ಟೀಂ ಇಂಡಿಯಾ ಸೆಲೆಕ್ಟರ್ಸ್ U ಟರ್ನ್: ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಗೆ ಮಣೆ?

ಏಷ್ಯಾಕಪ್ ಬಳಿಕ ಮಹತ್ವದ ಚುಟುಕು ಮಹಾಸಮರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಈಗಿನಿಂದಲೇ ತಯಾರಿ ನಡೆಸಿದೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ ಆರಂಭವಾಗಲಿದೆ. ಹೀಗಾಗಿ ಪರಿಗಣಿಸಬಹುದಾದ ಎಲ್ಲ ಯುವ ಆಟಗಾರರನ್ನು ಪರಿಗಣಿಸಿ ಅತ್ಯುತ್ತಮ ತಂಡವನ್ನು ರೂಪಿಸಲು ಭಾರತ ಪ್ರಯತ್ನಿಸುತ್ತಿದೆ. ಆದರೆ ಟಿ20 ವಿಶ್ವಕಪ್ ಸಮೀಪಿಸುತ್ತಿರುವ ಭಾರತಕ್ಕೆ ಗಾಯಗಳು ಅಪಾಯವನ್ನುಂಟುಮಾಡುತ್ತವೆ. ಈಗಾಗಲೇ ಹಲವು ಸೂಪರ್‌ಸ್ಟಾರ್‌ಗಳು ಗಾಯಗಳಿಂದ ಬಳಲುತ್ತಿದ್ದಾರೆ ಎಂಬ ವರದಿಗಳು ಹೊರಬರುತ್ತಿವೆ.

ಇದರಿಂದ ಭಾರತದ ಹಲವು ಲೆಕ್ಕಾಚಾರಗಳು ಸುಳ್ಳಾಗುತ್ತಿವೆ. ಭಾರತದ ಯೋಜನೆಗಳನ್ನು ವಿಫಲಗೊಳಿಸಿದ ಹಲವು ಆಟಗಾರರನ್ನು ವಾಪಸ್ ಕರೆಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಮೊಹಮ್ಮದ್ ಶಮಿ ಅವರನ್ನು ಟಿ20 ವಿಶ್ವಕಪ್‌ನ ಯೋಜನೆಗಳಲ್ಲಿ ಸೇರಿಸಲು ಭಾರತ ನಿರ್ಧರಿಸಿದೆ ಎಂದು ವರದಿಯಾಗಿದೆ, ಭಾರತವು ಇನ್ನು ಮುಂದೆ ಅವರನ್ನು ಟಿ 20 ಗೆ ಪರಿಗಣಿಸುವುದಿಲ್ಲ ಎಂದು ಈ ಹಿಂದೆ ಹೇಳಲಾಗಿತ್ತು.

ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್‌ಗೆ ಗಾಯ!

ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್‌ಗೆ ಗಾಯ!

ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗೈರುಹಾಜರಾಗುವ ಸಾಧ್ಯತೆಯಿದ್ದು, ಭಾರತವು ಶಮಿಯನ್ನು ವಾಪಸ್ ಕರೆಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ ಎಂದು ಹೇಳಬಹುದು. ಗಾಯದ ಸಮಸ್ಯೆಯಿಂದ ಬುಮ್ರಾ ಏಷ್ಯಾಕಪ್ ಆಡುತ್ತಿಲ್ಲ. ಬುಮ್ರಾ ಅವರ ಗಾಯ ಸ್ವಲ್ಪ ಗಂಭೀರವಾಗಿದೆ ಎಂಬುದಕ್ಕೆ ಸೂಚನೆಗಳಿವೆ. ಹೀಗಾಗಿ ಟಿ20 ವಿಶ್ವಕಪ್ ಕೈ ತಪ್ಪುವ ಸಾಧ್ಯತೆ ಇದೆ. ಬುಮ್ರಾಗೆ ಆಡಲು ಸಾಧ್ಯವಾಗದಿದ್ದರೆ, ಭಾರತಕ್ಕೆ ಹಿರಿಯ ಬೌಲರ್‌ನ ಅಗತ್ಯವಿದೆ.

ಆದ್ದರಿಂದ ಮುಹಮ್ಮದ್ ಶಮಿ ಪರಿಗಣಿಸಬೇಕಾದ ಆಟಗಾರನಾಗಿದ್ದಾರೆ. ಶಮಿ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವಿ ಆಟಗಾರ. ಬೌನ್ಸಿ ಪಿಚ್‌ಗಳಲ್ಲಿ ಮಿಂಚುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಶಮಿ ಹೊಸ ಚೆಂಡಿನಲ್ಲಿ ವಿಕೆಟ್ ಕಬಳಿಸುವುದರಲ್ಲಿ ನಿಸ್ಸೀಮರು. ಇತ್ತೀಚಿನ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಗೆದ್ದಾಗ ಶಮಿ ಬೌಲಿಂಗ್ ಪ್ರದರ್ಶನ ನಿರ್ಣಾಯಕವಾಗಿತ್ತು. ಅವರು 16 ಪಂದ್ಯಗಳಲ್ಲಿ 20 ವಿಕೆಟ್ ಪಡೆದರು. ಆದರೆ ಡೆತ್ ಓವರ್‌ಗಳಲ್ಲಿ ಶಮಿಯನ್ನು ಬುಮ್ರಾ ಅವರಷ್ಟು ವಿಶ್ವಾಸಾರ್ಹ ಎಂದು ಕರೆಯಲಾಗುವುದಿಲ್ಲ.

