Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇನ್‌ಸ್ಟಾಗ್ರಾಮ್‌ನಲ್ಲಿ ಹಠಾತ್ DP ಬದಲಿಸಿದ ಮಹೇಂದ್ರ ಸಿಂಗ್ ಧೋನಿ: ಅಭಿಮಾನಿಗಳಿಗೆ ಸಪ್ರೈಸ್‌

MS DHONI

ಟೀಂ ಇಂಡಿಯಾ ಮಾಜಿ ನಾಯಕ, ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಪ್ರಮುಖ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಮಾಧ್ಯಮಗಳಿಂದ ಸಾಕಷ್ಟು ದೂರ ಇರಲು ಇಷ್ಟಪಡುತ್ತಾರೆ. ಆದ್ರೆ ಮಾಹಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಡಿಪಿಯನ್ನು ಹಠಾತ್ ಎಂದು ಬದಲಿಸಿ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಟೀಂ ಇಂಡಿಯಾಗೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಟ್ಟಿರುವ ಮೊದಲ ನಾಯಕರಾಗಿರುವ ಧೋನಿ, ಯಾರು ಮಾಡದ ಸಾಧನೆಯನ್ನು ಮಾಡಿದ್ದಾರೆ. 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಎಂಎಸ್ ಧೋನಿ ಕೇವಲ ಐಪಿಎಲ್ ಸರಣಿಯಲ್ಲಿ ಮಾತ್ರ ಆಡುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಿಂದ ಮಾಹಿ ಸಾಕಷ್ಟು ದೂರ

ಸಾಮಾಜಿಕ ಮಾಧ್ಯಮದಿಂದ ಮಾಹಿ ಸಾಕಷ್ಟು ದೂರ

ಭಾರತದ ಸ್ವಾತಂತ್ರ್ಯ ದಿನಾಚರಣೆಯ ದಿನ ಆಗಸ್ಟ್‌ 15ರಂದೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದ ಮಾಹಿ ನಿವೃತ್ತರಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನ ಮಾಡುವುದು ಬಲು ಅಪರೂಪ. ಟ್ವಿಟರ್‌ನಲ್ಲಿ ತುಂಬಾ ಸಕ್ರಿಯರಾಗಿದ್ದ ಅವರು ಯಾವುದೇ ಪೋಸ್ಟ್‌ಗಳನ್ನು ಹಾಕುತ್ತಿಲ್ಲ. ಆದ್ರೆ ದಿಢೀರ್ ಎಂದು ಮಾಹಿ ಇನ್‌ಸ್ಟಾಗ್ರಾಮ್‌ನಲ್ಲಿ ಬದಲಾವಣೆ ತಂದಿದ್ದಾರೆ.

ಟೀಂ ಇಂಡಿಯಾ ಸೆಲೆಕ್ಟರ್ಸ್ U ಟರ್ನ್: ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಗೆ ಮಣೆ?

ಇನ್‌ಸ್ಟಾಗ್ರಾಮ್‌ ಡಿಪಿಯಲ್ಲಿ ತಿರಂಗ ಹಾಕಿದ ಧೋನಿ

ಇನ್‌ಸ್ಟಾಗ್ರಾಮ್‌ ಡಿಪಿಯಲ್ಲಿ ತಿರಂಗ ಹಾಕಿದ ಧೋನಿ

ಸಾಮಾಜಿಕ ಮಾಧ್ಯಮದಿಂದ ದೂರವಿದ್ದು, ತನ್ನದೇ ಆದ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾಗಿರುವ ಧೋನಿ ದಿಢೀರನೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬದಲಾವಣೆ ಮಾಡಿದ್ದಾರೆ. ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15 ರಂದು ಆಚರಿಸಲಾಗುತ್ತದೆ. ಇದಕ್ಕಾಗಿ ಧೋನಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ತ್ರಿವರ್ಣ ರಾಷ್ಟ್ರಧ್ವಜದ ಫೋಟೋ ಹಾಕುವ ಮೂಲಕ ರಾಷ್ಟ್ರಧ್ವಜ ಪ್ರದರ್ಶಿಸಿದ್ದಾರೆ.

ಇದಲ್ಲದೆ, ಫೋಟೋದಲ್ಲಿ ಸಂಸ್ಕೃತ ಭಾಷೆಯ ಪಠ್ಯವನ್ನು ಸಹ ಉಲ್ಲೇಖಿಸಲಾಗಿದೆ. ಅಂದರೆ "ನಾನು ಈ ಭಾರತ ಮಾತೆಯ ಪ್ರಜೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ". ಇದನ್ನು ನೋಡಿದ ಅಭಿಮಾನಿಗಳು ಸಂಭ್ರಮದಿಂದ ಕೊಂಡಾಡುತ್ತಿದ್ದಾರೆ. ಆದರೆ ಧೋನಿ ಈ ರೀತಿ ಮಾಡಲು ಪ್ರಮುಖ ಕಾರಣವಿದೆ.

ವಿದೇಶಿ ಲೀಗ್‌ನಲ್ಲಿ ಭಾರತೀಯರು ಆಡಬಹುದಾ? ಈ ತ್ಯಾಗ ಮಾಡಿದ್ರೆ ಮಾತ್ರ ‌ಹೊರಡಿ ಎಂದ ಬಿಸಿಸಿಐ!

ಪ್ರತಿಯೊಬ್ಬರು ರಾಷ್ಟ್ರಧ್ವಜವನ್ನು ಹಾರಿಸಲು ಪ್ರಧಾನಿ ಮೋದಿ ಕರೆ

ಪ್ರತಿಯೊಬ್ಬರು ರಾಷ್ಟ್ರಧ್ವಜವನ್ನು ಹಾರಿಸಲು ಪ್ರಧಾನಿ ಮೋದಿ ಕರೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಾರ್ವಜನಿಕರು, ರಾಜಕಾರಣಿಗಳು, ಕ್ರೀಡಾಪಟುಗಳು, ನಟರು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಕಚೇರಿ ಮತ್ತು ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಹೇಳಿದರು. ಇದನ್ನು ಒಪ್ಪಿಕೊಂಡಿರುವ ಧೋನಿ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬದಲಾವಣೆ ತಂದಿದ್ದಾರೆ.

ಸಾಮಾನ್ಯವಾಗಿ, ಧೋನಿ ಯಾವಾಗಲೂ ತಮ್ಮ ದೇಶದ ಮೇಲಿನ ಪ್ರೀತಿಯನ್ನು ತೋರಿಸುತ್ತಾರೆ. ಅವರ ಕೀಪಿಂಗ್ ಕೈಗವಸುಗಳು ಭಾರತೀಯ ಸೇನೆಯ ಬಣ್ಣಗಳಲ್ಲಿವೆ. ಅದೇ ರೀತಿ ಭಾರತೀಯ ಸೇನೆಯಲ್ಲಿ ವಿಶೇಷ ಅಧಿಕಾರಿಯೂ ಆಗಿದ್ದಾರೆ.

Story first published: Saturday, August 13, 2022, 21:07 [IST]
Other articles published on Aug 13, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+