
ಈ ಬ್ಯಾಟ್ಸ್‌ಮನ್ ಅಬ್ಬರಿಸಿದರೆ ಗೆಲುವು ಖಚಿತ
ದ್ರಾವಿಡ್, ಚೇತೇಶ್ವರ್ ಪೂಜಾರ ಆಟದ ಬಗ್ಗೆ ಮಾತನಾಡುತ್ತಾ, ಸದ್ಯ ಸತತ ಕಳಪೆ ಆಟದಿಂದ ಬಳಲುತ್ತಿರುವ ಪೂಜಾರ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಹೀಗಿರುವಾಗ ದ್ರಾವಿಡ್ ಅವರು ಪೂಜಾರ ಯಾವಾಗ ದೊಡ್ಡ ರನ್ ಕಲೆಹಾಕುತ್ತಾರೋ ಆಗ ಭಾರತಕ್ಕೆ ಗೆಲುವು ಖಚಿತ ಎಂದು ಹೇಳಿದ್ದಾರೆ
"ಪೂಜಾರ ತನ್ನ ಕೈಲಾದಷ್ಟು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ರನ್ ಗಳಿಸುವ ದಾಹ ಅವರಲ್ಲಿದ್ದು, ಇದು ಚಿಂತಿಸುವ ವಿಚಾರವಲ್ಲ ಬದಲಾಗಿ ಇದು ಅವರು ಬ್ಯಾಟಿಂಗ್ ಮಾಡುವ ಕ್ರಮಾಂಕದ ಬಗ್ಗೆ ಯೋಚಿಸಬೇಕಿದೆ. ಆದರೆ, ಅವರು ಯಾವಾಗ ದೊಡ್ಡ ಸ್ಕೋರ್ ಮಾಡುತ್ತಾರೋ ಆಗ ಭಾರತಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ'' ಎಂದು ದ್ರಾವಿಡ್ ಹೇಳಿದ್ದಾರೆ.
ಭಾರತ ವಿರುದ್ಧದ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಘೋಷಣೆ: ಮಾರ್ಕೊ ಜಾನ್ಸೆನ್ ಅವಕಾಶ

ವಿರಾಟ್ ಕೊಹ್ಲಿಯು ಶೀಘ್ರದಲ್ಲೇ ಸೆಂಚುರಿ ಸಿಡಿಸಲಿದ್ದಾರೆ!
ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆಯೂ ಮಾತನಾಡಿದ ದ್ರಾವಿಡ್, ಕೊಹ್ಲಿಯ ಶತಕವು ಬ್ಯಾಟ್‌ನೊಂದಿಗೆ ಹತ್ತಿರದಲ್ಲಿದೆ. ಉತ್ತಮ ಆರಂಭವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ಅವರ ಬ್ಯಾಟ್ ಅತಿ ಶೀಘ್ರದಲ್ಲಿ ದೊಡ್ಡ ಸ್ಕೋರ್ ಪಡೆಯಲಿದೆ ಎಂದು ನಾನು ಭಾವಿಸುತ್ತೇನೆ, ಮುಂದಿನ ಪಂದ್ಯದಲ್ಲಿ ಅದು ಆಗದಿರಬಹುದು ಆದರೆ ಅದು ಶೀಘ್ರದಲ್ಲೇ ಸಂಭವಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
99ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ ಮೂರಂಕಿ ಗಡಿದಾಟುವ ವಿಶ್ವಾಸದಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಭಾರತ vs ದ. ಆಫ್ರಿಕಾ: 2ನೇ ಪಂದ್ಯದಲ್ಲಿ ಭಾರತದ ಪರ ಕಣಕ್ಕಿಳಿಯುವ ಸಂಭಾವ್ಯ ತಂಡ: ಬದಲಾಗುತ್ತಾ ಪ್ಲೇಯಿಂಗ್ XI!

2020ರಿಂದ ಒಂದೂ ಶತಕ ಸಿಡಿಸದ ರಹಾನೆ!
ಮೆಲ್ಬೋರ್ನ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಹಾನೆ 2020 ರಿಂದ ಕೇವಲ ಒಂದು ಟೆಸ್ಟ್ ಶತಕವನ್ನು ಗಳಿಸಿದ್ದಾರೆ. ಅದೇ ರೀತಿ ಪೂಜಾರ 2019 ರ ಸಿಡ್ನಿ ಟೆಸ್ಟ್ ಪಂದ್ಯದ ನಂತರ ಟೆಸ್ಟ್ ಶತಕವನ್ನು ಗಳಿಸಿಲ್ಲ. ಇತ್ತೀಚೆಗಷ್ಟೇ ಏಕದಿನ ನಾಯಕತ್ವ ಕಳೆದುಕೊಂಡಿರುವ ವಿರಾಟ್ ಕೊಹ್ಲಿ 2019ರ ನವೆಂಬರ್‌ನಿಂದ ಯಾವುದೇ ಅಂತಾರಾಷ್ಟ್ರೀಯ ಮಾದರಿಯಲ್ಲಿ ಶತಕ ಸಿಡಿಸಿಲ್ಲ.

