ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ: ಐತಿಹಾಸಿಕ ಗೆಲುವಿಗೆ ಮುನ್ನವೇ ಗಾಯಾಳುವಾಗಿ ಹೊರಬಿದ್ದ ಕೊಹ್ಲಿ

ಟೀಂ ಇಂಡಿಯಾ ಅಭಿಮಾನಿಗಳಿಗೆ ಸೋಮವಾರ(ಜ. 3) ನಿಜಕ್ಕೂ ದೊಡ್ಡ ಆಶ್ಚರ್ಯವಾಗಿರೋದ್ರಲ್ಲಿ ಅನುಮಾನವೇ ಇಲ್ಲ. ಏಕೆಂದ್ರೆ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತವನ್ನ ಗೆಲ್ಲಿಸಿ ಐತಿಹಾಸಿಕ ಗೆಲುವನ್ನ ಕೊಹ್ಲಿ ಸಂಭ್ರಮಿಸಲಿದ್ದಾರೆಂಬ ಆಸೆ ಕನಸಾಗಿ ಉಳಿದಿದೆ. ಹರಿಣಗಳ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿಯೇ ತಂಡದಿಂದ ಹೊರಗುಳಿದಿದ್ದಾರೆ.
ದಕ್ಷಿಣ ಆಫ್ರಿಕಾಗೆ ಕಾಲಿಡುವ ಮೊದಲೇ ಉಪನಾಯಕ ರೋಹಿತ್ ಶರ್ಮಾ ಗಾಯಾಳುವಾಗಿ ಇಡೀ ಪ್ರವಾಸವನ್ನೇ ತಪ್ಪಿಸಿಕೊಂಡ್ರು. ಇದೀಗ ಒಂದು ಟೆಸ್ಟ್ ಪಂದ್ಯ ಮುಗಿದು, ಎರಡನೇ ಟೆಸ್ಟ್‌ಗೆ ಕಾಲಿಡುವ ದಿನವೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ತಂಡದಲ್ಲಿ ಇಲ್ಲವಂತಾಗಿದ್ದು, ಗಾಯಾಳುವಾಗಿ ಪ್ರಮುಖ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ.
ದುರದೃಷ್ಟವಶಾತ್ ವಿರಾಟ್‌ಗೆ ಬೆನ್ನುಮೂಳೆಯ ನೋವಿನಿಂದ ಬಳಲುತ್ತಿದ್ದು, ಫಿಸಿಯೋಗಳು ಕೊಹ್ಲಿ ಚೇತರಿಕೆಗೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಇಂದು 99 ಟೆಸ್ಟ್ ಪಂದ್ಯವನ್ನಾಡಬೇಕಿದ್ದ ವಿರಾಟ್ ಕಣದಿಂದ ಹೊರಗುಳಿದಿದ್ದಾರೆ.

ಟಾಸ್‌ವರೆಗೂ ಕೊಹ್ಲಿ ಆಡುತ್ತಿಲ್ಲ ಎಂಬ ಸುಳಿವೇ ಇರಲಿಲ್ಲ!
ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ ಪಂದ್ಯದಲ್ಲಿ ಟಾಸ್ ವೇಳೆವರೆಗೂ ವಿರಾಟ್ ಕೊಹ್ಲಿ ಈ ಪಂದ್ಯ ಆಡುತ್ತಿಲ್ಲ ಎಂಬ ಯಾವುದೇ ಸುಳಿವು ಕೂಡ ಸಿಕ್ಕಿರಲಿಲ್ಲ. ಟಾಸ್ ವೇಳೆಯಲ್ಲಿ ಭಾರತ ಪರ ಕೆ.ಎಲ್ ರಾಹುಲ್ ಕಣಕ್ಕಿಳಿದ ನಂತರವಷ್ಟೇ ವಿರಾಟ್ ಕೊಹ್ಲಿ ಈ ಪಂದ್ಯದಿಂದ ಮಿಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
29 ವರ್ಷಗಳ ಇತಿಹಾಸದಲ್ಲಿ ಭಾರತ ದಕ್ಷಿಣ ಆಫ್ರಿಕಾದಲ್ಲಿ ಒಂದು ಬಾರಿಯು ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಆದ್ರೆ ಜೋಹಾನ್ಸ್‌ಬರ್ಗ್‌ನಲ್ಲಿ ಭಾರತಕ್ಕೆ ಎಲ್ಲಾ ಅವಕಾಶಗಳಿದ್ದು, ತಂಡವನ್ನ ಮುನ್ನಡೆಸಬೇಕಿದ್ದ ನಾಯಕ ಕೊಹ್ಲಿಯೇ ಅಲಭ್ಯರಾಗಿದ್ದಾರೆ. ಹೀಗಾಗಿ ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಮುನ್ನಡೆಸಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನ ಮುನ್ನಡೆಸುತ್ತಿರುವ 34ನೇ ನಾಯಕರಾಗಿದ್ದಾರೆ.
ಕೊಹ್ಲಿ, ಪೂಜಾರ, ರಹಾನೆಗೆ ಬಿಗ್ ಸ್ಕೋರ್ ಏಕೆ ಸಾಧ್ಯವಾಗುತ್ತಿಲ್ಲ? ಈ ಸಮಸ್ಯೆಯನ್ನ ಪತ್ತೆಹಚ್ಚಿದ ರಾಹುಲ್ ದ್ರಾವಿಡ್!

