
ನಾಲ್ಕು ವರ್ಷದ ಬಳಿಕ ಸೊನ್ನೆ ಸುತ್ತಿದ ಮೂವರು ಟಾಪ್ ಆರ್ಡರ್ ಬ್ಯಾಟ್ಸ್‌ಮನ್
ಹೌದು 2018ರ ಕಳಪೆ ಆಟದ ನಂತರ ನಾಲ್ಕು ವರ್ಷಗಳ ಬಳಿಕ ಜೇಸನ್ ರಾಯ್, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡಿರೋದು ವಿಪರ್ಯಾಸ. ಇನ್ನು ಇಷ್ಟು ಸಾಲದೆಂಬಂತೆ ಜಾನಿ ಬೈಸ್ಟ್ರೋವ್ 7ರನ್‌ಗಳಿಸಿ ಬುಮ್ರಾಗೆ ಬಲಿಯಾದ್ರೆ, ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಶೂನ್ಯಕ್ಕೆ ಔಟಾಗಿ ಆಶ್ಚರ್ಯ ಮೂಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ 26 ರನ್‌ಗಳಿಗೆ ತನ್ನ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಭಾರೀ ಮುಖಭಂಗ ಎದುರಿಸಿದೆ. ಇದು ಭಾರತದ ವಿರುದ್ಧ ಇಂಗ್ಲೆಂಡ್‌ನ ಅತ್ಯಂತ ಕಳಪೆ ಪ್ರದರ್ಶನ ವಾಗಿದೆ.
ಸಚಿನ್, ABD ಹೆಸರಲ್ಲಿರುವ ಈ ವಿಶ್ವದಾಖಲೆ ಮುರಿಯಲು ರೋಹಿತ್‌ಗೆ ಸೂಪರ್ ಅವಕಾಶ

ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ದಾಖಲಾದ ಕಡಿಮೆ ಸ್ಕೋರ್
ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಮೊದಲ ಐದು ವಿಕೆಟ್ ಕಳೆದುಕೊಂಡ ಎದುರಾಳಿ ತಂಡವು ದಾಖಲಿಸಿದ ಕಡಿಮೆ ಮೊತ್ತ ಇದಾಗಿದೆ. ಈ ಮೂಲಕ ಇಂಗ್ಲೆಂಡ್ ತನ್ನ ಹೆಸರಿಗೆ ಬೇಡದ ದಾಖಲೆಯನ್ನ ತನ್ನ ಹೆಸರಿಗೆ ದಾಖಲಿಸಿಕೊಂಡಿದೆ.
ODIಗಳಲ್ಲಿ ಭಾರತ ವಿರುದ್ಧ 5ನೇ ವಿಕೆಟ್‌ನ ಪತನದ ಸಮಯದಲ್ಲಿ ಕಡಿಮೆ ಸ್ಕೋರ್‌ಗಳು
26/5 ಇಂಗ್ಲೆಂಡ್, ದಿ ಓವಲ್ 2022
29/5 ಪಾಕಿಸ್ತಾನ, ಕೊಲಂಬೊ 1997
30/5 ಜಿಂಬಾಬ್ವೆ, ಹರಾರೆ 2005
32/5 ವೆಸ್ಟ್ ಇಂಡೀಸ್, ಪೋರ್ಟ್ ಆಫ್ ಸ್ಪೇನ್ 1997
ಕೊಹ್ಲಿಗೆ ಯಾವುದೇ ಗಾಯದ ಸಮಸ್ಯೆ ಇಲ್ಲ, ಬೇಕಂತಲೇ ತಂಡದಿಂದ ಡ್ರಾಪ್ ಮಾಡಲಾಗಿದೆ; ಅನುಮಾನ ಶುರು!

ಮೊದಲ 10 ಓವರ್‌ಗಳೊಳಗೆ ನಾಲ್ಕು ವಿಕೆಟ್ ಕಬಳಿಸಿದ 3ನೇ ಬೌಲರ್ ಬುಮ್ರಾ
ಭಾರತದ ಪರ ಜಸ್ಪ್ರೀತ್ ಬುಮ್ರಾ ಹೆಸರು ದಾಖಲೆಯ ಪಟ್ಟಿಗೆ ಸೇರಿಕೊಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ ಮೊದಲ 10 ಓವರ್‌ಗಳಲ್ಲಿ 4 ವಿಕೆಟ್ ಕಬಳಿಸಿದ ಭಾರತದ ಮೂರನೇ ಬೌಲರ್ ಎಂಬ ಕೀರ್ತಿಗೆ ಬುಮ್ರಾ ಪಾತ್ರರಾಗಿದ್ದಾರೆ. ಈ ಮೊದಲು ಲೆಜೆಂಡರಿ ಬೌಲರ್ ಕನ್ನಡಿಗ ಜಾವಗಲ್ ಶ್ರೀನಾಥ್ 2003ರ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಜೊಹಾನ್ಸ್ ಬರ್ಗ್‌ನಲ್ಲಿ ಆ ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದ್ರು. ಇದಾದ ಬಳಿಕ 2013ರಲ್ಲಿ ಶ್ರೀಲಂಕಾ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಭುವನೇಶ್ವರ್ ಕುಮಾರ್ ಮೊದಲ 10 ಓವರ್‌ಗಳಲ್ಲಿ 4 ವಿಕೆಟ್ ಉರುಳಿಸಿದ್ದರು.
2002 ರಿಂದ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಮೊದಲ 10 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳು
ಜಾವಗಲ್ ಶ್ರೀನಾಥ್ vs ಶ್ರೀಲಂಕಾ, ಜೋಹಾನ್ಸ್‌ಬರ್ಗ್ 2003
ಭುವನೇಶ್ವರ್ vs ಶ್ರೀಲಂಕಾ, ಪೋರ್ಟ್ ಆಫ್ ಸ್ಪೇನ್ 2013
ಜಸ್ಪ್ರೀತ್ ಬುಮ್ರಾ vs ಇಂಗ್ಲೆಂಡ್, ದಿ ಓವಲ್ 2022


Click it and Unblock the Notifications












