ಮಳೆ ಕಾಟದ ನಡುವೆ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಬರ್ಮಿಂಗ್ ಹ್ಯಾಮ್, ಜೂನ್ 04: ಐಸಿಸಿ ಆಯೋಜನೆಯ 'ಮಿನಿ ವಿಶ್ವಕಪ್' ಚಾಂಪಿಯನ್ಸ್ ಟ್ರೋಫಿ 2017ಯಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ವಿರುದ್ಧ ಪಾಕಿಸ್ತಾನ ತಂಡ ಸುಲಭವಾಗಿ ಶರಣಾಗಿದೆ. ಮಳೆಕಾಟದಿಂದ ಪರಿಷ್ಕೃತಗೊಂಡ ಗುರಿ ಪಡೆದ ಪಾಕಿಸ್ತಾನ 125ರನ್ ಗಳಿಂದ ಪಂದ್ಯ ಕಳೆದುಕೊಂಡಿದೆ.
ಪದೇ ಪದೇ ಮಳೆ ಕಾಟ ಕೊಟ್ಟಿದ್ದು ಕಿರಿಕಿರಿಯಾದರೂ ಭಾರತದ ಭರ್ಜರಿ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. 48 ಓವರ್ ಗಳಿಗೆ ಪಂದ್ಯ ಸೀಮಿತಗೊಳಿಸಲಾಗಿದ್ದು, ಪಾಕಿಸ್ತಾನಕ್ಕೆ ಗೆಲ್ಲಲು 324ರನ್ ಟಾರ್ಗೆಟ್ ನೀಡಲಾಗಿತ್ತು. ನಂತರ 41 ಓವರ್ ಗಳಲ್ಲಿ 289ರನ್ ಟಾರ್ಗೆಟ್ ನೀಡಲಾಯಿತು. ಪಾಕಿಸ್ತಾನ ತಂಡ 33.4 ಓವರ್ ಗಳಲ್ಲಿ 164/9ಸ್ಕೋರ್ ಮಾಡಿ ಸೊಲೊಪ್ಪಿಕೊಂಡಿತು.[In Pics : ಪಾಕ್ ವಿರುದ್ಧ ಜಯದ ನಗೆ ಬೀರಿದ ಭಾರತ]
ಪಾಕಿಸ್ತಾನ ಚೇಸ್:
* ವಹಾಬ್ ರಿಯಾಜ್ ಗಾಯಗೊಂಡಿದ್ದರಿಂದ ಬ್ಯಾಟಿಂಗ್ ಮಾಡಲು ಬರಲಿಲ್ಲ. ಹೀಗಾಗಿ 9 ವಿಕೆಟ್ ಬಿದ್ದೊಡನೆ ಭಾರತಕ್ಕೆ ಜಯ ಲಭಿಸಿತು.
* 10 ಓವರ್ ಗಳ ನಂತರ ಪಾಕಿಸ್ತಾನ 51/1, 20 ಓವರ್ಸ್ 88/2, 20.5 ಓವರ್ಸ್ 91/3, 30 ಓವರ್ಸ್ 152/7 ಸ್ಕೋರ್ ಮಾಡಿತು.
* ರವೀಂದ್ರ ಜಡೇಜ ಉತ್ತಮ ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಗಮನ ಸೆಳೆದರು.
* ಮೊದಲ 6 ಓವರ್ ಗಳ ನಂತರ ಮಳೆ ಕಾಟ, 41 ಓವರ್ ಗಳಲ್ಲಿ 289ರನ್ ಹೊಸ ಟಾರ್ಗೆಟ್
* ಅಜರ್ ಹಾಗೂ ಶೆಹಜಾದ್ ರಿಂದ ಇನ್ನಿಂಗ್ಸ್ ಆರಂಭ
****
* ಡಕ್ವರ್ಥ್ ಲೂಯಿಸ್ ನಿಯಮದಂತೆ ಪಾಕಿಸ್ತಾನಕ್ಕೆ ಗೆಲ್ಲಲು 48 ಓವರ್ ಗಳಲ್ಲಿ 324ರನ್ ಟಾರ್ಗೆಟ್
* ಪಾಕಿಸ್ತಾನ ವಿರುದ್ಧ 48 ಓವರ್ ಗಳಲ್ಲಿ ಭಾರತ 319/3
* ಎಂಎಸ್ ಧೋನಿಗಿಂತ ಮೊದಲು ಆಡಲು ಬಂದ ಹಾರ್ದಿಕ್ ಪಾಂಡ್ಯ ಸತತ ಮೂರು ಸಿಕ್ಸರ್ ಸಿಡಿಸಿ 6 ಎಸೆತಗಳಲ್ಲಿ 20ರನ್ ಚೆಚ್ಚಿದರು. ನಾಯಕ ವಿರಾಟ್ ಕೊಹ್ಲಿ 68 ಎಸೆತಗಳಲ್ಲಿ 81ರನ್ (6X4, 3X6) ಬಾರಿಸಿದರು.
* 47.1 ಓವರ್ ಗಳಲ್ಲಿ 302 ರನ್ ಸ್ಕೋರ್ ಮಾಡಿದ ಭಾರತ.