ಸೆಂಚುರಿಯನ್ ಟೆಸ್ಟ್‌ನಲ್ಲೂ ಮಿಂಚದ ತ್ರಿವಳಿಗಳು
ಸೆಂಚುರಿಯನ್ ಟೆಸ್ಟ್ ಗೆಲುವಿನಲ್ಲಿಯೂ ಸಹ, ಪೂಜಾರ 0 ಮತ್ತು 16 ರನ್ ಗಳಿಸಿದ್ರೆ, ಕೊಹ್ಲಿ 35 ಮತ್ತು 18 ಮತ್ತು ರಹಾನೆ ಕೇವಲ 48 ಮತ್ತು 20 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಅವರಂತಹ ಯುವ ಆಟಗಾರರು ಬೆಂಚ್ ಕಾಯುತ್ತಿದ್ದರೂ, ಅನುಭವಿ ಹಿರಿಯ ಆಟಗಾರರು ರನ್ ಬರ ಎದುರಿಸುತ್ತಿದ್ದಾರೆ. ಹೀಗಾಗಿ ಈ ಯುವ ಬ್ಯಾಟ್ಸ್‌ಮನ್‌ಗಳು ಅವಕಾಶಕ್ಕಾಗಿ ತುದಿಗಾಲಲ್ಲಿ ಕಾದು ನಿಂತಿದ್ದಾರೆ.

ಮೂವರು ಬ್ಯಾಟ್ಸ್‌ಮನ್‌ಗಳ ಸಮಸ್ಯೆಯನ್ನ ಬಿಚ್ಚಿಟ್ಟ ದ್ರಾವಿಡ್
ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಉತ್ತಮ ರನ್ ಕಲೆಹಾಕಲು ಹೆಣಗಾಡುತ್ತಿರುವ ಮೂವರನ್ನು ಬೆಂಬಲಿಸಿದ್ದಾರೆ ಮತ್ತು ಅವರು ದೊಡ್ಡ ರನ್ ಗಳಿಸಲು ಪ್ರಾರಂಭಿಸುವ ಮೊದಲು ಇದು ಕೇವಲ ಸಮಯದ ವಿಷಯವಾಗಿದೆ ಎಂದು ಹೇಳಿದರು.
"ನನ್ನ ಪ್ರಕಾರ, ಇದು ವಿವಿಧ ಅಂಶಗಳಾಗಿರಬಹುದು. ಆದ್ರೆ ನೀವು ದೀರ್ಘಕಾಲದವರೆಗೆ ಕ್ರಿಕೆಟ್ ಆಡಿದಾಗ ಅವರ ವೃತ್ತಿಜೀವನದ ವಿವಿಧ ಹಂತಗಳಲ್ಲಿ ಆಟಗಾರರಿಗೆ ಈ ರೀತಿಯ ಫಾರ್ಮ್ ಸಮಸ್ಯೆ ಸಂಭವಿಸುತ್ತದೆ. ನೀವು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೀರಿ ಎಂದು ನೀವು ಭಾವಿಸಿದರೂ ಸಹ ದೊಡ್ಡ ಸ್ಕೋರ್‌ಗಳನ್ನ ಕಾಣಲು ಸಾಧ್ಯವಾಗುವುದಿಲ್ಲ. ಇದು ಆ ಮೂವರಲ್ಲಿ ಕಾಡುತ್ತಿದೆ ಎಂದು ನಾನು ಭಾವಿಸುತ್ತೇನೆ "ಎಂದು ರಾಹುಲ್ ದ್ರಾವಿಡ್ ಭಾನುವಾರ ವರ್ಚುವಲ್ ಪ್ರಿ-ಮ್ಯಾಚ್ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದರ ಜೊತೆಗೆ ಅವರು ಉತ್ತಮ ಸ್ಕೋರ್ ಕಲೆಹಾಕದಿದ್ರೂ ಸಹ ಉತ್ತಮ ಟಚ್‌ನಲ್ಲಿದ್ದಾರೆ. ಹೀಗಾಗಿ ಅವರಿಗೆ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವುದು ಕಷ್ಟವಾಗದು ಎಂದು ತಿಳಿದಿದ್ದಾರೆ. ನಾನು ಕೋಚ್ ಆಗಿ ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಅವರು ಖಂಡಿತವಾಗಿಯೂ ಚೆನ್ನಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ದ್ರಾವಿಡ್ ತಿಳಿಸಿದ್ದಾರೆ.


Click it and Unblock the Notifications












