆಯುತ್ತದೆ. ಯಾಕೆಂದರೆ ಅಷ್ಟು ದೊಡ್ಡ ಮಾರುಕಟ್ಟೆಯನ್ನು ಭಾರತ ಹೊಂದಿದೆ. ಈ ಮೂಲಕ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ ಎಂದಿದ್ದಾರೆ ಶಾಹಿದ್ ಅಫ್ರಿದಿ.

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಭಾರತ ಕ್ರಿಕೆಟ್‌ನ ದೊಡ್ಡ ಮಾರುಕಟ್ಟೆ ಎಂದಿದ್ದಾರೆ. ಐಸಿಸಿಯ ಮುಂದಿನ ಫ್ಯೂಚರ್ ಟೂರ್ಸ್ ಪ್ರೋಗ್ರಾಂ (ಎಫ್‌ಟಿಪಿ)ನಲ್ಲಿ ಐಪಿಎಲ್ ಎರಡೂವರೆ ತಿಂಗಳ ಅವಧಿಯನ್ನು ಹೊಂದಿರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ ಬಳಿಕ ಶಾಹಿದ್ ಅಫ್ರಿದಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

8 ತಿಂಗಳಿನಲ್ಲಿ 6 ನಾಯಕರು ನನ್ನ ಪ್ಲಾನ್ ಅಲ್ಲ; ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ದ್ರಾವಿಡ್ ಮಾತು8 ತಿಂಗಳಿನಲ್ಲಿ 6 ನಾಯಕರು ನನ್ನ ಪ್ಲಾನ್ ಅಲ್ಲ; ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ದ್ರಾವಿಡ್ ಮಾತು

ಇತ್ತೀಚೆಗಷ್ಟೇ ಐಪಿಎಲ್‌ನ ಮಾಧ್ಯಮ ಹಕ್ಕು ಭಾರೀ ಮೊತ್ತಕ್ಕೆ ಹರಾಜಾಗುವ ಮೂಲಕ ಕ್ರೀಡಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿತ್ತು. 2023-27ರ ವರೆಗಿನ ಮಾಧ್ಯಮ ಹಕ್ಕುಗಳು 48,390.32 ಕೋಟಿ ಮೊತ್ತಕ್ಕೆ ಹರಾಜಾಗಿದೆ. ಈ ವಿಚಾರವಾಗಿ ಮಾತನಾಡಿದ ಶಾಹಿದ್ ಅಫ್ರಿದಿ ಮಾರುಕಟ್ಟೆ ಹಾಗೂ ಎಕಾನಮಿಯನ್ನು ಇದು ಅವಲಂಬಿಸಿದ್ದು ಭಾರತ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಮಾರುಕಟ್ಟೆಯಾಗಿದೆ ಎಂದಿದ್ದಾರೆ.

"ಮಾರುಕಟ್ಟೆ ಹಾಗೂ ಆರ್ಥಿಕತೆಯ ಮೇಲೆ ಇದೆಲ್ಲವೂ ಅವಲಂಬಿತವಾಗಿರುತ್ತದೆ. ಕ್ರಿಕೆಟ್‌ಗೆ ಅತೊ ದೊಡ್ಡ ಮಾರುಕಟ್ಟೆಯೆಂದರೆ ಅದು ಭಾರತ. ಅವರು ಏನು ಹೇಳಿದರೂ ಅದು ನಡೆಯುತ್ತದೆ" ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ನೀಡಿರುವ ಹೇಳಿಕೆಯನ್ನು ಪಾಕಿಸ್ತಾನದ ಪ್ರಮುಖ ಮಾಧ್ಯಮ ಸಮಾ ಟಿವಿ ಉಲ್ಲೇಖಿಸಿದೆ. ಪಾಕಿಸ್ತಾನ ಕ್ರಿಕೆಟ್ ಕಂಡ ಅತ್ಯುತ್ತಮ ಆಲ್‌ರೌಂಡರ್ ಎನಿಸಿಕೊಂಡಿದ್ದು ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಪರವಾಗಿ ಆಡಿದ್ದರು. ಅಫ್ರಿದಿ ಐಪಿಎಲ್‌ನಲ್ಲಿ 10 ಪಂದ್ಯಗಳನ್ನು ಆಡಿದ್ದಾರೆ.

ಇಂಜ್ಯುರಿ ಹಿನ್ನಲೆ, ಚಿಕಿತ್ಸೆಗಾಗಿ ಜರ್ಮನಿ ತಲುಪಿದ ಕೆ.ಎಲ್ ರಾಹುಲ್‌: ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯಇಂಜ್ಯುರಿ ಹಿನ್ನಲೆ, ಚಿಕಿತ್ಸೆಗಾಗಿ ಜರ್ಮನಿ ತಲುಪಿದ ಕೆ.ಎಲ್ ರಾಹುಲ್‌: ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯ

2023-2027ರ ಅವಧಿಯ ಐಪಿಎಲ್‌ನಲ್ಲಿ ಒಟ್ಟು 410 ಐಪಿಎಲ್ ಪಂದ್ಯಗಳು ಆಯೋಜನೆಯಾಗಲಿದೆ. ಅಂದರೆ ಮುಂದಿನ ಮೊದಲ ಎರಡು ಆವೃತ್ತಿಗಳಲ್ಲಿ ತಲಾ 74 ಪಂದ್ಯಗಳು ನಡೆದರೆ ನಂತರದ ಎರಡು ಆವೃತ್ತಿಗಳಲ್ಲಿ ಕ್ರಮವಾಗಿ 84 ಹಾಗೂ 94 ಪಂದ್ಯಗಳು ಆಯೋಜನೆಯಾಗಲಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಮಾಹಿತಿ ನೀಡಿದ್ದರು. ಇಷ್ಟು ಪಂದ್ಯಗಳನ್ನು ಯಾವ ರೀತಿಯಾಗಿ ನಿರ್ವಹಿಸಲಾಗುತ್ತದೆ ಎಂದು ಕೇಳಲಾದ ಪ್ರಶ್ನೆಗೂ ನಿಸಿಸಿಐ ಕಾರ್ಯದರ್ಶಿ ಜಯ್ ಶಾ ಉತ್ತರ ನೀಡಿದ್ದಾರೆ.

ಈ ವಿಚಾರವಾಗಿ ನಾವು ಸಾಕಷ್ಟು ಕಾರ್ಯನಿರ್ವಹಿಸಿದ್ದೇವೆ. ಮುಂದಿನ ಐಸಿಸಿ ಎಫ್‌ಟಿಪಿ ಕ್ಯಾಲೆಂಡರ್‌ನಿಂದ ಐಪಿಎಲ್ ಅಧಿಕೃತ ಎರಡೂವರೆ ತಿಂಗಳ ಅವಧಿಯನ್ನು ಹೊಂದಿರುತ್ತದೆ. ಇದರಿಂದಾಗಿ ಎಲ್ಲಾ ಉನ್ನತ ಅಂತರರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸಬಹುದು. ಈ ವಿಚಾರವಾಗಿ ನಾವು ವಿವಿಧ ಮಂಡಳಿಗಳು ಹಾಗೂ ಐಸಿಸಿ ಜೊತೆ ಚರ್ಚೆ ನಡೆಸಿದ್ದೇವೆ" ಎಂದು ಹೇಳಿದ್ದಾರೆ ಜಯ್ ಶಾ.

Story first published: Wednesday, June 22, 2022, 10:56 [IST]
Other articles published on Jun 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X