Ind vs Pak: ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದಿರುವ 3 ಪಾಕಿಸ್ತಾನದ ಬೌಲರ್ಸ್

ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್‌ಗೂ ಗಾಯ!

ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್‌ಗೂ ಗಾಯ!

ಡೆತ್ ಓವರ್‌ಗಳಲ್ಲಿ ವಿಶ್ವಾಸಾರ್ಹರಾಗಿದ್ದ ಹರ್ಷಲ್ ಪಟೇಲ್ ಕೂಡ ಗಾಯಗೊಂಡಿದ್ದಾರೆ. ಪಕ್ಕೆಲುಬಿನ ಗಾಯದಿಂದಾಗಿ ಹರ್ಷಲ್ ಪಟೇಲ್ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಈ ಸನ್ನಿವೇಶದಲ್ಲಿ ಭಾರತಕ್ಕೆ ಶಮಿಯನ್ನು ಪರಿಗಣಿಸದೆ ಬೇರೆ ದಾರಿಯಿಲ್ಲ ಎಂದು ಹೇಳಬಹುದು. ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ ಟಿ20 ವಿಶ್ವಕಪ್‌ನಲ್ಲಿ ಭಾರತದ ವೇಗಿಗಳ ಭಾಗವಾಗುವ ಸಾಧ್ಯತೆ ಹೆಚ್ಚು.

"ಮೊಹಮ್ಮದ್ ಶಮಿ ಭಾರತದ ಪ್ರಮುಖ ವೇಗಿಗಳಲ್ಲಿ ಒಬ್ಬರು. ಅವರ ಕೆಲಸದ ಹೊರೆ ಕಡಿಮೆ ಮಾಡಲು ಅವರನ್ನು ಟಿ 20 ಮಾದರಿಯಿಂದ ದೂರ ಇಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಇಬ್ಬರು ಸೂಪರ್ ವೇಗಿಗಳು ಗಾಯಗೊಂಡಿರುವ ಕಾರಣ ಭಾರತವು ವಿಶ್ವಾಸಾರ್ಹ ಆಟಗಾರನನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬೇಕಾಗಿದೆ. ಶಮಿಗೆ ಆಸ್ಟ್ರೇಲಿಯಾದ ಪರಿಸ್ಥಿತಿ ಚೆನ್ನಾಗಿ ಗೊತ್ತು. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಭಾರತದ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಇನ್ಸೈಡ್ ಸ್ಪೋರ್ಟ್‌ಗೆ ತಿಳಿಸಿದ್ದಾರೆ.

ರಿಷಭ್ ಪಂತ್‌ ಪೋಸ್ಟ್‌ಗೆ ತಿರುಗೇಟು ನೀಡಿದ ಊರ್ವಶಿ ರೌಟೇಲಾ: 'ಸಹೋದರ ಅಡ್ವಾಂಟೇಜ್ ತೆಗೆದುಕೊಳ್ಳಬೇಡ' ಎಂದ ಬಾಲಿವುಡ್ ನಟಿ

2021ರ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ಶಮಿ

2021ರ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ಶಮಿ

ಮೊಹಮ್ಮದ್ ಶಮಿ ಭಾರತೀಯ ತಂಡದಲ್ಲಿ ಹೆಚ್ಚು ಟಿ20 ಪಂದ್ಯಗಳನ್ನಾಡದಿದ್ರೂ, 2021 ರ ಟಿ 20 ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ಆಡಿದ್ದರು. ಆದರೆ ರೋಹಿತ್ ಶರ್ಮಾ ನಾಯಕರಾದ ನಂತರ ಟಿ20ಯಲ್ಲಿ ಶಮಿಗೆ ಹೆಚ್ಚಿನ ಬೆಂಬಲ ಸಿಗುತ್ತಿಲ್ಲ. ಶಮಿ ಹೊಸ ಚೆಂಡಿನ ಪರಾಕ್ರಮದ ಹೊರತಾಗಿ, ರನ್ ನೀಡಲು ಹಿಂಜರಿಯದ ಬೌಲರ್. ಆದ್ದರಿಂದ ಶಮಿಯನ್ನು ವಿಶ್ವಾಸಾರ್ಹ ಟಿ20 ಆಟಗಾರ ಎಂದು ಕರೆಯುವುದು ಕಷ್ಟ.

ಶಮಿ ಭಾರತ ಪರ 17 ಟಿ20 ಪಂದ್ಯಗಳನ್ನ ಆಡಿದ್ದಾರೆ. ಈ 17 ಪಂದ್ಯಗಳಲ್ಲಿ ಒಟ್ಟು 18 ವಿಕೆಟ್‌ಗಳು ಉರುಳಿವೆ. ಎಕಾನಮಿ 9.55ರಷ್ಟಿದ್ದು, ಇದರಿಂದ ಶಮಿ ದುಬಾರಿ ಬೌಲರ್ ಎಂಬುದು ಸ್ಪಷ್ಟವಾಗಿದೆ. ಶಮಿಯನ್ನು ಟಿ20 ತಂಡದಿಂದ ಕೈಬಿಟ್ಟಾಗ ಅನೇಕರು ಟೀಕೆ ಮಾಡಿದ್ದರು. ಆದರೆ ಶಮಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಭಾರತಕ್ಕೆ ಹೆಚ್ಚಿನ ಒಳಿತು ಎಂದು ಹೇಳಲಾಗದು.

For Quick Alerts
ALLOW NOTIFICATIONS
For Daily Alerts
Story first published: Saturday, August 13, 2022, 16:32 [IST]
Other articles published on Aug 13, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X