ಅಜರುದ್ದೀನ್ ಬಳಿಕ ಕೆ.ಎಲ್ ರಾಹುಲ್ ವಿಶೇಷ ಸಾಧನೆ
1990 ರಲ್ಲಿ ಮೊಹಮ್ಮದ್ ಅಜರುದ್ದೀನ್ ನಂತರ , ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸದೇ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸುತ್ತಿರುವ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಕೆ.ಎಲ್ ರಾಹುಲ್ ಪಾತ್ರರಾಗಿದ್ದಾರೆ. ಈ ಮೊದಲು ಅಜರುದ್ದೀನ್ ಏಕದಿನ ಪಂದ್ಯಗಳಲ್ಲಿ ನಾಯಕನಾಗುವ ಮೊದಲು ಟೆಸ್ಟ್ ತಂಡವನ್ನ ಮುನ್ನಡೆಸಿದ್ರು.
Ind vs SA: 2ನೇ ಟೆಸ್ಟ್ ಪಂದ್ಯ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ: ನಾಯಕ ಕೊಹ್ಲಿ ಪಂದ್ಯಕ್ಕೆ ಅಲಭ್ಯ

ವಿರಾಟ್ ಕೊಹ್ಲಿ ಬದಲು ಹನುಮ ವಿಹಾರಿಗೆ ಅವಕಾಶ
ಪ್ರಮುಖ ಟೆಸ್ಟ್ ಪಂದ್ಯವನ್ನ ಮಿಸ್ ಮಾಡಿಕೊಂಡಿರುವ ವಿರಾಟ್ ಕೊಹ್ಲಿ ಜಾಗದಲ್ಲಿ ಯುವ ಪ್ರತಿಭಾವಂತ ಬ್ಯಾಟ್ಸ್‌ಮನ್ ಹನುಮ ವಿಹಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಗೆ ಕಾಲಿಡುವ ಮೊದಲೇ ಭಾರತ ಎ ತಂಡದಲ್ಲಿ ಆಡಿದ್ದ ಹನುಮ ವಿಹಾರಿ, ಟೀಂ ಇಂಡಿಯಾ ಪರ ಆಡುವ ಅವಕಾಶ ಪಡೆದಿದ್ದಾರೆ.
ಕಳೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ತಂಡದಲ್ಲಿ ಅವಕಾಶ ಮಿಸ್ ಮಾಡಿಕೊಂಡಿದ್ದ ಹನುಮ ವಿಹಾರಿ, ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ದಾಖಲಿಸಿದ್ದ ಶ್ರೇಯಸ್ ಅಯ್ಯರ್‌ರನ್ನ ಹಿಂದಿಕ್ಕಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಭಾರತ: ಕೆಎಲ್ ರಾಹುಲ್(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್(ನಾಯಕ), ಏಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ(ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಲುಂಗಿ ಎನ್‌ಗಿಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications