ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KL ರಾಹುಲ್‌ಗೆ ನಿರಂತರ ಇಂಜ್ಯುರಿ: T20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾಗೆ ಅವರೆಷ್ಟು ಮುಖ್ಯ?

KL Rahul

ಟೀಂ ಇಂಡಿಯಾ ಪರ ಮೂರು ಫಾರ್ಮೆಟ್‌ನಲ್ಲಿ ಮಿಂಚುತ್ತಿರುವ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಕೆ.ಎಲ್ ರಾಹುಲ್ ಕೂಡ ಒಬ್ಬರು. ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಕೆ.ಎಲ್ ರಾಹುಲ್ ಟಿ20 ಕ್ರಿಕೆಟ್‌ಗಂತೂ ಸಖತ್ ಬ್ಯಾಟರ್ ಆಗಿದ್ದಾರೆ.

ಐಪಿಎಲ್ 2022ರ ಸೀಸನ್‌ ಬಳಿಕ ಮತ್ತೆ ಇಂಜ್ಯುರಿಗೆ ತುತ್ತಾಗಿರುವ ಕೆ.ಎಲ್ ರಾಹುಲ್ ಮತ್ತೊಮ್ಮೆ ಟೀಂ ಇಂಡಿಯಾದಿಂದ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್ ಸರಣಿ ಆರಂಭವಾಗುವ ಕೊನೆಯ ಸಮಯದಲ್ಲಿ ತಂಡದಿಂದ ಹೊರನಡೆದರು. ಪರಿಣಾಮ ರಿಷಭ್ ಪಂತ್ ಭಾರತವನ್ನ ಮುನ್ನಡೆಸಿದ್ದಲ್ಲದೆ ಸರಣಿಯು 2-2ರಿಂದ ಸಮಬಲಗೊಂಡಿದೆ.

ಏಳು ತಿಂಗಳಲ್ಲಿ ಏಳು ಸರಣಿ ಮಿಸ್ ಮಾಡಿಕೊಂಡಿರುವ ಕೆ.ಎಲ್ ರಾಹುಲ್

ಏಳು ತಿಂಗಳಲ್ಲಿ ಏಳು ಸರಣಿ ಮಿಸ್ ಮಾಡಿಕೊಂಡಿರುವ ಕೆ.ಎಲ್ ರಾಹುಲ್

ರಾಹುಲ್ ಇಂಜ್ಯುರಿಯಿಂದ ಸರಣಿ ಮಿಸ್‌ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಕಳೆದ ಏಳು ತಿಂಗಳಲ್ಲಿ ಕೆ.ಎಲ್ ರಾಹುಲ್ ಅವರ ಏಳನೇ ಸರಣಿಯನ್ನು ಕಳೆದುಕೊಂಡಿರುವುದರಿಂದ, ಮುಂಬರುವ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಮತ್ತು ಟಿ20 ಸರಣಿಯನ್ನು ಕಳೆದುಕೊಂಡಿದ್ದಾರೆ. ಮಣಿಕಟ್ಟು ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನೂ ಕಳೆದುಕೊಂಡಿದ್ದರು. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಟಿ20, ಇಂಗ್ಲೆಂಡ್ ಹಾಗೂ ಐರ್ಲೆಂಡ್ ಸರಣಿಯಿಂದ ಹಿಂದೆ ಸರಿಯಬೇಕಾಯಿತು.

ಆದ್ರೀಗ ಎನ್‌ಸಿಎ ಪುನರ್ ಶಿಬಿರದ ಬಳಿಕ ಜರ್ಮನಿಗೆ ಹೆಚ್ಚಿನ ಚಿಕಿತ್ಸೆಗೆ ತೆರಳಿರುವ ಕನ್ನಡಿಗ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಮಯ ಬಂದಿದೆ.

ಇಂಜ್ಯುರಿ ಹಿನ್ನಲೆ, ಚಿಕಿತ್ಸೆಗಾಗಿ ಜರ್ಮನಿ ತಲುಪಿದ ಕೆ.ಎಲ್ ರಾಹುಲ್‌: ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯ

ರೋಹಿತ್ ಶರ್ಮಾ ಜೊತೆಗೆ ಉತ್ತಮ ಆರಂಭಿಕ ಪಾಲುದಾರ

ರೋಹಿತ್ ಶರ್ಮಾ ಜೊತೆಗೆ ಉತ್ತಮ ಆರಂಭಿಕ ಪಾಲುದಾರ

ಕೆ.ಎಲ್ ರಾಹುಲ್ ಭಾರತ ತಂಡದ ಉಪನಾಯಕರಾಗಿದ್ದು, ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಗ್ಲೆಂಡ್‌ನಲ್ಲಿ, ಅವರು ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಆರಂಭಿಕ ಜೋಡಿಯಾಗಿದ್ದು, ಜೊತೆಯಾಟದ ಮೂಲಕ ಮಿಂಚಿದ್ದಾರೆ. ಆದಾಗ್ಯೂ, ಬಿಳಿ-ಚೆಂಡಿನ ಸ್ವರೂಪಗಳಲ್ಲಿ ರಾಹುಲ್ ಅನುಪಸ್ಥಿತಿಯು ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ.

ಈ ಆಟಗಾರ ವಿಶ್ವಕಪ್ ರೇಸ್‌ನಲ್ಲಿ ಹಿಂದೆ ಬಿದ್ದಾಗಿದೆ: ಯುವ ಆಟಗಾರನ ಬಗ್ಗೆ ಆಕಾಶ್ ಚೋಪ್ರ ಅಭಿಪ್ರಾಯ

ಟಿ20ಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ

ಟಿ20ಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ

ರಾಹುಲ್ ಟಿ20 ಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ 51.33ರ ಬ್ಯಾಟಿಂಗ್ ಸರಾಸರಿಯಲ್ಲಿ ಕೆ.ಎಲ್ ರಾಹುಲ್ 616 ರನ್ ಕಲೆಹಾಕಿದ್ದು, ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಎರಡನೇ ಬ್ಯಾಟರ್ ಆಗಿದ್ದಾರೆ.

ಭಾರತವು ಈಗಾಗಲೇ ಟಿ20 ವಿಶ್ವಕಪ್‌ಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ಇಂಗ್ಲೆಂಡ್ ಸರಣಿಯಲ್ಲಿ ಅವರ ಲಭ್ಯತೆಯು ನಿರ್ಣಾಯಕವಾಗಿತ್ತು. ಆದ್ರೀಗ ಅವರು ಇಂಗ್ಲೆಂಡ್ ಪ್ರವಾಸವನ್ನು ಕಳೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸ ಮತ್ತು ಏಷ್ಯಾ ಕಪ್ ರಾಹುಲ್ಗೆ ಮತ್ತೆ ತಂಡಕ್ಕೆ ಕಂಬ್ಯಾಕ್‌ ಮಾಡಲು ಎರಡು ಕೊನೆಯ ಅವಕಾಶಗಳಾಗಿವೆ.

ಇನ್ನು ಟಿ20ಯಲ್ಲಿ ರಾಹುಲ್ ಎಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬ ಪ್ರಶ್ನೆ ಕಾಡುತ್ತಲೇ ಇದೆ. ಅವರು ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದ್ದರೂ ಸಹ, ಅವರು 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೇ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿಯನ್ನು ಓಪನಿಂಗ್ ಮಾಡಲು ಬಿಡಬೇಕೇ ಎಂಬ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.

Story first published: Tuesday, June 21, 2022, 17:14 [IST]
Other articles published on Jun 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X