ಏಕೆ ಹೀಗಾಯ್ತು? ಗಾಯಾಳುವಾಗಿ ಹೊರನಡೆದ ಟೀಂ ಇಂಡಿಯಾದ ಮತ್ತೋರ್ವ ಆಟಗಾರ!

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯ ಗೆದ್ದು ಹರಿಣಗಳ ನಾಡಲ್ಲಿ ಚೊಚ್ಚಲ ಸರಣಿ ಗೆಲ್ಲುವ ಕನಸು ಕಟ್ಟಿಕೊಂಡಿತ್ತು. ಆದ್ರೆ ಮೊದಲ ದಿನದಿಂದಲೇ ಒಂದರ ಹಿಂದೆ ಮತ್ತೊಂದು ವಿಘ್ನಗಳು ಸಂಭವಿಸಿವೆ.
ಪಂದ್ಯ ಆರಂಭಕ್ಕೂ ಮೊದಲ ನಾಯಕ ವಿರಾಟ್ ಕೊಹ್ಲಿ ಬೆನ್ನು ಮೂಳೆ ನೋವಿನ ಸಮಸ್ಯೆಯಿಂದಾಗಿ ಪಂದ್ಯದಿಂದಲೇ ಹೊರಗುಳಿದ್ರು. ಹೀಗಾಗಿ ಕನ್ನಡಿಗ ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಮುನ್ನಡೆಸುತ್ತಿದ್ದಾರೆ. ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆ ಕೆ.ಎಲ್ ಅರ್ಧಶತಕ ಕಲೆಹಾಕಿ ತಂಡವನ್ನ 200 ಗಡಿ ದಾಟುವಂತೆ ನೋಡಿಕೊಂಡ್ರು. ಆಲ್‌ರೌಂಡರ್ ಆರ್. ಅಶ್ವಿನ್ 50 ಎಸೆತಗಳಲ್ಲಿ 46 ರನ್ ಕಲೆಹಾಕಿ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 202ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿರುವ ಭಾರತಕ್ಕೆ, ಕೊಹ್ಲಿ ಅನುಪಸ್ಥಿತಿ ಕಾಡುತ್ತಿದ್ದ ಬೆನ್ನಲ್ಲೇ ಯುವ ವೇಗಿ ಮೊಹಮ್ಮದ್ ಸಿರಾಜ್ ಗಾಯಗೊಂಡು ಹೊರನಡೆದಿದ್ದಾರೆ.

ಮೊದಲ ದಿನದ ಕೊನೆಯಲ್ಲಿ ಬೌಲಿಂಗ್ ಮಾಡದ ಸಿರಾಜ್!
ಮೊದಲ ದಿನದಾಟದಂತ್ಯಕ್ಕೆ ಇನ್ನೇನು ಏಳು ಎಸೆತಗಳಷ್ಟೇ ಬಾಕಿ ಇರುವಾಗ ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡುತ್ತಿದ್ದರು ತನ್ನ ಸ್ಪೆಲ್‌ನ ಕೊನೆಯ ಎಸೆತವನ್ನ ಹಾಕಲು ರನ್ ಅಪ್ ಮಾಡಿದ್ರು. ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಬ್ಯಾಟಿಂಗ್ ಮಾಡುವ ವೇಳೆ, ಎಸೆತಕ್ಕೂ ಮೊದಲು ಸಿರಾಜ್ ಬೌಲಿಂಗ್ ಮಾಡುವುದನ್ನ ನಿಲ್ಲಿಸಿದ್ರು. ಮೇಲ್ನೋಟಕ್ಕೆ ಬಲಗಾಲಿನ ಹ್ಯಾಮ್‌ಸ್ಟ್ರಿಂಗ್‌ನಿಂದ ಬಳಲುತ್ತಿರುವಂತೆ ಕಂಡು ಬಂದ ಹಿನ್ನಲೆಯಲ್ಲಿ ಸಿರಾಜ್ ಫಿಸಿಯೋ ಜೊತೆಗೆ ಮೈದಾನದಿಂದ ಹೊರನಡೆದರು.
ಕಳಪೆ ಪಾರ್ಮ್‌ನಲ್ಲಿರುವ ರಹಾನೆ, ಪೂಜಾರಾಗೆ ಗವಾಸ್ಕರ್ ಖಡಕ್ ಎಚ್ಚರಿಕೆ

ಸಿರಾಜ್ ಫಿಟ್ನೆಸ್ ಕುರಿತು ಅಧಿಕೃತ ಮಾಹಿತಿ ಬೇಕಿದೆ!
ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿದ್ದು, ನಾಯಕ ಕೊಹ್ಲಿ ಬಳಿಕ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್ ಮೊದಲ ದಿನದಾಟದಲ್ಲೇ ಗಾಯಾಳುವಾಗಿ ಕಾಣಿಸಿಕೊಂಡಿರುವುದು ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಿದೆ. ಸಿರಾಜ್ ಮೈದಾನದಿಂದ ಡ್ರೆಸ್ಸಿಂಗ್ ರೂಂಗೆ ಹೆಜ್ಜೆ ಇಡುತ್ತಿದ್ದಂತೆ , ಟೀಂ ಇಂಡಿಯಾ ಪಾಳಯದಲ್ಲಿ ದಿಗಿಲು ಶುರುವಾಗಿದೆ. ಸಿರಾಜ್ ಯಾವ ತೊಂದರೆಯಿಂದ ಬಳಲುತ್ತಿದ್ದಾರೆ ಮತ್ತು ಅವರ ಫಿಟ್ನೆಸ್‌ನ ಅಪಡೇಟ್ ಏನು ಎಂಬುದನ್ನ ಬಿಸಿಸಿಐ ಅಧಿಕೃತವಾಗಿ ಮಾಹಿತಿ ಹೊರಹಾಕಿದ್ರಷ್ಟೇ ತಿಳಿದುಬರಲಿದೆ.
ಧೋನಿಗೆ ಇದ್ದ ಸಪೋರ್ಟ್, ನನಗೂ ಇದ್ದಿದ್ರೆ ಇನ್ನೂ ಹೆಚ್ಚಿನ ಕಾಲ ಆಡ್ತಿದ್ದೆ: ಹರ್ಭಜನ್ ಸಿಂಗ್

ಸೀಮರ್‌ಗಳಿಗೆ ಸಹಾಯ ಮಾಡುತ್ತಿದೆ ವಾಂಡರರ್ಸ್ ಪಿಚ್
ವಾಂಡರರ್ಸ್ ಪಿಚ್ ಸೀಮರ್‌ಗಳಿಗೆ ಸಹಾಯ ಮಾಡುತ್ತಿರುವಂತೆ ತೋರುತ್ತಿದೆ ಮತ್ತು ಈ ವಿಕೆಟ್, ನಿರ್ದಿಷ್ಟವಾಗಿ, ಗಾಯವಾಗುವ ಮೊದಲು ಸಿರಾಜ್‌ಗೆ ಹೆಚ್ಚು ಸರಿಹೊಂದುವಂತಿತ್ತು. ಇದಕ್ಕೂ ಮುನ್ನ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೂ ಗ್ಲೌಸ್‌ಗೆ ಪೆಟ್ಟಾಗಿದ್ದು, ಫಿಸಿಯೋ ಮ್ಯಾಜಿಕ್ ಸ್ಪ್ರೇನೊಂದಿಗೆ ಸರಿ ಮಾಡಿದ್ರು. ಇದು ಅಶ್ವಿನ್ ಬೌಲಿಂಗ್ ಮೇಲೆ ಯಾವುದೇ ಪರಿಣಾಮ ಬೀರುತ್ತದೋ ಇಲ್ಲವೋ, ನಾವು ಕಾದು ನೋಡಬೇಕಾಗಿದೆ.

ಕೇವಲ ಒಂದು ವಿಕೆಟ್ ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ
ಭಾರತದ ಪರ ಮೊದಲ ದಿನದಾಟದಲ್ಲಿ ಮೊಹಮ್ಮದ್ ಶಮಿ ಕೇವಲ ಒಂದು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದ್ರು. ಓಪನರ್ ಏಡೆನ್ ಮಕ್ರಾಮ್ 7 ರನ್ ಗಳಿಸಿದ್ದಾಗ ಶಮಿ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಮತ್ತೊಂದು ವಿಕೆಟ್ ಪಡೆಯಲು ಟೀಂ ಇಂಡಿಯಾ ಬೌಲರ್‌ಗಳ ಸತತ ಪ್ರಯತ್ನ ವಿಫಲಗೊಂಡಿತು. ಇದರ ನಡುವೆ ವೇಗಿ ಸಿರಾಜ್ ಗಾಯಗೊಂಡಿರುವುದು ಟೀಂ ಇಂಡಿಯಾಗೆ ಕೊಂಚ ಹಿನ್ನಡೆಯಾಗಿದೆ.
ಮೊದಲ ದಿನದಾಟದಂತ್ಯಕ್ಕೆ ದಕ್ಷಿಣ ಆಪ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿದೆ. ನಾಯಕ ಡೀನ್ ಎಲ್ಗರ್ ಅಜೇಯ 11 ರನ್ ಕಲೆಹಾಕಿದ್ದು, ಕೀಗನ್ ಪೀಟರ್ಸನ್ ಅಜೇಯ 14ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ 202ರನ್ ಬೆನ್ನತ್ತಲು ಇನ್ನೂ 167ರನ್ ಬಾಕಿ ಉಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications