ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಹರ್ಭಜನ್ ಸಿಂಗ್ ಸ್ಫೋಟಕ ಸತ್ಯವೊಂದನ್ನ ಬಾಯ್ಬಿಟ್ಟಿದ್ದಾರೆ. ನಿವೃತ್ತಿ ಬಳಿಕ ತಮ್ಮ ಹಳೆಯ ವೃತ್ತಿ ಜೀವನವನ್ನ ಮೆಲುಕು ಹಾಕಿರುವ ಹರ್ಭಜನ್ ಸಿಂಗ್, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕುರಿತಾಗಿ ಆಶ್ಚರ್ಯಕರ ಮಾತೊಂದನ್ನು ತಿಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 417 ವಿಕೆಟ್‌ಗಳನ್ನು ಪಡೆದಿರುವ ಹರ್ಭಜನ್, 103 ಟೆಸ್ಟ್‌ಗಳು, 236 ಏಕದಿನ ಪಂದ್ಯಗಳು ಮತ್ತು 28 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2007 ಟಿ20 ವಿಶ್ವ ಮತ್ತು 2011 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.
ಕೊಹ್ಲಿ, ಪೂಜಾರ, ರಹಾನೆಗೆ ಬಿಗ್ ಸ್ಕೋರ್ ಏಕೆ ಸಾಧ್ಯವಾಗುತ್ತಿಲ್ಲ? ಈ ಸಮಸ್ಯೆಯನ್ನ ಪತ್ತೆಹಚ್ಚಿದ ರಾಹುಲ್ ದ್ರಾವಿಡ್!
ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದು ಐದು ವರ್ಷಗಳೇ ಕಳೆದು ಹೋದ ಬಳಿಕ, ಕೇವಲ ಐಪಿಎಲ್‌ನಲ್ಲಿ ಆಡ್ತಿದ್ದ ಹರ್ಭಜನ್ ಸಿಂಗ್ ಹೊಸ ವರ್ಷದ ಸಮೀಪದಲ್ಲಿ ನಿವೃತ್ತಿ ಘೋಷಿಸಿದ್ರು. ಆದಾಗ್ಯೂ, ಹರ್ಭಜನ್ ಅವರು ಮಾಜಿ ಭಾರತ ನಾಯಕ ಎಂಎಸ್ ಧೋನಿ ಅವರಂತೆ ಮ್ಯಾನೇಜ್‌ಮೆಂಟ್‌ನಿಂದ ಬೆಂಬಲವನ್ನು ಪಡೆದಿದ್ರೆ, ಇನ್ನೂ ಕೆಲವು ವರ್ಷಗಳ ಕಾಲ ಆಡಬಹುದಿತ್ತು ಎಂದು ಭಾವಿಸುತ್ತಾರೆ.
"ಧೋನಿ ಇತರ ಆಟಗಾರರಿಗಿಂತ ಉತ್ತಮ ಬೆಂಬಲವನ್ನು ಹೊಂದಿದ್ದರು ಮತ್ತು ಉಳಿದ ಆಟಗಾರರು ಅದೇ ರೀತಿಯ ಬೆಂಬಲವನ್ನು ಪಡೆದಿದ್ದರೆ, ಅವರು ಕೂಡ ಆಡುತ್ತಿದ್ದರು. ಉಳಿದ ಆಟಗಾರರು ಬ್ಯಾಟ್ ಬೀಸುವುದನ್ನು ಮರೆತಿದ್ದಾರ ಅಥವಾ ಬೌಳರ್‌ಗಳು ಸ್ವಿಂಗ್ ಮಾಡುವುದನ್ನ ಬಿಟ್ಟಿದ್ದರಾ ತಿಳಿದಿಲ್ಲ, "ಎಂದು ಅವರು ಜೀ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
41ರ ಹರೆಯದ ಹರ್ಭಜನ್ ಮ್ಯಾನೇಜ್‌ಮೆಂಟ್ ಬೆಂಬಲವಿದ್ರೆ, ಇನ್ನೂ ನಾಲ್ಕರಿಂದ ಐದು ವರ್ಷಗಳ ಕಾಲ ಆಡುತ್ತಿದ್ದೆ ಮತ್ತು ಇನ್ನೂ 100 ರಿಂದ 150 ವಿಕೆಟ್‌ಗಳನ್ನು ತೆಗೆದುಕೊಳ್ಳಬಹುದಿತ್ತು ಎಂದು ಹೇಳಿದ್ದಾರೆ.
"ನಾನು 400 ವಿಕೆಟ್‌ಗಳನ್ನು ಪಡೆದಾಗ ನನಗೆ 31 ವರ್ಷ ಮತ್ತು ನಾನು ಇನ್ನೂ 4-5 ವರ್ಷಗಳ ಕಾಲ ಆಡುತ್ತಿದ್ದರೆ, ನನಗಾಗಿ ನಾನು ನಿಗದಿಪಡಿಸಿದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು, ನಾನು ಇನ್ನೂ 100-150 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ '' ಹರ್ಭಜನ್ ಸಿಂಗ್ ಹೇಳಿದ್ದಾರೆ.
ಅದೇನೇ ಇದ್ದರೂ, ಹರ್ಭಜನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿ ಕ್ರಿಕೆಟ್‌ಗೆ ವಿದಾಯ ಹೇಳಿದರು. ಭಾರತ ಪರ ಅನಿಲ್ ಕುಂಬ್ಳೆ, ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಮಾತ್ರ ಅವರಿಗಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿದ್ದಾರೆ.
ಇತ್ತಿಚೆಗಷ್ಟೇ ಆರ್. ಅಶ್ವಿನ್ , ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದು ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆಗೊಂಡರು. ಹರ್ಭಜನ್ ಸಿಂಗ್ 103 ಪಂದ್ಯಗಳಿಂದ 417 ವಿಕೆಟ್ ಪಡೆದಿದ್ದಾರೆ.
ಹರ್ಭಜನ್ ಸಿಂಗ್ ರೆಸ್ಟ್ ರೆಕಾರ್ಡ್
ಪಂದ್ಯ: 103
ಇನ್ನಿಂಗ್ಸ್: 190
ವಿಕೆಟ್: 417
ಬೆಸ್ಟ್: 8/84
ಎಕಾನಮಿ: 2.84
5 ವಿಕೆಟ್: 25
10 ವಿಕೆಟ್: 5