* 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಯುವರಾಜ್ ಸಿಂಗ್. 32 ಎಸೆತಗಳಲ್ಲಿ 52ರನ್ ಗಳಿಸಿ ಔಟ್
* 40 ಓವರ್ ಗಳ ನಂತರ 213/2 (ವಿರಾಟ್ ಕೊಹ್ಲಿ 35, ಯುವರಾಜ್ 15)
* ತಂಡದ ಸ್ಕೋರ್ 205ರನ್ ಹಾಗೂ ಯುವರಾಜ್ 8 ರನ್ ಗಳಿಸಿದ್ದಾಗ ಕ್ಯಾಚ್ ಡ್ರಾಪ್
* 38 ಓವರ್ ಗಳಲ್ಲಿ 202/2, ಕೊಹ್ಲಿ 32, ಯುವರಾಜ್ 1 ಬ್ಯಾಟಿಂಗ್.
* 91 ರನ್ ಗಳಿಸಿದ್ದಾಗ ರನ್ ಕದಿಯಲು ಯತ್ನಿಸಿ ರೋಹಿತ್ ಶರ್ಮ ಔಟ್
* 33.1 ಓವರ್ ಗಳಾಗಿದ್ದಾಗ ಪಂದ್ಯಕ್ಕೆ ಮತ್ತೊಮ್ಮೆ ಮಳೆ ಅಡ್ಡಿ, 48 ಓವರ್ ಗಳಿಗೆ ಪಂದ್ಯ ನಿಗದಿ.
* 65 ಎಸೆತಗಳಲ್ಲಿ 68 ರನ್ (6X4, 1X6) ಗಳಿಸಿ ಶಿಖರ್ ಧವನ್ ಅವರು ಶಬಾದ್ ಖಾನ್ ಗೆ ವಿಕೆಟ್ ಒಪ್ಪಿಸಿದರು.
* 20 ಓವರ್ ಗಳಲ್ಲಿ 110/0.
* ಪಾಕಿಸ್ತಾನ ವಿರುದ್ಧ ಅರ್ಧಶತಕ ಸಿಡಿಸಿದ ರೋಹಿತ್, ಧವನ್
ಪಂದ್ಯಕ್ಕೆ ಮಳೆ ಅಡ್ಡಿ:
* ಪಾಕಿಸ್ತಾನ ವಿರುದ್ಧ 9.5 ಓವರ್ ಗಳಲ್ಲಿ ಭಾರತ 46/0
* ರೋಹಿತ್ ಶರ್ಮ 25, ಶಿಖರ್ ಧವನ್ 20 ಬ್ಯಾಟಿಂಗ್
[ಭಾರತ ಹಾಗೂ ಪಾಕ್ ಪಂದ್ಯಕ್ಕೆ ಎದುರಾಗಿದೆ ಭೀತಿ!]
ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದು ನಾಲ್ಕನೇ ಮುಖಾಮುಖಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರ ಭಾರತದ ಮೇಲೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. 2-1 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಇಬ್ಬರಿಗೂ ನಾಯಕರಾಗಿ ಐಸಿಸಿ ಆಯೋಜನೆಯಲ್ಲಿ ಮೊದಲ ಬಾರಿ ಮುಖಾಮುಖಿ.[ಭಾರತ- ಪಾಕ್ ಕ್ರಿಕೆಟ್ ಕದನ ಟಾಪ್ 5 ಪಂದ್ಯಗಳು]

1978ರಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಕ್ರಿಕೆಟ್ ಏಕದಿನ ಪಂದ್ಯವನ್ನಾಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಸುಮಾರು 132 ಪಂದ್ಯಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗಿವೆ. ಪಾಕಿಸ್ತಾನದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಭಾರತದ ಯಶಸ್ಸು ಶೇ. 41.7ರಷ್ಟು ಮಾತ್ರ.
ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಯುವರಾಜ್ ಸಿಂಗ್, ಎಂಎಸ್ ಧೋನಿ (ವಿಕೆಟ್ ಕೀಪರ್) ,ಕೇದಾರ್ ಜಾಧವ್ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ. [ಭಾರತ-ಪಾಕ್ ಮೊದಲ ಏಕದಿನ: ಟೀಂ ಇಂಡಿಯಾದ ಜಯದ ಸವಿನೆನಪು]
ಪಾಕಿಸ್ತಾನ: ಅಜರ್ ಅಲಿ, ಅಹ್ಮದ್ ಶೆಹಜಾದ್, ಮೊಹಮ್ಮದ್ ಹಫೀಜ್, ಬಾಬರ್ ಅಜಂ, ಶೋಯಿಬ್ ಮಲೀಕ್, ಸರ್ಫರಾಜ್ ಅಹ್ಮದ್ (ನಾಯಕ ಹಾಗೂ ವಿಕೆಟ್ ಕೀಪರ್), ಇಮಾದ್ ವಾಸೀಂ, ಶಬಾದ್ ಖಾನ್, ಮೊಹಮ್ಮದ್ ಅಮೀರ್, ಹಸನ್ ಅಲಿ, ವಹಾಬ್ ರಿಯಾಜ್.(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications